ವಿಜಯಪುರದ ಡೋಣಿ ನದಿ ಪ್ರವಾಹ ಸ್ಥಳಕ್ಕೆ ಕಾಂಗ್ರೆಸ್ ಶಾಸಕ ಸುನಿಲಗೌಡ ಭೇಟಿ; ರೈತರು, ಸಂತ್ರಸ್ತರಿಗೆ ಸಾಂತ್ವನ

ವಿಜಯಪುರದ ಬಬಲೇಶ್ವರ ತಾಲೂಕಿನ ಹಲವು ಗ್ರಾಮಗಳಲ್ಲಿ ಡೋನಿ ನದಿ ಪ್ರವಾಹದಿಂದ ಸಂಕಷ್ಟವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಎಂಎಲ್​ಸಿ ಸುನೀಲ್ ಗೌಡ ಪಾಟೀಲ್ ಪ್ರವಾಹ ಸಂತ್ರಸ್ತರನ್ನು ಭೇಟಿಯಾಗಿ ಕಷ್ಟ ಆಲಿಸಿದ್ದಾರೆ.

ವಿಜಯಪುರದ ಡೋಣಿ ನದಿ ಪ್ರವಾಹ ಸ್ಥಳಕ್ಕೆ ಕಾಂಗ್ರೆಸ್ ಶಾಸಕ ಸುನೀಲ್ ಗೌಡ ಪಾಟೀಲ್ ಭೇಟಿ

ವಿಜಯಪುರದ ಡೋಣಿ ನದಿ ಪ್ರವಾಹ ಸ್ಥಳಕ್ಕೆ ಕಾಂಗ್ರೆಸ್ ಶಾಸಕ ಸುನೀಲ್ ಗೌಡ ಪಾಟೀಲ್ ಭೇಟಿ

  • Share this:
ವಿಜಯಪುರ(ಅ. 13): ಧಾರಾಕಾರವಾಗಿ ಸುರಿದ ಮಳೆ ವಿಜಯಪುರ ಜಿಲ್ಲೆಯ ರೈತರನ್ನು ಕಂಗಾಲಾಗಿಸಿದ್ದು, ಅದರಲ್ಲಿಯೂ ಡೋಣಿ ನದಿ ತೀರದ ರೈತರ ಗೋಳು ಹೇಳತೀರದಾಗಿದೆ.  ಡೋಣಿ ನದಿ ಪ್ರವಾಹದಿಂದಾಗಿ ಸಂತ್ರಸ್ತವಾದ ಗ್ರಾಮಗಳು ಮತ್ತು ರೈತರ ಜಮೀನುಗಳಿಗೆ ವಿಧಾನ ಪರಿಷತ್​ನ ಕಾಂಗ್ರೆಸ್ ಸದಸ್ಯ ಸುನಿಲಗೌಡ ಬಿ. ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಬಲೇಶ್ವರ ಮತಕ್ಷೇತ್ರದ ನಾನಾ ಕಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಸುರಕ್ಷಾ ಕ್ರಮಗಳನ್ನು ಹಾಗೂ ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ಕೂಡ ನೀಡಿದ್ದಾರೆ. 

ಬಬಲೇಶ್ವರ ತಾಲೂಕಿನ ದಾಶ್ಯಾಳ, ಕೊಟ್ಯಾಳ ಮತ್ತು ಸಾರವಾಡ ಗ್ರಾಮಗಳಿಗೆ ಭೇಟಿ ನೀಡಿದ ಅವರು, ನೆರೆ ಹಾವಳಿಯಿಂದ ಸಿಲುಕಿದ ಪ್ರದೇಶಗಳಲಿ ವಸ್ತುಸ್ಥಿತಿ ಅವಲೋಕಿಸಿದರು. ಈ ಹಿಂದೆ ಕೂಡ ಈ ಗ್ರಾಮಸ್ಥರು ಡೋಣಿ ನದಿ ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. ಈಗ ಕೊರೋನಾ ಕಾಯಿಲೆ ಕೂಡ ಸಮಸ್ಯೆ ಉಂಟುಮಾಡಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಮತ್ತೆ ನೆರೆಹಾವಳಿ ಎದುರಾದರೆ, ಜೀವನ ನಡೆಸುವದು ಕಷ್ಟವಾಗುತ್ತದೆ. ಅದಕ್ಕೆ ಹಾನಿ ಉಂಟಾಗಿರುವ ಪ್ರದೇಶವನ್ನು ಕೂಡಲೇ ಸಮೀಕ್ಷೆ ಮಾಡಿ. ಯಾರಿಗೂ ಅನ್ಯಾಯವಾಗದಂತೆ ಸೂಕ್ತ ಫಲಾನುಭವಿಗೆ ಪರಿಹಾರ ದೊರಕುವಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಿದರು.

ಇದನ್ನೂ ಓದಿ: ವರುಣನ ಅಬ್ಬರಕ್ಕೆ ಸಾವಿನ ಮನೆಯಾದ ಕಲಬುರ್ಗಿ ; ಕೆಲವೇ ದಿನಗಳ ಅಂತರದಲ್ಲಿ 10 ಸಾವು

ಇದೇ ಸಂದರ್ಭದಲ್ಲಿ ರೈತರು ಸಾರವಾಡ ಗ್ರಾಮದ ಬಳಿ ಕೆರೆಯ ಹತ್ತಿರ ನೀರು ನುಗ್ಗಿ ರೈತರ ಜಮೀನು ಜವಳಾಗಿರುವುದನ್ನು ಶಾಸಕರ ಗಮನಕ್ಕೆ ತಂದರು. ಆಗ ಸಾರವಾಡ ಜಿ. ಪಂ. ಸದಸ್ಯರೂ ಆಗಿರುವ ವಿಜಯಪುರ ಜಿ. ಪಂ. ಅಧ್ಯಕ್ಷೆ ಸುಜಾತಾ ಸೋಮನಾಥ ಕಳ್ಳಿಮನಿ ಅವರಿಗೆ ಕರೆ ಮಾಡಿ ಈ ಕುರಿತು ಗಮನ ಹರಿಸಿ ಸ್ಪಂದಿಸುವಂತೆ ಮನವಿ ಮಾಡಿದರು.

ನಾನಾ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರು ಮುಂಗಾರು ಹೆಚ್ಚಾಗಿದ್ದರಿಂದ ಉಂಟಾಗಿರುವ ಈರುಳ್ಳಿ ಬೆಳೆಹಾನಿ, ತೊಗರಿ ಬೆಳೆ ನಾಶ, ಮೆಕ್ಕೆಜೋಳದ ತೊಂದರೆ, ದ್ರಾಕ್ಷಿ ಹಾಗೂ ಇತರ ತೋಟಗಾರಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತೂ ಸುನಿಲಗೌಡ ಬಿ. ಪಾಟೀಲ ಅವರ ಗಮನ ಸೆಳೆದರು.

ಇದನ್ನೂ ಓದಿ: Heavy Rain : ಭಾರೀ ಮಳೆಗೆ ಕೊಚ್ಚಿ ಹೋದ ಬಂಡರಗಲ್- ಹೂಲಗೇರಿ ಸಂಪರ್ಕ ಸೇತುವೆ

ಆಗ, ಮಾತನಾಡಿದ ಶಾಸಕರು, ಮುಂಗಾರಿನಲ್ಲಿ ಉಂಟಾಗಿರುವ ರೈತರ ಸಮಸ್ಯೆಗಳು ಮತ್ತು ಬೆಳೆಹಾನಿ ಕುರಿತು ಸರಕಾರದ ಗಮನಕ್ಕೆ ತರಲಾಗುವುದು. ಅಲ್ಲದೇ, ರೈತರಿಗೆ ಸ್ಪಂದಿಸಲು ಮತ್ತು ಸೂಕ್ತ ಪರಿಹಾರ ದೊರಕಿಸಲು ಪ್ರಾಮಾಣಿಕ ಪ್ರ.ಯತ್ನ ಮಾಡುವುದಾಗಿ ರೈತರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಿಕೋಟಾ ಕಾರ್ಯನಿರ್ವಾಹಕ ಅಧಿಕಾರಿ ಬಿ. ಎಸ್. ರಾಠೋಡ, ಬಬಲೇಶ್ವರ ತಹಸೀಲ್ದಾರ ಮಲ್ಲಿಕಾರ್ಜುನ ಅರಕೇರಿ, ಬಬಲೇಶ್ವರ ಕಂದಾಯ ನೀರಿಕ್ಷಕ ಸುಧೀಂದ್ರ ಗುಮಾಸ್ತೆ, ಗ್ರಾಮ ಲೆಕ್ಕಾಧಿಕಾರಿಗಳಾದ ವಿನಯ ಕುಲಕರ್ಣಿ, ರವಿ ಪ್ರಕಾಶ ಕಾಂಬಳೆ ಸೇರಿದಂತೆ ಮುಖಂಡರಾದ ಪ್ರಮೋದ ಚಿಕರೆಡ್ಡಿ, ಜಗ್ಗುಗೌಡ ಪಾಟೀಲ, ಗುರಪ್ಪ ನಾಕೆತ್ತಿನವರ, ರಾಜು ಸುಣಗಾರ, ಚನ್ನು ಅವಟಿ, ಶಿವರಾಜ ಲಗಳಿ, ಈಶ್ವರ ಚಿಕರೆಡ್ಡಿ, ವಿವೇಕಾನಂದ ಬಗಲಿ, ಶ್ರೀಶೈಲ ಕರಜಗಿ, ಚಂದು ನಡುವಿನಮನಿ, ಲಕ್ಷ್ಮಣ ಕೊಳುರಗಿ, ರುದ್ರಗೌಡ ಸಂಗಪೂರ, ಶಿವಾನಂದ ಸಂಖ, ಮೈಬೂಬ ನದಾಫ, ಚಾಂದಸಾಬ ನದಾಫ, ಮಹೇಶ ಗುಂಡೆವಾಡಿ, ಅಶೋಕ ಅಳ್ಳೊಳ್ಳಿ, ಮಹಾದೇವ ಕೋಟಿ, ಹೊನ್ನಪ್ಪ ಮಾದರ, ಮಲ್ಲಿಕಾರ್ಜುನ ಬಟಗಿ ಮುಂತಾದವರು ಉಪಸ್ಥಿತರಿದ್ದರು.

ವರದಿ: ಮಹೇಶ ವಿ. ಶಟಗಾರ
Published by:Vijayasarthy SN
First published: