ಸರ್ಕಾರದ ವೈಫಲ್ಯ ಮುಚ್ಚಿ ಹಾಕಲು ಡ್ರಗ್ಸ್​​ ವಿಚಾರ ಹೊರಗಡೆ ತಂದಿದ್ದಾರೆ : ಬಿ ಕೆ ಹರಿಪ್ರಸಾದ್​ ವಾಗ್ದಾಳಿ

ರಾಷ್ಟ್ರಮಟ್ಟದಲ್ಲಿ ಕೇಂದ್ರ ಸರ್ಕಾರ ವೈಫಲ್ಯ ಮುಚ್ಚಿಹಾಕಲು ಮುಂಬೈನಲ್ಲಿ ನಡೆದ ನಟನ ಸಾವು ದೊಡ್ಡ ವಿಚಾರ ಮಾಡಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ವೈಫಲ್ಯ, ಒಳಜಗಳ ಮುಚ್ಚಲು ಡ್ರಗ್ಸ್ ವಿಚಾರ ತಂದಿದ್ದಾರೆ

ವಿಧಾನ ಪರಿಷತ್​ ಸದಸ್ಯ ಬಿ ಕೆ ಹರಿಪ್ರಸಾದ್​

ವಿಧಾನ ಪರಿಷತ್​ ಸದಸ್ಯ ಬಿ ಕೆ ಹರಿಪ್ರಸಾದ್​

  • Share this:
ಚಿಕ್ಕೋಡಿ(ಸೆಪ್ಟೆಂಬರ್​.13): ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸರ್ಕಾರ ತಮ್ಮ ವೈಫಲ್ಯಗಳನ್ನ ಮುಚ್ಚಿ ಕೊಳ್ಳಲು ಡ್ರಗ್ಸ್​‌ ಮಾಫಿಯಾವನ್ನ ದೊಡ್ಡ ಮಟ್ಟದಲ್ಲಿ ಚರ್ಚೆಗೆ ತರಲಾಗಿದೆ ಎಂದು ವಿಧಾನ ಪರಿಷತ್​ ಸದಸ್ಯ ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಮುಂಬೈನಲ್ಲಿ ಬಾಲಿವುಡ್ ನಟ ಸುಶಾಂತ್ ‌ಸಿಂಗ್ ರಜಪೂತ್ ಸಾವು ಹಾಗೂ ರಾಜ್ಯದಲ್ಲಿ ಡ್ರಗ್ ಮಾಫಿಯಾ ಪ್ರಕರಣ ಬೆಳೆಸುವ ರಾಷ್ಟ್ರಮಟ್ಟದಲ್ಲಿ ಕೇಂದ್ರ ಸರ್ಕಾರ ವೈಫಲ್ಯ ಮುಚ್ಚಿಹಾಕಲು‌ ಯತ್ನಿಸಲಾಗುತ್ತಿದೆ. ಮುಂಬೈನಲ್ಲಿ ನಡೆದದ್ದು ಆತ್ಮಹತ್ಯೆಯೋ ಕೊಲೆಯೋ ಎಂಬುದನ್ನು ದೊಡ್ಡ ವಿಚಾರ ಮಾಡಿ ಓಡಿಸುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿ ಕೇಂದ್ರ ಸರ್ಕಾರ ವೈಫಲ್ಯ ಮುಚ್ಚಿಹಾಕಲು ಮುಂಬೈನಲ್ಲಿ ನಡೆದ ನಟನ ಸಾವು ದೊಡ್ಡ ವಿಚಾರ ಮಾಡಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ವೈಫಲ್ಯ, ಒಳಜಗಳ ಮುಚ್ಚಲು ಡ್ರಗ್ಸ್ ವಿಚಾರ ತಂದಿದ್ದಾರೆ. ಕೇವಲ ಹೆಣ್ಣು ಮಕ್ಕಳ ಮೇಲೆ ಮಾತ್ರ ಆಪಾದನೆ ಹೊರಿಸುತ್ತಿದ್ದಾರೆ. ಡ್ರಗ್ ಮಾಫಿಯಾದಲ್ಲಿ ಇರುವ ಕಿಂಗ್‌ಪಿನ್‌, ಒಬ್ಬ ಪುರುಷನು ಅರೆಸ್ಟ್ ಮಾಡುತ್ತಿಲ್ಲ. ಜನರನ್ನು ಡೈವರ್ಟ್ ಮಾಡಲು ವ್ಯವಸ್ಥಿತ ಸಂಚು ರೂಪಿಸಿದ್ದಾರೆ ಎಂದಿದ್ದಾರೆ.

ಇನ್ನು ಶಾಸಕ ಜಮೀರ್​ ಅಹ್ಮದ್ ಪರ ಬ್ಯಾಟ್ ಬಿಸಿರುವ ಹರಿಪ್ರಸಾದ್ ಕಾನೂನು ಬಾಹಿರ್ ಕೆಲಸ ಆದರೆ ಅಲ್ಪಸಂಖ್ಯಾತರ ನಾಯಕರ ಮೇಲೆ ಹಾಕುವುದು ಬಿಜೆಪಿ ಫ್ಯಾಷನ್ ಆಗಿಬಿಟ್ಟಿದೆ. ನಮ್ಮ ಶಾಸಕ ಜಮೀರ್ ಅಹ್ಮದ್ ಮೇಲೆ ಗಂಭೀರ ಆರೋಪ ಮಾಡುತ್ತಿದ್ದಾರೆ. ಗುಲಬರ್ಗದಲ್ಲಿ ಸಾವಿರ ಕೆ ಜಿ ಗಾಂಜಾ ಜಪ್ತಿ ಆಗಿದೆ. ಅದರ ನಾಯಕ ಕಿಂಗ್‌ಪಿನ್‌ ಯಾರು ಯಾವ ಪಕ್ಷಕ್ಕೆ ಸೇರಿದವರು? ಸಿಎಂ ಯಡಿಯೂರಪ್ಪರಿಗೆ ನೈತಿಕತೆ ಇದ್ರೆ ಹೇಳಲಿ  ಮಾಫಿಯಾದವರನ್ನು ಅರಾಮಾಗಿ ಫ್ರೀಯಾಗಿ ಬಿಟ್ಟಿದ್ದಾರೆ. ಕೋವಿಡ್‌ 19 ವಿಚಾರದಲ್ಲಿಯೂ ಸಾಕಷ್ಟು ಅವ್ಯವಹಾರ ಆಗಿದೆ. ಇದನ್ನು ಮುಚ್ಚಿಹಾಕಲು‌ ಡ್ರಗ್ಸ್ ಪ್ರಕರಣ, ಡಿಜೆ ಹಳ್ಳಿ, ಕೆಜಿ ಹಳ್ಳಿ ಅಲ್ಪಸಂಖ್ಯಾತರು ಅಂತಾ ತೋರಿಸುತ್ತಿದಾರೆ  ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಬದುಕನ್ನು ತ್ಯಾಗ ಮಾಡಿದವರಿಗೆ ಇನ್ನೂ ಸಿಕ್ಕಿಲ್ಲ ಬೆಳಕು

ಕಾಂಗ್ರೆಸ್ ಸೇವಾ ದಳದ ಕಾರ್ಯಚಟುವಟಿಕೆಗಳನ್ನ ಮತ್ತೆ ಚುರುಕು ಗೊಳಿಸಲು ಘಟಪ್ರಭಾದಲ್ಲಿ ಸೇವಾದಳದ ತರಬೇತಿ ಕೇಂದ್ರವನ್ನ ತೆರೆಯಲಾಗಿದೆ. ಬರುವ ಅಕ್ಟೋಬರ್ 2 ರಂದು ಸೇವಾದಳದ ತರಬೇತಿ ಕೇಂದ್ರಕೆ ಚಾಲನೆ ಸಿಗಲಿದ್ದು ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ಹಾಗೂ ವಿಧಾನಪರಿಷತ್​ ಸದಸ್ಯ ಬಿ ಕೆ ಹರಿಪ್ರಸಾದ್ ಭೇಟಿ ನೀಡಿ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ದೇಶದ ಮೂಲೆ ಮೂಲಗಳಿಂದ ಕಾಂಗ್ರೆಸ್ ಕಾರ್ಯಕರ್ತರನ್ನ ಇಲ್ಲಿಗೆ ತಂದು ಅವರಿಗೆ ಗಾಂಧೀಜಿ ಹಾಗೂ ಕಾಂಗ್ರೆಸ್ ನಡೆದು ಬಂದ ಹಾದಿಯ ಕುರಿತು ಒಂದು ವಾರದ ತರಬೇತಿ ನೀಡಲು ಸೇವಾ ದಳದ ಮೂಲಕ ಪ್ಲಾನ್ ನಡೆಸಿದ್ದಾರೆ. ಅಕ್ಟೋಬರ್ 2 ರಂದು ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಮೂಲಕ ಸೇವಾದಳಕ್ಕೆ ಚಾಲನೆ ಸಿಗಲಿದೆ.
Published by:G Hareeshkumar
First published: