ಬಿಜೆಪಿ ಮನೆಗೆ ಬೆಂಕಿ ಹತ್ತಿದೆ, ಬಿಎಸ್​ವೈ ಸರಕಾರ ಪತನವಾಗುತ್ತದೆ; ಶಾಸಕ ಶರಣಬಸಪ್ಪಗೌಡ ದರ್ಶನಾಪುರ

ಆಪರೇಷನ್ ಕಮಲ ಮಾಡಿದ ಬಿಜೆಪಿಗೆ ಈಗ ತಿರುಗು ಬಾಣವಾಗಲಿದೆ. ಏನೇ ಆಪರೇಷನ್ ಕಮಲ ಮಾಡಿದರೂ ಮೂಲ ಬಿಜೆಪಿ ಶಾಸಕರು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ದಿನೇ ದಿನೇ ಬಿಜೆಪಿ ಶಾಸಕರಲ್ಲಿ ಗೊಂದಲ ಹೆಚ್ಚಾಗಲಿದೆ. ಸದ್ಯಕ್ಕೆ ಬಿಜೆಪಿ ಮನೆಗೆ ಬೆಂಕಿ ಹತ್ತಿದೆ. ಹೀಗಾಗಿ ಬೆಂಕಿ ತಗುಲಿದ ಮನೆಗೆ ಕಾಂಗ್ರೆಸ್ ಶಾಸಕರು ಹೋಗಲ್ಲ.ಕಾಂಗ್ರೆಸ್ ಶಾಸಕರು ಯಾರು ಬಿಜೆಪಿಗೆ ಹೋಗಲ್ಲ ಎಂದರು.

news18-kannada
Updated:May 30, 2020, 5:11 PM IST
ಬಿಜೆಪಿ ಮನೆಗೆ ಬೆಂಕಿ ಹತ್ತಿದೆ, ಬಿಎಸ್​ವೈ ಸರಕಾರ ಪತನವಾಗುತ್ತದೆ; ಶಾಸಕ ಶರಣಬಸಪ್ಪಗೌಡ ದರ್ಶನಾಪುರ
ಶಾಸಕ ಶರಣಬಸಪ್ಪಗೌಡ ದರ್ಶನಾಪುರ
  • Share this:
ಯಾದಗಿರಿ(ಮೇ 30): ರಾಜ್ಯ ಬಿಜೆಪಿ ವಲಯದಲ್ಲಿ ಈಗ ದಿನಕ್ಕೊಂದು ರಾಜಕೀಯ ಬೆಳವಣಿಗೆಗಳು ಬೆಳಕಿಗೆ ಬರುತ್ತಿರುವುದು ದೊಡ್ಡ ತಲೆನೋವಾಗಿದೆ.
ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರಕ್ಕೆ ಮತ್ತೆ ಈಗ ಅತೃಪ್ತ ಶಾಸಕರು ಮತ್ತೆ ಕಂಟಕವಾಗಲಿದ್ದಾರಾ? ಎಂಬ ಪ್ರಶ್ನೆ ಕಾಡುತ್ತಿದೆ. ಯಾಕೆಂದರೆ ಅತೃಪ್ತ ಶಾಸಕರು ಸಭೆ ನಡೆಸಿದಕ್ಕೆ ಕಾಂಗ್ರೆಸ್ ಪಾಳಯದಲ್ಲಿ ಕೂಡ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಶಹಾಪುರ ಕಾಂಗ್ರೆಸ್ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಮಾತನಾಡಿ, ಬಿಜೆಪಿಯ ಮೂಲ ವಲಸಿಗರ ಶಾಸಕರಲ್ಲಿ ದಿನೇ ದಿನೇ ಗೊಂದಲ ಹೆಚ್ಚಾಗುತ್ತಿದೆ. ಮೂಲ ಬಿಜೆಪಿ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಿದ್ದಾರೆ. ಮೂಲ ,ವಲಸಿಗರ ಬಿಜೆಪಿ ಶಾಸಕರಲ್ಲಿ ಸಂಘರ್ಷ ಶುರುವಾಗಿದೆ. ಕಾಂಗ್ರೆಸ್ ನಿಂದ ಬಿಜೆಪಿ ಸೇರಿದವರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ. ಮೂಲ ಬಿಜೆಪಿ ಶಾಸಕರಿಗೂ ಸಚಿವರಾಗಬೇಕೆಂಬ ಆಸೆ ಇರುತ್ತದೆ. ಆದರೆ ಈಗ ಗೊಂದಲ ಶುರುವಾಗಿದೆ. ನಂತರ ಬಿಜೆಪಿ ಸರಕಾರ ಹೋಗುತ್ತದೆ. ಗೊಂದಲದಿಂದ ಸರಕಾರ ಹೋದರೆ ಸರಕಾರ ವಿಸರ್ಜನೆ ಆಗಬಹುದು. ಇಲ್ಲದಿದ್ದರೆ ಎಲ್ಲಾ ಬಿಜೆಪಿ ಶಾಸಕರ ಸಂಖ್ಯೆ ಇದ್ದರೆ ಮತ್ತೆ ಬಿಜೆಪಿಯವರು ಹೊಸ ಸರಕಾರ ರಚನೆ ಮಾಡಬಹುದು. ಕಾಂಗ್ರೆಸ್ ನವರು ಕಾದು ನೋಡುತ್ತೇವೆ. ಬಿಜೆಪಿ ಸರಕಾರ ಬಿದ್ದ ಮೇಲೆ ನಾವು ವಿಚಾರ ಮಾಡುತ್ತೆವೆಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದ್ದಾರೆ.

ಬೆಂಕಿ ಹತ್ತಿದ ಬಿಜೆಪಿ ಮನೆಗೆ ಕಾಂಗ್ರೆಸ್ ಶಾಸಕರು ಹೋಗಲ್ಲ
ಸಚಿವ ರಮೇಶ ಜಾರಕಿಹೋಳಿ ಅವರು ಮತ್ತೆ ಆಪರೇಷನ್ ಕಮಲದ ಬಗ್ಗೆ ಮಾತನಾಡಿರುವ ವಿಚಾರದ ಬಗ್ಗೆ ಶಾಸಕ ದರ್ಶನಾಪುರ ಮಾತನಾಡಿ,ಆಪರೇಷನ್ ಕಮಲ ಮಾಡಿದ ಬಿಜೆಪಿಗೆ ಈಗ ತಿರುಗು ಬಾಣವಾಗಲಿದೆ. ಏನೇ ಆಪರೇಷನ್ ಕಮಲ ಮಾಡಿದರೂ ಮೂಲ ಬಿಜೆಪಿ ಶಾಸಕರು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ದಿನೇ ದಿನೇ ಬಿಜೆಪಿ ಶಾಸಕರಲ್ಲಿ ಗೊಂದಲ ಹೆಚ್ಚಾಗಲಿದೆ. ಸದ್ಯಕ್ಕೆ ಬಿಜೆಪಿ ಮನೆಗೆ ಬೆಂಕಿ ಹತ್ತಿದೆ. ಹೀಗಾಗಿ ಬೆಂಕಿ ತಗುಲಿದ ಮನೆಗೆ ಕಾಂಗ್ರೆಸ್ ಶಾಸಕರು ಹೋಗಲ್ಲ.ಕಾಂಗ್ರೆಸ್ ಶಾಸಕರು ಯಾರು ಬಿಜೆಪಿಗೆ ಹೋಗಲ್ಲ ಎಂದರು.

ಕೊರೋನಾ ನಿಯಂತ್ರಣಕ್ಕೆ ಆದ್ಯತೆ ನೀಡಿ

ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ ಜನರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರ ಘೋಷಣೆ ಮಾಡಿದ ಯೋಜನೆಗಳು ಇನ್ನು ಜನರಿಗೆ, ರೈತರಿಗೆ ತಲುಪಿಲ್ಲ. ಕೊರೋನಾ ಸಂಕಷ್ಟ ಸಂದರ್ಭದಲ್ಲಿ ರಾಜಕೀಯ ಮಾಡದೆ ಸರಕಾರ ಹಾಗೂ ಬಿಜೆಪಿ ಶಾಸಕರು ಮೊದಲು ಕೊರೊನಾ ನಿಯಂತ್ರಣ ಮಾಡಲು ಮೊದಲ ಆದ್ಯತೆ ನೀಡಬೇಕೆಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಬಿಜೆಪಿ ಶಾಸಕರಿಗೆ ಕಿವಿ ಮಾತು ಹೇಳಿದರು.ವರದಿ: ನಾಗಪ್ಪ ಮಾಲಿಪಾಟೀಲ

 
First published: May 30, 2020, 5:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading