HOME » NEWS » District » CONGRESS LEADERS ARE UNFIT IN OPPOSITION PARTY SAYS MINISTER K S ESHWARAPPA HK

ಕಾಂಗ್ರೆಸ್‌ನವರು ವಿರೋಧ ಪಕ್ಷದಲ್ಲಿರಲು ಅಯೋಗ್ಯರು ; ಸಚಿವ ಕೆ ಎಸ್ ಈಶ್ವರಪ್ಪ

ಬಿಜೆಪಿ ಎಲ್ಲ ಸಮಯದಾಯದವರನ್ನು ಅಣ್ಣತಮ್ಮಂದಿರಂತೆ ಕಾಣುತ್ತದೆ. ಆದರೆ, ಕಾಂಗ್ರೆಸ್‌ನವರು ಮುಸಲ್ಮಾನರನ್ನು ಎತ್ತಿ ಕಟ್ಟಿ ಕುತಂತ್ರ ರಾಜಕಾರಣ ಮಾಡುತ್ತಾರೆ ಎಂದು ಕುಟುಕಿದರು

news18-kannada
Updated:October 8, 2020, 9:22 PM IST
ಕಾಂಗ್ರೆಸ್‌ನವರು ವಿರೋಧ ಪಕ್ಷದಲ್ಲಿರಲು ಅಯೋಗ್ಯರು ; ಸಚಿವ ಕೆ ಎಸ್ ಈಶ್ವರಪ್ಪ
ಸಚಿವ ಕೆ.ಎಸ್.ಈಶ್ವರಪ್ಪ
  • Share this:
ಕೊಪ್ಪಳ(ಅಕ್ಟೋಬರ್​. 08): ರಾಜ್ಯದಲ್ಲಿ ಇರುವ ಶಾಂತಿಯನ್ನು ಭಂಗಗೊಳಿಸಲು ಯತ್ನಿಸುವ ಕಾಂಗ್ರೆಸ್‌ನವರು ವಿರೋಧ ಪಕ್ಷದಲ್ಲಿರಲೂ ಅಯೋಗ್ಯರು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಕೊಪ್ಪಳದಲ್ಲಿ ಗುರುವಾರ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಒಂದೂ ಕೋಮುಗಲಭೆಯಾಗಿಲ್ಲ. ಬಿಜೆಪಿ ಎಲ್ಲ ಸಮಯದಾಯದವರನ್ನು ಅಣ್ಣತಮ್ಮಂದಿರಂತೆ ಕಾಣುತ್ತದೆ. ಆದರೆ, ಕಾಂಗ್ರೆಸ್‌ನವರು ಮುಸಲ್ಮಾನರನ್ನು ಎತ್ತಿ ಕಟ್ಟಿ ಕುತಂತ್ರ ರಾಜಕಾರಣ ಮಾಡುತ್ತಾರೆ ಎಂದು ಕುಟುಕಿದರು. ಈಶಾನ್ಯ ಪದವೀಧರ ಕ್ಷೇತ್ರದಲ್ಲಿ 2,400 ಮತದಾರರಿದ್ದು, ಪಕ್ಷದ ಒಬ್ಬ ಕಾರ್ಯಕರ್ತ 20 ಜನ ಮತದಾರರನ್ನು ಸಂಪರ್ಕಿಸಿದರೆ ಬಿಜೆಪಿ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ. ಪಕ್ಷ ಅಭ್ಯರ್ಥಿಯನ್ನು ಅಂತಿಮಗೊಳಿಸದ ಮೇಲೆ ಪಕ್ಷದ ಮತ್ಯಾರು ಚುನಾವಣೆಗೆ ನಿಲ್ಲಬಾರದು. ಹೀಗೇ ಮಾಡಿಯೇ ಕಳೆದ ಬಾರಿ ಸೋತಿರುವುದನ್ನು ಮರೆಯಬಾರದು ಎಂದರು.

ಸಭೆಯಲ್ಲಿ ಮಾತು ಆರಂಭಿಸುವ ಮುನ್ನ ಮಾಸ್ಕ್ ಬಳಕೆ ಬಗ್ಗೆ ಮಾತನಾಡಿದ ಸಚಿವ ಕೆ.ಎಸ್‌. ಈಶ್ವರಪ್ಪ, ಮಾತನಾಡುವಾಗ ಮಾಸ್ಕ್ ತೆಗೆದು ಮಾತನಾಡಿ, ಯಾವ ತೊಂದರೆಯೂ ಇಲ್ಲ‌. ಆದರೆ ಇನ್ನುಳಿದ ಸಮಯದಲ್ಲಿ ಕಡ್ಡಾಯವಾಗಿ ಮಾಸ್ಕ್ ಬಳಸಿ. ಇಲ್ಲದಿದ್ದರೆ ನಿಮ್ಮ ಜೀವದ ಜೊತೆ ಮತ್ತೊಬ್ಬರ ಜೀವವನ್ನು ತೆಗೆಯುತ್ತಿರಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

ಇದನ್ನೂ ಓದಿ : ಬಿಜೆಪಿ ಸೇರ್ಪಡೆ ಕೇವಲ ಊಹಾಪೋಹ - ನನ್ನ ಜನರನ್ನ ಕೇಳಿಯೇ ನಿರ್ಧಾರ ತೆಗೆದುಕೊಳ್ತೇನೆ ; ವಿನಯ್ ಕುಲಕರ್ಣಿ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಯ್​​ ಕುಲಕರ್ಣಿ ಅವರನ್ನು ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲ್ಲ. ಯಾಕೆಂದರೆ ಅವರು ಕೊಲೆಗಡುಕರು ಅಂತ ಸಿಬಿಐ ಹೇಳಿದೆ. ಸಿಬಿಐ ಅವರನ್ನು ಕೊಲೆಗಡುಕ ಅಲ್ಲ ಎಂದು ಹೇಳಿದ ಮೇಲೆ ವಿನಯ್ ಕುಲಕರ್ಣಿ ಬಿಜೆಪಿಗೆ ಸೇರಲು ಇಚ್ಛಿಸಿದರೆ ಆಗ ಪಕ್ಷದ ವರಿಷ್ಠರು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಸಿಬಿಐ ದಾಳಿಯಿಂದ ತಪ್ಪಿಸಿಕೊಳ್ಳಲು ಅವರು ಬಿಜೆಪಿಗೆ ಸೇರುವುದಾಗಿ ಹೇಳಿರಬಹುದು ಎಂದರು.
Youtube Video

ಪಶ್ಚಿಮ ಬಂಗಾಳದಲ್ಲಿ ಸಂಸದ ತೇಜಸ್ವಿ ಸೂರ್ಯ ಮೇಲೆ ಮಮತಾ ಬ್ಯಾನರ್ಜಿ ಬೆಂಬಲಿಗರು ಗೂಂಡಾಗಿರಿ ನಡೆಸುವ ಮೂಲಕ ಬೆದರಿಕೆ ಒಡ್ಡುವ ಕೆಲಸ ಮಾಡುತ್ತಿದ್ದಾರೆ. ಈಗಷ್ಟೇ ಬಿಜೆಪಿ ಬೆಳೆಯುತ್ತಿರುವ ಪಶ್ಚಿಮ ಬಂಗಾಳ, ಕೇರಳದಂಥ ರಾಜ್ಯಗಳಲ್ಲಿ ಇಂಥ ಗೂಂಡಾಗಿರಿ, ದಬ್ಬಾಳಿಕೆ ನಡೆಯುತ್ತಿದೆ. ಇಂಥ ವರ್ತನೆ ಹೆಚ್ಚಾದಷ್ಟು ಬಿಜೆಪಿ‌ ಮತ್ತಷ್ಟೂ ಬಲಿಷ್ಠವಾಗಿ‌ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.
Published by: G Hareeshkumar
First published: October 8, 2020, 9:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories