HOME » NEWS » District » CONGRESS LEADER HK PATIL URGES GOVERNMENT TO ENSURE DRUG INVESTIGATION FINDS LOGICAL END SNVS

ಡ್ರಗ್ಸ್ ವಿರುದ್ಧ ಸರ್ಕಾರದ ಕ್ರಮ ಇನ್ನಷ್ಟು ಗಟ್ಟಿಯಾಗಬೇಕು, ತನಿಖೆ ಅರ್ಧಕ್ಕೆ ಬಿಡಬಾರದು: ಹೆಚ್.ಕೆ. ಪಾಟೀಲ್

ಡ್ರಗ್ಸ್ ಕೇವಲ ಸಿನಿಮಾದವರಿಗೆ ಸೀಮಿತವಲ್ಲ. ಇದರ ಹಿಂದೆ ರೌಡಿಗಳು, ಅಧಿಕಾರಿಗಳು, ರಾಜಕಾರಣಿಗಳೂ ಇದ್ದಾರೆ. ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮ ಇನ್ನಷ್ಟು ಗಟ್ಟಿಯಾಗಬೇಕು ಎಂದು ಕಾಂಗ್ರೆಸ್ ಶಾಸಕ ಎಚ್.ಕೆ ಪಾಟೀಲ್ ಒತ್ತಾಯಿಸಿದ್ದಾರೆ.

news18-kannada
Updated:September 6, 2020, 1:11 PM IST
ಡ್ರಗ್ಸ್ ವಿರುದ್ಧ ಸರ್ಕಾರದ ಕ್ರಮ ಇನ್ನಷ್ಟು ಗಟ್ಟಿಯಾಗಬೇಕು, ತನಿಖೆ ಅರ್ಧಕ್ಕೆ ಬಿಡಬಾರದು: ಹೆಚ್.ಕೆ. ಪಾಟೀಲ್
ಹೆಚ್.ಕೆ. ಪಾಟೀಲ್
  • Share this:
ಗದಗ: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಗದಗ್​ನಲ್ಲಿ ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಡ್ರಗ್ಸ್ ಕೇವಲ ಸಿನಿಮಾದವರಿಗೆ ಸೀಮಿತವಲ್ಲ. ಇದರ ಹಿಂದೆ ರೌಡಿಗಳು, ಅಧಿಕಾರಿಗಳು, ರಾಜಕಾರಣಿಗಳೂ ಇದ್ದಾರೆ. ಸರಕಾರಿ ವ್ಯವಸ್ಥೆಯೂ ಇದಕ್ಕೆ ಪೂರಕವಾಗಿದೆ. ಈ ಚೈನ್‌ ಸಿಸ್ಟಮ್‌ಗೆ ಕಡಿವಾಣ ಹಾಕಲು ರಾಜಕಿಯ ಇಚ್ಛಾಶಕ್ತಿ ಬೇಕಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೂ ಗೃಹ ಸಚಿವರು ಕೈಗೊಳ್ಳುವ ಕ್ರಮ ಗಟ್ಟಿಯಾಗಬೇಕು. ಆರಂಭಗೊಂಡ ತನಿಖೆ ವೇಗವಾಗಿ ಪೂರ್ಣಗೊಳ್ಳಬೇಕು. ಯಾವುದೇ ಕಾರಣಕ್ಕೂ ತನಿಖೆ ಅರ್ಧಕ್ಕೆ ಕೈಬಿಡಬಾರದು. ಡ್ರಗ್ಸ್ ದೊಡ್ಡ ಮಟ್ಟದಲ್ಲಿ ಬೆಳೆಯಲು ವ್ಯವಸ್ಥೆಯೇ ಕಾರಣ. ಡ್ರಗ್ಸ್ ಮಟ್ಟಹಾಕಲು ವಿರೋಧ ಪಕ್ಷ ರಚನಾತ್ಮಕವಾಗಿ ಕೈಜೋಡಿಸಲಿದೆ ಎಂದು ಮಾಜಿ ನೀರಾವರಿ ಸಚಿವರೂ ಆದ ಹೆಚ್.ಕೆ. ಪಾಟೀಲ ಹೇಳಿದರು.

ಗದಗನಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಲಂಚಕ್ಕೆ ಬೇಡಿಕೆ ಇಡುತ್ತಿರುವ ಆರೋಪದ ಬಗ್ಗೆ ಮಾತನಾಡಿದ ಅವರು, ಲಂಚದ ವ್ಯವಹಾರದಲ್ಲಿ ತೊಡಗಿರುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಗದಗ ಕ್ಷೇತ್ರದಲ್ಲಿ ಇಂತಹ ದುರ್ವರ್ತನೆ ಸಹಿಸುವುದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಇದರ ನಿವಾರಣೆಗೆ ಗಂಭೀರವಾಗಿ ಚಿಂತನೆ ನಡೆಸುತ್ತೇವೆ ಎಂದರು.

ಇದನ್ನೂ ಓದಿ: ಉಪ್ಪು ತಿಂದವರು ನೀರು ಕುಡಿಯಲೇಬೇಕು; ರಾಗಿಣಿ ತಪ್ಪು ಮಾಡಿದ್ದರೆ ಶಿಕ್ಷೆ ನಿಶ್ಚಿತ: ಬಿ.ಸಿ. ಪಾಟೀಲ್

ರಾಜ್ಯ ಸರ್ಕಾರ ಕೋವಿಡ್​ನಿಂದ ಮೃತಪಟ್ಟವರ ಸಂಖ್ಯೆ ಮುಚ್ಚಿಡುತ್ತಿದೆ‌. ಯಾರದ್ದೋ ಮೆಚ್ಚುಗೆಗಾಗಿ ಸಾವಿನ ಸಂಖ್ಯೆ ಮರೆಮಾಚುತ್ತಿದೆ. ಕೇಂದ್ರದ ಶಹಬ್ಬಾಸ್​ಗಿರಿಗಾಗಿ ಮೃತರ ಸಂಖ್ಯೆ ಮುಚ್ಚಿಡುತ್ತಿದೆ. ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರು 1,800 ಎಂದು ಹೇಳಲಾಗುತ್ತಿದೆ. ಚಿತಾಗಾರ, ಖಬರ್‌ಸ್ಥಾನ, ರುದ್ರಭೂಮಿಯ ಸಂಖ್ಯೆ ಹೆಚ್ಚಿವೆ. ಅವುಗಳ ಅಂಕಿ-ಸಂಖ್ಯೆಯಂತೆ 49,000 ಜನರು ಮೃತಪಟ್ಟಿದ್ದಾರೆ. ಸತ್ಯವನ್ನು ಮರೆಮಾಚುವುದರಿಂದ ಸಾಧಿಸುವುದೇನು ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದರು.

ಸತ್ತವರನ್ನು ಬದುಕಿಸಿ ತರಲು ವಾಪಸ್ ತರಲು ಸಾಧ್ಯವಿಲ್ಲ. ಸಾರ್ವಜನಿಕರಿಗೆ ಸರಕಾರ ಸತ್ಯವನ್ನು ಹೇಳಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಶಾಸಕ ಎಚ್.ಕೆ. ಪಾಟೀಲ್ ಆಗ್ರಹಿಸಿದರು.

ವರದಿ: ಸಂತೋಷ ಕೊಣ್ಣೂರ
Published by: Vijayasarthy SN
First published: September 6, 2020, 1:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories