ಕಾಂಗ್ರೆಸ್ ಹಡಗು ತೂತು ಬಿದ್ದು ನೀರು ಬರುತ್ತಿದೆ; ಕೈ ಪಕ್ಷದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯ

ಯಾವುದು ಮುಳುಗುವ ಹಡಗು ? ಅವರು ಇಂತ ರಾಜ್ಯ ಗೆಲ್ತೇವಿ ಅಂತ ಹೇಳಲಿ. ಕಾಂಗ್ರೆಸ್  ಹಡುಗು ತೂತಾಗಿದೆ. ನೀರು ಒಳಗೆ ಬರ್ತಿದೆ. ಭಯದಲ್ಲಿ ಇವರು ಏನೆಲ್ಲ ಆಡ್ತಾ ಇದ್ದಾರೆ. ಮುಳುಗುವ ಇವರ ಹಡುಗು ಎತ್ತಲು ಜನರಿಲ್ಲ. ಸಿದ್ದರಾಮಣ್ಣ ಮುಳುಗುತಾರೆ ಎಂದು ಡಿಕೆಶಿ ನೋಡ್ತಾ ಇದ್ದಾರೆ. ಡಿಕೆಶಿ ಮುಳುಗ್ತಾರೆ ಎಂದು ಸಿದ್ದರಾಮಯ್ಯ ನೋಡ್ತಿದ್ದಾರೆ. ಇಬ್ಬರು ಕ್ಯಾಪ್ಟನ್ ಗಳು ಆಚೆ ಈಚೆ ಮುಖ ಮಾಡಿ ಕುಳಿತಿದ್ದಾರೆ. ಹಡಗು ಎಲ್ಲೆಲ್ಲೋ ಹೋಗ್ತಾ ಇದೆ ಎಂದು ಕಟೀಲ್ ವ್ಯಂಗ್ಯವಾಡಿದರು.

ಬಿಜೆಪಿ ಸಭೆ

ಬಿಜೆಪಿ ಸಭೆ

  • Share this:
ಬಾಗಲಕೋಟೆ (ಏಪ್ರಿಲ್ 12): ಬಿಜೆಪಿ ಮುಳುಗುವ ಹಡಗು ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ಬಾಗಲಕೋಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್  ತಿರುಗೇಟು ನೀಡಿದ್ದಾರೆ. ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡ ಮೇಲೆ ಸ್ಥಿಮಿತವೂ ಕಳೆದುಕೊಂಡಿದ್ದಾರೆ. ಮುಳುಗುವ ಹಡಗು ಯಾರು.?ಸದ್ಯ ಐದು ರಾಜ್ಯಗಳಲ್ಲಿ ಚುನಾವಣೆ ನಡೆದಿದೆ. ಕಾಂಗ್ರೆಸ್ ಗೆ ತಾಕತ್ತು ಇದ್ರೆ ಒಂದು ರಾಜ್ಯದಲ್ಲಿ ಗೆಲ್ಲಲಿ.

ಬಿಜೆಪಿ ಪಶ್ಚಿಮ ಬಂಗಾಳ, ಆಸ್ಸಾಂ ನಲ್ಲಿ ಬಿಜೆಪಿ ಗೆಲ್ಲಲಿದೆ. ಕಾಂಗ್ರೆಸ್ ಅಧಿಕಾರವಿದ್ದ ಪಾಂಡಿಚೇರಿಯಲ್ಲೂ ಬಿಜೆಪಿ ಗೆಲ್ಲುತ್ತೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಬಿಜೆಪಿ ಅಕೌಂಟ್ ಓಪನ್ ಮಾಡುತ್ತೆ. ಕರ್ನಾಟಕದ ಉಪ ಚುನಾವಣೆಯಲ್ಲಿ ಮೂರು ಕಡೆಗೆ ಗೆಲ್ಲುತ್ತೇವೆ. ಕಾಂಗ್ರೆಸ್ ಗೆ ತಾಕತ್ ಇದ್ರೆ ಒಂದು ರಾಜ್ಯ ಗೆಲ್ಲಲಿ ಎಂದು ಸವಾಲೆಸೆದಿದ್ದಾರೆ.

ಯಾವುದು ಮುಳುಗುವ ಹಡಗು ? ಅವರು ಇಂತ ರಾಜ್ಯ ಗೆಲ್ತೇವಿ ಅಂತ ಹೇಳಲಿ. ಕಾಂಗ್ರೆಸ್  ಹಡುಗು ತೂತಾಗಿದೆ. ನೀರು ಒಳಗೆ ಬರ್ತಿದೆ. ಭಯದಲ್ಲಿ ಇವರು ಏನೆಲ್ಲ ಆಡ್ತಾ ಇದ್ದಾರೆ. ಮುಳುಗುವ ಇವರ ಹಡುಗು ಎತ್ತಲು ಜನರಿಲ್ಲ. ಸಿದ್ದರಾಮಣ್ಣ ಮುಳುಗುತಾರೆ ಎಂದು ಡಿಕೆಶಿ ನೋಡ್ತಾ ಇದ್ದಾರೆ. ಡಿಕೆಶಿ ಮುಳುಗ್ತಾರೆ ಎಂದು ಸಿದ್ದರಾಮಯ್ಯ ನೋಡ್ತಿದ್ದಾರೆ. ಇಬ್ಬರು ಕ್ಯಾಪ್ಟನ್ ಗಳು ಆಚೆ ಈಚೆ ಮುಖ ಮಾಡಿ ಕುಳಿತಿದ್ದಾರೆ. ಹಡಗು ಎಲ್ಲೆಲ್ಲೋ ಹೋಗ್ತಾ ಇದೆ ಎಂದು ಕಟೀಲ್ ವ್ಯಂಗ್ಯವಾಡಿದರು.

ಹೈ ಕಮಾಂಡ್ ಬ್ರೇಕ್ ಹಾಕ್ಬಹುದಲ್ಲಾ ಎಂಬ ಪ್ರಶ್ನೆಗೆ, ಶಿಸ್ತು ಸಮಿತಿ‌ ನೋಟಿಸ್ ಕಳಿಸಿದೆ. ಮಿತಿ‌‌ ಮೀರಿದರೆ ಏನಾಗಬೇಕೋ ಅದನ್ನ ಪಾರ್ಟಿ ಮಾಡುತ್ತದೆ ಎಂದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮದ ವಿಚಾರವಾಗಿ ಯತ್ನಾಳಗೆ ನೋಟಿಸ್ ಕೊಟ್ಟಿದೆ. ಬಿಜೆಪಿ ನೋಟಿಸ್ ಗಳಿಗೆ ಲವ್ ಲೆಟರ್ ಎಂದ ಯತ್ನಾಳಗೆ ಕಟೀಲ್ ತಿರುಗೇಟು ನೀಡಿ. ಲವ್ ಲೆಟರ್ ಯಾವುದು? ನೋಟಿಸ್ ಯಾವುದು ಎನ್ನುವ ಜ್ಞಾನ ಇಲ್ಲದವರಿಗೆ ಏನು ಮಾತಾಡ್ತಿರಾ?

ನನ್ನನ್ನು ಪಕ್ಷದಿಂದ ಹೊರ ಹಾಕೋಕೆ ಆಗಲ್ಲ ಎಂಬ ಯತ್ನಾಳ ಹೇಳಿಕೆಗೆ ಇದೆಲ್ಲ ರಾಷ್ಟ್ರೀಯ ಅಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದು. ಉಚ್ಚಾಟನೆ, ಶಿಸ್ತು ಕ್ರಮ ತೆಗೆದುಕೋಳ್ಳಬೇಕಾದರೆ ನಮ್ಮಲ್ಲಿ ಅದಕ್ಕೊಂದು ಶಿಸ್ತು ಸಮಿತಿ ಇದೆ. ಇದೆಲ್ಲವನ್ನೂ ಆ ಸಮಿತಿ ಅವಲೋಕನ ಮಾಡುತ್ತದೆ. ಈ ಬಗ್ಗೆ ಅವಲೋಕನ ನಡೆಯುತ್ತಿದೆ. ಈಗ ನೋಟಿಸ್ ನೀಡಲಾಗಿದೆ ಅದಕ್ಕೆ  ಅವರು ಉತ್ತರ‌ ಕೊಟ್ಟಿಲ್ಲ. ಇನ್ನೊಂದು ನೋಟಿಸ್ ಹೋಗುತ್ತೆ ಇದೆಲ್ಲವೂ ಒಂದು ಪ್ರಕ್ರಿಯೆ. ಏಕಾಏಕಿ ಏನೂ ಮಾಡುವ ಹಾಗಿಲ್ಲ.

ಆ ಪ್ರಕ್ರಿಯೆ ಒಳಗಡೆ ಇನ್ನೊಮ್ಮೆ ಹದ್ದು‌ ಮೀರಿದರೆ, ಅವರೇ ನಾನು ಹೊರಗೆ ಹೋಗಬೇಕು ಎಂದು ತಿಳಿದುಕೊಂಡಿದ್ರೆ ಅದು ಅವರು ತಪ್ಪು. ಪಾರ್ಟಿ ಎಲ್ಲವನ್ನೂ ಸಿಸ್ಟಮ್ ನಲ್ಲಿಯೇ ತರುತ್ತದೆ. ರಾಜ್ಯದಲ್ಲಿ 2 ವಿಧಾನಸಭೆ, 1 ಲೋಕಸಭೆಗೆ ಉಪ ಚುನಾವಣೆ ನಡೆಯುತ್ತಿವೆ. ಈಗಾಗಲೇ ನಾನು ಎರಡ್ಮೂರು ಹಂತದಲ್ಲಿ ಪ್ರಚಾರಕ್ಕೆ ಹೋಗಿದ್ದೇನೆ. ಮೂರು ಕ್ಷೇತ್ರಗಳಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಸಿಗಲಿದೆ. ಮತದಾರರ ಒಲವು ಬಿಜೆಪಿ ಪಕ್ಷದ ಕಡೆಗಿದೆ. ನರೇಂದ್ರ ಮೋದಿ ಆಡಳಿತ, ಅಭಿವೃದ್ಧಿ ಮಂತ್ರ.

ರಾಜ್ಯದಲ್ಲಿ ಸಿಎಂ ಬಿಎಸ್ವೈ ಆಡಳಿತ, ಅತ್ಯುತ್ತಮ ಬಜೆಟ್,‌ ನೆರೆ-ಬರ ನಿರ್ವಹಣೆ.ಇವನೆಲ್ಲಾ ಗಮನಿಸಿರುವ ಮತದಾರರು ಬಿಜೆಪಿಗೆ ಆಶೀರ್ವಾದ ಮಾಡಲು ಒಲವು ತೋರಿದ್ದಾರೆ. ಮಸ್ಕಿಯಲ್ಲಿ  ಬಿಜೆಪಿಗೆ ಅತೀ ಹೆಚ್ಚು ಮತಗಳ ಅಂತರದ ಗೆಲುವಿನ ವಿಶ್ವಾಸ. ಬಸವ ಕಲ್ಯಾಣದಲ್ಲಿ ಬಿಜೆಪಿ ಗೆಲ್ಲಲಿದೆ. ಬೈ ಎಲೆಕ್ಷನ್ ನಲ್ಲಿ ಬಿಜೆಪಿಗೆ ವ್ಯತಿರಿಕ್ತ ಪರಿಣಾಮ ಬೀರಿದರೆ ನಾಯಕತ್ವ ಬದಲಾಗುತ್ತಾ ಎಂಬ ಪ್ರಶ್ನೆ.ಅದಕ್ಕೂ ನಾಯಕತ್ವಕ್ಕೂ ಸಂಬಂಧವಿಲ್ಲ. ಬಿಜೆಪಿ ಶಿಸ್ತಿನ ಪಕ್ಷದಲ್ಲಿ ನಾಯಕತ್ವವನ್ನು ಪದೇ ಪದೇ ಪ್ರಶ್ನೆ ಮಾಡುವ ವಿಚಾರಕ್ಕೆ, ನಮ್ಮ ಪಾರ್ಟಿ ಎಷ್ಟಿದ್ರೂ ಅದು ಶಿಸ್ತಿನ ಚೌಕಟ್ಟಿನಲ್ಲೇ ಇದೆ.

ಶಿಸ್ತು ಇದೆ ಅಂದ್ರೂ ಪ್ರಜಾಪ್ರಭುತ್ವದ ಕೊರತೆ ಆಗಬಾರದು.ಪ್ರಜಾಪ್ರಭುತ್ವದಲ್ಲಿ ಅತಿಯಾದ್ರೆ ಆಗ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಹಾಗಾಗಿ ಶಿಸ್ತು, ಪ್ರಜಾಪ್ರಭುತ್ವ ಮೀರಿದವ್ರಿಗೆ ಪಾರ್ಟಿ ನೋಟಿಸ್ ಕೊಡುವ ಕೆಲಸ ಮಾಡಿದೆ. ಪಾರ್ಟಿ ಗಳಲ್ಲಿ ಕೆಲವೊಂದು ನಿಯಮಗಳಿವೆ.ನಮ್ಮದು ಪ್ರಜಾಪ್ರಭುತ್ವದ ಸಾಂವಿಧಾನಿಕವಾದ ಪಕ್ಷ. ಬಿ-ಫಾರ್ಮ್ ತೆಗೆದುಕೊಂಡಂತವರಿಗೆ ನೋಟೀಸ್ ಕೊಡೋದಕ್ಕೆ ಕೆಲವು ನಿಯಮಗಳಿವೆ. ಅವೆಲ್ಲ ಪ್ರಕ್ರಿಯೆಗಳು ನಡೆಯುತ್ತಿವೆ, ಕಾದು ನೋಡಿ ಎಂದರು.

ಮಸ್ಕಿ ಬೈ ಎಲೆಕ್ಷನ್ ಪ್ರಚಾರಕ್ಕೆ ತೆರಳುವ ವೇಳೆ ಬಾಗಲಕೋಟೆಗೆ ಆಗಮಿಸಿದ ವೇಳೆ , ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಾಗಲಕೋಟೆ ನವನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಗೆ ಭೇಟಿ ನೀಡಿ, ಕಾಮಗಾರಿ ವೀಕ್ಷಿಸಿದರು.ಮಹಾನವಮಿಗೆ ನೂತನ ಕಟ್ಟಡ ಉದ್ಘಾಟನೆ ಮಾಡಲಾಗುವುದು ಎಂದರು. ಈ ವೇಳೆ ಮಾಜಿ ಶಾಸಕ ರಾಜಶೇಖರ ಶೀಲವಂತರ, ರಾಜು ನಾಯಕ್,ರಾಜು ರೇವಣಕರ್ ಸೇರಿದಂತೆ ಬಿಜೆಪಿ ಮುಖಂಡರು ಇದ್ದರು.
Published by:Soumya KN
First published: