ಕಾಂಗ್ರೆಸ್​ ಭ್ರಷ್ಟಾಚಾರದಲ್ಲಿ ಮಿಂದೆದ್ದ ಪಕ್ಷ ; ಕೆಲಸವಿಲ್ಲದೆ ಆರೋಪ ಮಾಡುತ್ತಿದೆ ; ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ವಾಗ್ದಾಳಿ

ಕೊರೊನಾ ಸೋಂಕು ಪತ್ತೆ ಹಚ್ಚಲು ಕರ್ನಾಟಕದಲ್ಲಿ ಹೊಸದಾಗಿ 21 ಲ್ಯಾಬ್ ಆರಂಭಿಸಲಾಗಿದೆ. ಖಾಸಗಿ ವಲಯದಲ್ಲೂ ಲ್ಯಾಬ್ ತೆರೆಯುವ ವಿಚಾರ ಈಗಾಗಲೇ ಚರ್ಚೆ ನಡೆದಿದೆ

news18-kannada
Updated:July 10, 2020, 4:17 PM IST
ಕಾಂಗ್ರೆಸ್​ ಭ್ರಷ್ಟಾಚಾರದಲ್ಲಿ ಮಿಂದೆದ್ದ ಪಕ್ಷ ; ಕೆಲಸವಿಲ್ಲದೆ ಆರೋಪ ಮಾಡುತ್ತಿದೆ ; ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ವಾಗ್ದಾಳಿ
ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ
  • Share this:
ಹುಬ್ಬಳ್ಳಿ(ಜುಲೈ.10): ಕಾಂಗ್ರೆಸ್‌ನವರದ್ದು ಭ್ರಷ್ಟಾಚಾರದಲ್ಲಿ ಮಿಂದೆದ್ದಿರುವ ಪಕ್ಷವಾಗಿದೆ. ಕೆಲಸವಿಲ್ಲದೆ ಸರ್ಕಾರದ ಬಗ್ಗೆ ಆರೋಪ ಮಾಡಿದ್ದಾರೆ. ಕಾಂಗ್ರೆಸ್‌ನವರು ಒಂದು ಕುಟುಂಬದ ನೆರಳಲ್ಲಿ ಇರುವವರು. ಆರೋಪವಿದ್ದರೆ ಎಸಿಬಿ, ಲೋಕಾಯುಕ್ತಕ್ಕೆ ದೂರು ಕೊಡಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ವಾಗ್ದಾಳಿ ನಡೆಸಿದರು. 

ಕೊರೋನಾ ಕಿಟ್ ಖರೀದಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹಗರಣ ಆರೋಪ ಸಂಬಂಧ ಮಾತನಾಡಿದ ಅವರು, ಈಗ ಬಹಳ ಪಾರದರ್ಶಕ ವ್ಯವಸ್ಥೆ ಇದೆ. ತಪ್ಪು ಮಾಡಿದವರು ಜೈಲಿಗೆ ಹೋಗುತ್ತಾರೆ. ಖಾಸಗಿ ಆಸ್ಪತ್ರೆಗಳು ಕೊರೋನಾ ಚಿಕಿತ್ಸೆಗೆ ಮುಂದೆ ಬರಬೇಕು. ವೈದ್ಯರನ್ನು ಬೆದರಿಸಿ ಚಿಕಿತ್ಸೆ ಕೊಡಿಸುವುದು ಸೂಕ್ತವಲ್ಲ. ಖಾಸಗಿ ವೈದ್ಯರು ಸಂಕಷ್ಟದ ಸ್ಥಿತಿಯಲ್ಲಿ ಸಹಾಯಕ್ಕೆ ಬರಬೇಕು. ಇಲ್ಲದಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತೆ ಎಂದರು.

ಕೊರೋನಾ ನಿಯಂತ್ರಣದಲ್ಲಿ ಭಾರತ ವಿಶ್ವದಲ್ಲಿ ಯಶಸ್ವಿ ರಾಷ್ಟ್ರ. ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ಪರಿಸ್ಥಿತಿ ಅಷ್ಟೊಂದು ಹದಗೆಟ್ಟಿಲ್ಲ. ಲಾಕ್‌ಡೌನ್‌ನಿಂದ ಜನರಿಗೆ ಸಮಸ್ಯೆಯಗಿದ್ದು ನಿಜ. ಜುಲೈವರೆಗೆ ಒಂದು ಲಕ್ಷ ಹತ್ತು ಸಾವಿರ ಕೋಟಿ ರೂಪಾಯಿ ಸಾಲ ಕೊಟ್ಟಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ : ಕೊರೋನಾ ರೋಗಿಗಳ ಮಾಹಿತಿ ನೀಡದ ಆರೋಪ ; ಕಲಬುರ್ಗಿಯ ಎರಡು ಖಾಸಗಿ ಆಸ್ಪತ್ರೆಗಳ ಮಾನ್ಯತೆ ರದ್ದು

ಆತ್ಮ ನಿರ್ಭರ ಭಾರತ್ ಯೋಜನೆಯಡಿ ಸಣ್ಣ ಕೈಗಾರಿಕೆಗಳಿಗೆ ಸಾಲ ನೀಡಿದ್ದೇವೆ. ಎರಡು ನೂರು ಕೋಟಿ ರೂಪಾಯಿಯೊಳಗಿನ ಟೆಂಡರ್‌ಗಳಿಗೆ ವಿದೇಶಿ ಕಂಪನಿಗಳಿಗೆ ಅವಕಾಶವಿಲ್ಲ. ಅಂತಹದೊಂದು ತೀರ್ಮಾನ ನಮ್ಮ ಸರ್ಕಾರ ತೆಗೆದುಕೊಂಡಿದೆ. ದೇಶ 72 ಲಕ್ಷ ಕಾರ್ಮಿಕರಿಗೆ ಈಗಾಗಲೇ 2,500 ಕೋಟಿ ರೂಪಾಯಿ ಸೌಲಭ್ಯ ಸಿಕ್ಕಿದೆ. ದೇಶದ ಜನರಿಗೆ ನೇರವಾಗಿ ಸರ್ಕಾರದ ಯೋಜನೆ ತಲುಪುತ್ತಿವೆ. ಕಲ್ಲಿದ್ದಲು ಇಲಾಖೆಯಲ್ಲಿ ಖಾಸಗಿಯವರಿಗೆ ಅವಕಾಶ ಕಲ್ಪಿಸಿದ್ದೇವೆ. ಇದರಿಂದ 2024ರ ಹೊತ್ತಿಗೆ ಕಲ್ಲಿದ್ದಲ್ಲು ಆಮದನ್ನು ನಿಲ್ಲಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.

ವಿದೇಶದಲ್ಲಿನ ಭಾರತೀಯರನ್ನು ಕರತರುವಲ್ಲಿ ಕೇಂದ್ರ ಯಶಸ್ವಿಯಾಗಿದೆ. ಕೊರೋನಾ ಮಹಾಮಾರಿ ನಿಯಂತ್ರಣ ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ಕೊರೋನಾ ಸೋಂಕು ಪತ್ತೆ ಹಚ್ಚಲು ಕರ್ನಾಟಕದಲ್ಲಿ ಹೊಸದಾಗಿ 21 ಲ್ಯಾಬ್ ಆರಂಭಿಸಲಾಗಿದೆ. ಖಾಸಗಿ ವಲಯದಲ್ಲೂ ಲ್ಯಾಬ್ ತೆರೆಯುವ ವಿಚಾರ ಈಗಾಗಲೇ ಚರ್ಚೆ ನಡೆದಿದೆ ಎಂದರು
Published by: G Hareeshkumar
First published: July 10, 2020, 3:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading