ಚಿತ್ರದುರ್ಗ: ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲಾಗಿದೆ. ಸಿದ್ದರಾಮಯ್ಯ, (Siddaramaiah) ಡಿಕೆಶಿ (DK Shivakumar), ಡಾ.ಜಿ ಪರಮೇಶ್ವರ್ (G Parameshwar) ಮೂರು ಬಣಗಳಾಗಿ ಸಿಎಂ ಆಗಲು ಹೊರಟಿದ್ದಾರೆ. ಕಾಂಗ್ರೆಸ್ನವರಿಗೆ ತಾಕತ್ ಇದ್ದರೆ ದಲಿತ ನಾಯಕರ ಹೆಸರನ್ನು ಸಿಎಂ ಎಂದು ಘೋಷಿಸಲಿ. ಚುನಾವಣೆಗಳು ಬಂದಾಗ ಮಾಜಿ ಸಿಎಂ ಸಿದ್ದರಾಮಯ್ಯಗೆ ಅಹಿಂದ, ದಲಿತ ಸಮುದಾಯಗಳು ನೆನಪಾಗುತ್ತದೆ. ಚುನಾವಣೆ ಮುಗಿದ ಬಳಿಕ ಅವೆಲ್ಲವನ್ನೂ ಮರೆಯುತ್ತಾರೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗಲು ಪಂಜಾಬ್ ಮಾದರಿಯಲ್ಲಿ ಹೊರಟಿದ್ದಾರೆ ಎಂದು ಸಚಿವ ಬಿ. ಶ್ರೀರಾಮುಲು (Minister B Sriramulu) ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ದೇವಸಮುದ್ರದಲ್ಲಿ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಮಾಜಿ ಸಿಎಂ ಬಿಎಸ್ವೈ ಪುತ್ರನ ಆಪ್ತರ ಮನೆಗಳ ಮೇಲೆ ಐಟಿ ದಾಳಿ ಆಗಿದ್ದರಲ್ಲಿ ಸಿದ್ದರಾಮಯ್ಯ ಕೈವಾಡ ಇದೆ ಎಂಬ ಮಾಜಿ ಸಿಎಂ HDK ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಬಿ. ಶ್ರೀ ರಾಮುಲು, ಐಟಿ ದಾಳಿ ಇದೊಂದು ನಿರಂತರ ಪ್ರಕ್ರಿಯೆ, ಐಟಿ ದಾಳಿ ಈಗ ತನಿಖೆ ಹಂತದಲ್ಲಿ ಇದೆ. ಅದರ ಬಗ್ಗೆ ನಾನು ಮಾತನಾಡುವುದು ತಪ್ಪಾಗುತ್ತದೆ. ರಾಜಕಾರಣದಲ್ಲಿ ಒಬ್ಬರ ಮೇಲೆ ಒಬ್ಬರು ಆರೋಪ ಮಾಡುತ್ತಾರೆ. ಈ ವಿಚಾರವಾಗಿ ಕುಮಾರಸ್ವಾಮಿ ಬಳಿಯೇ ಕೇಳುವುದು ಒಳಿತು. ಐಟಿ ದಾಳಿ ಅನೇಕರ ಮೇಲೆ ದಾಳಿ ನಡೆದಿದೆ. ಮಾಜಿ ಸಿಎಂ ಯಡಯೂರಪ್ಪ ನಮ್ಮೆಲ್ಲೆರ ನಾಯಕರು. ಅವರು ಬರೀ ವ್ಯಕ್ತಿಯಲ್ಲ. ದೊಡ್ಡ ಶಕ್ತಿ. ಅವರ ಮಾರ್ಗದರ್ಶನದಲ್ಲಿ ರಾಜಕೀಯ ಮಾಡುತ್ತಿದ್ದೇವೆ. ಐಟಿ ದಾಳಿ ಕುರಿತು ಬೇರೆ ಪಕ್ಷಗಳು ಅವರ ಮನಸ್ಥಿತಿ ಮೇಲೆ ಹೇಳಿಕೆ ನೀಡುತ್ತಾರೆ ಎಂದು ಹೇಳಿದ್ದಾರೆ.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೋಲುವ ಭೀತಿ ಇದೆ. ಆದ್ದರಿಂದ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಸೋಲಿಸಲು JDS ಅಭ್ಯರ್ಥಿಗಳನ್ನ ಹಾಕಿದ್ದಾರೆ ಎಂದು ಹೊಸ ರಾಗ ತೆಗೆದಿದ್ದಾರೆ. ಸಿದ್ದರಾಮಯ್ಯಗೆ ಬೈ ಎಲೆಕ್ಷನ್ ಗೆಲ್ಲಿಸುವ ಮನಸ್ಸಿಲ್ಲ. ಸೋಲಬೇಕು ಎಂದು ಹೇಳುತ್ತಿದ್ದಾರೆ. ನಾವು ಸೋಲುತ್ತೇವೆ ಎಂದು 20 ಬಾರಿ ಹೇಳಿದ್ದಾರೆ ಎಂದು ಟಾಂಗ್ ಕೊಟ್ಟರು.
ಚುನಾವಣೆಗಳು ಬಂದ ಬಳಿಕ ಅವರಿಗೆ ಅಹಿಂದ, ದಲಿತರು ನೆನಪಾಗುತ್ತಾರೆ. ಚುನಾವಣೆ ಮುಗಿದ ಬಳಿಕ ಅವರು ಅವೆಲ್ಲವನ್ನೂ ಮರೆಯುತ್ತಾರೆ. ಸಿದ್ದರಾಮಯ್ಯ CM ಆಗಬೇಕು ಎಂದು ಪಂಜಾಬ್ ಮಾಡೆಲ್ ನಲ್ಲಿ ಹೊರಟಿದ್ದಾರೆ. ಪಂಜಾಬ್ ನಲ್ಲಿ ಒಬ್ಬ ಸಿದ್ದು ಇದ್ದಾರೆ. ರಾಜ್ಯದಲ್ಲಿ ಒಬ್ಬ ಸಿದ್ದು ಇದ್ದಾರೆ. ಅಲ್ಲಿ ಅವರು ಕ್ಯಾಪ್ಟನ್ ಆಗಲು ಹೊರಟಿದ್ದಾರೆ, ಇಲ್ಲಿ ಸಿದ್ದರಾಮಯ್ಯ ಹೊರಟಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಆಗಿದೆ. ದಲಿತರ ಹೆಸರ ಮೇಲೆ ಮತ ಗಳಿಸಲು ಹೊರಟಿದ್ದಾರೆ. ಕಾಂಗ್ರೆಸ್ ನಾಯಕರಿಗೆ ತಾಕತ್ ಇದ್ದರೆ, ದಲಿತ ನಾಯಕರ ಹೆಸರನ್ನ ಸಿಎಂ ಎಂದು ಘೋಷಣೆ ಮಾಡಲಿ ಎಂದು ಸವಾಲ್ ಹಾಕಿದ್ದಾರೆ.
ಇದನ್ನು ಓದಿ: HD Kumaraswamy: ಕಾಂಗ್ರೆಸ್ಸಿಗರು ಜೆಡಿಎಸ್ ನಾಯಕರ ಮನೆಗಳ ಮುಂದೆ ಬಲೆ ಹಾಕಿಕೊಂಡು ಕೂತಿದ್ದಾರೆ; ಎಚ್ಡಿಕೆ ಆಕ್ರೋಶ
ಇನ್ನೂ ಬೆಂಗಳೂರು ಉಸ್ತುವಾರಿ ಮುಂಚೆಯಿಂದ ತಿಕ್ಕಾಟ ಇದೆ. ನಮ್ಮ ಮುಖ್ಯಮಂತ್ರಿ ಸಮರ್ಥರಿದ್ದಾರೆ. ಇದನ್ನ ಸರಿ ಪಡಿಸುತ್ತಾರೆ. ಇನ್ನೂ ರಾಜ್ಯದಲ್ಲಿ ಕಲ್ಲಿದ್ದಲು ಸಮಸ್ಯೆ ಆಗದಂತೆ ನಮ್ಮ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತದೆ. ಈ ಕುರಿತು ಇಂಧನ ಸಚಿವರು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಕಳಚಿ ಹೋಗುತ್ತಿರುವುದು ಸಿದ್ದರಾಮಯ್ಯ ಅಂತ ನಾಯಕರಿಂದ. ಅವರಿಂದ ಪಾಠ ಕಲಿಯುವುದು ಬೇಕಾಗಿಲ್ಲ. ಕಲ್ಲಿದ್ದಲು ಆಗಲಿ, ಖಾಸಗಿಕರಣ ಆಗಲಿ ಅದನ್ನು ನಮ್ಮ ಪ್ರಧಾನಿಗಳು ನಿರ್ಧರಿಸುತ್ತಾರೆ ಎಂದು ತಿರುಗೇಟು ನೀಡಿದರು.
KSRTC ನೌಕರರ ವೇತನ ವಿಚಾರ ಕುರಿತು ನಾನು ಸಿಎಂ ಬಳಿ ಮಾತನಾಡಿದ್ದೇನೆ. ದಸರಾ ಹಬ್ಬದ ಒಳಗಾಗಿ ಪೂರ್ತಿ ಸಂಬಳ ಮಾಡುತ್ತೇವೆ. ಯಾವುದೇ ಸಮಸ್ಯೆ ಮಾಡಲ್ಲ ಎಂದು ಭರವಸೆ ನೀಡಿದರು.
ವರದಿ : ವಿನಾಯಕ ತೊಡರನಾಳ್ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ