ಜೋಡೆತ್ತು, ಹಸು-ಕರು ಕಾಂಗ್ರೆಸ್ ಪಕ್ಷದ ಗುರುತು, ಅವರಿಗೆ ಇತಿಹಾಸವೇ ಗೊತ್ತಿಲ್ಲ; ಸಿ.ಟಿ.ರವಿ ವ್ಯಂಗ್ಯ

ಸಂವಿಧಾನ ತರುವಾಗ ಅಂಬೇಡ್ಕರ್​ಗೆ ಸಲಹೆ ಕೊಟ್ಟಿದ್ದು ಬಿಜೆಪಿಯಲ್ಲ. ಮೋದಿ ಅಲ್ಲ. ಈ ದೇಶದ ಸಂಸ್ಕೃತಿ ಅವರ ಮನಸ್ಸಿನ ಮೂಲಕ ಸಂವಿಧಾನದಲ್ಲಿ ಉಲ್ಲೇಖ ಮಾಡುವಂತೆ ಮಾಡಿತು. ಈ ದೇಶದಲ್ಲಿ ಇರುವುದು ಪುರಾತನ ಸಂಸ್ಕೃತಿ. ಗೋವನ್ನ ಪೂಜ್ಯ ಭಾವನೆ ಮಾತ್ರವಲ್ಲ. ಗೋವು ಎಲ್ಲ ರೀತಿಯಿಂದಲೂ ದೇಶಕ್ಕೆ ಬಲ ಕೊಟ್ಟಂತ ಸಂಗತಿ. ಗೋವಿನ ಜೊತೆಗೆ ಜೀವನ. ಹಾಗಾಗೇ ಸಂವಿಧಾನದಲ್ಲಿ ಗೋ ಹತ್ಯೆ ನಿಷೇಧದ ಪ್ರಸ್ತಾಪ ಮಾಡಿದ್ದಾರೆ ಎಂದರು.

ಸಿ.ಟಿ. ರವಿ.

ಸಿ.ಟಿ. ರವಿ.

  • Share this:
ಚಿಕ್ಕಮಗಳೂರು: ಜೋಡೆತ್ತು ಕಾಂಗ್ರೆಸ್ ಪಕ್ಷದ ಗುರುತಾಗಿತ್ತು. ಹಸು-ಕರು ಅವರ ಪಕ್ಷದ ಗುರುತಾಗಿತ್ತು. ಕಾಂಗ್ರೆಸ್ಸಿಗರು ಇತಿಹಾಸ ಮರೆತಿದ್ದಾರೆ. ಹಿಂದಿನ ಕಾಂಗ್ರೆಸ್ಸಿಗೂ ಈಗಿನ ಕಾಂಗ್ರೆಸ್ಸಿಗೂ ಸಂಬಂಧವೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಚಿಕ್ಕಮಗಳೂರಿನ ಆರ್.ಜಿ.ರಸ್ತೆಯಲ್ಲಿನ ಕಾಮಧೇನು ಗಣಪತಿ ದೇವಾಲಯದಲ್ಲಿ ದತ್ತಮಾಲಾಧಾರಣೆ ಬಳಿಕ ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಅವರನ್ನು ಕೇಳುತ್ತೇನೆ. ನಿಮ್ಮ ಕುಲದೈವ ಬೀರೇಶ್ವರ ಗೋ ಹತ್ಯೆಯನ್ನು ಸಮರ್ಥನೆ ಮಾಡ್ತಾರಾ. ಯಾವತ್ತಾದ್ರು ಗೋ ಹತ್ಯೆಗೆ ಸಮರ್ಥನೆಯಾಗಿ ನಿಲ್ತಾರಾ. ಬೀರೇಶ್ವರನ ವಾಹನ ಏನೆಂದು ಯೋಚಿಸಲಿ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ಜೋಡೆತ್ತು ಕಾಂಗ್ರೆಸ್ ಪಕ್ಷದ ಗುರುತಾಗಿತ್ತು. ಹಸು-ಕರು ಅವರ ಪಕ್ಷದ ಗುರುತಾಗಿತ್ತು. ಕಾಂಗ್ರೆಸ್ಸಿಗರು ಇತಿಹಾಸ ಮರೆತಿದ್ದಾರೆ. ಹಿಂದಿನ ಕಾಂಗ್ರೆಸ್ಸಿಗೂ ಇಂದಿನ ಕಾಂಗ್ರೆಸ್ಸಿಗೂ ಸಂಬಂಧವೇ ಇಲ್ಲ. ಯಾವ ಪಕ್ಷ ಜೋಡೆತ್ತನ್ನ ಹಸು-ಕರುವನ್ನ ತನ್ನ ಪಕ್ಷದ ಗುರುತಾಗಿಸಿಕೊಂಡಿತ್ತೋ ಆ ಪಕ್ಷ ಗೋಹತ್ಯೆ ನಿಷೇಧಕ್ಕೆ ವಿರೋಧ ಮಾಡುತ್ತೆ. ಇಂಥವರಿಗೆ ಏನು ಹೇಳಬೇಕು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಇನ್ನು ಸಿದ್ದರಾಮಯ್ಯನವರು ಆಹಾರ ಸಂಸ್ಕೃತಿ ಬಗ್ಗೆ ಮಾತನಾಡ್ತಾರೆ. ಇದಿಯಾ ಮೀನಿಗೆ ಮನುಷ್ಯರನ್ನು ತಿನ್ನುವುದೇ ಆಹಾರ. ನಾಳೆ ಯಾರಾದ್ರು ನಾನು ಮನುಷ್ಯರನ್ನು ತಿನ್ನೋದೆ ಆಹಾರ ಅಂದ್ರೆ ಸಿದ್ದರಾಮಯ್ಯನವರು ಅದನ್ನು ಸಪೋರ್ಟ್ ಮಾಡ್ತಾರಾ? ಸಂವಿಧಾನದ ಬಗ್ಗೆ ಯಾರಿಗೆ ತಿಳಿವಳಿಕೆ, ಶ್ರದ್ಧೆ ಇದ್ಯೋ ಅವರ್ಯಾರು ಗೋಹತ್ಯೆ ನಿಷೇಧ ಕಾಯ್ದೆಯನ್ನ ವಿರೋಧಿಸಲ್ಲ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರೇ, ಗೋಹತ್ಯೆ ನಿಷೇಧವನ್ನು ಪ್ರಸ್ತಾಪ ಮಾಡಿದ್ದಾರೆ. 1964ರಲ್ಲೇ ಗೋಹತ್ಯೆ ನಿಷೇಧ ಕಾಯ್ದೆ ಬಂದಿದೆ. ಕಾಯ್ದೆಯನ್ನು ಇನ್ನಷ್ಟು ಬಿಗಿಗೊಳಿಸೋ ಕೆಲಸವನ್ನಷ್ಟೆ ಈಗ ಮಾಡಿರೋದು ಎಂದರು.

ಇದನ್ನು ಓದಿ: ಬೆನ್ನಿಗೆ ಚೂರಿ ಹಾಕಿದರು ಎಂದು ಸಿದ್ದರಾಮಯ್ಯನವರಿಗೆ ಈಗ ಎಲ್ಲಾ ಅರ್ಥವಾಗಿದೆ; ಸಚಿವ ವಿ.ಸೋಮಣ್ಣ ವ್ಯಂಗ್ಯ

1964 ಆಡಳಿತದಲ್ಲಿದ್ದದ್ದು ಬಿಜೆಪಿಯೂ ಅಲ್ಲ. ಜನಸಂಘವೂ ಅಲ್ಲ. ಸಂವಿಧಾನ ತರುವಾಗ ಅಂಬೇಡ್ಕರ್​ಗೆ ಸಲಹೆ ಕೊಟ್ಟಿದ್ದು ಬಿಜೆಪಿಯಲ್ಲ. ಮೋದಿ ಅಲ್ಲ. ಈ ದೇಶದ ಸಂಸ್ಕೃತಿ ಅವರ ಮನಸ್ಸಿನ ಮೂಲಕ ಸಂವಿಧಾನದಲ್ಲಿ ಉಲ್ಲೇಖ ಮಾಡುವಂತೆ ಮಾಡಿತು. ಈ ದೇಶದಲ್ಲಿ ಇರುವುದು ಪುರಾತನ ಸಂಸ್ಕೃತಿ. ಗೋವನ್ನ ಪೂಜ್ಯ ಭಾವನೆ ಮಾತ್ರವಲ್ಲ. ಗೋವು ಎಲ್ಲ ರೀತಿಯಿಂದಲೂ ದೇಶಕ್ಕೆ ಬಲ ಕೊಟ್ಟಂತ ಸಂಗತಿ. ಗೋವಿನ ಜೊತೆಗೆ ಜೀವನ. ಹಾಗಾಗೇ ಸಂವಿಧಾನದಲ್ಲಿ ಗೋ ಹತ್ಯೆ ನಿಷೇಧದ ಪ್ರಸ್ತಾಪ ಮಾಡಿದ್ದಾರೆ ಎಂದರು.
Published by:HR Ramesh
First published: