ಈಶ್ವರಪ್ಪ ಪೆದ್ದ.. VOTE ಕೊಡಿ ಅನುದಾನ ಕೊಡ್ತೀನಿ ಅಂತಾನೆ, ಅವರ ತಾತನ ದುಡ್ಡು ಕೊಡ್ತಾನಾ: ಏಕವಚನದಲ್ಲಿ Siddaramaiah ವಾಗ್ದಾಳಿ

ನರೇಂದ್ರ ಮೋದಿ, ಅಮಿತ್ ಶಾ, ಬಸವರಾಜ ಬೊಮ್ಮಾಯಿ ನಿಮಗೆ ನಾಚಿಕೆಯಾಗಲ್ವಾ. ಸಂಸದೆ ಶೋಭಾ ಕರಂದ್ಲಾಜೆ ಗ್ಯಾಸ್ ಸಿಲಿಂಡರ್ ಹೊತ್ತುಕೊಂಡು ಪ್ರತಿಭಟನೆ ಮಾಡಿದ್ದೂ ನೋಡಿದ್ದೆ. ಈಗ ಎಲ್ಲಿದ್ದೀಯಾ ತಾಯಿ ಗ್ಯಾಸ್​​​ ಬೆಲೆ 957 ರೂಪಾಯಿ ಆಗಿದೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ.

ಸಿದ್ದರಾಮಯ್ಯ.

  • Share this:
ತುಮಕೂರು: ಕಲ್ಪತರು ನಾಡಲ್ಲಿ ಇಂದು ಕಾಂಗ್ರೆಸ್​ ನಾಯಕರು (Congress Leaders) ಅಬ್ಬರಿಸಿದರು. ವಿಪಕ್ಷನಾಯಕ ಸಿದ್ದರಾಮಯ್ಯ ಹಾಗೂ (Siddaramaiah) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​​ (DK Shivakumar) ಅಬ್ಬರದ ಭಾಷಣದಲ್ಲಿ ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರಗಳ (BJP Govts) ವಿರುದ್ಧ ಗುಡುಗಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಸಂವಿಧಾನದ ವಿಧಿವಿಧಾನಗಳನ್ನ ಗಾಳಿಗೆ ತೂರಿದ್ದಾರೆ. ಇಂಥ ಕೆಟ್ಟ ಪರಿಸ್ಥಿತಿ ಯಾವ ಕಾಲದಲ್ಲೂ ಬಂದಿರಲಿಲ್ಲ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ರೈತರು ಒಂದು ವರ್ಷದಿಂದ ಹೋರಾಟ ಮಾಡಿದ್ದು,700 ರೈತರ ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟು ಸುದೀರ್ಘವಾಗಿ ಯಾವ ಹೋರಾಟವೂ ನಡೆದಿಲ್ಲ. ಈಗ ಪ್ರಧಾನಿ ನರೇಂದ್ರ ಮೋದಿಗೆ ಜ್ಞಾನೋದಯ ವಾಗಿ, ವಾಪಸ್ ಪಡೆದಿದ್ದಾರೆ. ಮುಂಚಿತವಾಗಿ ವಾಪಸ್ ಪಡೆದಿದ್ದರೆ 700 ರೈತರ ಪ್ರಾಣ ಉಳಿಯುತ್ತಿತ್ತು. 700 ಜನರ ಸಾವಿಗೆ ಮೋದಿ ಹಾಗೂ ಅವರ ಸರ್ಕಾರ ನೇರ ಕಾರಣ ಎಂದು ಆರೋಪಿಸಿದರು.

ಮೃತ ರೈತರಿಗೆ 25 ಲಕ್ಷ ಕೊಡಬೇಕು

ಕೇಂದ್ರ ಸರ್ಕಾರ ಕೃಷಿ ಕಾಯ್ದೆ ವಾಪಸ್​ ಪಡೆದಿರುವುದು ಹೋರಾಟಕ್ಕೆ ಸಿಕ್ಕ ಐಸಿಹಾಸಿಕ ಜಯ ಎಂದು ಸಿದ್ದರಾಮಯ್ಯ ಬಣ್ಣಿಸಿದರು. ಹೋರಾಟ ನಡೆಸಿದ ರೈತರಿಗೆ ಕಾಂಗ್ರೆಸ್ ನಿಂದ ದೊಡ್ಡ ನಮಸ್ಕಾರ ಮಾಡ್ತೇನೆ. ಮೃತರಿಗೆ 25 ಲಕ್ಷ ಪರಿಹಾರ ಕೊಡಬೇಕು, ಅವರ ಮೇಲಿನ ಪ್ರಕರಣ ವಾಪಸ್ ಪಡೆಯಬೇಕು. ಮೋದಿ ಅವರೇ, ರೈತರ ವಿರುದ್ದ ಅನ್ಯಾಯ ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

ಈಗ ಎಲ್ಲಿದ್ಯಾ ತಾಯಿ ಶೋಭಾ ಕರಂದ್ಲಾಜೆ?

ಬೆಲೆ ಏರಿಕೆ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ದೇಶದ ಇತಿಹಾಸದಲ್ಲಿ ಇಷ್ಟು ಬೆಲೆ ಏರಿಕೆಯಾಗಿರೋದು ನಾನು ನೋಡಿರಲಿಲ್ಲ. ನರೇಂದ್ರ ಮೋದಿ, ಅಮಿತ್ ಶಾ, ಬಸವರಾಜ ಬೊಮ್ಮಾಯಿ ನಿಮಗೆ ನಾಚಿಕೆಯಾಗಲ್ವಾ. ಸಂಸದೆ ಶೋಭಾ ಕರಂದ್ಲಾಜೆ ಗ್ಯಾಸ್ ಸಿಲಿಂಡರ್ ಹೊತ್ತುಕೊಂಡು ಪ್ರತಿಭಟನೆ ಮಾಡಿದ್ದೂ ನೋಡಿದ್ದೆ. ಈಗ ಎಲ್ಲಿದ್ದೀಯಾ ತಾಯಿ ಗ್ಯಾಸ್​​​ ಬೆಲೆ 957 ರೂಪಾಯಿ ಆಗಿದೆ ಎಂದು ವ್ಯಂಗ್ಯವಾಡಿದರು.

ಈಶ್ವರಪ್ಪ‌ ಪೆದ್ದ..

ಬಿಜೆಪಿಯವರು ಶಂಕು, ಕೊಂಬು, ಕಹಳೆ ಊದಿಕೊಂಡು ಜನಸ್ವರಾಜ್ಯ ಯಾತ್ರೆ ಹೊರಟಿದ್ದಾರೆ. ಕೊಂಬು-ಕಹಳೆಗೆ ತನ್ನದೇ ಆದ ಒಂದು ಮಹತ್ವ‌ಇದೆ, ಅದನ್ನೂ ತೆಗೆದುಬಿಡ್ತಾರೆ ಇವರು. ಈಶ್ವರಪ್ಪ‌ ಪೆದ್ದ, ಓಟ್ ಕೊಟ್ರೆ ಗ್ರಾಂಟ್ ಕೊಡ್ತೀವಿ ಅಂದಿದ್ದಾನೆ. ಏನ್ ಅವರ ತಾತನ ದುಡ್ಡಾ ಅದು ಕೋಡೋಕೆ, ಜನರ ದುಡ್ಡು ಎಂದು ಮಾತಿನಲ್ಲೇ ತಿವಿದರು. ಈ ಬಾರಿಯೂ ತುಮಕೂರಿನಿಂದ ರಾಜೇಂದ್ರನೇ ಅಭ್ಯರ್ಥಿ. ನೂರಕ್ಕೆ ನೂರರಷ್ಟು ರಾಜೇಂದ್ರ ಈ‌ ಬಾರಿ ಗೆದ್ದು, ಪರಿಷತ್ ಗೆ ಬರಬೇಕು ಎಂದರು.

ಇದನ್ನೂ ಓದಿ: ಜನ ಬರ್ಬಾದ್ ಎನ್ನುವ Siddaramaiahಗೆ ಕಾಂಗ್ರೆಸ್ ಬರ್ಬಾದ್ ಆಗಿರೋದು ಕಾಣೋದಿಲ್ವಾ: Eshwarappa ತಿರುಗೇಟು

ನೀವೆಲ್ಲಾ ಶಪಥ ಮಾಡಬೇಕು

ರಾಜ್ಯದಲ್ಲಿ 1 ಲಕ್ಷ ಹೆಕ್ಟೆರ್ ನಲ್ಲಿ ಬೆಳೆ ಹಾನಿಯಾಗಿದೆ, ಆ ಮುಖ್ಯಮಂತ್ರಿ ಚಲನಚಿತ್ರ ಬಿಡುಗಡೆಯಲ್ಲಿ ನಿರತರಾಗಿದ್ದಾರೆ. ಸಿದ್ದರಾಮಯ್ಯನ ಸರ್ಕಾರ 10% ಸರ್ಕಾರ ಅಂತಾರೆ, ಅದಕ್ಕೆಲ್ಲಾ ಆಧಾರ ಇಲ್ಲ. ನನ್ನ ಹತ್ರ ಕಂಟ್ರಾಕ್ಟರ್ ಅಸೋಸಿಯೇಷನ್​​​ನ ಪತ್ರ ಇದೆ. ಆ ಪತ್ರದಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಕಮಿಷನ್ ಕೊಡಬೇಕು ಅಂತ ಇದೆ. ರಾಜ್ಯ ಕಂಟ್ರಾಕ್ಟರ್ ಸಂಘದ ಅಧ್ಯಕ್ಷ ಕೆಂಪಣ್ಣ ಬರೆದಿರೋ ಪತ್ರ ಅದು. 35 ರಿಂದ 40 % ಲಂಚ ಕೊಡಬೇಕು. ಇಷ್ಟಾದರೂ ಈ ಸರ್ಕಾರ ಇರಬೇಕಾ ನೀವೇ ಹೇಳಿ. 2023ರಲ್ಲಿ ಜಿಲ್ಲೆಯಲ್ಲಿ 8 ರಿಂದ 10 ಶಾಸಕರು ಗೆಲ್ಲುವ ನಿಟ್ಟಿನಲ್ಲಿ ನೀವೆಲ್ಲಾ ಶಪಥ ಮಾಡಬೇಕು. ಬಿಜೆಪಿಯ ಕಪಟತನ, ಭ್ರಷ್ಟಾಚಾರವನ್ನ ಬಹಿರಂಗಗೊಳಿಸಿ ಅವರನ್ನ ಬೆತ್ತಲೆ ಮಾಡ್ತೇವೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಷಣ ಮಾಡಿ, ರಾಹುಲ್ ಗಾಂಧಿ ಹೇಳಿದಂತೆ ಇಂದು ಕೃಷಿ ಕಾಯಿದೆ ವಾಪಸ್ ಪಡೆದಿದ್ದಾರೆ. 700 ರೈತರು ಪ್ರಾಣತ್ಯಾಗ ಮಾಡಿದ್ರು, ಅವರನ್ನು ಹುತಾತ್ಮರು ಎಂದು ಘೋಷಣೆ ಮಾಡಬೇಕು. ಅವರ ಕುಟುಂಬಕ್ಕೆ 500 ಎಕರೆ ಜಮೀನು ಕೊಡಬೇಕು ಎಂದು ಆಗ್ರಹಿಸಿದರು.
Published by:Kavya V
First published: