ಕ್ರಿಕೆಟ್ ಬೆಟ್ಟಿಂಗ್ ಆರೋಪ; ಶಾಸಕ ಬಸವರಾಜ ಮತ್ತಿಮೋಡ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ
ಶಾಸಕ ಮತ್ತಿಮೋಡ ಭಾಮೈದ ಗೋರಖನಾಥ್ ಮನೆ ಮೇಲೆ ದಾಳಿ ಮಾಡಿದ್ದ ಮಹಾರಾಷ್ಟ್ರ ಪೊಲೀರು, ಶಾಸಕರ ಪತ್ನಿ ಹೆಸರಲ್ಲಿದ್ದ ಕಾರನ್ನು ಸೀಜ್ ಮಾಡಿದ್ದರು. ಇಬ್ಬರು ಆರೋಪಿಗಳನ್ನು ಬಂಧಿಸಿ, ಲಕ್ಷಾಂತರ ರೂಪಾಯಿ ನಗದು, ಮತ್ತಿತರ ವಸ್ತು ಜಪ್ತಿ ಮಾಡಿದ್ದರು. ಬೆಟ್ಟಿಂಗ್ ದಂಧೆಯಲ್ಲಿ ಶಾಸಕರ ಪತ್ನಿಯ ಕಾರು ಸೀಜ್ ಆಗಿರೋದು ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
news18-kannada Updated:November 15, 2020, 5:36 PM IST

ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೋಡ.
- News18 Kannada
- Last Updated: November 15, 2020, 5:36 PM IST
ಕಲಬುರ್ಗಿ; ಕ್ರಿಕೆಟ್ ಬೆಟ್ಟಿಂಗ್ ಸಂಬಂಧ ಕಲಬುರ್ಗಿ ಗ್ರಾಮಾಂತರ ಶಾಸಕ ಬಸವರಾಜ ಮತ್ತಮೋಡ ಪತ್ನಿ ಕಾರು ಸೀಜ್ ಮಾಡಿರೋ ಪ್ರಕರಣ ಇದೀಗ ರಾಜಕೀಯ ಸ್ವರೂಪ ಪಡೆದುಕೊಳ್ಳಲಾರಂಭಿಸಿದೆ. ನೈತಿಕ ಹೊಣೆ ಹೊತ್ತು ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೋಡ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ. ಪ್ರಕರಣದಲ್ಲಿ ಮತ್ತಿಮೋಡ ಶಾಮೀಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮುಖಂಡ ವಿಜಯಕುಮಾರ್ ಆಗ್ರಹಿಸಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ವಿಜಯಕುಮಾರ್, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಅದರ ನೆರವಿನಿಂದ ಕಲಬುರ್ಗಿ ಸೇರಿ ರಾಜ್ಯದ ಹಲವೆಡೆ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗಿ ನಡೆಸಲಾಗುತ್ತಿದೆ. ಸ್ವತಃ ಶಾಸಕ ಮತ್ತಿಮೋಡ ಹಿಂದೆ ನಿಂತು ಬೆಟ್ಟಿಂಗ್ ದಂಧೆ ಮಾಡಿಸುತ್ತಿದ್ದಾರೆ. ಈ ಹಿಂದೆಯೂ ಮತ್ತಿಮೋಡ ಮೇಲೆ ಕ್ರಿಕೆಟ್ ಬೆಟ್ಟಿಂಗ್ ಕೇಸ್ ಗಳಿದ್ದವು. ಜಿಲ್ಲಾ ಪಂಚಾಯ್ತಿ ಸದ್ಯರಿದ್ದಾಗಲೇ ಈ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರಿಂದ ಹಲವೆಡೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಇದೀಗ ಸೋಲಾಪುರ ಸಿಸಿಬಿ ಪೊಲೀಸರು ದಾಳಿ ಮಾಡಿದ ನಂತರ ಶಾಸಕರ ಅಸಲಿಯತ್ತು ಮತ್ತೊಮ್ಮೆ ಬಯಲಾಗಿದೆ ಎಂದರು. ಇದನ್ನು ಓದಿ: ರೈತರಂತೆ ಕೆಲಸ ಮಾಡಲು ಹೋಗಿ ಎಡವಟ್ಟು; ಹೊಡೆ ಕಟ್ಟುತ್ತಿರುವ ಭತ್ತದ ಬೆಳೆಗೆ ಗೊಬ್ಬರ ಎರಚಿ ನಗೆಪಾಟಲಿಗೀಡಾದ ಕೃಷಿ ಸಚಿವ ಬಿ.ಸಿ.ಪಾಟೀಲ್
ಪ್ರಕರಣದಲ್ಲಿ ಶಾಸಕರ ಪತ್ನಿಯ ಕಾರನ್ನೇ ಸೀಜ್ ಮಾಡಲಾಗಿದೆ. ಲಕ್ಷಾಂತರ ರೂಪಾಯಿ ನಗದು, ಲ್ಯಾಪ್ ಟಾಪ್, ಮೊಬೈಲ್, ಬೆಟ್ಟಿಂಗ್ ದಂಧೆಗೆ ಬಳಸುತ್ತಿದ್ದ ಯಂತ್ರೋಪಕರಣ ಜಪ್ತಿ ಮಾಡಿದ್ದಾರೆ. ಇಷ್ಟೆಲ್ಲಾ ಬೆಟ್ಟಿಂಗ್ ದಂಧೆ ನಡೆಯುತ್ತಿದ್ದರೂ ಸ್ಥಳೀಯ ಪೊಲೀಸರು ಸುಮ್ಮನೇ ಕುಳಿತಿರೋದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಸ್ಥಳೀಯ ಪೊಲೀಸರಿಂದಲೂ ಬೆಟ್ಟಿಂಗ್ ದಂಧೆಗೆ ಬೆಂಬಲ ಇದೆ ಎನ್ನೋದು ಇದರಿಂದ ಗೊತ್ತಾಗುತ್ತದೆ. ಜನಪ್ರತಿನಿಧಿಯೊಬ್ಬರ ಕುಮ್ಮಕ್ಕಿನಿಂದ ಬೆಟ್ಟಿಂಗ್ ನಡೀತಿರೋದು ದುರಂತವಾಗಿದೆ. ಇಂತಹ ಶಾಸಕರಿಂದ ಗ್ರಾಮೀಣ ಕ್ಷೇತ್ರದ ಜನರು ತಲೆ ತಗ್ಗಿಸುವಂತಾಗಿದೆ. ಯುವ ಸಮುದಾಯ ಬೆಟ್ಟಿಂಗ್ ಜಾಲಕ್ಕೆ ಬಿದ್ದು ಹಾಳಾಗುತ್ತಿದೆ ಎಂದು ಹರಿಹಾಯ್ದರು.
ಸಿಎಂ ಯಡಿಯೂರಪ್ಪ ಅವರು ಶಾಸಕ ಮತ್ತಿಮೋಡ ಮೇಲೆ ಕ್ರಮ ಕೈಗೊಳ್ಳಬೇಕು. ನೈತಿಕ ಹೊಣೆ ಹೊತ್ತು ಮತ್ತಿಮೋಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡೋದಾಗಿ ವಿಜಯಕುಮಾರ ಎಚ್ಚರಿಕೆ ನೀಡಿದ್ದಾರೆ. ಶಾಸಕ ಮತ್ತಿಮೋಡ ಭಾಮೈದ ಗೋರಖನಾಥ್ ಮನೆ ಮೇಲೆ ದಾಳಿ ಮಾಡಿದ್ದ ಮಹಾರಾಷ್ಟ್ರ ಪೊಲೀರು, ಶಾಸಕರ ಪತ್ನಿ ಹೆಸರಲ್ಲಿದ್ದ ಕಾರನ್ನು ಸೀಜ್ ಮಾಡಿದ್ದರು. ಇಬ್ಬರು ಆರೋಪಿಗಳನ್ನು ಬಂಧಿಸಿ, ಲಕ್ಷಾಂತರ ರೂಪಾಯಿ ನಗದು, ಮತ್ತಿತರ ವಸ್ತು ಜಪ್ತಿ ಮಾಡಿದ್ದರು. ಬೆಟ್ಟಿಂಗ್ ದಂಧೆಯಲ್ಲಿ ಶಾಸಕರ ಪತ್ನಿಯ ಕಾರು ಸೀಜ್ ಆಗಿರೋದು ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕಲಬುರ್ಗಿಯಲ್ಲಿ ಮಾತನಾಡಿದ ವಿಜಯಕುಮಾರ್, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಅದರ ನೆರವಿನಿಂದ ಕಲಬುರ್ಗಿ ಸೇರಿ ರಾಜ್ಯದ ಹಲವೆಡೆ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗಿ ನಡೆಸಲಾಗುತ್ತಿದೆ. ಸ್ವತಃ ಶಾಸಕ ಮತ್ತಿಮೋಡ ಹಿಂದೆ ನಿಂತು ಬೆಟ್ಟಿಂಗ್ ದಂಧೆ ಮಾಡಿಸುತ್ತಿದ್ದಾರೆ. ಈ ಹಿಂದೆಯೂ ಮತ್ತಿಮೋಡ ಮೇಲೆ ಕ್ರಿಕೆಟ್ ಬೆಟ್ಟಿಂಗ್ ಕೇಸ್ ಗಳಿದ್ದವು. ಜಿಲ್ಲಾ ಪಂಚಾಯ್ತಿ ಸದ್ಯರಿದ್ದಾಗಲೇ ಈ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರಿಂದ ಹಲವೆಡೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಇದೀಗ ಸೋಲಾಪುರ ಸಿಸಿಬಿ ಪೊಲೀಸರು ದಾಳಿ ಮಾಡಿದ ನಂತರ ಶಾಸಕರ ಅಸಲಿಯತ್ತು ಮತ್ತೊಮ್ಮೆ ಬಯಲಾಗಿದೆ ಎಂದರು.