ಮುಂದಿನ ಸಿಎಂ ಯಾರೆಂದು ಸೌಮ್ಯಾ ರೆಡ್ಡಿ ಭವಿಷ್ಯ ನುಡಿಯಲಿ: ಜಗದೀಶ್ ಶೆಟ್ಟರ್ ವ್ಯಂಗ್ಯ

ಸಿದ್ದರಾಮಯ್ಯ ತಾನು ಸಿಎಂ ಆಗ್ತೀನಿ ಅಂತಾರೆ, ಸೌಮ್ಯಾ ರೆಡ್ಡಿ ಡಿಕೆಶಿ ಸಿಎಂ ಆಗ್ತಾರೆ ಅಂತಾರೆ. ಅವರಲ್ಲೇ ಗೊಂದಲ ಇದೆ. ಸಿಎಂ ಯಾರೆಂದು ಸೌಮ್ಯಾ ರೆಡ್ಡಿಯೇ ಭವಿಷ್ಯ ನುಡಿಯಲಿ ಎಂದು ಸಚಿವ ಜಗದೀಶ್ ಶೆಟ್ಟರ್ ಕುಟುಕಿದ್ದಾರೆ.

ಸಚಿವ ಜಗದೀಶ್ ಶೆಟ್ಟರ್

ಸಚಿವ ಜಗದೀಶ್ ಶೆಟ್ಟರ್

  • Share this:
ಧಾರವಾಡ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮುಂದಿನ ಮುಖ್ಯಮಂತ್ರಿ ತಾವೆಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ ಸೌಮ್ಯ ರೆಡ್ಡಿ ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಂತಾ ಹೇಳುತ್ತಿದ್ದಾರೆ. ಅವರಲ್ಲಿಯೇ ಗೊಂದಲಗಳಿವೆ. ಮುಂದಿನ ಮುಖ್ಯಮಂತ್ರಿ ಯಾರೆಂದು ಸೌಮ್ಯ ರೆಡ್ಡಿಯೇ ಭವಿಷ್ಯ ನುಡಿಯಲಿ ಎಂದು ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು.

ಧಾರವಾಡದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸೌಮ್ಯ ರೆಡ್ಡಿ ಸಿದ್ದರಾಮಯ್ಯರ ಹೆಸರು ಏಕೆ ಹೇಳಲಿಲ್ಲ ಎನ್ನುವ ಬಗ್ಗೆ ಅವರನ್ನೇ ಕೇಳಬೇಕು. ಸಿದ್ದರಾಮಯ್ಯರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ಸೌಮ್ಯ ರೆಡ್ಡಿ ಅವರೇ ಹೇಳಬೇಕು ಎಂದು ಕಾಂಗ್ರೆಸ್ ನಾಯಕರನ್ನು ಕುಟುಕಿದರು.

ಪದವೀಧರ ಕ್ಷೇತ್ರದ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಪಕ್ಷೇತರದ ಅಭ್ಯರ್ಥಿಗೆ ಬೆಂಬಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್, ಕಾಂಗ್ರೆಸ್ - ಜೆಡಿಎಸ್ ಒಡೆದ ಮನೆ. 'ಬಿ' ಫಾರ್ಮ್ ನೀಡಿದ ವ್ಯಕ್ತಿ ಇನ್ನೊಬ್ಬರಿಗೆ ಬೆಂಬಲಿಸುತ್ತಾರೆ ಎಂದರೆ ಪರಿಸ್ಥಿತಿ ಏನಿದೆ ಎಂಬುದನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕು ಎಂದರು.

ಇದನ್ನೂ ಓದಿ: ಸರಳ ದಸರಾದಿಂದ ನಲುಗಿದ ಹೊಟೇಲ್​ ಉದ್ಯಮ; ಕೋಟ್ಯಾಂತರ ರೂ ನಷ್ಟ ಎಂದ ಮಾಲೀಕರು

ಶಾಲಾ-ಕಾಲೇಜು ಆರಂಭದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಅಧಿಕೃತ ನಿರ್ಧಾರ ಆಗಿಲ್ಲ. ಕ್ಯಾಬಿನೆಟ್​ನಲ್ಲಿ ಚರ್ಚೆ ಮಾಡಿಲ್ಲ. ಯಾವಾಗ ಆರಂಭಿಸಬೇಕು ಎನ್ನುವ ಬಗ್ಗೆ ಆಲೋಚನೆ ನಡೆದಿವೆ ವಿನಃ ಈವರೆಗೂ ಅಂತಿಮ ನಿರ್ಧಾರವಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಶಾಲಾ ಕಾಲೇಜು ಒಂದು ವರ್ಷ ತೆರೆಯದಂತೆ ಹೇಳಿಕೆ ವಿಚಾರ, ಒಂದು ವರ್ಷವೇ ಲಿಮಿಟ್ ಏಕೆ? ಒಂದು ತಿಂಗಳು ಅಥವಾ ಎರಡು ತಿಂಗಳು ಬಿಟ್ಟು ನೋಡೋಣ. ಕೊರೋನಾ ನಿಯಂತ್ರಣಕ್ಕೆ ಬಂದರೆ ಶೀಘ್ರವೇ ಆರಂಭಗೊಳ್ಳಲಿವೆ ಎಂದು ಕೈಗಾರಿಕಾ ಸಚಿವರು ಹೇಳಿದರು.

ವರದಿ: ಮಂಜುನಾಥ ಯಡಳ್ಳಿ
Published by:Vijayasarthy SN
First published: