news18-kannada Updated:May 31, 2020, 7:19 AM IST
ಭಟ್ಕಳ ನಗರ.
ಕಾರವಾರ(ಮೇ.31): ಬರೋಬ್ಬರಿ ಎರಡು ತಿಂಗಳು ಅಂದರೆ 70 ದಿನದ ಬಳಿಕ ನಿರ್ಭಂದಿತ ವಲಯ ಭಟ್ಕಳದಲ್ಲಿ ಷರತ್ತು ಬದ್ಧ ಆರ್ಥಿಕ ಚಟುವಟಿಕೆಗೆ ಅವಕಾಶ ಸಿಕ್ಕಿದ್ದು ಜನರ ನೆಮ್ಮದಿಯ ನಿಟ್ಟುಸಿರಿನ ಕನಸು ಚಿಗುರೊಡೆದಿದೆ.
ಮೊದಲ ಕೊರೋನಾ ಸೋಂಕು ಪತ್ತೆ ಆಗಿ ಇಡೀ ಜಿಲ್ಲೆಯನ್ನೆ ನಡುಗಿಸಿದ್ದು ಭಟ್ಕಳ, ದುಬೈ ಸಂಪರ್ಕದ ಮೂಲಕ ಭಟ್ಕಳದಲ್ಲಿ ಕೊರೋನಾ ಸೋಂಕು ಆರಂಭದಲ್ಲಿ ಕಾಣಿಸಿಕೊಂಡಿತ್ತು, ಬಳಿಕ ಪ್ರತ್ಯೇಕವಾಗಿ ಭಟ್ಕಳವನ್ನ ನಿರ್ಭಂದಿತ ವಲಯ ಎಂದು ಮಾರ್ಚ್ ಅಂತ್ಯದಲ್ಲಿ ಘೋಷಣೆ ಮಾಡಲಾಯಿತು ಅಂದಿನಿಂದ ಇಂದಿನ ವರೆಗೆ ಭಟ್ಕಳ ಸಂಪೂರ್ಣ ಸ್ತಬ್ಧ ವಾಗಿತ್ತು.
ಇಲ್ಲಿ ಯಾವುದೇ ಆರ್ಥಿಕ ಚಟುವಟಿಕೆ ಗಳಿಗೆ ಅವಕಾಶ ನೀಡಿರಲಿಲ್ಲ, ಮದ್ಯದಲ್ಲಿ ಕೊರೋನಾ ಮುಕ್ತವಾಯಿತು ಎನ್ನುವಾಗಲೆ ಮತ್ತೆ ಭಟ್ಕಳದಲ್ಲಿ ಮಂಗಳೂರು ಪಸ್ಟ್ ನ್ಯೂರೊ ಆಸ್ಪತ್ರೆಯ ಸಂಪರ್ಕದಿಂದ ಸೋಂಕಿತರ ಸಂಖ್ಯೆ ಹೆಚ್ಚಾಯಿತು. ಈ ನಡುವೆ ಸಮೂದಾಯಕ್ಕೆ ಹರಡುವ ಭಯ ಕೂಡಾ ಕಾಡಿತ್ತು ಈ ಸಂದರ್ಭದಲ್ಲಿ ಎಚ್ಚೆತ್ತು ಕೊಂಡ ಜಿಲ್ಲಾಡಳಿತ ಮತ್ತೆ ಭಟ್ಕಳವನ್ನ ನಿರ್ಭಂದಿತ ವಲಯ ಎಂದು ಮುಂದುವರೆಸಿತು.
ಷರತ್ತು ಬದ್ಧ ಆರ್ಥಿಕ ಚಟುವಟಿಕೆಗೆ ಅವಕಾಶ:
ಇನ್ನು ಭಟ್ಕಳ ಜನರ ಮತ್ತು ವ್ಯಾಪಾರಸ್ಥರ ಆಗ್ರಹದ ಮೇರೆಗೆ ಜಿಲ್ಲಾಡಳಿತ ಈಗ ಷರತ್ತುಬದ್ಧವಾಗಿ ಆರ್ಥಿಕ ಚಟುವಟಿಕೆ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿದೆ. ಮುಂಜಾನೆ 7 ಘಂಟೆಯಿಂದ ಮದ್ಯಾಹ್ನ1 ಘಂಟೆಯ ವರೆಗೆ ಅಗತ್ಯ ಇರುವ ವಸ್ತುಗಳ ಅಂಗಡಿ ಮುಂಗಟ್ಟು ತೆರೆಯಲು ಅನುಮತಿ ನೀಡಲಾಗಿದೆ.
ಇದು ಕೇವಲ ತಾತ್ಕಾಲಿಕವಾಗಿರಲಿದ್ದು ಕೇವಲ 8 ಜೂನ್ ತಾರೀಖಿನವರೆಗೆ ಮಾತ್ರ ಎಂದು ಜಿಲ್ಲಾಡಳಿತ ಹೇಳಿದೆ ಮುಂದಿನ ಭಟ್ಕಳದ ಸ್ಥಿತಿಗತಿ ನೋಡಿ ಅವಕಾಶ ಕಲ್ಪಿಸಿಕೊಡಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ : ವರದಿ ಬರುವ ಮುನ್ನವೇ ಸೋಂಕಿತನನ್ನು ಮನೆಗೆ ಕಳಿಸಿದ ಅಧಿಕಾರಿಗಳು; ಚಿಕ್ಕಮಗಳೂರಲ್ಲಿ ಮತ್ತೊಂದು ಯಡವಟ್ಟು
First published:
May 31, 2020, 7:17 AM IST