HOME » NEWS » District » COMPLAINT TO LOKAYUKTHA ON ALLEGED CORRUPTION IN ISSUING HEMAVATI CANAL PROJECT WORKS AT KR PET SNVS

ಹೇಮಾವತಿ ನಾಲಾ ದುರಸ್ತಿ ಕಾಮಗಾರಿ ಟೆಂಡರ್​ನಲ್ಲಿ ಗೋಲ್​ಮಾಲ್ ಆರೋಪ; ಸಚಿವರ ವಿರುದ್ಧ ಲೋಕಾಯುಕ್ತಕ್ಕೆ ದೂರು

ಉಪಚುನಾವಣೆಯಲ್ಲಿ ತಮ್ಮ ಗೆಲುವಿಗೆ ಶ್ರಮಿಸಿದ ಗುತ್ತಿಗೆದಾರರಿಗೆ ಸಚಿವ ನಾರಾಯಣಗೌಡರು ಅಕ್ರಮವಾಗಿ ನಾಲಾ ಕಾಮಗಾರಿ ಗುತ್ತಿಗೆಗಳನ್ನ ಕೊಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಸ್ಥಳೀಯರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

news18-kannada
Updated:August 18, 2020, 10:27 AM IST
ಹೇಮಾವತಿ ನಾಲಾ ದುರಸ್ತಿ ಕಾಮಗಾರಿ ಟೆಂಡರ್​ನಲ್ಲಿ ಗೋಲ್​ಮಾಲ್ ಆರೋಪ; ಸಚಿವರ ವಿರುದ್ಧ ಲೋಕಾಯುಕ್ತಕ್ಕೆ ದೂರು
ಕೆಆರ್ ಪೇಟೆಯಲ್ಲಿ ನಡೆದ ಒಂದು ಕಾಮಗಾರಿಯ ದೃಶ್ಯ
  • Share this:
ಮಂಡ್ಯ(ಆ. 18): ಜೆಡಿಎಸ್​ನಿಂದ ಬಿಜೆಪಿಗೆ ಬಂದು ಈಗ ಮಂತ್ರಿಯಾಗಿರುವ ಕೆಆರ್ ಪೇಟೆ ಶಾಸಕ ಕೆ.ಸಿ. ನಾರಾಯಣಗೌಡ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಕೆಲ ಸ್ಥಳೀಯರು ದಾಖಲೆ ಸಮೇತ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಜೆಡಿಎಸ್​ನ ಭದ್ರಕೋಟೆ ಕೆ.ಆರ್. ಪೇಟೆ ಕ್ಷೇತ್ರದ ಉಪಚುನಾವಣೆಯಲ್ಲಿ ತಮ್ಮ ಗೆಲುವಿಗೆ ತನು, ಮನ, ಧನದ ಸಹಾಯ ಮಾಡಿದ ಆಪ್ತ ಗುತ್ತಿಗೆದಾರಿಗೆ ಸಚಿವರು ಹೇಮಾವತಿ ಎಡದಂಡೆ ನಾಲೆಯ ಕೋಟಿ ಕೋಟಿ ರೂ ವೆಚ್ಚದ ಕಾಮಗಾರಿಗಳನ್ನು 4A ಅಡಿ ಕೊಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ತಾಲೂಕಿನಲ್ಲಿ ಕಳೆದ ವರ್ಷ ಮಳೆ ಬಂದು ಕೆರೆ ಒಡೆದು ಪ್ರವಾಹವಾಗಿದ್ದು ಹಲವು ಪ್ರದೇಶಗಳು ಹಾನಿಗೊಳಗಾಗಿದ್ದವು. ಇದನ್ನೇ ನೆಪ ಮಾಡಿಕೊಂಡು ನಾರಾಯಣಗೌಡರು ಸರ್ಕಾರದಿಂದ ಸುಮಾರು 10 ಕೋಟಿಯ ಅನುದಾನವನ್ನು ತುರ್ತು ಕಾಮಗಾರಿಗೆಂದು ಬಿಡುಗಡೆ ಮಾಡಿಸಿಕೊಂಡು ಬಂದು ತಮ್ಮ ಆಪ್ತ ಗುತ್ತಿಗೆದಾರಿಗೆ ನೀಡಿದ್ದಾರೆ. ಅಲ್ಲದೆ ಗುತ್ತಿಗೆ ಪಡೆದವರಿಗೆ ಕಾವೇರಿ ನೀರಾವರಿ ನಿಗಮದ ಇ.ಇ. ಶ್ರೀನಿವಾಸ್ ಕೂಡ ಶಾಸಕರ ಪ್ರಭಾವದಿಂದ ಯಾವುದೇ ಇ.ಎಂ.ಡಿ ಪಡೆಯದೆ, ಯಾವುದೇ ತಾಂತ್ರಿಕ ಅನುಮೋದನೆ ಪಡೆಯದೆ ದೊದ್ದನ ಕಟ್ಟೆ, ಮಡುವಿನಕೋಡಿ, ಲಿಂಗಾಪುರ, ಕೃಷ್ಣಾಪುರ ಕೆರೆಯ ಕಾಮಗಾರಿ ಕಾರ್ಯಕ್ಕೆ ಮುಂದಾಗಿದ್ದಾರೆ. ಅಲ್ಲದೆ, ಯಾವುದೇ ಪಾರದರ್ಶಕ ನಿಯಮ ಪಾಲನೆಯಾಗುತ್ತಿಲ್ಲ. ಕಳಪೆ ಕಾಮಗಾರಿ ನಡೆಯುತ್ತಿದೆ. ಲಾಕ್​ಡೌನ್ ಅವಧಿಯಲ್ಲಿ ಕೆಲಸ ಮಾಡಿಸಿದ್ದು ಇದರಲ್ಲಿ ಭ್ರಷ್ಟಾಚಾರ ನಡೆದಿದ್ದು. ಲೋಕಾಯುಕ್ತದಿಂದ ಇದರ ತನಿಖೆ ಆಗಬೇಕು ಎಂದು ಕೆಲ ಸ್ಥಳೀಯರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕೋಲಾರದ ಕೆಜಿಎಫ್​ನಲ್ಲಿ ಹಾಡಹಗಲೇ ಮಹಿಳೆಯ ಮೇಲೆ ಆ್ಯಸಿಡ್ ದಾಳಿ

ಇನ್ನು, 4 ಎ ಅಡಿಯಲ್ಲಿ ಗುತ್ತಿದಾರರಿಗೆ ಅಕ್ರಮವಾಗಿ ಕಾಮಗಾರಿ ನೀಡಲಾಗಿದೆ ಎಂಬ ಆರೋಪವನ್ನು ಇಇ ಶ್ರೀನಿವಾಸ್ ತಳ್ಳಿಹಾಕಿದ್ದಾರೆ. ಎಲ್ಲವೂ ಸಕ್ರಮವಾಗಿದ್ದು, ಕಾಮಗಾರಿಯಲ್ಲಿ ಪಾರದರ್ಶಕತೆ ಕಾಯ್ದುಕೊಂಡೇ ಕೆಲಸ ಮಾಡಲಾಗುತ್ತಿದೆ. ಲಾಕ್​ಡೌನ್ ಕಾರಣದಿಂದ ಕೆಲವು ವಿಳಂಬ ಆಗಿದೆ ಎಂದು ಇಇ ಹೇಳಿದ್ಧಾರೆ.ಇನ್ನು, ಈ ಬಗ್ಗೆ ಮಾತನಾಡಿದ ಸಚಿವ ನಾರಾಯಣಗೌಡ, ಇದರಲ್ಲಿ ನನ್ನ ಪಾತ್ರವಿಲ್ಲ. ನನಗೆ ಯಾವುದೇ ಗುತ್ತಿಗೆದಾರನ ಜೊತೆ ಸಂಬಂಧವಿಲ್ಲ. ತಾಲೂಕಿನ ಅಭಿವೃದ್ದಿಗೆ ಬದ್ದವಾಗಿದ್ದೇವೆಂದು ಹಾರಿಕೆ ಉತ್ತರ ನೀಡಿದ್ದಾರೆ.

ಈಗ ದಾಖಲೆ ಸಮೇತ ಸ್ಥಳೀಯರು ಸಲ್ಲಿಸಿರುವ ದೂರಿಗೆ ಲೋಕಾಯುಕ್ತರು ಸ್ಪಂದಿಸಿ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರಾ ಎಂದು ಕಾದುನೋಡಬೇಕು.ವರದಿ: ರಾಘವೇಂದ್ರ ಗಂಜಾಮ್
Published by: Vijayasarthy SN
First published: August 18, 2020, 10:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories