• Home
  • »
  • News
  • »
  • district
  • »
  • ಬೆಂಗಳೂರು ವಿವಿ ಬ್ಯಾಕ್ ಲಾಗ್ ಹುದ್ದೆ ನೇಮಕಾತಿ ವಿವಾದ; ಒಂದು ಹುದ್ದೆಗೆ ಎರಡು ಪೋಸ್ಟ್ – ರಾಜ್ಯಪಾಲರಿಗೆ ದೂರು

ಬೆಂಗಳೂರು ವಿವಿ ಬ್ಯಾಕ್ ಲಾಗ್ ಹುದ್ದೆ ನೇಮಕಾತಿ ವಿವಾದ; ಒಂದು ಹುದ್ದೆಗೆ ಎರಡು ಪೋಸ್ಟ್ – ರಾಜ್ಯಪಾಲರಿಗೆ ದೂರು

ಬೆಂಗಳೂರು ವಿಶ್ವವಿದ್ಯಾಲಯದ ಲೈಬ್ರಿಯ ಒಂದು ಚಿತ್ರ

ಬೆಂಗಳೂರು ವಿಶ್ವವಿದ್ಯಾಲಯದ ಲೈಬ್ರಿಯ ಒಂದು ಚಿತ್ರ

ಬೆಂಗಳೂರು ವಿವಿ ಇದೀಗ 2018ರ ಬ್ಯಾಕ್ ಲಾಗ್ ಹುದ್ದೆಯಲ್ಲಿ ಭಾರಿ ಗೋಲ್ ಮಾಲ್ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಒಂದು ಹುದ್ದೆ ಎರಡು ಪೋಸ್ಟ್ ನೀಡುವ ಮೂಲಕ ವಿವಿ ಯುಜಿಸಿ ಆ್ಯಕ್ಟ್ ಉಲ್ಲಂಘನೆಯಾಗಿದೆ ಎನ್ನಲಾಗಿದೆ.

  • Share this:

ಬೆಂಗಳೂರು(ಏ. 08): ಇತ್ತೀಚಿನ ದಿನಗಳಲ್ಲಿ ಬೆಂಗಳೂರು ವಿವಿ ಜ್ಞಾನಭಾರತಿ ಸದಾ ವಿವಾದಗಳಿಂದಲೇ ಸುದ್ಧಿಯಾಗುತ್ತಿದೆ. ಈ ಬಾರಿ 2018 ರ ಬ್ಯಾಕ್ ಲಾಗ್ ಹುದ್ದೆಯ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಅನ್ನೋ ಆರೋಪ ಕೇಳಿ ಬಂದಿದೆ. 2018 ಬ್ಯಾಕ್ ಲಾಗ್ ಹುದ್ದೆಯ ನೇಮಕ ಸಂದರ್ಭದಲ್ಲಿ ಯುಜಿಸಿ ಆ್ಯಕ್ಟ್ ವಿವಿ ಸಂಪೂರ್ಣ ಉಲ್ಲಂಘನೆ ಮಾಡಿದೆ. ಭರ್ತಿ ಹುದ್ದೆಯನ್ನೇ ಖಾಲಿಯಾಗಿಸಿದ ಆರೋಪ ವಿಶ್ವವಿದ್ಯಾಲಯದ ಮೇಲಿದೆ. ಬೆಂಗಳೂರು ವಿವಿ ಮೂರು ವಿಭಾಗದಲ್ಲಿ ಎರಡೆರಡು ಪೋಸ್ಟ್ ನೀಡಲಾಗಿದೆ.  ಈ ಮೊದಲು ಪ್ರಾಧ್ಯಾಪಕರಾಗಿದ್ದವರು ಬ್ಯಾಕ್ ಲಾಗ್‌ನಲ್ಲಿ ಮತ್ತೆ ಪ್ರಾಧ್ಯಾಪಕರಾಗಿ ಪ್ರತ್ಯೇಕವಾಗಿ ನೇಮಕಾತಿ ನೀಡಲಾಗಿದೆ. 


ಯಾರ ಮೇಲಿದೆ ಆರೋಪ?
* ಪ್ರಾಣಿಶಾಸ್ತ್ರ ವಿಭಾಗದಲ್ಲಿ- ಡಾ. ಹರಿಣಿ ಎಂಬುವರಿಗೆ ಎರಡು ಹುದ್ದೆ,
* ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ-ಡಾ. ದೀಲಿಪ್ ಕುಮಾರ್,
* ಫಿಸಿಕ್ಸ್ ಡಿಪಾರ್ಟ್‌ಮೆಂಟ್ ನಲ್ಲಿ ಡಾ- ಈರಯ್ಯ ಎಂಬುವರಿಗೆ ಎರಡು ಹುದ್ದೆಗಳನ್ನ ಕೊಡಲಾಗಿದೆ.


ಪ್ರಾಣಿಶಾಸ್ತ್ರ, ಕಂಪ್ಯೂಟರ್ ಸೈನ್ಸ್ ಹಾಗೂ ಭೌತಶಾಸ್ತ್ರ ವಿಭಾಗದ ನೇಮಕಾತಿಯಲ್ಲಿ ಗೋಲ್ ಮಾಲ್ ಆಗಿದೆ. ಹುದ್ದೆಗಳನ್ನ ಖಾಲಿಯಾಗಿಸಿ ವಿವಿ ನೇಮಕ ಮಾಡಿರುವ ಹಿಂದೆ ಸಾಕಷ್ಟು ಹಣದ ಅವ್ಯವಹಾರ ನಡೆದಿದೆ. ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕೆಂದು ರಾಜ್ಯಪಾಲರಿಗೆ ವಿವಿ ಪ್ರಾಧ್ಯಪಾಕ ಪರಮೇಶ್ವರ ನಾಯಕ್ ಪತ್ರ ಬರೆದು ಆಗ್ರಹಿಸಿದ್ದಾರೆ.


ಇದನ್ನೂ ಓದಿ: ಉತ್ತಮ ಆರೋಗ್ಯ ಸೌಲಭ್ಯ ಕೂಡ ಮೂಲಭೂತ ಹಕ್ಕು: ಆರೋಗ್ಯ ಸಚಿವ ಡಾ. ಕೆ ಸುಧಾಕರ್


ಈ ಮೊದಲು ಈ ಮೂವರು ಆಯಾ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು. 2018ರಲ್ಲಿ ಬ್ಯಾಕ್ ಲಾಗ್ ನೇಮಕಾತಿಯಲ್ಲಿ ಪ್ರತ್ಯೇಕ ಪ್ರೊಫೆಸರ್ ಹುದ್ದೆಗೆ ಆಯ್ಕೆಯ ಹಿಂದಿನ ಹುದ್ದೆಗೆ ರಾಜೀನಾಮೆ ನೀಡದೆ ಹೊಸ ಪ್ರಾಧ್ಯಾಪಕ ಹುದ್ದೆಗೆ ನೇಮಕಾತಿ ಮಾಡಲಾಗಿದೆ. ಯುಜಿಸಿ ನಿಯಮ ಉಲ್ಲಂಘನೆ ಮಾಡಿ ನೇಮಕಾತಿ ಮಾಡಬೇಕು. ಬೇರೆ ನೇಮಕಾತಿ ಆದರೆ‌ ಹುದ್ದೆಗೆ ರಾಜೀನಾಮೆ ನೀಡಬೇಕು. ಆದರೆ ಹುದ್ದೆ‌ ಪಡೆದವರು ರಾಜೀನಾಮೆ ನೀಡಿಲ್ಲ. ವಿವಿಯೂ ರಾಜೀನಾಮೆ ಪಡೆಯದೇ ನೇಮಕಾತಿ ಮಾಡಿದೆ.


ಆದರೆ ಈ ಆರೋಪಗಳನ್ನು ಬೆಂಗಳೂರು ವಿವಿ ಕುಲಪತಿ ಡಾ. ವೇಣುಗೋಪಾಲ ಅಲ್ಲಗಳೆಯುತ್ತಾರೆ‌. ಯಾವುದೇ ಅಕ್ರಮ ನೇಮಕಾತಿ ಆಗಿಲ್ಲ. ನಿಯಮದ ಪ್ರಕಾರವೇ ನೇಮಕಾತಿ ಆಗಿದೆ. ಆದರೆ ಹಿಂದಿನ ಮೂರು ಹುದ್ದೆ ಭರ್ತಿ ಮಾಡಿಕೊಂಡಿಲ್ಲ ಎಂದು ಬೆಂಗಳೂರು ವಿವಿ ಕುಲಪತಿ ಡಾ. ಆರ್ ವೇಣುಗೋಪಾಲ್‌ ಸ್ಪಷ್ಟನೆ ನೀಡುತ್ತಾರೆ.


ವಿವಿ ಮೂರು ಡಿಪಾರ್ಟ್ಮೆಂಟ್ ಗಳಲ್ಲಿ ಒಬ್ಬರಿಗೆ ಒಂದು ಹುದ್ದೆ, ಎರಡು ಪೋಸ್ಟ್ ಕೊಟ್ಟಿರೋದು ಸ್ಪಷ್ಟವಾಗಿ ಯುಜಿಸಿ ನಿಯಮ ಉಲ್ಲಂಘನೆಯಾಗಿದೆ. ಆಲ್ಲದೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ಅಡಿಯಲ್ಲಿ ಎರಡು ಹುದ್ದೆಗಳು ಹೊಂದಲು ಅವಕಾಶ ಇಲ್ಲ. ಈ ಕುರಿತು ಸಮಗ್ರವಾಗಿ ತನಿಖೆ ನಡೆಸಿದಾಗಲೇ ಸತ್ಯಾಂಶ ಹೊರ ಬೀಳಲಿದೆ.


ವರದಿ: ಶರಣು ಹಂಪಿ

Published by:Vijayasarthy SN
First published: