HOME » NEWS » District » COMPETITION IS ONLY BETWEEN CONGRESS AND BJP SAYS SIDDARAMAIAH HK

ರಾಜ್ಯದಲ್ಲಿ ಪೈಪೋಟಿ ನಡೆಯೋದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ; ಜೆಡಿಎಸ್ ಆಟಕ್ಕುಂಟು, ಲೆಕ್ಕಕ್ಕಿಲ್ಲ ; ಸಿದ್ಧರಾಮಯ್ಯ

ಜೆಡಿಎಸ್ ನಲ್ಲಿ ದೇವೇಗೌಡರು, ಕುಮಾರಸ್ವಾಮಿ ಏನು ಹೇಳ್ತಾರೆ ಅದೇ ವೇದವಾಕ್ಯ. ಅದರ ವಿರುದ್ಧ ಪ್ರಶ್ನೆ ಮಾಡುವವರು ಯಾರು ಇಲ್ಲ. ಪ್ರಶ್ನೆ ಮಾಡಿದವರಿಗೆ ಉಳಿಗಾಲವಿಲ್ಲ. ನನ್ನನ್ನೇ ಪಕ್ಷದಿಂದ ಹೊರಗೆ ಹಾಕಿ ಬಿಟ್ಟರು ಇನ್ನು ಬೇರೆಯವರನ್ನು ಬಿಡುತ್ತಾರಾ

news18-kannada
Updated:December 13, 2020, 5:22 PM IST
ರಾಜ್ಯದಲ್ಲಿ ಪೈಪೋಟಿ ನಡೆಯೋದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ; ಜೆಡಿಎಸ್ ಆಟಕ್ಕುಂಟು, ಲೆಕ್ಕಕ್ಕಿಲ್ಲ ; ಸಿದ್ಧರಾಮಯ್ಯ
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ
  • Share this:
ಬಾಗಲಕೋಟೆ(ಡಿಸೆಂಬರ್. 13): ರಾಜ್ಯದಲ್ಲಿ ಹೆಚ್ಚಾಗಿ ಕಾಂಗ್ರೆಸ್ ಬಿಜೆಪಿ ನಡುವೆ ಚುನಾವಣೆ ನಡೆಯುತ್ತೆ. ಜೆಡಿಎಸ್ ಲೆಕ್ಕಕ್ಕೇ ಉಂಟು ಆಟಕ್ಕಿಲ್ಲ. ಅದು ಅಪ್ಪ ಮಕ್ಕಳ ಪಕ್ಷ, ಅದು ಪ್ರಜಾಪ್ರಭುತ್ವ ನೀತಿಯಂತೆ ರಚನೆಯಾದ ಪಾರ್ಟಿ ಅಲ್ಲ. ದೇವೇಗೌಡರು, ಕುಮಾರಸ್ವಾಮಿ ಏನು ಹೇಳ್ತಾರೆ ಅದೇ ವೇದವಾಕ್ಯ. ಅದರ ವಿರುದ್ಧ ಪ್ರಶ್ನೆ ಮಾಡುವವರು ಯಾರು ಇಲ್ಲ. ಪ್ರಶ್ನೆ ಮಾಡಿದವರಿಗೆ ಉಳಿಗಾಲವಿಲ್ಲ. ನನ್ನನ್ನೇ ಪಕ್ಷದಿಂದ ಹೊರಗೆ ಹಾಕಿ ಬಿಟ್ಟರು ಇನ್ನು ಬೇರೆಯವರನ್ನು ಬಿಡುತ್ತಾರಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಗುಳೇದಗುಡ್ಡದಲ್ಲಿ  ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಹಿಂದ ಸಂಘಟನೆ ಮಾಡುತ್ತಿದ್ದಕ್ಕೆ ನನ್ನನ್ನು ಜೆಡಿಎಸ್​​ನಿಂದ ಹೊರಗೆ ಹಾಕಿದರು. ದೇವೇಗೌಡರು ಅದನ್ನು ನಿಲ್ಲಿಸು ಎಂದು ಹೇಳಿದರು ನಾನೂ ಹೇಳಿದೆ ಯಾರು ಹೇಳಿದ್ರು ನಿಲ್ಲಿಸೋಲ್ಲ. ದೇವರೇ ಬಂದು ಹೇಳಿದ್ರು ನಿಲ್ಲಿಸುವುದಿಲ್ಲ ಎಂದೆ. ಆ ಮೇಲೆ ನನ್ನನ್ನು ಪಕ್ಷದಿಂದ ಉಚ್ಛಾಟಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸೇರಿ ನಿಮ್ಮ ಪ್ರೀತಿ ವಿಶ್ವಾಸದಿಂದ ಪಕ್ಷ ಕಟ್ಟಿದೆ. ವಿರೋಧ ಪಕ್ಷದ ನಾಯಕನಾದೆ, ಮುಖ್ಯಮಂತ್ರಿ ಮಾಡಿದ್ರಿ. ಪಂಚಾಯತ್​​ನ್ನು ಬಲಪಡಿಸಿದ್ದೇ ಕಾಂಗ್ರೆಸ್ ಹೊರತು ಬಿಜೆಪಿಯಲ್ಲ. ನಿಮ್ಮ ಕ್ಷೇತ್ರಕ್ಕೆ ಬಂದಾಗ ನಾನು ಮೈಸೂರಿನವನು. ಆಸರೆ ಕೊಟ್ಟು ಗೆಲ್ಲಿಸಿದ್ದೀರಿ ನಾನು ನಿಮ್ಮ ಋಣ ತೀರಿಸಬೇಕು ಎಂದರು.

ಉತ್ತರ ಕರ್ನಾಟಕದವನು ಗ್ರಾಮ ಪಂಚಾಯತ್​ ಗೆದ್ರೆ ತಾಲೂಕು ಪಂಚಾಯತ್​, ಜಿಲ್ಲಾ ಪಂಚಾಯತ್​​  ಗೆಲ್ಲಬಹುದು. ಪ್ರಜಾಪ್ರಭುತ್ವಕ್ಕೆ ಗ್ರಾಮ ಪಂಚಾಯತ್​​ ತಳಹದಿ, ಸ್ವಾತಂತ್ರ್ಯ ಬಂದ ಬಳಿಕ ಎರಡು ಸಾರಿ ಬಿಟ್ರೆ ಉಳಿದು ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಜನರ ಆಶೀರ್ವಾದ ಮಾಡಿದ್ರೆ ಮಾತ್ರ ನಾವು ಕುರ್ಚಿ ಮೇಲೆ ಕುಳಿತುಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಇದನ್ನೂ ಓದಿ : ಬೆಂಗಳೂರಿಗೆ ತೆರಳಲು ಮೂರು ದಿನಗಳಿಂದ ಬಾಣಂತಿ ಪರದಾಟ ; ಮಾನವೀಯತೆ ಮೆರೆದ ಆಟೋ ಚಾಲಕರು

ಜಾತಿ, ದುಡ್ಡು ಯಾವುದು ಮುಖ್ಯ ಅಲ್ಲ. ಪ್ರಜಾಪ್ರಭುತ್ವದ ಮೌಲ್ಯ ಅಳವಡಿಸಿಕೊಳ್ಳುವುದು ಮುಖ್ಯ. ತಾಲೂಕು ಬೋರ್ಡ್ ಮೆಂಬರ್ ನಾಗಿ ಕೆಳ ಹಂತದಿಂದ ಬಂದಿದ್ದೇನೆ. ಇಲ್ಲಿಗೆ ನನ್ನದು ಕೊನೆಯದು. ನನಗೆ ರಾಷ್ಟ್ರ ರಾಜಕಾರಣಕ್ಕೆ ಹೋಗುವುದು  ಇಷ್ಟ ಇಲ್ಲ. ಪ್ರಧಾನಮಂತ್ರಿ, ಕೇಂದ್ರ ಮಂತ್ರಿ ಆಗಬೇಕು ಎನ್ನುವ ಆಸೆ ನನಗಿಲ್ಲ ಎಂದು ಹೇಳಿದರು.

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವಂತೆ ಮುಖಂಡರು, ಪ್ರಯತ್ನಿಸಬೇಕು. ಬಾದಾಮಿ ಕ್ಷೇತ್ರದಲ್ಲಿ ಪುರಸಭೆ, ಪಟ್ಟಣ ಪಂಚಾಯತ್ ಕಾಂಗ್ರೆಸ್ ಆಡಳಿತದ ಹಿಡಿತದಲ್ಲಿದೆ ಎಂದರು.
Published by: G Hareeshkumar
First published: December 13, 2020, 5:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories