chikmagalur suicide case: ಕಾರಿನ ಸಮೇತ ನಾಲೆಗೆ ಹಾರಿ ಆತ್ಮಹತ್ಯೆ: ಅಳಿಯ-ಅತ್ತೆ ಸಾವು, ಮಗಳು-ಮೊಮ್ಮಗ ಪಾರು

ಸಂಬಂಧಿಕರಿಗೆ ಕರೆ ಮಾಡಿ ಜೊತೆಯಲ್ಲಿ ಇದ್ದವರಿಂದಲ್ಲೇ ನನಗೆ ಮೋಸ ಆಗಿದೆ. ನಾವು ಆತ್ಮಹತ್ಯೆ ಮಾಡಿಕೊಳ್ತಾ ಇದ್ದೀವಿ ಅಂತಾ ಹೇಳಿ ಮಂಜುನಾಥ್ ಕರೆ ಕಟ್ ಮಾಡಿದ್ದರಂತೆ. 

ನಾಲೆಯಲ್ಲಿ ಮುಳುಗಿದ್ದ ಕಾರು

ನಾಲೆಯಲ್ಲಿ ಮುಳುಗಿದ್ದ ಕಾರು

  • Share this:
ಚಿಕ್ಕಮಗಳೂರು : ಕಾರಿನ ಸಮೇತ ಕುಟುಂಬವೊಂದು ಭದ್ರಾ ನಾಲೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿ ಇಬ್ಬರು ಸಾವನಪ್ಪಿದ್ದಾರೆ, ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿರೋ ಘಟನೆ  ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿ ಸಮೀಪ ನಡೆದಿದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡು ಸುಂದರ ಜೀವನ ನಡೆಸುತ್ತಿದ್ದ ಮಂಜುನಾಥ್ ಅದ್ಯಾಕೆ ಆತ್ಮಹತ್ಯೆ ನಿರ್ಧಾರ ಮಾಡಿದ್ರು ಅನ್ನೋದೇ ನಿಗೂಢವಾಗಿದೆ. ಮೊನ್ನೆ ತಾನೇ ಕುಟುಂಬದ ಜೊತೆ ಊರಿಗೆ ತೆರಳಿದ್ದ ಮಂಜುನಾಥ್​  ನಿನ್ನೆ ಗುರುರಾಯರ ಆರಾಧನೆ ಅಂತಾ ಪತ್ನಿ ನೀತು ಅವರ  ಊರಾದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹಳೇ ಜೆ.ಡಿ ಕಟ್ಟೆ ಗ್ರಾಮಕ್ಕೆ ಬಂದಿದ್ರು.

ಆ ಬಳಿಕ ಅಲ್ಲಿಂದ ಸಂಬಂಧಿಯೊಬ್ಬರ ಮನೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿಕೊಳ್ಳಲು ಹೋಗಿದ್ದ ಅವರು ಪ್ರಯಾಣಿಸುತ್ತಿದ್ದ ಕಾರು ಕೊನೆಗೆ ಬಂದು ನಿಂತಿದ್ದು ಎಂ.ಸಿ ಹಳ್ಳಿಯ ಭದ್ರಾ ಜಲಾಶಯದ ಬಳಿ. ಇಲ್ಲಿಂದಲೇ ಅದೊಂದು ಕೊನೆಯ ಕರೆ ಮಂಜುನಾಥ್ ರಿಂದ ಸಂಬಂಧಿ ರಕ್ಷಾಗೆ ಹೋಗಿತ್ತು. ಜೊತೆಯಲಿ ಇದ್ದವರಿಂದಲ್ಲೇ ನನಗೆ ಮೋಸ ಆಗಿದೆ, ನಾವು ಆತ್ಮಹತ್ಯೆ ಮಾಡಿಕೊಳ್ತಾ ಇದ್ದೀವಿ ಅಂತಾ ಹೇಳಿ ಮಂಜುನಾಥ್ ಕರೆ ಕಟ್ ಮಾಡಿದ್ದರಂತೆ.

ಹೀಗೆ ಕರೆ ಮಾಡಿದ ಮಂಜುನಾಥ್ ಸ್ವಿಫ್ಟ್ ಕಾರಿನ ಸಮೇತ  ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.  ನಿದ್ರೆಯಲ್ಲಿದ್ದ ಪತ್ನಿ ನೀತು, ಪುತ್ರ ಧ್ಯಾನ್ ಹಾಗೂ ಅತ್ತೆ ಸನುಂದಮ್ಮಗೂ ಆತ್ಮಹತ್ಯೆಯ ಯಾವುದೇ ಮುನ್ಸೂಚನೆ ನೀಡದೇ ಭದ್ರಾ ನಾಲೆಗೆ ಕಾರನ್ನ ನುಗ್ಗಿಸಿದ್ದ. ಒಂದೆಡೆ ಕಾರಿನಲ್ಲಿದ್ದ ಮಂಜುನಾಥ್ ಹಾಗೂ ನೀತು ತಾಯಿ ಸುನಂದಮ್ಮ ನೀರು ಪಾಲಾದ್ರೆ ಪವಾಡ ಸದೃಶ ರೀತಿಯಲ್ಲಿಮಂಜುನಾಥ್ ಪತ್ನಿ ನೀತು ಹಾಗೂ ಪುತ್ರ ಧ್ಯಾನ್ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: Gadag Auto Driver Story: ಆಟೋದಲ್ಲಿ ಬಿಟ್ಟು ಹೋದ ಚಿನ್ನಾಭರಣವನ್ನು ಪ್ರಾಮಾಣಿಕವಾಗಿ ಹಿಂತಿರುಗಿಸಿದ ಚಾಲಕ

ನಾಲ್ವರು ನೀರಿಗೆ ಬಿದ್ದಿರೋ ಸುದ್ದಿ ತಿಳಿದು ನೂರಾರು ಸಂಖ್ಯೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ಜನರು ಎಂಸಿ ಹಳ್ಳಿಯ ನಾಲೆ ಬಳಿ ಜಮಾಯಿಸಿದ್ರು. ಮಂಜುನಾಥ್-ನೀತು ಅವರ ಸಂಬಂಧಿಗಳು, ಸ್ನೇಹಿತರು ನಾಲೆ ಬಳಿ ಬಂದು ನೀರುಪಾಲಾಗಿರುವ ಮಂಜುನಾಥ್ ಹಾಗೂ ಸುನಂದಮ್ಮ ಪತ್ತೆ ಮಾಡಿಕೊಡುವಂತೆ ಅಂಗಲಾಚಿದ್ರು. ಕೊನೆಗೆ ಮಂಜುನಾಥ್ ಮೃತದೇಹ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಂಚಿ ಸಿದ್ದಾಪುರ ಬಳಿ ಪತ್ತೆಯಾದ್ರೆ, ಸಂಜೆವರೆಗೂ ಹುಡುಕಿದ್ರೂ ನೀತು ತಾಯಿ ಸುನಂದಮ್ಮನವರ ಮೃತದೇಹವಾಗಲಿ, ಕಾರಿನ ಸುಳಿವಾಗಲಿ ಪತ್ತೆಯಾಗಿರಲಿಲ್ಲ. ಸ್ಥಳೀಯರ ಸಹಾಯದಿಂದ ಅಗ್ನಿಶಾಮಕ ಸಿಬ್ಬಂದಿ ಗಳು ಕ್ರೇನ್ ಮೂಲಕ ಕಾರನ್ನು ಮೇಲೆತ್ತಿದ್ರು, ಈ ವೇಳೆ ಕಾರಿನಲ್ಲಿ  ಸುನಂದಮ್ಮ ಮೃತದೇಹ ಪತ್ತೆಯಾಯ್ತು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: