Sumalatha Ambareesh: ಸುಮಲತಾ ಅಂಬರೀಶ್ ಲೆಟರ್​ಹೆಡ್ ದುರ್ಬಳಕೆ ಆರೋಪ ಮಾಡಿದ ರವೀಂದ್ರ ಶ್ರೀಕಂಠಯ್ಯ, ಬೂದಿ ಮುಚ್ಚಿದ್ದ ಕೆಂಡ ಇಂದು ಸಿಡಿದಿತ್ತಾ?

Sumalatha Ambareesh: ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತು ಸಂಸದೆ ಸುಮಲತಾ ಅಂಬರೀಶ್ ನಡುವಿನ ಕೋಲ್ಡ್ ವಾರ್ ಸಾಕಷ್ಟು ಸಮಯದಿಂದ ನಡೆಯುತ್ತಲೇ ಇದೆ. ಇಂದು ನಡೆದ ದಿಶಾ ಸಭೆಯಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ವಾಗ್ಸಮರ ಜೋರಾಗಿತ್ತು. ಆದ್ರೆ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಸಭೆಯಲ್ಲಿದ್ದ ಅಧಿಕಾರಿಗಳು ಮಾತ್ರ ತಮ್ಮ ಪಾಡಿಗೆ ತಾವು ಮೊಬೈಲ್ ಫೋನ್​ನಲ್ಲಿ ಮುಳುಗಿಹೋಗಿದ್ರು.

ರವೀಂದ್ರ ಶ್ರೀಕಂಠಯ್ಯ-ಸುಮಲತಾ ಅಂಬರೀಶ್

ರವೀಂದ್ರ ಶ್ರೀಕಂಠಯ್ಯ-ಸುಮಲತಾ ಅಂಬರೀಶ್

  • Share this:
    ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಂಡ್ಯ ದಳಪತಿಗಳ ನಡುವೆ ವಾಕ್ಸಮರ ನಡೆದು ಸುಮಾರು ಎರಡೂವರೆ ಗಂಟೆಗಳ‌ ಬಳಿಕ ಮಂಡ್ಯ ಜಿಲ್ಲಾಪಂಚಾಯತ್ ನಲ್ಲಿ ಇಂದು ದಿಶಾ ಸಭೆ ನಡೆಯಿತು. ಹೌದು.., ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಅಧ್ಯಕ್ಷತೆಯಲ್ಲಿ ಇಂದು ಮಂಡ್ಯ ಜಿಲ್ಲಾಪಂಚಾಯತ್ ನಲ್ಲಿ ದಿಶಾ ಸಭೆ ಕರೆಯಲಾಗಿತ್ತು. ಈ ಸಭೆಗೆ ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರು ಕೂಡ ಆಗಮಿಸಿದ್ದರು. ಆದ್ರೆ ಸಭೆ ಇನ್ನೆನೋ ಆರಂಭ ಆಗಬೇಕಿತ್ತು ಅಷ್ಟರಲ್ಲಿ MLC ಕೆ.ಟಿ ಶ್ರೀಕಂಠೇಗೌಡ ಸಭೆಗೆ MLC ಆದ ನನ್ನನ್ನ ಏಕೆ ಆಹ್ವಾನಿಸಿಲ್ಲ ಅಂತ ಜಿ.ಪಂ‌ ಸಿಇಒ ದಿವ್ಯ ಪ್ರಭು ಅವರನ್ನ ತರಾಟೆಗೆ ತೆಗೆದುಕೊಂಡರು. ಬಳಿಕ ಶ್ರೀಕಂಠೇಗೌಡ ರ ಪ್ರಶ್ನೆಗೆ ಉತ್ತರಿಸಿದ ಸಿಇಒ ಗೈಡ್ ಲೈನ್ ಪ್ರಕಾರ ಏನಿದೆ ಹಾಗೆ ಎಲ್ಲರನ್ನ ಕರೆಯಲಾಗಿದೆ ಅಂತ ಉತ್ತರಿಸಿದ್ರು.

    ದಿಶಾ ಸಭೆ ನುಂಗಿದ ಸುಮಲತಾ ಲೆಟರ್ ಹೆಡ್ ದುರ್ಬಳಕೆ ವಿಚಾರ.....

    MLC ಕೆ‌.ಟಿ. ಶ್ರೀಕಂಠೇಗೌಡ ಅವರು ಜಿ.ಪಂ ಸಿಇಒ ಅವರನ್ನ ತರಾಟೆಗೆ ತೆಗೆದುಕೊಳ್ತಿದ್ದಂತೆ. ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಕೂಡ ಸುಮಲತಾ ವಿರುದ್ದ ಗರಂ ಆದ್ರು. ಅಲ್ಲದೆ ಸುಮಲತಾ ಅಂಬರೀಶ್ ಅವರ ಲೆಟರ್ ಹೆಡ್ ಅನ್ನು ಅಪ್ತ ಕಾರ್ಯದರ್ಶಿ ಶ್ರೀನಿವಾಸ್ ಭಟ್ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದು ಅಕ್ರಮ ಅಂತ ಮಂಡ್ಯ ಎಸ್ಪಿ ಹಾಗೂ ಸುಮಲತಾ ಅಂಬರೀಶ್ ಅವರನ್ನ ತರಾಟೆಗೆ ತೆಗೆದುಕೊಂಡ್ರು. ಈ ಸಂದರ್ಭ ಸುಮಲತಾ ಅಂಬರೀಶ್ ಹಾಗೂ ರವೀಂದ್ರ ಶ್ರೀಕಂಠಯ್ಯ ನಡುವೆ ವಾಕ್ಸಮರ ಏರ್ಪಟ್ಟಿತ್ತು. ಅಲ್ಲದೆ ದಿಶಾ ಸಭೆಗೆ ಅಧಿಕೃತವಲ್ಲದ ವ್ತಕ್ತಿಗಳು ಹಾಜರಾಗಿದ್ದಾರೆ ಅವರನ್ನ ಹೊರ ಕಳುಹಿಸಿ ಅಂತ ಶಾಸಕ ರವೀಂದ್ರ ಶ್ರೀಕಂಠಯ್ಯ ಪಟ್ಟು ಹಿಡಿದ್ರು. ಇದಾದ ಬಳಿಕ ಕೆಲ ವೊತ್ತು ನಡೆದ ಮಾತಿನ ಸಮರದ ಬಳಿಕ ಸುಮಲತಾ ಅವರ ಆಪ್ತ ಮಧುಸೂದನ್ ಸಭೆಯಿಂದ ಹೊರ ನಡೆದ್ರು.

    ಇದನ್ನೂ ಓದಿ: ಕೆಲವರು ಸತ್ತವರ ಮೂಳೆ ತಿಂದರೆ, ಉಳಿದವರು ಪುಟ್ಟ ಮಕ್ಕಳನ್ನು ಮೇಲಿಂದ ಎಸೆಯುತ್ತಾರೆ: ಜಗತ್ತಿನ ಚಿತ್ರವಿಚಿತ್ರ ಆಚರಣೆಗಳು

    ಇಂದಿನ ದಿಶಾ ಸಭೆ ನಡೆಸಲು ನಿಮಗೆ ಅಧಿಕಾರ ಇದ್ದರೆ ಲೆಟರೆಡ್ ಮೂಲಕ ನನಗೆ ನೀಡಿ ಅಂತ ಪಟ್ಟು ಹಿಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ: ಕಳೆದ ತಿಂಗಳು ದಿಶಾ ಸಭೆ ಕರೆಯಲಾಗಿತ್ತು. ಈಗ ಮತ್ತೆ ದಿಶಾ ಸಭೆ ಕರೆಯಲಾಗಿದೆ‌. ಈ ಸಭೆಯನ್ನ ಕರೆಯಲು ನಿಮಗೆ ಅಧಿಕಾರ ಇದೆಯಾ..? ಇದ್ದರೆ ಲೆಟರ್ ಹೆಡ್ ನಲ್ಲಿ ನನಗೆ ಕೊಡಿ ನಂತರ ಸಭೆ ಆರಂಭಿಸಿ ಅಂತ ಶಾಸಕ ರವೀಂದ್ರ ಶ್ರೀಕಂಠಯ್ಯ ಪಟ್ಟು ಹಿಡಿದಿದ್ರು. ಹಿಗಾಗಿ ಕೆಲ ಗಂಟೆಗಳ ಬಳಿಕ ಲೆಟರೆಡ್ ಮೂಲಕ ರವೀಂದ್ರ ಶ್ರೀಕಂಠಯ್ಯ ಪ್ರಶ್ನೆಗೆ ಸಿಇಒ ದಿವ್ಯ ಅವರು ಸಂಸದೆ ಸುಮಲತಾ ಅಂಬರೀಶ್ ಅವರ ಸೂಚನೆ ಮೂಲಕ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ ಅಂತ ಸಿಇಒ ದಿವ್ಯ ತಿಳಿಸಿದ್ರು.

    ಜನಪ್ರತಿನಿಧಿಗಳ ಗದ್ದಲ. ಮೊಬೈಲ್ನಲ್ಲಿ ಮುಳುಗಿದ ಅಧಿಕಾರಿಗಳು: ಇನ್ನು ಇತ್ತ ಸಂಸದೆ ಮತ್ತು ಶಾಸಕರ ನಡುವೆ ಮಾತಿನ ಸಮರ ನಡಿತಿದ್ರೆ ಅತ್ತ ಅಧಿಕಾರಿಗಳು ಮೊಬೈಲ್ ನಲ್ಲಿ ಫುಲ್ ಬ್ಯೂಸಿ ಆಗಿದ್ರು. ಅವರು ಏನೋ ಜಗಳ ಮಾಡ್ತಿದ್ದಾರೆ ನಮಗೂ ಅದಕ್ಕು ಯಾವುದೇ ಸಂಬಂಧ ಇಲ್ಲ ಎಂಬಂತೆ ಅಧಿಕಾರಿಗಳು ಮೊಬೈಲ್ ನಲ್ಲಿ ಗೇಮ್ ಗಳನ್ನ ಆಡುತ್ತ ಕಾಲ ಹರಣ ಮಾಡಿದ್ರು. ಬಳಿಕ ಎರಡೂವರೆ ಗಂಟೆಗಳ ಬಳಿಕ ದಿಶಾ ಸಭೆ ಆರಂಭಿಸಲಾಯ್ತು.

    (ವರದಿ: ಸುನೀಲ್ ಗೌಡ, ಮಂಡ್ಯ)
    Published by:Soumya KN
    First published: