ಕರುನಾಡಿಗರೇ ಎಚ್ಚರ ಎಚ್ಚರ.. ಕಾವೇರಿ- ಹೇಮಾವತಿ ನದಿಗಳಿಗೆ ಸೇರುತ್ತಿದೆ Coffee Pulping ವಿಷಕಾರಿ ನೀರು!

ಕಾಫಿ ಪಲ್ಪಿಂಗ್ ಸಂಪೂರ್ಣ ವಿಷಪೂರಿತವಾಗಿರುತ್ತದೆ. ಈ ವಿಷಪೂರಿತ ನೀರನ್ನೇ ನದಿಗಳಿಗೆ ನೇರವಾಗಿ ಬಿಡುತ್ತಿರುವುದು ಜೀವಜಲವಾಗಬೇಕಿದ್ದ ನದಿಗಳು ವಿಷಕಾರಿಯಾಗುತ್ತಿವೆ.

ನದಿಗೆ ಸೇರುತ್ತಿರುವ ಕಲುಷಿತ ನೀರು

ನದಿಗೆ ಸೇರುತ್ತಿರುವ ಕಲುಷಿತ ನೀರು

  • Share this:
ಕೊಡಗು : ಜೀವನದಿ ಕಾವೇರಿ (Kaveri River) ಕೊಡಗಿಗಷ್ಟೇ ಅಲ್ಲ. ಅರ್ಧ ರಾಜ್ಯಕ್ಕೆ ಜೀವಜಲ ನೀಡುವ ನದಿ. ತಲಕಾವೇರಿಯಲ್ಲಿ (Tala Kaveri) ಹುಟ್ಟಿ ನಾಡಿನುದ್ದಕ್ಕೂ ಹರಿದು ತಮಿಳುನಾಡಿನ (Tamil Nadu) ಮೂಲಕ ಹಾದು ಬಂಗಾಳಕೊಲ್ಲಿಯಲ್ಲಿ ಸಮುದ್ರ ಸೇರುತ್ತದೆ. ಅಲ್ಲಿಯವರೆಗೂ ಸಹಸ್ರಾರು ಜನರ ಬದುಕ ಹಸಿರಾಗಿಸಿ ಅವರ ಉಸಿರಾಗಿದೆ. ಉತ್ತರದಲ್ಲಿ ಗಂಗಾ ನದಿಯಂತೆ (Ganga river) ದಕ್ಷಿಣದಲ್ಲಿ ಕಾವೇರಿ ನದಿ ಅತ್ಯಂತ ಪಾವಿತ್ರ್ಯತೆ ಹೊಂದಿದೆ. ಆದರೆ ತವರು ಜಿಲ್ಲೆಯಲ್ಲೇ ಕಾವೇರಿ ವಿಷಪೂರಿತವಾಗುತ್ತಿರುವುದು ನಿಜಕ್ಕೂ ಆಘಾತಕಾರಿ ವಿಷಯ. ಜಿಲ್ಲೆಯಲ್ಲಿ ನವೆಂಬರ್ ತಿಂಗಳಿಂದ ಮಾರ್ಚ್ ವರೆಗೆ ಕೊಯ್ಲು ಮಾಡಿದ ಕಾಫಿ ಹಣ್ಣನ್ನು ಫಲ್ಪಿಂಗ್ ಮಾಡಲಾಗುತ್ತದೆ. ಈ ಕಾಫಿ ಪಲ್ಪಿಂಗ್ ಸಂಪೂರ್ಣ ವಿಷಪೂರಿತವಾಗಿರುತ್ತದೆ. ಈ ವಿಷಪೂರಿತ ನೀರನ್ನೇ ನದಿಗಳಿಗೆ ನೇರವಾಗಿ ಬಿಡುತ್ತಿರುವುದು ಜೀವಜಲವಾಗಬೇಕಿದ್ದ ನದಿಗಳು ವಿಷಕಾರಿಯಾಗುತ್ತಿವೆ.

ಜೀವನದಿಗೆ ಸೇರುತ್ತಿದೆ ವಿಷಪೂರಿತ ನೀರು 

ಒಂದೆಡೆ ಕೊಳಚೆ ನೀರು ಕಾವೇರಿ ನದಿ ಸೇರುತ್ತಿದ್ದರೆ, ಮತ್ತೊಂದೆಡೆ ಹೇಮಾವತಿ ನದಿಗೆ ಕಾಫಿ ಪಲ್ಪಿಂಗ್ ನೀರನ್ನು ಹರಿಸಲಾಗುತ್ತಿದೆ. ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊನವಳ್ಳಿ ಗ್ರಾಮದ ಚಂದ್ರಶೇಖರ್ ಎಂಬುವವರು ತಮ್ಮ ಕಾಫಿ ತೋಟದಲ್ಲಿ ಪಲ್ಪಿಂಗ್ ಮಾಡಿದ ಬಾರೀ ಪ್ರಮಾಣ ಕಲುಷಿತ ನೀರನ್ನು ಹೊಳೆಗೆ ನೇರವಾಗಿ ಬಿಡುತ್ತಿದ್ದಾರೆ. ಇದೇ ಹೊಳೆ ಮುಂದೆ ಅಜ್ಜಳ್ಳಿ ಶನಿವಾರಸಂತೆ ಮೂಲಕ ಹರಿದು ಹಾಸನ ಜಿಲ್ಲೆಯ ಗೊರೂರು ಜಲಾಶಯ ಸೇರುತ್ತದೆ. ಅಲ್ಲಿಂದ ಮುಂದೆ ಹರಿಯುವ ಹೇಮಾವತಿ ನದಿ ಮೈಸೂರು ಜಿಲ್ಲೆಯಲ್ಲಿ ಕಾವೇರಿ ನದಿಯಲ್ಲಿ ಸಂಗಮವಾಗುತ್ತದೆ.

ಜಲಚರಗಳ ಮಾರಣಹೋಮ

ಹೀಗೆ ಕಾವೇರಿ ನದಿ ತವರು ಜಿಲ್ಲೆ ಕೊಡಗಿನಲ್ಲೇ ಕಲುಷಿತಗೊಳ್ಳುವುದಕ್ಕೆ ಕಾರಣವಾಗುತ್ತಿದೆ. ಕಾಫಿ ಪಲ್ಪಿಂಗ್ ಸೇರುವುದರಿಂದ ಸಾವಿರಾರು ಜಲಚರಗಳಿಗೆ ಕುತ್ತುಬರುತ್ತಿದೆ. ನವೆಂಬರ್ ವರೆಗೆ ಹೊಳೆಯಲ್ಲಿ ಅಪಾರ ಪ್ರಮಾಣದಲ್ಲಿ ಇರುವ ಜಲಚರಗಳ ಕಾಫಿ ಪಲ್ಪಿಂಗ್ ನೀರನ್ನು ಹೊಳೆಗೆ ಬಿಟ್ಟ ಎರಡು ದಿನಗಳಲ್ಲಿ ಸಾವನ್ನಪ್ಪುತ್ತವೆ. ಇದನ್ನು ಪಲ್ಪಿಂಗ್ ನೀರನ್ನು ಹೊಳೆಗೆ ಬಿಡುವವರು ಅರ್ಥ ಮಾಡಿಕೊಳ್ಳಬೇಕು ಎಂದು ಗೌಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಎಂಬುವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಪಾಯದ ಬಗ್ಗೆ ಎಚ್ಚರಿಸಿದರೂ ಬೇಜವಾಬ್ದಾರಿತನ 

ಕಾವೇರಿ ನೀರನ್ನು ಮೈಸೂರು, ಬೆಂಗಳೂರು ಸೇರಿದಂತೆ ನಾಡಿನ ಕೋಟ್ಯಂತರ ಜನರು ಕುಡಿಯುತ್ತಾರೆ, ಅಡುಗೆಗೆ ಬಳಸುತ್ತಾರೆ. ಹೀಗಾಗಿ ಕಾವೇರಿ ನದಿ ಸ್ವಚ್ಚವಾಗಿ ಉಳಿಯಬೇಕಾಗಿದೆ. ಅದಕ್ಕಾಗಿ ಸಂಬಂಧಿಸಿದ ಇಲಾಖೆಗಳು ಕಟ್ಟುನಿಟ್ಟಿನ ಕ್ರಮ ವಹಿಸಿ ಕಾಫಿ ಪಲ್ಪಿಂಗ್ ಅಷ್ಟೇ ಅಲ್ಲದೆ ಯಾವುದೇ ರೀತಿಯ ಕಲುಷಿತ ನೀರು ಕಾವೇರಿ ನದಿಗೆ ಸೇರದಂತೆ ಎಚ್ಚರ ವಹಿಸಬೇಕಾಗಿದೆ ಎಂದು ಪರಿಸರ ಪ್ರೇಮಿ ಅಯ್ಯಪ್ಪ ಆಗ್ರಹಿಸಿದ್ದಾರೆ. ಚಂದ್ರಶೇಖರ್ ಎಂಬಾತ ಕಲುಷಿತ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದು ತಿಳಿಯುತ್ತಿದ್ದಂತೆ ರಕ್ಷಣಾ ವೇದಿಕೆ ಸೋಮವಾರಪೇಟೆ ತಾಲ್ಲೂಕು ಮುಖಂಡ ಫ್ರಾನ್ಸಿಸ್ ಡಿಸೋಜಾ ಮತ್ತಿತರರು ಆತನಿಗೆ ತಿಳಿ  ಹೇಳಿದ್ದಾರೆ. ಆದರೂ ಚಂದ್ರಶೇಖರ್ ಪಲ್ಪಿಂಗ್ ನೀರನ್ನು ಹೊಳೆಗೆ ಹರಿಸುತ್ತಿದ್ದರಿಂದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: Bengaluru Fire Accident: ಅಗ್ನಿ ಅವಘಡದಿಂದ ಅಪಾರ್ಟ್​​ಮೆಂಟ್​​ ನಿವಾಸಿಗಳನ್ನು ರಕ್ಷಿಸಿದ ‘ಅಪ್ಪು’.. ಇದಪ್ಪಾ ನಿಯತ್ತು

ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಚಂದ್ರಶೇಖರ್ ನನ್ನು ಸ್ಥಳಕ್ಕೆ ಬರುವಂತೆ ತಿಳಿಸಿದ್ದಾರೆ. ಆದರೆ ಆತ ಸ್ಥಳಕ್ಕೆ ಬರದಿದ್ದಾಗ ಫೋನ್ ಮೂಲಕವೇ ಕೂಡಲೇ ಕಲುಷಿತ ನೀರು ಹೊಳೆಗೆ ಸೇರದಂತೆ ಎಚ್ಚರವಹಿಸಬೇಕು. ಇಲ್ಲದಿದ್ದರೆ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿ ವಾಪಾಸ್ ಆಗಿದ್ದಾರೆ.
Published by:Kavya V
First published: