HOME » NEWS » District » COASTAL KARNATAKA PEOPLE PANIC DUE TO HEAVIEST RAIN FALL IN KARNATAKA HK

ಕರಾವಳಿಯಲ್ಲಿ ಮುಂದುವರಿದ ಭಾರಿ ಮಳೆ : ಕಡಲಿನ ಅಬ್ಬರ ಹೆಚ್ಚಳ, ಆತಂಕದಲ್ಲಿ ಜನ

ಸೋಮೇಶ್ವರ, ಉಚ್ಚಿಲ, ಬಟ್ಟಪ್ಪಾಡಿ ಮೊದಲಾದ ಪ್ರದೇಶಗಳಲ್ಲಿ ಕಡಲ್ಕೊರೆತ ಹೆಚ್ಚಾಗಲಾರಂಭಿಸಿದೆ. ಉಚ್ಚಿಲ, ಬಟ್ಟಪ್ಪಾಡಿ ಸಂಪರ್ಕ ಕಲ್ಪಿಸುವ ರಸ್ತೆ ಭಾಗಶಃ ಸಮುದ್ರ ಪಾಲಾಗಿದ್ದು, ಸಂಪೂರ್ಣ ರಸ್ತೆ ಸಮುದ್ರ ಪಾಲಾಗುವ ಲಕ್ಷಣಗಳು ಕಂಡು ಬರುತ್ತಿದೆ

news18-kannada
Updated:August 6, 2020, 10:41 AM IST
ಕರಾವಳಿಯಲ್ಲಿ ಮುಂದುವರಿದ ಭಾರಿ ಮಳೆ : ಕಡಲಿನ ಅಬ್ಬರ ಹೆಚ್ಚಳ, ಆತಂಕದಲ್ಲಿ ಜನ
ಕಡಲ್ಕೊರೆತ
  • Share this:
ಮಂಗಳೂರು(ಆಗಸ್ಟ್​.06): ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿದ್ದ ಮಳೆಗೆ ಇಂದು ಕೊಂಚ ಇಳಿಮುಖವಾಗಿದೆ. ಆದರೆ ಘಟ್ಟ ಪ್ರದೇಶಗಳಾದ ಸಕಲೇಶಪುರ, ಶಿರಾಡಿ, ಸುಬ್ರಹ್ಮಣ್ಯ, ಸಿರಿಬಾಗಿಲು ಪ್ರದೇಶಗಳಲ್ಲಿ ಭಾರೀ ಮಳೆಯಾದ ಹಿನ್ನಲೆಯಲ್ಲಿ ಕುಮಾರಧಾರಾ ನದಿ ತುಂಬಿಕ್ಕಿ ಹರಿಯುತ್ತಿದೆ.

ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದ ಹಿನ್ನಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರಾ ಸ್ನಾನಘಟ್ಟ ಕಳೆದ ನಾಲ್ಕು ದಿನಗಳಿಂದ ನದಿ ನೀರಿನಿಂದ ಮುಳುಗಡೆಯಾಗಿದೆ. ಸ್ನಾನಘಟ್ಟದಲ್ಲಿರುವ ಭಕ್ತಾಧಿಗಳ ಸ್ನಾನಗೃಹ, ಶೌಚಾಲಯ ಹಾಗೂ ಲಗೇಜ್ ರೂಮ್ ಗಳು ಭಾಗಶ ಜಲಾವೃತವಾಗಿದೆ. ಕರಾವಳಿಯಲ್ಲಿ ಅಗಸ್ಟ್ 10 ರ ವರೆಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಈಗಾಗಲೇ ನೀಡಿದೆ.

ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕಲ್ಬೆಟ್ಟು ಎಂಬಲ್ಲಿ ಭಾರೀ ಮಳೆಗೆ ಕಿರು ಸೇತುವೆಯಿಂದು ಬಿರುಕು ಬಿಟ್ಟಿದ್ದು, ಇದರಿಂದಾಗಿ ಕಲ್ಬೆಟ್ಟು ಗ್ರಾಮದ ಜನ ಸಂಪರ್ಕ ಕಡಿತಗೊಳ್ಳುವ ಆತಂಕಲ್ಲಿ ಇದ್ದಾರೆ. ಅಲ್ಲದೆ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಏಳುವ ಎಚ್ಚರಿಕೆಯನ್ನು ನೀಡಿದೆ. ಸಮುದ್ರದಲ್ಲೂ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಕಡಲ ತೀರಗಳಲ್ಲಿ ಕಡಲ್ಕೊರೆತ ಹೆಚ್ಚಾಗುತ್ತಿದೆ‌.

ಸೋಮೇಶ್ವರ, ಉಚ್ಚಿಲ, ಬಟ್ಟಪ್ಪಾಡಿ ಮೊದಲಾದ ಪ್ರದೇಶಗಳಲ್ಲಿ ಕಡಲ್ಕೊರೆತ ಹೆಚ್ಚಾಗಲಾರಂಭಿಸಿದೆ. ಉಚ್ಚಿಲ, ಬಟ್ಟಪ್ಪಾಡಿ ಸಂಪರ್ಕ ಕಲ್ಪಿಸುವ ರಸ್ತೆ ಭಾಗಶಃ ಸಮುದ್ರ ಪಾಲಾಗಿದ್ದು, ಸಂಪೂರ್ಣ ರಸ್ತೆ ಸಮುದ್ರ ಪಾಲಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಉಡುಪಿ ಜಿಲ್ಲೆಯಲ್ಲೂ ಆಗಸ್ಟ್ 10 ರ ವರೆಗೆ ಭಾರೀ ಮಳೆ ಗಾಳಿ ಬೀಸಲಿದ್ದು, ಉಡುಪಿ ಜಿಲ್ಲೆಯಾದ್ಯಂತ ರೆಡ್ ಮತ್ತು ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ವಾರಾಹಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದ, ನದಿ ಪಾತ್ರಗಳಲ್ಲಿ ನೆರೆಯಾಗುವ ಲಕ್ಷಣ ಕಂಡು ಬಂದಿದೆ. ನದಿ ಪಾತ್ರಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆಯನ್ನೂ ನೀಡಲಾಗಿದೆ.

ಇದನ್ನೂ ಓದಿ : Shivamogga Rain : ಶಿವಮೊಗ್ಗ ಜಿಲ್ಲೆಯಲ್ಲಿ ಅಬ್ಬರಿಸುತ್ತಿದೆ ಮುಂಗಾರು ಮಳೆ ; ಮೈದುಂಬಿ ಹರಿಯುತ್ತಿದೆ ತುಂಗಾ ನದಿ

ಇತ್ತ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಇಂದು ಕೂಡ ಮುಂದುವರಿದಿದೆ. ಮಳೆಯೊಂದಿಗೆ ಭಾರೀ ಗಾಳಿಯೂ ಬೀಸುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಕದ್ರಾ ಜಲಾಶಯದಲ್ಲಿ ಕೂಡ 32 ಮೀಟರ್ ನೀರು ಭರ್ತಿಯಾಗಿದ್ದು ಗರಿಷ್ಠ ಮಟ್ಟ ತಲುಪಲು ಇನ್ನು 2.35 ಮೀಟರ್ ಬಾಕಿ ಉಳಿದಿದೆ.
ಆಗಸ್ಟ್ 8 ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಗಂಗಾವಳಿ ನದಿ ಪ್ರವಾಹ ಉಂಟಾಗಿದ್ದು, ಅಂಕೋಲಾ ತಾಲೂಕಿನ ಅಚವೆ, ಡೊಂಗ್ರಿ, ಕಲ್ಲೇಶ್ವರ, ಐಗಳಕೂರ್ವೇ, ಹಳವಳ್ಳಿ, ಹೆಗ್ಗಾರ್ ಸೇರಿ ವಿವಿಧ ಗ್ರಾಮಗಳಿಗೆ ನುಗ್ಗಿದ ನೀರು ನುಗ್ಗಿದೆ. ಮುಂದಿನ ನಾಲ್ಕು ದಿನ ನಿರಂತರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
Published by: G Hareeshkumar
First published: August 6, 2020, 10:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories