ಅರಬ್ಬಿ ಸಮುದ್ರಲ್ಲಿ ಕೋಸ್ಟ್ ಗಾರ್ಡ್ ಕಾರ್ಯಾಚರಣೆ; ಚಂಡಮಾರುತಕ್ಕೆ ಸಿಲುಕಿದ್ದ 9 ಜನ ಕಾರ್ಮಿಕರ ರಕ್ಷಣೆ!

ಎನ್.ಎಂ.ಪಿ.ಟಿ ಬಂದರಿಗೆ ಕಂದಾಯ ಸಚಿವ ಆರ್.ಅಶೋಕ್, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಬಿ.ಜೆ.ಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಅಧಿಕಾರಿಗಳು ಹಾಗೂ ರಕ್ಷಣೆಗೆ ಒಳಗಾದ ಕಾರ್ಮಿಕರಿಂದ ಮಾಹಿತಿ ಪಡೆದರು.

ಕರಾವಳಿ ಕೋಸ್ಟ್​ ಗಾರ್ಡ್​.

ಕರಾವಳಿ ಕೋಸ್ಟ್​ ಗಾರ್ಡ್​.

  • Share this:
ಅರಬ್ಬಿ ಸಮುದ್ರದಲ್ಲಿ ಚಂಡಮಾರತಕ್ಕೆ ಸಿಲುಕಿ, ಕಡಲ ಮಧ್ಯದಲ್ಲಿ ಜೀವನ್ಮರಣ ಹೋರಾಟದಲ್ಲಿದ್ದ 9 ಮಂದಿ ಕಾರ್ಮಿಕರನ್ನು ಕೊನೆಗೂ ರಕ್ಷಿಸಲಾಗಿದೆ. ಇಂಡಿಯನ್ ಕೋಸ್ಟ್ ಗಾರ್ಡ್ ಹಾಗೂ ಇಂಡಿಯನ್ ನೇವಿ ಜಂಟಿ ಕಾರ್ಯಾಚರಣೆ ನಡೆಸಿ ರೆಸ್ಕ್ಯೂ ಆಪರೇಷನ್ ಯಶಸ್ವಿಗೊಳಿಸಿದೆ. ಬಡುಕಿತೆ ಬಡಜೀವವೇ ಎಂದು ಕಾರ್ಮಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಅರಬ್ಬಿ ಸಮುದ್ರದಲ್ಲಿ‌ ಟಗ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದ 9 ಜನರನ್ನು‌ ರಕ್ಷಿಸಿ ಸುರಕ್ಷಿತವಾಗಿ ದಡ ಸೇರಿಸಲಾಗಿದೆ. ಕಳೆದ ಎರಡು ದಿನದ ಹಿಂದೆ MRPL ಕಂಪನಿಗೆ ಆಗಮಿಸುವ ಕ್ರೂಡ್ ಆಯಿಲ್ ನ್ನು ಅಂಡರ್ ಗ್ರೌಂಡ್ ಪೈಪ್ ಮೂಲಕ ಕನೆಕ್ಟ್ ಮಾಡುವ ಕೆಲಸ ಮಾಡುತ್ತಿದ್ದ ಕೋರಮಂಡಲ ಸಪೋರ್ಟರ್-9 ಎಂಬ ಹೆಸರಿನ ಟಗ್ ಬೋಟ್ ಸಮುದ್ರ ಮಧ್ಯೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿತ್ತು.

ಇದರಲ್ಲಿದ್ದ 9 ಮಂದಿಯ ರಕ್ಷಣೆಗೆ ಮುಂದಾದ ದಕ್ಷಿಣಕನ್ನಡ ಜಿಲ್ಲಾಡಳಿತ ಇಂದು ಇಂಡಿಯನ್ ಕೋಸ್ಟ್ ಗಾರ್ಡ್,ನೌಕಾದಳದ ಜಂಟಿ‌ ಕಾರ್ಯಾಚರಣೆಯ ಮೂಲಕ ಯಶಸ್ವಿ ರಕ್ಷಣಾ ಕಾರ್ಯಚರಣೆ ನಡೆಸಿತು. ಇಂಡಿಯನ್ ನೇವಿಯ ಹೆಲಿಕಾಪ್ಟರ್ ಹಾಗೂ ಇಂಡಿಯನ್ ಕೋಸ್ಟ್ ಗಾರ್ಡ್ ನ ಸ್ಪೀಡ್ ಬೋಟ್ ಮೂಲಕ ರಕ್ಷಣೆ ಮಾಡಲಾಯಿತು.

ನಾಲ್ವರನ್ನು ಹೆಲಿಕಾಪ್ಟರ್ ಮೂಲಕ‌ ರಕ್ಷಿಸಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಪಣಂಬೂರು ಎನ್ ಎಂಪಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನೀಡಲಾಯಿತು.ಇನ್ನುಳಿದ 5 ಮಂದಿಯನ್ನು ಸ್ಪೀಡ್ ಮೂಲಕ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತು.

ನಿನ್ನೆ ಭಾರೀ ಅಲೆಗಳ ಕಾರಣದಿಂದ ಕೋಸ್ಟ್ ಗಾರ್ಡ್ ಕಾರ್ಯಾಚರಣೆ ವಿಳಂಬವಾಗಿತ್ತು. ಹೀಗಾಗಿ ನೇವಿಯ ಹೆಲಿಕಾಪ್ಟರ್ ಗಳನ್ನು ರಕ್ಷಣಾ ಕಾರ್ಯಾಚರಣೆ ಗೆ ಬಳಸಲು ರಾಜ್ಯ ಸರ್ಕಾರ ನಿರ್ಧರಿಸಿತು. ಅದರಂತೆ ಇಂದು ಕೊಚ್ಚಿನ್ ನಿಂದ ನೇವಿ ಹೆಲಿಕಾಪ್ಟರ್ ನ್ನು ತರಿಸಿಕೊಂಡು ಕೋಸ್ಟ್ ಗಾರ್ಡ್ ಮೂಲಕ ಜಂಟಿ ರಕ್ಷಣಾ ಕಾರ್ಯ ನಡೆಸಲಾಯಿತು. ಉಡುಪಿ ಜಿಲ್ಲೆಯ ಕಾಪು ಕಡಲ ಕಿನಾರೆಯಿಂದ 15 ನಾಟೆಕಲ್ ಮೈಲ್ ದೂರದಲ್ಲಿ ಬಂಡೆಕಲ್ಲುಗಳ ಮಧ್ಯೆ ಸಿಲುಕಿದ್ದ ಟಗ್ ನಲ್ಲಿದ್ದ ಕಾರ್ಮಿಕರನ್ನು ರೆಸ್ಕ್ಯೂ ಮಾಡಲಾಯಿತು.

ಇನ್ನು ಎನ್.ಎಂ.ಪಿ.ಟಿ ಬಂದರಿಗೆ ಕಂದಾಯ ಸಚಿವ ಆರ್.ಅಶೋಕ್, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಬಿ.ಜೆ.ಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಅಧಿಕಾರಿಗಳು ಹಾಗೂ ರಕ್ಷಣೆಗೆ ಒಳಗಾದ ಕಾರ್ಮಿಕರಿಂದ ಮಾಹಿತಿ ಪಡೆದರು.

ಸದ್ಯ ಕಾರ್ಮಿಕರನ್ನು ಯಶಸ್ವಿ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ. ಆದ್ರೆ ಚಂಡಮಾರುತದ ಸೂಚನೆಯ ಬಳಿಕವೂ ಕಾರ್ಮಿಕರು ಸಮುದ್ರದಲ್ಲೇ ಇದ್ದ ಬಗ್ಗೆ ಎಂ.ಆರ್.ಪಿ.ಎಲ್ ಮತ್ತು ಎನ್.ಎಂ.ಪಿ.ಟಿ ಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ವರದಿ ನೀಡಲು ಸೂಚನೆ ನೀಡಿದ್ದಾರೆ. ಒಟ್ಟಿನಲ್ಲಿ ಚಂಡಮಾರತದ ಭೀಕರತೆಗೆ ಸಾಕ್ಷಿಯಾಗಿದ್ದ ಕಾರ್ಮಿಕರು ಮಾತ್ರ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಇನ್ನು ತೌಕ್ತೆ ಚಂಡ ಮಾರುತ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಕಂದಾಯ ಸಚಿವ ಆರ್ ಅಶೋಕ್ ಪ್ರವಾಸ ಕೈಗೊಂಡಿದ್ದಾರೆ..ಈ ಸಂಧರ್ಭದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅಶೋಕ್ ಮಾಹಿತಿ ಪಡೆದುಕೊಂಡಿದ್ದಾರೆ..ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಆರ್ ಅಶೋಕ್ ಮಹತ್ವದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಮಂಗಳೂರಿನಲ್ಲಿ ಒಟ್ಟಿ 168 ಜನ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದು,182 ಕುಟುಂಬಗಳಿಗೆ ಚಂಡಮಾರುತ ಸಂಕಷ್ಟ ತಂದಿದೆ..ಈ 182 ಕುಟುಂಬಗಳಿಗೂ ತಲಾ 10 ಸಾವಿರ ರೂಪಾಯಿ ಪರಿಹಾರ ನೀಡಲು ನಿರ್ಧರಿಸಲಾಗಿದೆ..ಚಂಡಮಾರುತ ದ ಪರಿಣಾಮ 87ಮನೆಗಳಿಗೆ ಹಾನಿ ಯಾಗಿದ್ದು,ಅದರಲ್ಲಿ 63ಮನೆಗಳು ಭಾಗಶ ಹಾನಿಯಾಗಿದೆ. ಈ ಮನೆಗಳಿಗೆ 1ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ‌‌.23ಮನೆಗಳು ಪೂರ್ತಿ ಹಾನಿಯಾಗಿದ್ದು, ಆ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಲು ಆರ್ ಅಶೋಕ್ ಸೂಚಿಸಿದ್ದಾರೆ.

ಅರಬ್ಬಿ ಸಮುದ್ರದ ಟಗ್ ದುರಂತದಲ್ಲಿ 3ಮಂದಿ ಸಾವನ್ನಪ್ಪಿದ್ದು,3 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಮೃತ ಕುಟುಂಬಗಳಿಗೆ ಎಂ.ಆರ್.ಪಿ.ಎಲ್‌ನಿಂದ ತಲಾ 10 ಲಕ್ಷ ರೂಪಾಯಿ ಪರಿಹಾರ ಧನ ನೀಡಲು ಸರ್ಕಾರ ಆದೇಶಿಸಿದೆ. ಅಲ್ಲದೆ ಟಗ್ ದುರಂತದ ಬಗ್ಗೆ ಕಂಪೆನಿಗಳು ಆರೋಪ ಪ್ರತ್ಯಾರೋಪ ಮಾಡುತ್ತಿದ್ದು,ಈ ಬಗ್ಗೆ ಸಮಗ್ರ ತನಿಖೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ‌‌.

ಇದನ್ನೂ ಓದಿ: ಹೆಚ್ಚು ಮಾತನಾಡಿದರೇ ಯೋಗಿ ಸರ್ಕಾರ ನನ್ನ ವಿರುದ್ಧವೂ ದೇಶದ್ರೋಹ ಪ್ರಕರಣ ದಾಖಲಿಸುತ್ತದೆ: ಬಿಜೆಪಿ ಶಾಸಕನ ಆತಂಕ!

ತಂಡ ವರದಿ ನೀಡಿದ ಬಳಿಕ ತಪ್ಪಿದಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಅಂತಾ ಸಚಿವ ಆರ್ ಅಶೋಕ್ ಹೇಳಿದ್ದಾರೆ..ಅಲ್ಲದೆ  ಟಗ್ ನಲ್ಲಿ 20ಸಾವಿರ ಲೀಟರ್ ಡಿಸೇಲ್ ಇದ್ದು,ಅದನ್ನು ತಕ್ಷಣ ತೆಗೆಯುವಂತೆ ಕಂಪೆನಿಗೆ ನೊಟೀಸ್ ನೀಡಲಾಗಿದೆ‌‌. ಡಿಸೇಲ್ ತೆರವಿಗೆ ಸಮಯ ನೀಡಲಾಗಿದ್ದು, ಡಿಸೇಲ್ ತೆರವು ಮಾಡದಿದ್ದಲ್ಲಿ ಸಮುದ್ರದ ನೀರು ಮಾಲಿನ್ಯವಾಗುವ ಸಾಧ್ಯತೆಗಳಿವೆ ಅಂತಾ ಆರ್ ಅಶೋಕ್ ಹೇಳಿದ್ದಾರೆ.‌

ಚಂಡಮಾರುತದ ಹಿನ್ನಲೆಯಲ್ಲಿ ರಾಜ್ಯದ 22 ತಾಲೂಕಗಳ 333 ಕಡೆಗಳಲ್ಲಿ ಹಾನಿಯಾಗಿದ್ದು,ಒಟ್ಟು 6 ಜೀವ ಹಾನಿಯಾಗಿದೆ. 2.87ಹೆಕ್ಟರ್ ಭೂ ಪ್ರದೇಶದಲ್ಲಿ ಹಾನಿಯಾಗಿದೆ‌‌..ದಕ್ಷಿಣ ಕನ್ನಡ, ಉಡುಪಿ,ಉತ್ತರ ಕನ್ನಡ  ಜಿಲ್ಲಾಧಿಕಾರಿಗಳಿಗೆ ಹಾನಿಯ ಬಗ್ಗೆ ಸಮೀಕ್ಷೆ ನಡೆಸಲು ಸೂಚನೆ ನೀಡಿದ್ದೇನೆ‌‌..ಮೂರು ಜಿಲ್ಲಾಡಳಿತ ದಲ್ಲಿ106 ಕೋಟಿ ರೂಪಾಯಿ ಹಣವಿದ್ದು,ಖರ್ಚು ಮಾಡಲು ಸೂಚನೆ ನೀಡಲಾಗಿದೆ ಅಂತಾ ಆರ್ ಅಶೋಕ್ ಹೇಳಿದ್ದಾರೆ.
Published by:MAshok Kumar
First published: