ಅರ್ಧಕ್ಕೆ ರ್‍ಯಾಲಿ ನಿಲ್ಲಿಸಿದ ಯಡಿಯೂರಪ್ಪ; ಎರಡು ದಿನ ಪ್ರಚಾರಕಾರ್ಯಕ್ಕೆ ಸಿದ್ದರಾಮಯ್ಯ ಬ್ರೇಕ್

ನಿನ್ನೆಯಿಂದಲೂ ಜ್ವರದಿಂದ ಬಳಲುತ್ತಿರುವ ಯಡಿಯೂರಪ್ಪ ಇಂದು ಬೆಳಗಾವಿಯ ಶಿವಾಜಿ ಗಾರ್ಡನ್​ನಿಂದ ಹೊರಟ ರ್‍ಯಾಲಿಯಲ್ಲಿ ಮುಂದುವರಿಯಲಾಗದೇ ಅರ್ಧಕ್ಕೆ ಹೊರಬಂದು ಖಾಸಗಿ ಹೋಟೆಲ್​ನಲ್ಲಿ ವಿಶ್ರಾಂತಿಗೆ ತೆರಳಿದರು.

ಬಿಎಸ್ ಯಡಿಯೂರಪ್ಪ

ಬಿಎಸ್ ಯಡಿಯೂರಪ್ಪ

 • Share this:
  ಬೆಳಗಾವಿ (ಏ. 15): ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಹಿರಂಗ ಪ್ರಚಾರ ಇಂದು ಅಂತ್ಯವಾಗಲಿದೆ. ಹೀಗಾಗಿ, ಬೆಳಗಾವಿ ಲೋಕಸಭಾ ಕ್ಷೇತ್ರ ಹಾಗೂ ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಸಭೆ ಸಮಾರಂಭಗಳು ಎಗ್ಗಿಲ್ಲದೆ ನಡೆಯುತ್ತಿವೆ. ಇಂದು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸಿಎಂ ಯಡಿಯೂರಪ್ಪ ಅವರು ತಮ್ಮ ಚುನಾವಣಾ ಸಮಾವೇಶದಿಂದ ಅರ್ಧಕ್ಕೆ ಹೊರಬಂದಿದ್ದಾರೆ. ನಿನ್ನೆಯಿಂದಲೂ ಜ್ವರದಿಂದ ಬಳಲಿ ಸುಸ್ತಾಗಿದ್ದ ಮುಖ್ಯಮಂತ್ರಿಗಳು ಇಂದು ಅನಿವಾರ್ಯವಾಗಿ ವಿಶ್ರಾಂತಿ ಪಡೆದುಕೊಳ್ಳಬೇಕಾಯಿತು. ಇಂದು ಯಡಿಯೂರಪ್ಪ ಅವರು ಶಿವಾಜಿ ಗಾರ್ಡನ್​ನಿಂದ ಆರಂಭಗೊಂಡು ಬಿಜೆಪಿ ಶಾಸಕರ ಅಭಯ್ ಪಾಟೀಲ್ ಮನೆಯವರೆಗೆ ತೆರಳಿದ ರ್‍ಯಾಲಿಯಲ್ಲಿ ಅವರು ಅನಾರೋಗ್ಯದ ನಡುವೆಯೂ ಭಾಗಿಯಾಗಿದ್ದರು. ಉರಿ ಬಿಸಿಲು ಹೆಚ್ಚಾದ್ದರಿಂದ ರ್‍ಯಾಲಿಯಲ್ಲಿ ಮುಂದುವರಿಯಲು ಸಾಧ್ಯವಾಗದೇ ಅಲ್ಲಿಂದ ನಿರ್ಗಮಿಸಿ ಖಾಸಗಿ ಹೋಟೆಲ್​ಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ.

  ಕೇಂದ್ರ ಸಚಿವ ಪ್ರಲ್ಹಾದ ಜೋಷಿ, ಸಚಿವರಾದ ಜಗದೀಶ್ ಶೆಟ್ಟರ್, ಉಮೇಶ್ ಕತ್ತಿ, ಶಾಸಕ ಅಭಯ್ ಪಾಟೀಲ, ಅನಿಲ್ ಬೆನಕೆ ನೇತೃತ್ವದಲ್ಲಿ ರ್ಯಾಲಿ ಮುಂದುವರಿಯಿತು. ಇಂದು ಸಂಜೆ ಬೆಳಗಾವಿ ಗ್ರಾಮೀಣ ಭಾಗದ ಹಿಂಡಲಗಾ ಬಳಿ ಬಿಜೆಪಿಯ ಪ್ರಚಾರ ಸಭೆ ನಿಗದಿಯಾಗಿದೆ. ಅದರಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪಾಲ್ಗೊಳ್ಳುತ್ತಿದ್ದಾರೆ. ಈ ಸಭೆಯಲ್ಲಿ ಯಡಿಯೂರಪ್ಪ ಅವರೂ ಭಾಗಿಯಾಗುವ ನಿರೀಕ್ಷೆ ಇದೆ.

  ಇದನ್ನೂ ಓದಿ: Actor Yash - ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ಕೋರಿದವರಿಗೆ ನಟ ಯಶ್ ಪ್ರತಿಕ್ರಿಯೆ ಇದು

  ಇನ್ನು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಚನಾವಣಾ ಪ್ರಚಾರ ಕಾರ್ಯವೂ ಬೇಗನೇ ಮೊಟಕುಗೊಂಡಿದೆ. ಬೆಳಗಾವಿಯಲ್ಲಿ ಸಿದ್ದರಾಮಯ್ಯ ನಿನ್ನೆ ಮತ್ತು ಇಂದು ಪ್ರಚಾರ ನಡೆಸಬೇಕಿತ್ತು. ಆದರೆ, ನಿನ್ನೆ ಕಾರಿನ ಡೋರು ತಗುಲಿ ಅವರ ಬೆರಳಿಗೆ ಗಂಭೀರ ಗಾಯವಾಗಿದೆ. ತಾವು ನಿತ್ಯ ಬಳಸುವ ಕಾರಿನ ಬದಲು ಬೇರೆ ಕಾರನ್ನು ಸಿದ್ದರಾಮಯ್ಯ ಬಳಸಿದ್ದರು. ಆಗ ಹೊಸ ಕಾರಿನ ಡೋರ್ ಆಟೊಮ್ಯಾಟಿಕ್ ಆಗಿ ಮುಚ್ಚಿಕೊಂಡ ಪರಿಣಾಮ ಇವರ ಬೆರಳು ಸಿಕ್ಕಿಕೊಂಡು ಗಾಯವಾಗಿದೆ. ಸದ್ಯ ಬೆರಳಿಗೆ ಹೊಲಿಗೆ ಹಾಕಿರುವ ವೈದ್ಯರು ಸಿದ್ದರಾಮಯ್ಯಗೆ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ. ಹೀಗಾಗಿ, ಅವರು ತಮ್ಮ ಪ್ರಚಾರ ಕಾರ್ಯವನ್ನು ರದ್ದುಗೊಳಿಸಿದ್ದಾರೆ.

  ಬಿಜೆಪಿ ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್​ಗೆ ಪ್ರತಿಷ್ಠೆಯ ಪಣವಾಗಿದೆ. ಸತೀಶ್ ಜಾರಕಿಹೊಳಿ ಅವರು ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಸುರೇಶ್ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
  Published by:Vijayasarthy SN
  First published: