HOME » NEWS » District » CM CHANGES IN STATE AFTER MAY 2 SAYS BASANAGOUDA YATNAL MVSV MAK

ಮೇ 2ರ ನಂತರ ರಾಜ್ಯದಲ್ಲಿ ಸಿಎಂ ಬದಲಾವಣೆ ಖಚಿತ; ಬಸನಗೌಡ ಯತ್ನಾಳ್ ಹೇಳಿಕೆ

ಆಡಳಿತ ನಡೆಸುತ್ತಿರುವವರು ಮತ್ತು ಸಿಡಿ ಇಟ್ಟುಕೊಂಡವರ ಒತ್ತಡದಿಂದ ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಸಾಧ್ಯವಾಗುತ್ತಿಲ್ಲ.  ಬೊಮ್ಮಾಯಿ ನಿರಪರಾಧಿ.  ಸಿಎಂ, ಸಿಎಂ ಪುತ್ರ ಹಾಗೂ ಡಿಕೆಶಿ ಒಂದೇ ಇದ್ದಾರೆ.  ಎಲ್ಲರೂ ವ್ಯವಹಾರ ಹೊಂದಿದ್ದಾರೆ ಎಂದು ಯತ್ನಾಳ್ ಆರೋಪಿಸಿದ್ದಾರೆ.

news18-kannada
Updated:March 30, 2021, 7:49 PM IST
ಮೇ 2ರ ನಂತರ ರಾಜ್ಯದಲ್ಲಿ ಸಿಎಂ ಬದಲಾವಣೆ ಖಚಿತ; ಬಸನಗೌಡ ಯತ್ನಾಳ್ ಹೇಳಿಕೆ
ಬಸನಗೌಡ ಪಾಟೀಲ ಯತ್ನಾಳ
  • Share this:
ವಿಜಯಪುರ (ಮಾರ್ಚ್ 30); ರಾಜ್ಯದಲ್ಲಿ ಮೇ 2 ರ ನಂತರ ಸಿಎಂ ಬದಲಾವಣೆ ಖಚಿತ.  ಜಗತ್ತಿನ ಯಾವ ಶಕ್ತಿಯೂ ಅದನ್ನು ತಡೆಯುವುದು ಅಸಾಧ್ಯ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತೊಮ್ಮೆ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, "ತಮ್ಮ ವಿರುದ್ಧ 65 ಜನ ಶಾಸಕರ ಸಹಿ ಸಂಗ್ರಹಿಸಿದ್ದಾರೆ. 65 ಜನ ಅವರ ಜೊತೆಗಿದ್ದರೆ ಇನ್ನುಳಿದ 60 ಜನ ನನ್ನ ಬಳಿ ಇದ್ದಾರೆ ಎಂದು ಅರ್ಥವಲ್ಲವೇ.  ನಾನು ಸಿಎಂ ಅಲ್ಲ, ಸಚಿವನೂ ಅಲ್ಲ.  ಹಾಗಿದ್ದೂ ನಾನು ಅವರಿಗಿಂತಲೂ ಸ್ಟ್ರಾಂಗ್ ಎಂದಾಯಿತಲ್ಲವೇ? ಮಾನನೀಯ ರೇಣುಕಾಚಾರ್ಯ ಅವರನ್ನು ಹೊರತು ಪಡಿಸಿದರೆ ಬೇರಾವ ಶಾಸಕರೂ ನನ್ನ ವಿರುದ್ಧ ಮಾತನಾಡಿಲ್ಲ" ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.

ಇದೇ ವೇಳೆ ರಮೇಶ್ ಜಾರಕಿಹೊಳಿ ಅವರ ಸಿಡಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ್, "ಆಡಳಿತ ನಡೆಸುತ್ತಿರುವವರು ಮತ್ತು ಸಿಡಿ ಇಟ್ಟುಕೊಂಡವರ ಒತ್ತಡದಿಂದ ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಸಾಧ್ಯವಾಗುತ್ತಿಲ್ಲ.  ಬೊಮ್ಮಾಯಿ ನಿರಪರಾಧಿ.  ಸಿಎಂ, ಸಿಎಂ ಪುತ್ರ ಹಾಗೂ ಡಿಕೆಶಿ ಒಂದೇ ಇದ್ದಾರೆ.  ಎಲ್ಲರೂ ವ್ಯವಹಾರ ಹೊಂದಿದ್ದಾರೆ.  ಸುಮ್ಮನೆ ಬಿಜೆಪಿ, ಕಾಂಗ್ರೆಸ್ ಎಂದು ತೋರಿಸುತ್ತಾರೆ. ಇವರದು ತೆಗೆದರೆ ಅವರ ಸಿಡಿ ತೆಗೆಯುತ್ತೇವೆ ಎಂದು ಹೇಳುತ್ತಾರೆ.  ಇದೆಲ್ಲ ಬ್ಲ್ಯಾಕ್ ಮೇಲ್ ತಾನೆ, ಅವರದು ತೆಗೆದರೆ ಇವರದು ತೆಗೆಯುತ್ತಾರೆ ಎಂದು ಹೊಂದಾಣಿಕೆ ಮಾಡಿಕೊಂಡಿದ್ದಾರೆ.

ಇವರೆಲ್ಲರಿಗೂ ಬುದ್ದಿ ಕಲಿಸಬೇಕಾದರೆ ಸಿಬಿಐ ತನಿಖೆಗೆ ನಡೆಸಬೇಕು. ಎಸ್​ಐಟಿಯಲ್ಲಿರುವ ಐಪಿಎಸ್ ಅಧಿಕಾರಿ ವಿಜಯೇಂದ್ರ ನಿರ್ದೇಶನದಂತೆ ಕೇಳುತ್ತಾರೆ.  ಮುಖ್ಯಮಂತ್ರಿ ಮಗ ಹೇಳಿದಂತೆ ಎಸ್​ಐಟಿ ಅಧಿಕಾರಿ ಕೇಳುತ್ತಾರೆ. ಇದನ್ನು ಬಿಟ್ಟು ಎಸ್​ಐಟಿ ನಿಸ್ಪಕ್ಷಪಾತ ತನಿಖೆ ನಡೆಸಲಿ. ರಾಜಕೀಯ ವೈಷಮ್ಯದಿಂದ ಕರ್ನಾಟಕದಲ್ಲಿ ಕೆಟ್ಟ ಸಂಸ್ಕೃತಿ ಆರಂಭವಾಗಿದೆ.

ಇದನ್ನೂ ಓದಿ: Ramesh Jarkiholi CD Case: ಬಂಧನದ ಭೀತಿ ಎದುರಿಸುತ್ತಿರುವ ಆರೋಪಿ ರಮೇಶ್​ ಜಾರಕಿಹೊಳಿ ನಡೆ ಇನ್ನೂ ನಿಗೂಢ!

ಇದು ಅಂತ್ಯವಾಗಬೇಕು. ಈ ರೀತಿ ಬ್ಲ್ಯಾಕ್ ಮಾಡುವ ತಂಡ ಏನಿದೆ ಇದಕ್ಕೆ ಕಠಿಣ ಶಿಕ್ಷೆಯಾಗಬೇಕು. ರಾಜಕೀಯದಲ್ಲಿ ಈ ರೀತಿ ಕೆಟ್ಟ ಸಂಸ್ಕೃತಿ ಆರಂಭವಾದರೆ, ಬ್ಲ್ಯಾಕ್​ಮೇಲ್ ನಿಂದ ಅತ್ಯಂತ ಅಯೋಗ್ಯ ಜನ ಪ್ರತಿನಿಧಿಗಳು ಬರುವುದರಿಂದ ಭ್ರಷ್ಟಾಚಾರ, ಗೂಂಡಾಗಿರಿ, ದಬ್ಬಾಳಿಕೆಗಳಿಗೆ ಕಾರಣವಾಗುತ್ತದೆ.

ಇಂಥ ಎಲ್ಲರ ನಿರ್ಮೂಲನೆಯಾಗಬೇಕು. ಈ ಹಿನ್ನಲೆಯಲ್ಲಿಯೇ ಬಹಳ ದಿನಗಳಿಂದ ನಾನು ಸಿಬಿಐ ತನಿಖೆಗೆ ಆಗ್ರಹಿಸುತ್ತಿದ್ದೇನೆ. ರಾಜ್ಯದಿಂದ ಇದು ಆಗುವಂಥದ್ದಲ್ಲ.  ನಿಷ್ಪಕ್ಷ ಪಾತವಾಗಿ ತನಿಖೆಯಾಗುವುದಿಲ್ಲ. ಇಬ್ಬರು ಪ್ರಭಾವಿ ನಾಯಕರ ಕೈವಾಡ ಇರುವುದರಿಂದ ಮತ್ತು ಇಬ್ಬರೂ ನಾಯಕರ ಸಿಡಿ ಪರಸ್ಪರರ ಬಳಿ ಇರುವುದರಿಂದ ಈ ಕೇಸನ್ನು ಮುಚ್ಚಿ ಹಾಕುತ್ತಾರೆ. ಇಲ್ಲದಿದ್ದರೆ ಕಳೆದ 15 ದಿನಗಳ ವಿದ್ಯಮಾನಗಳ ಫಲಿತಾಂಶ ಶೂನ್ಯವಾಗಲಿದೆ" ಎಂದು ಅವರು ಆರೋಪಿಸಿದರು.
Published by: MAshok Kumar
First published: March 30, 2021, 7:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories