ಯಡಿಯೂರಪ್ಪ ರಾಜೀನಾಮೆ ಕೊಡಲಿ, ನಾವು ಕರ್ನಾಟಕ ಬಂದ್ ಮಾಡ್ತೇವೆ, ಯತ್ನಾಳ್ ಒಬ್ಬ ಹುಚ್ಚ: ವಾಟಾಳ್ ನಾಗರಾಜ್

ಪ್ರತಿಭಟನೆಯಲ್ಲಿ ಸಾ.ರಾ.ಗೋವಿಂದ ಭಾಗಿಯಾಗಿದ್ದರು, ಈ ವೇಳೆ ಮಾತನಾಡಿದ ಅವರು ರಾಜ್ಯ ಸರ್ಕಾರ ಕನ್ನಡಿಗರ ಪರವಾಗಿ ಇರಬೇಕು, ಅದನ್ನು ಬಿಟ್ಟು ಕನ್ನಡಿಗರಿಗೆ ಬೆಳಗಾವಿಯಲ್ಲಿ ಕಿರುಕುಳ ನೀಡುತ್ತಿರುವ ಮರಾಠಿಗರ ಪರವಾಗಿ ಇದೇ. ಇದು ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಪೆಟ್ಟು ಬೀಳಲಿದೆ ಎಂದು ಎಚ್ಚರಿಸಿದರು.

news18-kannada
Updated:November 21, 2020, 8:08 PM IST
ಯಡಿಯೂರಪ್ಪ ರಾಜೀನಾಮೆ ಕೊಡಲಿ, ನಾವು ಕರ್ನಾಟಕ ಬಂದ್ ಮಾಡ್ತೇವೆ, ಯತ್ನಾಳ್ ಒಬ್ಬ ಹುಚ್ಚ: ವಾಟಾಳ್ ನಾಗರಾಜ್
ರಾಮನಗರದಲ್ಲಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.
  • Share this:
ರಾಮನಗರ: ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಮಾಡಿಯೇ ಮಾಡುತ್ತೇವೆ ಎಂದು  ವಾಟಾಳ್ ನಾಗರಾಜ್ ಮತ್ತೊಮ್ಮೆ ಹೇಳಿದ್ದಾರೆ. ರಾಮನಗರದ ಐಜೂರು ವೃತ್ತದಲ್ಲಿ ಗೋಣಿ ಚೀಲ ಹಾಸಿಕೊಂಡು ಬೆಂಗಳೂರು-ಮೈಸೂರು ರಾ.ಹೆದ್ದಾರಿಯಲ್ಲಿ  ಮಲಗಿ ಪ್ರತಿಭಟನೆ ನಡೆಸಿದ ವಾಟಾಳ್ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪರ ಹೋರಾಟಗಾರರು ಸರ್ಕಾರದ ವಿರುದ್ಧ ಚಳವಳಿ ಮಾಡಲಿದ್ದಾರೆ. ಆದರೆ ಈ ಹೋರಾಟಕ್ಕೆ ಸಿಎಂ ಯಡಿಯೂರಪ್ಪನವರ ಬೆದರಿಕೆಗೆ ಯಾರು ಹೆದರಬೇಡಿ. ನಾವು ಸಹ ಶಾಂತಿಯುತವಾಗಿ ಹೋರಾಟ ಮಾಡುತ್ತೇವೆ ಎಂದ ಅವರು, ಮರಾಠಿ ಪ್ರಾಧಿಕಾರವನ್ನು ಈ ಕೂಡಲೇ ತೆಗೆಯಬೇಕು, ಇಲ್ಲದಿದ್ದರೆ ನಾವು ಜೈಲಿಗೆ ಹೋಗ್ತೇವೆ. ಯಡಿಯೂರಪ್ಪ ಒಬ್ಬರೇ ಸರ್ಕಾರ ನಡೆಸಲಿ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದರು.

ರಾಜ್ಯ ಸರ್ಕಾರ ಕನ್ನಡ ಪರ ಪ್ರಾಧಿಕಾರ ರಚನೆ ಮಾಡಲಿ. ಅದನ್ನ ಬಿಟ್ಟು ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಮರಾಠ ಪ್ರಾಧಿಕಾರ ರಚನೆ ಮಾಡಿದ್ದಾರೆ. ಸಿಎಂ ಯಡಿಯೂರಪ್ಪ ಈ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದರು.

ಇದನ್ನು ಓದಿ: ಜನವರಿಯಿಂದ ಜಿಲ್ಲಾಸ್ಪತ್ರೆಗಳಲ್ಲಿ ಎಲ್ಲ ಪರೀಕ್ಷೆ ಉಚಿತ; ಆರೋಗ್ಯ ಸಚಿವ ಕೆ.ಸುಧಾಕರ್

ಯತ್ನಾಳ್ ಒಬ್ಬ ಹುಚ್ಚ, ಅವನನ್ನು ನಿಮಾನ್ಸ್ ಗೆ ಸೇರಿಸುತ್ತೇವೆ

ಇದೇ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಟಾಳ್ ನಾಗರಾಜ್ ಆಕ್ರೋಶ ಹೊರಹಾಕಿದರು. ಯತ್ನಾಳ್ ಅವನೊಬ್ಬ ಹುಚ್ಚ, ಹಾಗಾಗಿ ಅವನ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ. ಈ ಹಿಂದೆ ಯಡಿಯೂರಪ್ಪ ವಿರುದ್ಧವಾಗಿಯೂ ಮಾತನಾಡಿದ್ದ, ಹಾಗಾಗಿ ನಾವು ಅವನನ್ನು ನಿಮಾನ್ಸ್ ಗೆ ಸೇರಿಸಲು ನಿರ್ಧರಿಸಿದ್ದೇವೆ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಸಾ.ರಾ.ಗೋವಿಂದ ಭಾಗಿಯಾಗಿದ್ದರು, ಈ ವೇಳೆ ಮಾತನಾಡಿದ ಅವರು ರಾಜ್ಯ ಸರ್ಕಾರ ಕನ್ನಡಿಗರ ಪರವಾಗಿ ಇರಬೇಕು, ಅದನ್ನು ಬಿಟ್ಟು ಕನ್ನಡಿಗರಿಗೆ ಬೆಳಗಾವಿಯಲ್ಲಿ ಕಿರುಕುಳ ನೀಡುತ್ತಿರುವ ಮರಾಠಿಗರ ಪರವಾಗಿ ಇದೇ. ಇದು ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಪೆಟ್ಟು ಬೀಳಲಿದೆ ಎಂದು ಎಚ್ಚರಿಸಿದರು.

ವರದಿ; ಎ.ಟಿ. ವೆಂಕಟೇಶ್
Published by: HR Ramesh
First published: November 21, 2020, 8:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading