• Home
  • »
  • News
  • »
  • district
  • »
  • ಯಡಿಯೂರಪ್ಪ ನಮ್ಮ ದೇವರು, ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ; ಮಾಜಿ ಸಚಿವ ಬಾಬುರಾವ್ ಚಿಂಚನಸೂರು

ಯಡಿಯೂರಪ್ಪ ನಮ್ಮ ದೇವರು, ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ; ಮಾಜಿ ಸಚಿವ ಬಾಬುರಾವ್ ಚಿಂಚನಸೂರು

ಮಾಜಿ ಸಚಿವ ಬಾಬುರಾವ ಚಿಂಚನಸೂರು.

ಮಾಜಿ ಸಚಿವ ಬಾಬುರಾವ ಚಿಂಚನಸೂರು.

ಹಿಂದುಳಿದ ಸಮಾಜದ ಜನರು ನಾವೆಲ್ಲ ಒಂದಾಗಬೇಕು. ಎಲ್ಲಾ ಸಮಾಜದವರು ಒಗ್ಗಟ್ಟಿನಿಂದ ಇರಬೇಕು. ಎಲ್ಲರೂ ಒಗ್ಗಟ್ಟಿನಿಂದ ಸಹೋದರ ಭಾವನೆಯಿಂದ ಇರಬೇಕು. ನಾವೆಲ್ಲರೂ ಒಂದೇ ಕುಟುಂಬದ ಬಂಧುಗಳಂತೆ ಒಗ್ಗಟ್ಟಿನಿಂದ ಇದ್ದು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಬದುಕು ಸಾಗಿಸಬೇಕೆಂದು ಚಿಂಚನಸೂರು ಅವರು ಕಿವಿ ಮಾತು ಹೇಳಿದರು.

ಮುಂದೆ ಓದಿ ...
  • Share this:

ಯಾದಗಿರಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಮ್ಮ ನೇತಾ, ಗುರು ಹಾಗೂ ನನ್ನ ಪಾಲಿನ ದೇವರು ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಹೇಳಿದ್ದಾರೆ. ಅವರು ಯಾದಗಿರಿ ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರಾಜ್ಯದ ಅಭಿವೃದ್ಧಿ ಕನಸನ್ನು ಹೊತ್ತು ಅನೇಕ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಕೋಲಿ ಸಮಾಜದ ಜನರ ಅಭಿವೃದ್ಧಿಗಾಗಿ ಅನುದಾನ ನೀಡಿದ್ದಾರೆ. ಕೋಲಿ ಸಮಾಜವನ್ನು ಎಸ್​ಟಿಗೆ ಸೇರಿಸಲು ರಾಜ್ಯ ಸರಕಾರದ ಸಹಕಾರದಿಂದ ನನ್ನ ಉಸಿರು ಇರುವರೆಗೂ ಹೋರಾಟ ಮಾಡುತ್ತೇನೆ. ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ದೆಹಲಿಗೆ ತೆರಳಿ ಕೋಲಿ ಸಮಾಜವನ್ನು ಎಸ್ ಟಿ ಸೇರಿಸಲು ಮಾತುಕತೆ ನಡೆಸುತ್ತೇವೆ ಎಂದರು. 


ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷದಲ್ಲಿದ್ದು ಜನರ ಸೇವೆ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ. ನಾನು ಯಡಿಯೂರಪ್ಪ ಅವರ ಅನುಯಾಯಿಯಾಗಿದ್ದೇನೆ. ಸಚಿವ ಸಂಪುಟದಲ್ಲಿ ಸಮಸ್ತ ಕುಲ ಬಾಂಧವರಿಗೆ ಸಿಎಂ ಆದ್ಯತೆ ನೀಡಿದ್ದಾರೆ. ನಾನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತರು ಸಿಎಂ ಯಡಿಯೂರಪ್ಪ ನನಗೆ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಸ್ಥಾನ ನೀಡಿ‌ ಕೋಲಿ ಸಮಾಜಕ್ಕೆ ನ್ಯಾಯ ಒದಗಿಸಿದ್ದಾರೆ. ಎಲ್ಲಾ ಸಾಧಕ- ಬಾಧಕವನ್ನು ತಿಳಿದುಕೊಂಡು ಮಂತ್ರಿ ಮಂಡಲ ವಿಸ್ತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕೋಲಿ ಸಮಾಜಕ್ಕೆ ಆದ್ಯತೆ ಸಿಗಲಿದೆ  ಎಂದರು.


ಇದನ್ನು ಓದಿ: ಖಾತೆ ಹಂಚಿಕೆ ಅಸಮಾಧಾನ, ಸಚಿವ ಸಂಪುಟ ಸಭೆಗೆ ಗೈರು; ಸಿಎಂ ಮಾತನಾಡಿ ಸರಿಪಡಿಸುತ್ತಾರೆ ಎಂದ ಬೊಮ್ಮಾಯಿ


ಶಕುನಿಗಳು ಕಾಡುತ್ತಿದ್ದಾರೆ....!


ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನವರೇ ನನಗೆ ಕುತಂತ್ರ ಬುದ್ದಿಯಿಂದ ಸೋಲಿಸಿದ್ದಾರೆ. ನಾನು ಗೆದ್ದಿದ್ದರೆ ಪವರ್ ಫುಲ್ ಮಂತ್ರಿಯಾಗಿರುತ್ತಿದೆ. ಕೊವೀಡ್ ಸಂಕಷ್ಟ ಸಂದರ್ಭದಲ್ಲಿ ನನಗೆ ಕೊರೋನಾ ಬಂದು ಸಾಯಲಿ ಎಂದು ಬಹಳ ಮಂದಿ ಪ್ರಾರ್ಥನೆ ಮಾಡಿದ್ದಾರೆ. ಆದರೆ, ಕುತಂತ್ರಿಗಳ ಪ್ರಾರ್ಥನೆ ಫಲ ಕೊಟ್ಟಿಲ್ಲ. ಭಗವಂತ ಹಾಗೂ ಜನರ ಕೃಪೆಯಿಂದ ನಾನು ಉಳಿದು ಬಂದಿದ್ದೇನೆ. ದೇವರ ಹಾಗೂ ಜನರ ಆಶೀರ್ವಾದ ನನ್ನ ಮೇಲೆ ಇರುವರೆಗೂ ನನಗೆ ಏನು ಆಗಲ್ಲ.ಕೋಲಿ ಸಮಾಜವನ್ನು ಎಸ್​ಟಿ ಸೇರಿಸಿ ನಾನು ಪ್ರಾಣ ಬಿಡುತ್ತೇನೆ ಎಂದು ಚಿಂಚನಸೂರು ಭಾವುಕರಾದರು.


ಕೋಲಿ ಸಮಾಜದ ಅಭಿವೃದ್ಧಿಗಾಗಿ ನಾನು ಬದ್ದನಾಗಿದ್ದೆನೆ. ಸಮಾಜದ ಜನರು ಬಡವರಾಗಿದ್ದಾರೆ. ಪ್ರತಿಯೊಬ್ಬರು ಉತ್ತಮ‌ ಶಿಕ್ಷಣ ಪಡೆಯಬೇಕು. ಶಿಕ್ಷಣ ಪಡೆದರೆ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ. ಸರಕಾರ ಕೂಡ ಅನೇಕ ಸೌಲಭ್ಯಗಳನ್ನು ಜಾರಿಗೆ ತಂದಿದೆ. ಸರಕಾರದ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿ ಕಾಣಬೇಕು. ಹಿಂದುಳಿದ ಸಮಾಜದ ಜನರು ನಾವೆಲ್ಲ ಒಂದಾಗಬೇಕು. ಎಲ್ಲಾ ಸಮಾಜದವರು ಒಗ್ಗಟ್ಟಿನಿಂದ ಇರಬೇಕು. ಎಲ್ಲರೂ ಒಗ್ಗಟ್ಟಿನಿಂದ ಸಹೋದರ ಭಾವನೆಯಿಂದ ಇರಬೇಕು. ನಾವೆಲ್ಲರೂ ಒಂದೇ ಕುಟುಂಬದ ಬಂಧುಗಳಂತೆ ಒಗ್ಗಟ್ಟಿನಿಂದ ಇದ್ದು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಬದುಕು ಸಾಗಿಸಬೇಕೆಂದು ಚಿಂಚನಸೂರು ಅವರು ಕಿವಿ ಮಾತು ಹೇಳಿದರು.

Published by:HR Ramesh
First published: