ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 12 ವರ್ಷಗಳ ನಂತರ ಮತ್ತೆ ಶಂಕು ಸ್ಥಾಪನೆ; ಈ ಬಾರಿಯಾದರೂ ನನಸಾಗುತ್ತಾ ಕನಸು?

ಯಡಿಯೂರಪ್ಪ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಮತ್ತೆ ಚಾಲನೆ ನೀಡಿದ್ದಾರೆ. ತಾವು ಚಾಲನೆ ನೀಡಿದ್ದ ಕಾಮಗಾರಿ ಪೂರ್ಣಗೊಳಿಸಬೇಕು, ತವರು ಜಿಲ್ಲೆಗೆ ವಿಮಾನ ನಿಲ್ದಾಣ ಆಗಬೇಕು ಎಂಬ ಉದ್ದೇಶದಿಂದ ಈಗ ಮತ್ತೇ ಕಾಮಗಾರಿಗೆ ಚಾಲನೆ ಕೊಟ್ಟಿದ್ದಾರೆ. ವಿಮಾನ ನಿಲ್ದಾಣ ಯೋಜನೆಗಾಗಿ 200 ಕೋಟಿ ಹಣ ಸಹ ಮೀಸಲಿಟ್ಟಿದ್ದಾರೆ.   

ಶಿವಮೊಗ್ಗದ ವಿಮಾನ ನಿಲ್ದಾಣದ ಪ್ರದೇಶದಲ್ಲಿ ಸಂಸದ ಬಿ.ವೈ. ರಾಘವೇಂದ್ರ.

ಶಿವಮೊಗ್ಗದ ವಿಮಾನ ನಿಲ್ದಾಣದ ಪ್ರದೇಶದಲ್ಲಿ ಸಂಸದ ಬಿ.ವೈ. ರಾಘವೇಂದ್ರ.

  • Share this:
ಶಿವಮೊಗ್ಗ (ಜೂನ್ 15); ಮಲೆನಾಡು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣದ ನಿರ್ಮಾಣಕ್ಕೆ 12 ವರ್ಷದ ಹಿಂದೆ ಶಂಕುಸ್ಥಾಪನೆ ಮಾಡಲಾಗಿತ್ತು. ಆದರೆ, ಆರಂಭಗೊಂಡಿದ್ದ ಕಾಮಗಾರಿ ಮಾತ್ರ ಕಾರಣಾಂತರಗಳಿಂದ ಸ್ಥಗಿತವಾಗಿತ್ತು. ವಿಮಾನ ನಿಲ್ದಾಣವೂ ಮಲೆನಾಡಿನ ಕೈತಪ್ಪಿತ್ತು. ಆದರೆ, ಇಂದು ಸಿಎಂ ಬಿ.ಎಸ್‌. ಯಡಿಯೂರಪ್ಪ ವಿಮಾನ ನಿಲ್ದಾಣ ಕಾಮಗಾರಿಗೆ ಗೃಹ ಕಚೇರಿ ಕೃಷ್ಣದಿಂದಲೇ ಭೂಮಿ ಪೂಜೆ ನೆರವೇರಿಸಿದ್ದಾರೆ. ಹೀಗಾಗಿ ನಿರೀಕ್ಷಿತ ಯೋಜನೆಯೊಂದು ಈ ಬಾರಿಯಾದರೂ ಪೂರ್ಣಗೊಳ್ಳುತ್ತಾ? ಮಲೆನಾಡಿನ ಕನಸು ನನಸಾಗುತ್ತಾ? ಎಂದು ಕಾಯುತ್ತಿದ್ದಾರೆ ಜಿಲ್ಲೆಯ ಜನ. 

2006-08ರ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಸ್ಥಾಪನೆಗೆ ಯೋಜನೆ ರೂಪಿಸಲಾಗಿತ್ತು. ಇದಕ್ಕೆಂದು ಶಿವಮೊಗ್ಗ ಸಮೀಪದ ಸೋಗಾನೆ ಬಳಿ ವಿಮಾನ ನಿಲ್ದಾಣ ಕಾಮಗಾರಿ ಮಾಡಬೇಕು ಎಂಬ ತಿರ್ಮಾನ ಸಹ ಮಾಡಲಾಗಿತ್ತು. ನಂತರದಲ್ಲಿ ಯಡಿಯೂರಪ್ಪ ಸಿಎಂ ಆದ ಮೇಲೆ 2008 ರಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕು ಸ್ಥಾಪನೆ ನೆರೆವೇರಿಸಿದ್ದರು.

12 ವರ್ಷಗಳು ಕಳೆಯತ್ತಾ ಬಂದರೂ ಇನ್ನು ವಿಮಾನ ನಿಲ್ದಾಣ ಸಿದ್ಧವಾಗಿಲ್ಲ.  2008 ರಲ್ಲಿ ಭರದಿಂದಲೇ ಕಾಮಗಾರಿ ಸಾಗಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಇನ್ನೇನು ಒಂದೆರಡು ವರ್ಷದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡು ವಿಮಾನ ಹಾರಾಟ ನಡೆಸಲಿವೆ ಎಂದು ಜನರು ಭಾವಿಸಿದ್ದರು. ಅದರೆ, ಯಡಿಯೂರಪ್ಪ ಅಧಿಕಾರದಿಂದ ಕೆಳಗೆ ಇಳಿದ ನಂತರ ವಿಮಾನ ನಿಲ್ದಾಣ ಕಾಮಗಾರಿ ವೇಗಕ್ಕೆ ಕಡಿವಾಣ ಬಿತ್ತು. ಹಲವಾರು ಕಾರಣಗಳಿಂದ ನಂತರದಲ್ಲಿ ಕಾಮಗಾರಿ ಸಂಪೂರ್ಣವಾಗಿ ನಿಂತೇ ಹೋಯಿತು.

ಯಡಿಯೂರಪ್ಪ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಮತ್ತೆ ಚಾಲನೆ ನೀಡಿದ್ದಾರೆ. ತಾವು ಚಾಲನೆ ನೀಡಿದ್ದ ಕಾಮಗಾರಿ ಪೂರ್ಣಗೊಳಿಸಬೇಕು, ತವರು ಜಿಲ್ಲೆಗೆ ವಿಮಾನ ನಿಲ್ದಾಣ ಆಗಬೇಕು ಎಂಬ ಉದ್ದೇಶದಿಂದ ಈಗ ಮತ್ತೇ ಕಾಮಗಾರಿಗೆ ಚಾಲನೆ ಕೊಟ್ಟಿದ್ದಾರೆ. ವಿಮಾನ ನಿಲ್ದಾಣ ಯೋಜನೆಗಾಗಿ 200 ಕೋಟಿ ಹಣ ಸಹ ಮೀಸಲಿಟ್ಟಿದ್ದಾರೆ.

ಈ ಹಿಂದೆ ನಡೆದ ಕಾಮಗಾರಿಯಲ್ಲಿ  ಕೇವಲ ಭೂಮಿಯನ್ನು ಮಾತ್ರ ಲೆವೇಲ್ ಮಾಡಲಾಗಿದೆ ಅಷ್ಟೇ. ಈಗ ಮತ್ತೇ ಹೊಸದಾಗಿ ಆರಂಭ ಹಂತದಿಂದಲೇ ಕಾಮಗಾರಿ ಕೆಲಸ ಶುರು ಆಗಬೇಕಿದೆ. 8 ತಿಂಗಳಿನಿಂದ 1 ವರ್ಷದ ಒಳಗೆ ವಿಮಾನ ನಿಲ್ದಾಣ ಕಾಮಗಾರಿ ಮುಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಇನ್ನು ವಿಮಾನ ನಿಲ್ದಾಣಕ್ಕೆ ಭೂಮಿ ಕೊಟ್ಟ ರೈತರು, ಅದಷ್ಟು ಬೇಗ ಕಾಮಗಾರಿ ಮುಗಿಸಿ, ಈ ಭಾಗದ ಅಭಿವೃದ್ಧಿ ಮಾಡಿ ಎಂದು ಕೋರಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಕೊರೋನಾ ರೋಗಿಗಳ ಸಾವಿನ ಪ್ರಮಾಣ ಶೇ.1.2 ಹೀಗಾಗಿ ಜನ ಭಯಪಡುವ ಅಗತ್ಯ ಇಲ್ಲ; ಬಿ.ಎಸ್‌. ಯಡಿಯೂರಪ್ಪ

ಅತಿ ಕಡಿಮೆ ಹಣಕ್ಕೆ ರೈತರು ಈ ಹಿಂದೆ ಸರ್ಕಾರಕ್ಕೆ ಭೂಮಿ ನೀಡಿದ್ದಾರೆ. ಅದಕ್ಕೆ ನ್ಯಾಯ ಒದಗಿಸಿಕೊಡುವ ಕೆಲಸ ಆಗಬೇಕಾದರೆ ವಿಮಾನ ನಿಲ್ದಾಣ ಈ ಭಾಗದಲ್ಲಿ ಪೂರ್ಣಗೊಳ್ಳಲೇಬೇಕಿದೆ. ವಿಮಾನ ನಿಲ್ದಾಣ ಬಂದರೆ ಕೈಗಾರಿಕೆಗಳ ಅಭಿವೃದ್ಧಿ ಆಗುತ್ತೇ. ಹೊಸ ಹೊಸ ಕೈಗಾರಿಕೆಗಳ ಸ್ಥಾಪನೆಗೆ  ಪ್ರೋತ್ಸಾಹ ಸಿಗುತ್ತೇ ಎಂದು ಎಂಬ ಆಶಾ ಭಾವನೆ ಜಿಲ್ಲೆಯ ಜನರಲ್ಲಿದೆ.
First published: