CM Visit To Chamarajanagara: ಚಾಮರಾಜನಗರಕ್ಕೆ ಭೇಟಿ ನೀಡಿ ಅಧಿಕಾರ ಕಳೆದುಕೊಂಡ ಸಿಎಂಗಳಿಗಿಂತ ಭೇಟಿ ನೀಡದೆ ಪದಚ್ಯುತಿಗೊಂಡ ಸಿಎಂಗಳೇ ಹೆಚ್ಚು!

ಹೆಚ್.ಡಿ.ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಅವರು ಮಾತ್ರ ಮೂಢನಂಬಿಕೆಗೆ ಸೊಪ್ಪು ಹಾಕದೆ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಅದರಲ್ಲು ಸಿದ್ದರಾಮಯ್ಯ ಅವರಂತು 11 ಬಾರಿ ಇಲ್ಲಿಗೆ ಭೇಟಿ ನೀಡಿ ಮೂಢನಂಬಿಕೆಯನ್ನು ಹೊಸಕಿ ಹಾಕಿದರು.

ಚಾಮರಾಜನಗರ ಜಿಲ್ಲಾಡಳಿತ

ಚಾಮರಾಜನಗರ ಜಿಲ್ಲಾಡಳಿತ

  • Share this:
ಚಾಮರಾಜನಗರ (ಅ.02): ಚಾಮರಾಜನಗರಕ್ಕೆ ಮುಖ್ಯ ಮಂತ್ರಿಗಳು ಭೇಟಿ ನೀಡಿದ ಆರು ತಿಂಗಳ ಒಳಗೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಇದೆ. (Who CM Visti Chamarajanagara They Lost Power Superstition) ಇದು ಯಾರೋ ‌ಕಿಡಿಗೇಡಿಗಳು ಕುಚೋದ್ಯಕ್ಕಾಗಿ ಇಂತಹ ಒಂದು  ಮೂಢನಂಬಿಕೆ ಹುಟ್ಟುಹಾಕಿದ್ದು, ಇದನ್ನೇ ನಂಬಿದ ಹಲವಾರು ಮುಖ್ಯಮಂತ್ರಿಗಳು ಚಾಮರಾಜನಗರದತ್ತ ತಲೆಯನ್ನೇ ಹಾಕಲಿಲ್ಲ. ಅಧಿಕಾರ ಕಳೆದುಕೊಂಡಿದ್ದು ಕೇವಲ ಕಾಕತಾಳೀಯವಷ್ಟೇ. ಇಲ್ಲಿಗೆ ಬಂದು ಅಧಿಕಾರ ಕಳೆದು ಕೊಂಡವರಿಗಿಂತ ಬಾರದೆ ಅಧಿಕಾರ ಕಳೆದುಕೊಂಡವರೇ ಹೆಚ್ಚು.

ಹೆಚ್. ಡಿ.ಕುಮಾರಸ್ವಾಮಿ, (HD Kumaraswamy) ಜಗದೀಶ್ ಶೆಟ್ಟರ್, (Jagadeesh Shetter) ಸಿದ್ದರಾಮಯ್ಯ (Siddaramaiah) ಅವರು ಮಾತ್ರ ಮೂಢನಂಬಿಕೆಗೆ ಸೊಪ್ಪು ಹಾಕದೆ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಅದರಲ್ಲು ಸಿದ್ದರಾಮಯ್ಯ ಅವರಂತು 11 ಬಾರಿ ಇಲ್ಲಿಗೆ ಭೇಟಿ ನೀಡಿ ಮೂಢನಂಬಿಕೆಯನ್ನು ಹೊಸಕಿ ಹಾಕಿದರು. ಆದರೂ ಈ ಮೂಢನಂಬಿಕೆ ಎಂಬ ಪೆಡಂಭೂತ ಅಧಿಕಾರಸ್ಥ ರಾಜಕಾರಣಿಗಳನ್ನು ಇನ್ನೂ ಕಾಡತೊಗಿದೆ. ಇದೀಗ ಚಾಮರಾಜನಗರದಲ್ಲಿ ನಿರ್ಮಾಣಗೊಂಡಿರುವ ನೂತನ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆ ಉದ್ಘಾಟನೆಗಾಗಿ ಅಕ್ಟೋಬರ್ 7 ರಂದು ಚಾಮರಾಜನಗರಕ್ಕೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai Visti Chamarajanagara On October 7th) ಭೇಟಿ ನೀಡುತ್ತಿದ್ದು ಸಿದ್ದರಾಮಯ್ಯ ಅವರ ನಂತರ  ಉತ್ತಮ ಬೆಳವಣಿಗೆಯೊಂದಕ್ಕೆ ನಾಂದಿ ಹಾಡಲು ಹೊರಟಿರುವುದು ಸಮಾಧಾನಕರ ಅಂಶ ವಾಗಿದೆ.

ಬಸವರಾಜ ಬೊಮ್ಮಾಯಿ ತಂದೆ ಎಸ್ ಆರ್ ಬೊಮ್ಮಾಯಿ ಮೊದಲ ಭೇಟಿ

1988 ರಲ್ಲಿ  ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್ ಬೊಮ್ಮಾಯಿ ಭೇಟಿ ನೀಡಿ ಇಲ್ಲಿನ ಮಿನಿ ವಿಧಾನಸೌಧ, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಗಳನ್ನು ಉದ್ಘಾಟಿಸಿದ್ದರು. ಆದರೆ ಅವರು ಇಲ್ಲಿಂದ ಹೋದ ಕೆಲವೇ ತಿಂಗಳಲ್ಲಿ ಹಲವು ರಾಜಕೀಯ ಕಾರಣಗಳಿಂದಾಗಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ಅದೇ ರೀತಿ ನಂತರ ಮುಖ್ಯಮಂತ್ರಿಯಾದ ವೀರೇಂದ್ರಪಾಟೀಲ್ ಸಹ ಚಾಮರಾಜನಗರಕ್ಕೆ ಬಂದು ಹೋದ ನಂತರ ಬೇರೆ ಬೇರೆ ರಾಜಕೀಯ ಕಾರಣಗಳಿಗೆ ಅಧಿಕಾರ ಕಳೆದುಕೊಂಡರು. ಆದರೆ ಅದರ ಅಪಖ್ಯಾತಿಯನ್ನು ಚಾಮರಾಜನಗರಕ್ಕೆ ಅಂಟಿಸಲಾಯಿತು.

ಆದರೆ ಚಾಮರಾಜನಗರಕ್ಕೆ ಬಂದು ಅಧಿಕಾರ ಕಳೆದುಕೊಂಡವರಿಗಿಂತ ಇಲ್ಲಿಗೆ ಬಾರದೇ ಅಧಿಕಾರ ಕಳೆದುಕೊಂಡವರೇ ಹೆಚ್ಚು. ಬಂಗಾರಪ್ಪ, ವೀರಪ್ಪಮೊಯ್ಲಿ, ಹೆಚ್.ಡಿ.ದೇವೇಗೌಡ, ಜೆ.ಹೆಚ್ ಪಟೇಲ್, ಎಸ್.ಎಂ.ಕೃಷ್ಣ, ಧರ್ಮಸಿಂಗ್, ಯಡಿಯೂರಪ್ಪ, ಸದಾನಂದಗೌಡ ಸಿಎಂ ಆಗಿದ್ದಾಗ ಚಾಮರಾಜನಗರ ಬಾರಲೇ ಇಲ್ಲ. ಆದರೂ ಅಧಿಕಾರದಲ್ಲಿ ಉಳಿಯಲಿಲ್ಲ. ಆದರೆ 2013 ರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಮೂಢನಂಬಿಕೆಗೆ ಸೆಡ್ಡುಹೊಡೆದು  11 ಬಾರಿ ಚಾಮರಾಜನಗರಕ್ಕೆ  ಬಂದರು. ಅವರ ಅಧಿಕಾರ ಹೋಗಲಿಲ್ಲ. ಹಾಗಾಗಿ ಅಧಿಕಾರ ಕಳೆದುಕೊಳ್ಳುವುದಕ್ಕು ಚಾಮರಾಜನಗರಕ್ಕು ಯಾವುದೇ ಸಂಬಂಧವಿಲ್ಲ. ಒಂದು ವೇಳೆ ಯಾವುದೇ ಮುಖ್ಯಮಂತ್ರಿ ಚಾಮರಾಜನಗರಕ್ಕೆ ಬಂದು ಹೋದ ನಂತರ  ಅವರ ಅಧಿಕಾರ ಹೋಗಿದ್ದರೆ ಕೇವಲ ಕಾಕತಾಳೀಯವಷ್ಟೇ ಎನ್ನುತ್ತಾರೆ ಬರಹಗಾರ ಲಕ್ಷ್ಮೀನರಸಿಂಹ.

ಮಗ ಬಸವರಾಜ ಬೊಮ್ಮಾಯಿ ಅವರ ಭೇಟಿ

1988 ರಲ್ಲಿ  ಅಪ್ಪ ಎಸ್.ಆರ್.ಬೊಮ್ಮಾಯಿ ಚಾಮರಾಜನಗರಕ್ಕೆ ಭೇಟಿದ್ದರು. ಈಗ  ಅವರ ಪುತ್ರ ಬಸವರಾಜ ಬೊಮ್ಮಾಯಿ ಅಕ್ಟೋಬರ್ 7 ರಂದು  ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆ ಉದ್ಘಾಟಿಸಲು ಬರುತ್ತಿದ್ದಾರೆ. ಮುಖ್ಯಮಂತ್ರಿ  ಭೇಟಿ ನೀಡುತ್ತಿರುವುದರಿಂದ ಸಹಜವಾಗಿಯೇ ಚಾಮರಾಜನಗರ ಜನತೆಯಲ್ಲಿ ಅಭಿವೃದ್ಧಿಯ ನಿರೀಕ್ಷೆ ಹೆಚ್ಚಾಗಿದೆ.

ಇದನ್ನು ಓದಿ: DK Shivakumar: ಜೆಡಿಎಸ್ ಅಲ್ಪಸಂಖ್ಯಾತರನ್ನು ನಿಲ್ಲಿಸಿ Political Strategy ಮಾಡಿದೆ; ಡಿ.ಕೆ. ಶಿವಕುಮಾರ್

ವಿಶೇಷ ಪ್ಯಾಕೇಜ್ ಘೋಷಣೆ ನಿರೀಕ್ಷೆ

ಸಿದ್ದರಾಮಯ್ಯ ಅವರಂತೆ ಚಾಮರಾಜನಗರಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕು. ಆ ಮೂಲಕ ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ನೆನಪಿನಲ್ಲಿ ಉಳಿಯುವಂತಹ ಕೊಡುಗೆ ನೀಡಬೇಕು, ಈಗ ಚಾಮರಾಜನಗರದಲ್ಲಿ ಕೆಲವೆಡೆ ಉತ್ತಮವಾಗಿ ನಿರ್ಮಾಣಗೊಂಡಿರುವ ರಸ್ತೆಗಳು,  ಸರ್ಕಾರಿ ಮೆಡಿಕಲ್ ಕಾಲೇಜು, 297 ಹಳ್ಳಿಗಳಿಗೆ ನದಿ ಮೂಲದಿಂದ ಕುಡಿಯುವ ನೀರಿನ ಯೋಜನೆ, ಕೆರೆಗಳನ್ನು ತುಂಬಿಸುವ ಮುಂದುವರಿದ ಯೋಜನೆಗಳು, ಕೈಗಾರಿಕಾ ವಸಾಹತು ಅಭಿವೃದ್ಧಿ ಕೆಲಸಗಳು ಹೇಗೆ ಸಿದ್ದರಾಮಯ್ಯ ಅವರ ಹೆಸರು ಹೇಳುತ್ತಿವೆಯೋ ಅದೇ ರೀತಿ ಬಸವರಾಜ ಬೊಮ್ಮಾಯಿ ಅವರು  ಇಲ್ಲಿನ  ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಒತ್ತು ನೀಡಬೇಕು. ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕು. ಆ ಮೂಲಕ  ಜಿಲ್ಲೆಯ  ಅಭಿವೃದ್ಧಿಗೆ ಸಿದ್ದರಾಮಯ್ಯ ಅವರಂತೆ ನೆನಪಲ್ಲಿ ಉಳಿಯುವ ಕೆಲಸ ಮಾಡಬೇಕು ಎಂಬುದು ಸಾರ್ವಜನಿಕರ ಆಶಯವಾಗಿದ್ದುಮುಖ್ಯಮಂತ್ರಿಗಳ ಚಾಮರಾಜನಗರ ಭೇಟಿ ಅಪಾರ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ವರದಿ: ಎಸ್.ಎಂ.ನಂದೀಶ್
Published by:HR Ramesh
First published: