Haveri: ಮೃತ ವಿದ್ಯಾರ್ಥಿ ನವೀನ್ ಮನೆಗೆ ಸಿಎಂ ಬೊಮ್ಮಾಯಿ ಭೇಟಿ, ಕುಟುಂಬಸ್ಥರಿಗೆ 25 ಲಕ್ಷ ಚೆಕ್ ಹಸ್ತಾಂತರ

ಹಾವೇರಿಯಲ್ಲಿ ನವೀನ್ ಕುಟುಂಬಸ್ಥರನ್ನು ಭೇಟಿ ಮಾಡಿದ ಸಿಎಂ ಬಸವರಾಜ್​ ಬೊಮ್ಮಾಯಿ, ನವೀನ್​ ತಂದೆ ಗ್ಯಾನಗೌಡರ್​ ಅವರಿಗೆ 25 ಲಕ್ಷ ಚೆಕ್​ ಹಸ್ತಾಂತರಿಸಿದ್ದಾರೆ

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

  • Share this:
ಹಾವೇರಿ (ಮಾ.5): ರಷ್ಯಾ (Russia) ಹಾಗೂ ಉಕ್ರೇನ್ (Ukrain)​ ನಡುವೆ ನಡೆಯುತ್ತಿರೋ ಯುದ್ಧದ ವೇಳೆ ಉಕ್ರೇನ್​ನಲ್ಲಿ ಸಾವನ್ನಪ್ಪಿದ MBBS ವಿದ್ಯಾರ್ಥಿ ನವೀನ್​  (Naveen) ಮನೆಗೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai)ಭೇಟಿ ನೀಡಿದ್ದಾರೆ. ಹಾವೇರಿ (Haveri) ಜಿಲ್ಲೆ ಚಳಗೇರುಗೆಯಲ್ಲಿರೋ ನವೀನ್ ಪೋಷಕರನ್ನು ಭೇಟಿಯಾದ ಸಿಎಂ ಬೊಮ್ಮಾಯಿ ಅವರಿಗೆ ಸಾಂತ್ವನ ಹೇಳಿದ್ರು. ಇದೇ ವೇಳೆ ಮೃತ ನವೀನ್​ ಭಾವಚಿತ್ರಕ್ಕೆ ಪುಪ್ಪಾರ್ಪಣೆ ಮಾಡಿದ್ರು. ಇದೇ ವೇಳೆ ಸರ್ಕಾರದಿಂದ ಪರಿಹಾರ ಘೋಷಿಸಿದ್ದಾರೆ. ನವೀನ್​ ತಂದೆ ಗ್ಯಾನಗೌಡರ್​ಗೆ 25 ಲಕ್ಷದ ಪರಿಹಾರದ ಚೆಕ್​ ನೀಡಿದ್ದಾರೆ. ಮಗ ನವೀನ್​ನನ್ನು ಕಳೆದುಕೊಂಡ ಪೋಷಕರು ಸಿಎಂ ಬಳಿ ತಮ್ಮ ಮಗನ ಶವವನ್ನು ತರಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಸಚಿವ ಬಿ.ಸಿ.ಪಾಟೀಲ, ಸಂಸದ ಶಿವಕುಮಾರ್ ಉದಾಸಿ, ಮಾಜಿ ಸಂಸದ ಐ.ಜಿ.ಸನದಿ ಮತ್ತಿತರರ ಉಪಸ್ಥಿತರಿದ್ರು.

ನವೀನ್​ ಕುಟುಂಬಕ್ಕೆ 25 ಲಕ್ಷ ಪರಿಹಾರ

ಹಾವೇರಿಯಲ್ಲಿ ನವೀನ್ ಕುಟುಂಬಸ್ಥರನ್ನು ಭೇಟಿ ಮಾಡಿದ ಸಿಎಂ ಬಸವರಾಜ್​ ಬೊಮ್ಮಾಯಿ ರಾಜ್ಯ ಸರ್ಕಾರದಿಂದ ಪರಿಹಾರ ಘೋಷಿಸಿದ್ದಾರೆ. ಇದೇ ವೇಳೆ 25 ಲಕ್ಷ ರೂಪಾಯಿ ಚೆಕ್  ನೀಡಿದ್ರು. ಪೋಷಕರಿಗೆ ಸಾಂತ್ವನ ಹೇಳಿದ ಬೊಮ್ಮಾಯಿ ನವೀನ್ ತಂದೆ ಗ್ಯಾನಗೌಡರ್​ಗೆ 25 ಲಕ್ಷದ ಚೆಕ್​ ಹಸ್ತಾಂತರಿಸಿದ್ದಾರೆ.

ಮಗ ಮೃತ ದೇಹ ತರಿಸುವಂತೆ ಪೋಷಕರ ಮನವಿ

ಮಗ ಸತ್ತು ದಿನಗಳೇ ಕಳೆದು ಹೋಗ್ತಿದ್ದೆ. ಆದ್ರೂ ಕೊನೆ ಬಾರಿ ಅವನ ಮುಖ ನೋಡಲು ಆಗ್ತಿಲ್ಲ. ಪೋಷಕರು ಕಣ್ಣೀರು ಹಾಕುತ್ತಾ ಕುಳಿತ್ತಿದ್ದಾರೆ. ಒಮ್ಮೆಯಾದ್ರು ನನ್ನ ಮಗನ ಮುಖ ನೋಡಲೇ ಬೇಕೆಂದು ತಾಯಿ ಮನಸ್ಸು ಮರುಗುತ್ತಿದೆ.  ತಮ್ಮ ಮಗನ ಶವ ತರಿಸಿಕೊಡುವಂತೆ ನವೀನ್ ತಂದೆ ಗ್ಯಾನಗೌಡರ್, ಸಿಎಂ ಬಸವರಾಜ ಬೊಮ್ಮಾಯಿ ಬಳಿ ಮನವಿ ಮಾಡಿಕೊಂಡ್ರು.  ಉಕ್ರೇನ್ ನಲ್ಲಿ ಸಿಲುಕಿರೋ ಇತರೆ ವಿದ್ಯಾರ್ಥಿಗಳನ್ನೂ ಸುರಕ್ಷಿತವಾಗಿ ಕರೆತರುವಂತೆ ಗ್ರಾಮಸ್ಥರು ಸಹ ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ಸರ್ಕಾರ ಎಲ್ಲಾ ವ್ಯವಸ್ಥೆ ಮಾಡ್ತಿದೆ ಇನ್ನಷ್ಟು ಅಗತ್ಯ ಕ್ರಮ ಕೈಗೊಳ್ಳೋದಾಗಿ  ಗ್ರಾಮಸ್ಥರಿಗೆ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಕುಳಿತು ಮಾತನಾಡಿ Mekedatu ವಿವಾದ ಬಗೆಹರಿಸಿಕೊಳ್ಳಿ; ಕರ್ನಾಟಕ-ತಮಿಳುನಾಡಿಗೆ ಕೇಂದ್ರ ಸಚಿವರ ಸಲಹೆ

ನವೀನ್​ ಸಾವು ದುರಂತ ಎಂದ ಸಿಎಂ

ಹಾವೇರಿ ಚಳಗೇರಿಯಲ್ಲಿ ಮಾತಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನವೀನ್​ ಸಾವು ದೊಡ್ಡ ದುರಂತ ಎಂದಿದ್ದಾರೆ. ​ಹಿಂದೆ ನವೀನ್​ ಸಾವಿನ ಸುದ್ದಿ ಕೇಳಿ ಕಂಬನಿ ಮಿಡಿದಿದ್ದ ಸಿಎಂ ಈಗಲೂ ತುಂಬಾ ಬೇಸಪಡುತ್ತಿದ್ದಾರೆ. ಡಾಕ್ಟರ್​ ಆಗಿ ತನ್ನ ಭವಿಷ್ಯ ರೂಪಿಸಲು ಹೊರಟ ನವೀನ್​ ಸಾವು ನಿಜಕ್ಕೂ ದುರಂತ ಎಂದಿದ್ದಾರೆ. ಇದನ್ನೂ ನಾವ್ಯಾರು ಊಹಿಸಿರಲಿಲ್ಲ ಎಂದ್ರು.

ನವೀನ್​ ಮೃತದೇಹ ತರಲು ವ್ಯವಸ್ಥೆ

ಇನ್ನು ನವೀನ್ ದೇಹವನ್ನು ತಾಯ್ನಾಡಿಗೆ ತರೋಕೆ ನಿರಂತರ ಪ್ರಯತ್ನ ನಡೆದಿದೆ. ಮಾರ್ಚುರಿಯಲ್ಲಿ ಬಾಡಿ ಇಟ್ಟಿರೋದಾಗಿ ಮಾಹಿತಿ ಸಿಕ್ಕಿದೆ. ಬಾಂಬ್ ದಾಳಿ ನಿಂತ ನಂತರ ಪಾರ್ಥಿವ ಶರೀರ ತರೋಕೆ ಪ್ರಯತ್ನಿಸ್ತೇವೆ. ಉಕ್ರೇನ್​ನಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಭಾರತದ ಹಲವು ವಿದ್ಯಾರ್ಥಿಗಳು ಅಲ್ಲೇ ಸಿಲುಕಿದ್ದಾರೆ ಅವರನ್ನ ಕರೆತರುವ ಕೆಲಸ ನಡೀತೀದೆ. ಯುದ್ಧ ಆದಷ್ಟು ಬೇಗ ನಿಲ್ಲಲ್ಲಿ. ಶೀಘ್ರವೇ ನವೀನ್​ ಮೃತದೇಹವನ್ನು ತರೋದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ರು.

ಇದನ್ನೂ ಓದಿ: ಅಂತರರಾಜ್ಯ ಜಲವಿವಾದ ಕಾಯ್ದೆಗೆ ತಿದ್ದುಪಡಿ ಅಗತ್ಯ: CM Basavaraja Bommai

ನೀಟ್​ ವ್ಯವಸ್ಥೆ ಬಗ್ಗೆ ಚರ್ಚಿಸಬೇಕಿದೆ

ನೀಟ್​ ವ್ಯವಸ್ಥೆ ಬಗ್ಗೆ ನಡೀತಿರೋ ಚರ್ಚೆ ಕುರಿತು ಮಾತಾಡಿದ ಸಿಎಂ ಬೊಮ್ಮಾಯಿ, ವ್ಯವಸ್ಥೆ ಬಗ್ಗೆ ನಾವು ಅವಲೋಕಿಸಬೇಕಿದೆ. ಎಲ್ಲದರ ಬಗ್ಗೆಯೂ ಕೂಲಂಕುಶವಾಗಿ ಚರ್ಚೆ ಮಾಡ್ತೇವೆ.  ಕೇಂದ್ರ ಸರ್ಕಾರದ ಜತೆಯೂ ಸಮಾಲೋಚನೆ ಮಾಡ್ತೇವೆ. ಆದರೆ ಸದ್ಯದ ನಮ್ಮ ಮುಖ್ಯ ಉದ್ದೇಶ ನವೀನ್ ಪಾರ್ಥಿವ ಶರೀರ ತರೋದಾಗಿದೆ. ಅದಕ್ಕೆ ಮೊದಲ ಆದ್ಯತೆ ಕೊಟ್ಟು, ತಾಯ್ನಾಡಿಗೆ ತರುವ ಪ್ರಯತ್ನ ಮಾಡುತ್ತೇನೆ ಎಂದು ಚಳಗೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ.
Published by:Pavana HS
First published: