’’ಆನಂದ’’ ಸಂಧಾನ: ಸಿಎಂ ಬೊಮ್ಮಾಯಿ ಬೆನ್ನಿಗೆ ನಿಂತು ಖಾತೆ ಕ್ಯಾತೆ ನಿಭಾಯಿಸಿದ ಆರ್​.ಅಶೋಕ

ತಮ್ಮ ನೋವನ್ನು ಯಡಿಯೂರಪ್ಪ ಮುಂದೆ ಹೇಳಿದ್ದಾರೆ. ಯಡಿಯೂರಪ್ಪ ಅವರು ಆನಂದ್ ಸಿಂಗ್‌ಗೆ ಬುದ್ಧಿವಾದ ಹೇಳಿದ್ದಾರೆ.  ಇಂದು ಸಂಜೆ 7 ಗಂಟೆಗೆ ಆನಂದ್ ಸಿಂಗ್ ಸಿಎಂ ಅವರನ್ನು ಭೇಟಿ ಮಾಡುತ್ತಾರೆ. ಸಿಎಂ ಭೇಟಿ ಬಳಿಕ ಆನಂದ್ ಸಿಂಗ್ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಹೇಳಿದ್ದರು. ಈಗ ರಾಜಿನಾಮೆ ಪ್ರಹಸನ ಸುಖಾಂತ್ಯ ಕಂಡಿದೆ.

ಆನಂದ್​ ಸಿಂಗ್​

ಆನಂದ್​ ಸಿಂಗ್​

 • Share this:
  ಸಚಿವ ಸ್ಥಾನ ಸಿಕ್ಕರೂ ಖಾತೆ ವಿಚಾರಕ್ಕೆ ಕ್ಯಾತೆ ತೆಗೆದು ರಾಜೀನಾಮೆಗೆ ಮುಂದಾಗಿದ್ದ ಆನಂದ್ ಸಿಂಗ್​  ಮನವೊಲಿಕೆಗೆ ಕಳೆದ ಎರಡು ದಿನಗಳಿಂದ ತೆರೆ- ಮರೆಯಲ್ಲೇ ಸತತ ಪ್ರಯತ್ನಗಳು ನಡೆಯುತ್ತಲೇ ಇದ್ದವು. ಆನಂದ್​ ಸಿಂಗ್​ ಸಮಾಧಾನ ಮಾಡಲು ಪ್ರಯತ್ನಿಸುತ್ತಿದ್ದ ಸಿಎಂ ಬಸವರಾಜ ಬೊಮ್ಮಾಯಿ ಬಂಡಾಯ ಶಮನಕ್ಕೆ ಬಿಎಸ್​ ಯಡಿಯೂರಪ್ಪ ಮೊರೆ ಹೋಗಿದ್ದರು. ಬೊಮ್ಮಾಯಿ ಸಹಾಯಕ್ಕೆ ಧಾವಿಸಿದ್ದ ಮಾಜಿ ಸಿಎಂ ಯಡಿಯೂರಪ್ಪ ಬುಧವಾರ ಬೆಳಿಗ್ಗೆ ಆನಂದ್​​ ಸಿಂಗ್​ ಅವರನ್ನು ಕಾವೇರಿ ನಿವಾಸಕ್ಕೆ ಕರೆಸಿಕೊಂಡು ಸಮಾಧಾನಪಡಿಸಿದ್ದರು.

  ಮಾಜಿ ಸಿಎಂ ಮಾತಿಗೆ ಆನಂದ್​ ಸಿಂಗ್​ ಬಗ್ಗಿದಂತೆ ಕಂಡರೂ ಖುದ್ದಾಗಿ ಬಸವರಾಜ ಬೊಮ್ಮಾಯಿ ಅವರಿಗೆ ಸಮಾಧಾನ ಆದಂತೆ ಕಂಡಿರಲಿಲ್ಲ. ಆದ ಕಾರಣ ಮತ್ತೆ ಸಂಧಾನಕ್ಕೆ ಕುಳಿತಿದ್ದ ಸಿಎಂ ಬೊಮ್ಮಾಯಿ ಅವರಿಗೆ ಗೆಳೆಯ ಅಶೋಕ್​ ಸಾಥ್​ ನೀಡಿದ್ದರು. ಸಂಧಾನ ಸಕ್ಸಸ್​ ಆದ ವಿವರ ಇಲ್ಲಿದೆ.

  ಎರಡು ದಿನಗಳಿಂದ ಖಾತೆ ವಿಚಾರಕ್ಕೆ ಸಿಎಂ ಬೊಮ್ಮಾಯಿ ಅವರಿಗೆ ಬಂದಿದ್ದ ಸಂಕಷ್ಟ ಬುಧವಾರ ರಾತ್ರಿ ಶಮನವಾದಂತೆ ಕಂಡು ಬಂದಿದೆ. ಆನಂದ್​ ಸಿಂಗ್​ ಮನವೊಲಿಕೆ  ಸಂಧಾನ ಸಭೆ ಮುಕ್ತಾಯ ಆದ ಕೆಲವೇ ನಿಮಿಷಗಳಲ್ಲಿ ಆರ್ ಅಶೋಕ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸತತ ಎರಡು ಗಂಟೆಗಳ ಕಾಲ ನಡೆದ ಸಂಧಾನ ಸಭೆ ಸಕ್ಸಸ್ ಆಗಿರುವುದು ಸಿಎಂ ಬೊಮ್ಮಾಯಿ ಅವರನ್ನು ನಿರಾಳರನ್ನಾಗಿಸಿದೆ.

  ಸಂಧಾನ ಸಭೆ  ಯಶಸ್ವಿಯಾದ ಹಿನ್ನೆಲೆಯಲ್ಲಿ ಖುಷಿಯಿಂದಲೇ ಹೊರಗೆ ಬಂದ  ಸಿಎಂ ಬೊಮ್ಮಾಯಿ ಅವರು ಮಾಧ್ಯಮಗಳಿಗೆ ’’ ಟೀ, ತಿಂಡಿ, ಹರಟೆ ಮಾಡಿದಿವಿ, ಇನ್ನೇನು ಆಗಿಲ್ಲ, ನಾವು ಅಶೋಕ್ ಸೇರಬೇಕು ಅಂತಾ ತೀರ್ಮಾನ ಮಾಡಿದ್ದೆವು ಅಷ್ಟೇ, ಇದೊಂದು  ಸೌಹಾರ್ದಯುತ ಮಾತುಕತೆಯಾಗಿತ್ತು ಎಂದು ಪರಿಸ್ಥಿತಿ ನಿಭಾಯಿಸಿದರು.

  ಆನಂದ್​ ಸಿಂಗ್​ ಅವರು ತಮ್ಮ ರಾಜಕೀಯ ಜೀವನ ಹಾಗೂ ಅವರು ನಡೆದು ಬಂದ ಹಾದಿ ಮತ್ತು ವಿಜಯನಗರ ಜಿಲ್ಲೆ ರಚನೆ ಮಾಡಿದ್ದರ ಬಗ್ಗೆ ಹಾಗೂ ಅದರ ಅಭಿವೃದ್ದಿ ಬಗ್ಗೆ ಚರ್ಚೆ ಮಾಡಿದರು ಎಂದು ಹೇಳಿದರು. ಅಲ್ಲದೇ ಆನಂದ್​ ಅವರಿಗೆ ಯಾವ ಸಂದರ್ಭದಲ್ಲಿ ಕ್ಯಾಬಿನೆಟ್ ಆಗಿದೆ ಅಂತಾ ಹೇಳಿದ್ದೇವೆ, ಒಗ್ಗಟ್ಟಿನಿಂದ ಹೋಗಲು ನಾವೆಲ್ಲ ತೀರ್ಮಾನ ಮಾಡಿದ್ದೇವೆ. ಬರುವಂತ ದಿನಗಳಲ್ಲಿ ಒಂದಾಗಿ ಇರುತ್ತೇವೆ ಎಂದು ಹೇಳಿದರು. ಆನಂದ್ ಸಿಂಗ್ ಮನವೊಲಿಕೆ ಬಳಿಕ ಆರ್ ಟಿ‌ ನಗರ ನಿವಾಸಕ್ಕೆ ಸಿಎಂ ಬೊಮ್ಮಾಯಿ ತೆರಳಿದ್ದಾರೆ.

  ಬೆಳಿಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಅವರೊಂದಿಗೂ ನಡೆದ ಮಾತುಕತೆಯೂ ಸಹ ಇಲ್ಲಿ ಕೆಲಸ ಮಾಡಿದೆ ಎಂದೇ ಹೇಳಬಹುದು. ಅಸಮಾಧಾನಿತ ಸಚಿವ ಆನಂದ್​ಸಿಂಗ್​ ಅವರನ್ನು ಮನೆಗೆ  ಬರ ಮಾಡಿಕೊಂಡಿದ್ದ ಯಡಿಯೂರಪ್ಪ, ಏನಪ್ಪಾ ಆನಂದ್ ಸಿಂಗ್, ಏನಪ್ಪಾ ನಿನ್ನ ಅಸಮಾಧಾನ ಎಂದು ಶುರುವಿನಲ್ಲಿ ಆತ್ಮೀಯವಾಗಿ ಮಾತನಾಡಿಸಿ ಬುದ್ಧಿವಾದ ಹೇಳಿದ್ದರು.


  ಇದನ್ನೂ ಓದಿ: ಆಹಾರ ಹಾಳು ಮಾಡುವುದು ಕದಿಯುವುದಕ್ಕೆ ಸಮ; 406 ಕೋಟಿ ಮೌಲ್ಯದ ಆಹಾರ ಧಾನ್ಯ ಹಾಳು: ರಾಹುಲ್​ ಗಾಂಧಿ ಕಿಡಿ

  ಬಿಎಸ್​ವೈ ಅವರ ಜೊತೆಗಿನ ಮಾತುಕತೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ರಾಜೂಗೌಡ, ನಾನು  ಆನಂದ್​ ಸಿಂಗ್​ ಅವರನ್ನು ಕರೆದು ತಂದಿದ್ದೇನೆ. ತಮ್ಮ ನೋವನ್ನು ಯಡಿಯೂರಪ್ಪ ಮುಂದೆ ಹೇಳಿದ್ದಾರೆ. ಯಡಿಯೂರಪ್ಪ ಅವರು ಆನಂದ್ ಸಿಂಗ್‌ಗೆ ಬುದ್ಧಿವಾದ ಹೇಳಿದ್ದಾರೆ.  ಇಂದು ಸಂಜೆ 7 ಗಂಟೆಗೆ ಆನಂದ್ ಸಿಂಗ್ ಸಿಎಂ ಅವರನ್ನು ಭೇಟಿ ಮಾಡುತ್ತಾರೆ. ಸಿಎಂ ಭೇಟಿ ಬಳಿಕ ಆನಂದ್ ಸಿಂಗ್ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಹೇಳೀದ್ದರು. ಆದರೆ ಈಗ ರಾಜಿನಾಮೆ ಪ್ರಹಸನ ಸುಖಾಂತ್ಯ ಕಂಡಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: