ಸಿಎಂ ಬೊಮ್ಮಾಯಿ ಅವರಿಂದಲೇ ನೈಟ್ ಕರ್ಫ್ಯೂ ಉಲ್ಲಂಘನೆ; ರಾತ್ರಿ 9ರ ಬಳಿಕವೂ ಜನರಿಂದ ಅಹವಾಲು ಸ್ವೀಕಾರ...!

ರಾತ್ರಿ ಕರ್ಫ್ಯೂ ಆರಂಭಗೊಂಡರೂ ಮನೆಯ ಹತ್ತಿರ ಜನ ಜಮಾಯಿಸಿದ ಹಿನ್ನೆಲೆಯಲ್ಲಿ ಸಿಎಂ ಊಟಕ್ಕೆಂದು ಖಾಸಗಿ ಹೋಟೆಲ್ ಗೆ ತೆರಳಿದ್ದಾರೆ. ಸಿಎಂ ಹೊರಡುತ್ತಿದ್ದಂತೆಯೇ ಜನರೂ ನಿಧಾನವಾಗಿ ತಮ್ಮ ತಮ್ಮ ಮನೆಗಳಿಗೆ ತೆರಳಿದರು.

ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಾಯಿ

  • Share this:
ಹುಬ್ಬಳ್ಳಿ(ಆ.22) ನೈಟ್ ಕರ್ಫ್ಯೂ ಆರಂಭವಾದ್ರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನರ ಅಹವಾಲು ಸ್ವೀಕರಿಸಿದರು. ಆ ಮೂಲಕ ಸರ್ಕಾರ ಜಾರಿಗೆ ತಂದಿರೋ ನೈಟ್ ಕರ್ಫ್ಯೂ ನಿಯಮಗಳನ್ನು ಸ್ವತಃ ಸಿಎಂ ಉಲ್ಲಂಘಿಸಿದ್ದುದು ಮೇಲ್ನೋಟಕ್ಕೆ ಕಂಡು ಬಂದಿತು. ಜನರ ಜಮಾವಣೆ ಕಂಡ ಸಿಎಂ ಕೊನೆಗೆ ಖಾಸಗಿ ಹೋಟೆಲ್ ಗೆ ಊಟಕ್ಕೆಂದು ತೆರಳಿದರು.  ಸಿಎಂ ಹೋದ ನಂತರ ಜನ ಅಲ್ಲಿಂದ ಹೊರಟು ಹೋಗಿದ್ದಾರೆ.

ಮುಖ್ಯಮಂತ್ರಿಗಳು ಹುಬ್ಬಳ್ಳಿಗೆ ಆಗಮಿಸಿದ್ದಾರೆ ಎಂಬ ಮಾಹಿತಿ ತಿಳಿದ ಜನ, ಹುಬ್ಬಳ್ಳಿಯ ಆದರ್ಶ ನಗರದ ಅವರ ನಿವಾಸದ ಬಳಿ ಜಮಾಯಿಸಿದ್ದರು. ಸಿಎಂ ಬರುತ್ತಿದ್ದಂತೆಯೇ ಒಮ್ಮೆ ಅಹವಾಲು ಸ್ವೀಕರಿಸಿ ಮನೆಯೊಳಗೆ ಹೋಗಿದ್ದರು. ಅದರ ನಂತರ ನೂರಾರು ಜನ ಜಮಾಯಿಸಿದ್ದರಿಂದ ಮತ್ತೊಮ್ಮೆ ಬೊಮ್ಮಾಯಿ ಅಹವಾಲು ಸ್ವೀಕರಿಸಿದರು. ಆದರೆ ರಾತ್ರಿ 9 ಗಂಟೆ ನಂತರ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಆದರೂ ಸಿಎಂ ಅವರೇ ಖುದ್ದು ನೈಟ್ ಕರ್ಫ್ಯೂ ಉಲ್ಲಂಘನೆ ಮಾಡಿ ಅಹವಾಲು ಸ್ವೀಕರಿಸಿದ್ದಾರೆ.

9 ಗಂಟೆಯಾದ್ರು ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಸಿಎಂ ಆದ ಮೇಲೆ ಮೊದಲ ಬಾರಿಗೆ ಬೊಮ್ಮಾಯಿ ಮನೆಗೆ ಬಂದಿದ್ದಾರೆ. ಹೀಗಾಗಿ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಜನರನ್ನ ನಿಯಂತ್ರಿಸಲು ಪೊಲೀಸರು ಹರಸಹಾಸಪಡುವಂತಾಯಿತು.
ರಾತ್ರಿ 9.30 ಆದರೂ ಜನ ಕದಲದೇ ಇರೋದ್ರಿಂದ ಕೊನೆಗೆ ಸಿಎಂ ಊಟಕ್ಕೆಂದು ಖಾಸಗಿ ಹೋಟೆಲ್ ಗೆ ತೆರಳಿದರು.

ಇದನ್ನೂ ಓದಿ:Petrol Price Today: 35 ದಿನಗಳ ಬಳಿಕ ಪೆಟ್ರೋಲ್​ ಬೆಲೆಯಲ್ಲಿ ಇಳಿಕೆ; ಇನ್ನೂ ಅಗ್ಗವಾದ ಡೀಸೆಲ್

ರಾತ್ರಿ ಕರ್ಫ್ಯೂ ಆರಂಭಗೊಂಡರೂ ಮನೆಯ ಹತ್ತಿರ ಜನ ಜಮಾಯಿಸಿದ ಹಿನ್ನೆಲೆಯಲ್ಲಿ ಸಿಎಂ ಊಟಕ್ಕೆಂದು ಖಾಸಗಿ ಹೋಟೆಲ್ ಗೆ ತೆರಳಿದ್ದಾರೆ. ಸಿಎಂ ಹೊರಡುತ್ತಿದ್ದಂತೆಯೇ ಜನರೂ ನಿಧಾನವಾಗಿ ತಮ್ಮ ತಮ್ಮ ಮನೆಗಳಿಗೆ ತೆರಳಿದರು.

ಆನಂದ್ ಸಿಂಗ್ ನಿರಂತರ ಸಂಪರ್ಕದಲ್ಲಿದ್ದಾರೆ

ತಾವು ಕೇಳಿದ ಖಾತೆ ನೀಡಿಲ್ಲವೆಂದು ಮುನಿಸಿಕೊಂಡಿರೋ ಆನಂದ್ ಸಿಂಗ್ ತಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಚಿವ ಸ್ಥಾನ ಬೇಡಿಕೆ ಪ್ರಕರಣ ಶೀಘ್ರವೇ ಸುಖಾಂತ್ಯ ಕಾಣಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಉತ್ತರ ಕರ್ನಾಟಕ ಪ್ರವಾಸ ಕೈಗೊಂಡರೆ ಎಂ ಬಸವರಾಜ್ ಬೊಮ್ಮಾಯಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಸಿಎಂ ಆದ ಬಳಿಕ‌ ಮೊದಲ ಬಾರಿಗೆ ಹುಬ್ಬಳ್ಳಿಯ ತಮ್ಮ ನಿವಾಸಕ್ಕೆ‌ ಭೇಟಿ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಬೊಮ್ಮಾಯಿ, ಹುಬ್ಬಳ್ಳಿಗೆ ಬಂದಿದ್ದು ಬಹಳ ಸಂತೋಷ ಆಗಿದೆ. ಇಲ್ಲಿ ನನ್ನ ಆತ್ಮೀಯರು ಬಹಳಷ್ಟಿದ್ದಾರೆ. ಅವರೆಲ್ಲರನ್ನ ನೋಡುವ ಸೌಭಾಗ್ಯ ಸಿಕ್ಕಿದೆ. ನಾನು ರಾಜ್ಯಕ್ಕೆ ಸಿಎಂ ಇರಬಹುದು, ಆದ್ರೆ ಹುಬ್ಬಳ್ಳಿಯವನು. ನಾನೆಲ್ಲೇ ಇದ್ದರೂ ಹುಬ್ಬಳ್ಳಿ ಬಗ್ಗೆ ಸದಾ ಚಿಂತೆ ಇದೆ ನನಗೆ. ಹುಬ್ಬಳ್ಳಿಯ ಅಭಿವೃದ್ಧಿ ಕುರಿತು ಜಗದ ಶೆಟ್ಟರ್, ಪ್ರಹ್ಲಾದ್ ಜೋಶಿ ಅವರ ಜೊತೆ ಚರ್ಚಿಸುವೆ ಎಂದರು.

ಇದನ್ನೂ ಓದಿ:Afghanistan Crisis- ಅಫ್ಘಾನಿಸ್ತಾನದಿಂದ ಭಾರತಕ್ಕೆ ಸುರಕ್ಷಿತವಾಗಿ ಬಂದಿಳಿದ 390 ಮಂದಿ

ಮುಂಬೈ ಕರ್ನಾಟದ ಭಾಗವನ್ನು ಪ್ರಮುಖ ಕೈಗಾರಿಕಾ ಪ್ರದೇಶವನ್ನಾಗಿ ಮಾಡುವ ಚಿಂತನೆ ನಡೆದಿದೆ. ಬಳ್ಳಾರಿಯಲ್ಲಿ ಯಾರೋ ಒಬ್ಬರನ್ನ ಉಸ್ತುವಾರಿ ಮಾಡಬೇಕು. ಮುಂದಿನ ದಿನಗಳಲ್ಲಿ ಅದನ್ನ ಮಾಡ್ತೀವಿ. ನನ್ನ ಜೊತೆ ಆನಂದ ಸಿಂಗ್ ನಿರಂತರ ಸಂಪರ್ಕದಲ್ಲಿದ್ದಾರೆ. ಎಲ್ಲವೂ ಸುಸೂತ್ರವಾಗಿ ಮುಗಿಯುತ್ತೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
Published by:Latha CG
First published: