Ration to Doorsteps: ಇನ್ಮುಂದೆ ರಾಜ್ಯಾದ್ಯಂತ ಮನೆ ಬಾಗಿಲಿಗೆ ಪಡಿತರ ಧಾನ್ಯ: ಸಿಎಂ ಬೊಮ್ಮಾಯಿ ಸಂಕಲ್ಪ

ಜ.26 ರಂದು ರಾಜ್ಯದಲ್ಲಿ ಮನೆ ಬಾಗಿಲಿಗೆ ಪಡಿತರ ಧಾನ್ಯ ಯೋಜನೆಗೆ ಚಾಲನೆ ನೀಡುವ ವಿಶ್ವಾಸವಿದೆ. ಸಾಮಾಜಿಕ ಭದ್ರತೆ ಪ್ರತಿ ಮನೆಗೆ ಬರಬೇಕು.ಇದಕ್ಕೆ ವ್ಯವಸ್ಥೆ ಮಾಡಿದ್ದೇವೆ ಎಂದು ಸಿಎಂ ತಿಳಿಸಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಾವಣಗೆರೆ: ರಾಜ್ಯಾದ್ಯಂತ ಜನವರಿಯಿಂದ ಮನೆ ಬಾಗಿಲಿಗೆ ಪಡಿತರ ಧಾನ್ಯ (Ration to Doorsteps ) ಲಭ್ಯವಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (cm basavaraj bommai)  ಘೋಷಿಸಿದರು. ಜ.26 ರಂದು ರಾಜ್ಯದಲ್ಲಿ ಮನೆ ಬಾಗಿಲಿಗೆ ಪಡಿತರ ಧಾನ್ಯ ಯೋಜನೆಗೆ ಚಾಲನೆ ನೀಡುವ ವಿಶ್ವಾಸವಿದೆ. ಸಾಮಾಜಿಕ ಭದ್ರತೆ ಪ್ರತಿ ಮನೆಗೆ ಬರಬೇಕು.ಇದಕ್ಕೆ ವ್ಯವಸ್ಥೆ ಮಾಡಿದ್ದೇವೆ ಎಂದು ಸಿಎಂ ತಿಳಿಸಿದರು. ಸುರಹೊನ್ನೆಯಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಅಧಿಕಾರಿಗಳು ನಗರ ಬಿಟ್ಟು ಹಳ್ಳಿಗಳ ಕಡೆಗೆ ತೆರಳಬೇಕು. ಅದಕ್ಕಾಗಿ ನವೆಂಬರ್ ನಲ್ಲಿ ಜನ ಸೇವಕ ಪ್ರಾಯೋಗಿಕ ಕಾರ್ಯಕ್ರಮ ಮಾಡಲಾಗುವುದು. ಸಿಎಂ ಮುಖ್ಯ ಕಾರ್ಯದರ್ಶಿಯಿಂದ ಹಿಡಿದು ಗ್ರಾಮದ ಅಧಿಕಾರಿಗಳ ಬದಲಾವಣೆಯಾಗಬೇಕಿದೆ.ಎಲ್ಲ ಸೌಲಭ್ಯಗಳು ಗ್ರಾಮೀಣ ಜನರ ಮನೆ ಬಾಗಿಲಿಗೆ ಸಿಗಬೇಕು ಎಂದರು.

ಇನ್ನು ಒಂದು ತಿಂಗಳಲ್ಲಿ ಪರಿಹಾರ

ಇದೇ ವೇಳೆ ಸಚಿವ ಆರ್​.ಅಶೋಕ್​, ಕೋರೋನಾ ದಿಂದ ಮೃತಪಟ್ಟವರಿಗೆ ಒಂದು ತಿಂಗಳಲ್ಲಿ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಬಿಪಿಎಲ್ ಕಾರ್ಡ್ ಇದ್ದವರಿಗೆ 1.50 ಲಕ್ಷ ಹಾಗೂ ಎಪಿಎಲ್ ಕಾರ್ಡ್ ದಾರರಿಗೆ ಕೇಂದ್ರದಿಂದ 50 ಸಾವಿರ ಪರಿಹಾರ ವಿತರಣೆ. ಒಂದು ತಿಂಗಳಲ್ಲಿ ಕೋರೊನಾದಿಂದ ಮೃತಪಟ್ಟವರಿಗೆ ಪರಿಹಾರ ವಿತರಿಸುವುದಾಗಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭರವಸೆ ನೀಡಿದರು.

ಸಿದ್ದರಾಮಯ್ಯನ ತೆಗಳಿ, ಯಡಿಯೂರಪ್ಪನ ಹೊಗಳಿದ ಸಿಎಂ

ಬಿಜೆಪಿ ಸರ್ಕಾರ ಒಂದು ಮನೆಯನ್ನು ಕಟ್ಟಿಲ್ಲ, ಇದು ಡೋಂಗಿ ಸರ್ಕಾರ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬೊಮ್ಮಾಯಿ ಟಾಂಗ್ ನೀಡಿದರು. ನಮ್ಮ ಅವಧಿಯಲ್ಲಿ 4 ಲಕ್ಷ ಮನೆ ಕಟ್ಟುತ್ತೇವೆ. ನಮ್ಮ ಮಕ್ಕಳು ಅಂತರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನಡೆಸುವಂತೆ ಶಿಕ್ಷಣ ನೀತಿ ತಂದಿದ್ದೇವೆ. ಸ್ವಸಹಾಯ ಸಂಘಗಳಿಗೆ 1ಲಕ್ಷ ರೂ.‌ ಸಾಲದ ವ್ಯವಸ್ಥೆ ಸೇರಿ ವಿವಿಧ ಯೋಜನೆಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದರು. ಬಿಎಸ್ ವೈ ಯೋಜನೆಗಳನ್ನ ಹಾಡಿ ಹೊಗಳಿದ ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಭಾಗ್ಯ ಲಕ್ಷ್ಮೀ ಬಾಂಡ್, ಮಕ್ಕಳಿಗೆ ಸೈಕಲ್, ಸೇರಿ ಹಲವು ಯೋಜನೆ ನೀಡಿದ್ದಾರೆ. ಅವರ ಮಾರ್ಗದರ್ಶನದಲ್ಲೇ ಸರ್ಕಾರ ನಡೆಯುತ್ತಿದೆ ಎಂದು ಬಿಎಸ್ ವೈ ಅವಧಿಯ ಯೋಜನೆಗಳನ್ನ ಶ್ಲಾಘಿಸಿದರು.

ಇದನ್ನೂ ಓದಿ: ಕರ್ನಾಟಕದ ರೈತರ ಮಕ್ಕಳು ಈಗ ಸಾವಿರಾರು ರೂ. ವಿದ್ಯಾರ್ಥಿವೇತನ ಪಡೆಯಬಹುದು : ಸಂಪೂರ್ಣ ಮಾಹಿತಿ ಇಲ್ಲಿದೆ

ಸಿಎಂ ಜೊತೆಗೆ ಸೆಲ್ಫಿಗಾಗಿ ಮುಗಿಬಿದ್ದ ವಿದ್ಯಾರ್ಥಿನಿಯರು

ಕಾರ್ಯಕ್ರಮದ ವೇಳೆ ಸಿಎಂ ಬೊಮ್ಮಾಯಿಯವರ ಜೊತೆ ಸೆಲ್ಫಿಗೆ ವಿದ್ಯಾರ್ಥಿನಿಯರು ಮುಗಿಬಿದ್ದರು. ಪೊಲೀಸರು ಅನುಮತಿ ನಿರಾಕರಿಸಿದರು ಕೇಳದೆ ಸಿಎಂ ಜೊತೆ ವಿದ್ಯಾರ್ಥಿನಿಯರು ಸೆಲ್ಫಿ ತೆಗೆಸಿಕೊಂಡರು. ಜನರ ನೂಕಾಟದ ನಡುವೆಯು ಸಿಎಂ ವಿದ್ಯಾರ್ಥಿನಿಯರ ಆಸೆ ಪೂರೈಸಿದರು.  ವಿದ್ಯಾರ್ಥಿನಿಯರು ಸೆಲ್ಫಿ ಕೇಳುತಿದ್ದಂತೆ ಮಾಸ್ಕ್ ತೆಗೆದು ಸೆಲ್ಫಿಗೆ ಪೋಸ್ ಕೊಟ್ಟರು. ಮತ್ತೊಮ್ಮೆ ತಾವು ಕಾಮನ್ ಮೇನ್ ಅನ್ನೋದು ತೋರಿಸಿಕೊಟ್ಟ ಸಿಎಂ ಬೊಮ್ಮಾಯಿ ತೋರಿಸಿ ಕೊಟ್ಟರು.

ಸಿಎಂ ನೋಡಲು ಬಂದ ಯುವಕನಿಗೆ ರಕ್ತ ಬರುವಂತೆ ಹಲ್ಲೆ!

ಇದೇ ನೂಕುನುಗ್ಗಲು ವೇಳೆ ಸಿಎಂ ನೋಡಲು‌ ಬಂದ ಯುವಕನ ಮೇಲೆ ಪೊಲೀಸರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಪೊಲೀಸರ ಲಾಠಿ ಹೊಡೆತದ ತೀವ್ರತೆಗೆ ನಿತಿನ್​ ಎಂಬ ಯುವಕನಿಗೆ ರಕ್ತ ಸುರಿದಿದೆ. ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಹಿನ್ನೆಲೆ ಸಿಎಂ ಬಸವರಾಜ್ ಬೊಮ್ಮಾಯಿರನ್ನ ನೋಡಲು ಯುವಕ ಬಂದಿದ್ದ. ಅಡ್ಡಾದಿಡ್ಡಿ ಓಡಾಡ್ತಿಯಾ ಎಂದು ಗದಿರಿಸಿ ಯುವಕನ ತಲೆಗೆ ಪೊಲೀಸ್ ಹೊಡೆದಿದ್ದಾರೆ ಎನ್ನಲಾಗುತ್ತಿದೆ. ಆಕಸ್ಮಿಕವಾಗಿ ನಡೆದ ಘಟನೆ ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ.
Published by:Kavya V
First published: