HOME » NEWS » District » CLAY LAMP CALLING TOURIST IN JANAPADALOKA AT CHANNAPATTANA RH

ಜಾನಪದ ಲೋಕದಲ್ಲಿ ಕೈಬೀಸಿ ಕರೆಯುತ್ತಿವೆ ಮಣ್ಣಿನ ದೀಪಗಳು; ಅನಸೂಯಮ್ಮನ ಕಾರ್ಯಕ್ಕೆ ಪ್ರವಾಸಿಗರು ಮೆಚ್ಚುಗೆ!

ಪಿಂಗಾಣಿ, ಸ್ಟೀಲ್, ಮೇಣದಬತ್ತಿ ಮತ್ತೀತರ ಹಣತೆಗಳು ಮಾರುಕಟ್ಟೆ ಪ್ರವೇಶ ಮಾಡಿದ್ದರಿಂದ ಮಣ್ಣಿನ‌ ಸಾಂಪ್ರದಾಯಿಕ ಹಣತೆಗಳಿಗೆ ಬೇಡಿಕೆ ಕಡಿಮೆ ಆಗಿದೆ. ಇತ್ತೀಚಿಗೆ ಕೊರೋನಾ ಬಂದಾಗಿನಿಂದ ಹಣತೆಯನ್ನು ಕೇಳುವವರೆ ಇಲ್ಲದಾಗಿದೆ. ಈ ನಡುವೆ ಅನುಸೂಯಮ್ಮ ತಯಾರು ಮಾಡುವ ವಿವಿಧ ಮಣ್ಣಿನ ದೀಪಗಳು ಪ್ರವಾಸಿಗರನ್ನು ಕೈ ಬೀಸಿ‌ ಕರೆಯುತ್ತಿವೆ

news18-kannada
Updated:November 14, 2020, 4:16 PM IST
ಜಾನಪದ ಲೋಕದಲ್ಲಿ ಕೈಬೀಸಿ ಕರೆಯುತ್ತಿವೆ ಮಣ್ಣಿನ ದೀಪಗಳು; ಅನಸೂಯಮ್ಮನ ಕಾರ್ಯಕ್ಕೆ ಪ್ರವಾಸಿಗರು ಮೆಚ್ಚುಗೆ!
ಅನಸೂಯಮ್ಮ ತಯಾರಿಸಿರುವ ಮಣ್ಣಿನ ದೀಪಗಳು.
  • Share this:
ರಾಮನಗರ: ಬೆಳಕಿನ ಹಬ್ಬ ದೀಪಾವಳಿ ಬಂತ್ತೆಂದರೆ ಸಾಕು ಮಣ್ಣಿನ‌ ದೀಪಗಳಿಗೆ ಎಲ್ಲಿಲ್ಲದ ಬೇಡಿಕೆ ಶುರುವಾಗುತ್ತೆ. ಮನಸ್ಸಿನ ಕತ್ತಲೆಯನ್ನು ಕಳೆದು ಅರಿವಿನ ಬೆಳಕನ್ನು ಹೊತ್ತಿಸುವ ವಿಶೇಷ ಹಬ್ಬವಾದ ದೀಪಾವಳಿ ಪ್ರತಿ ಮನೆಗಳಲ್ಲಿ ಬೆಳಕು ಚೆಲ್ಲುವ ಸಾಂಪ್ರದಾಯಿಕ ಹಣತೆಯನ್ನು ಇಲ್ಲೊಬ್ಬರು ತಲತಲಾಂತರದಿಂದ ಮಾಡಿಕೊಂಡು ಬರುತ್ತಿದ್ದಾರೆ. ದೀಪಾವಳಿ ಹಬ್ಬಕ್ಕೆಂದೆ ಹಲವು ಬಗೆಯ ವಿಶೇಷ ಮಣ್ಣಿನ ದೀಪಗಳು ಇಲ್ಲಿ‌ ತಯಾರಾಗುತ್ತೆ. ಈ ಕುರಿತ ವರದಿ ಇಲ್ಲಿದೆ ನೋಡಿ.

ಹೌದು, ದೀಪಾವಳಿ ಹಬ್ಬ ಬಂದ್ರೆ ಸಾಕು ರಾಮನಗರದ ಜಾನಪದ ಲೋಕದಲ್ಲಿ ಅನುಸೂಯಮ್ಮ ತಯಾರು ಮಾಡುವ ಮಣ್ಣಿನ ದೀಪಗಳಿಗೆ ಎಲ್ಲಿಲ್ಲದ ಬೇಡಿಕೆ ಶುರುವಾಗುತ್ತೆ. ಇವರು ತಯಾರು ಮಾಡುವ ಮಣ್ಣಿನ ವೈಶಿಷ್ಟ್ಯ ಗುಣವೇ ಹಾಗೆ, ಬಗೆ ಬಗೆಯ ಮಣ್ಣಿನ ಹಣತೆಗಳನ್ನು ಸುಲಲಿತವಾಗಿ ತಯಾರು ಮಾಡುತ್ತಾರೆ. ಪೂರ್ವಿಕರ ಕಲೆಯಿಂದ ಬಳುವಳಿವಾಗಿ ಬಂದ ಈ ಕುಂಬಾರಿ ಕಲೆಯನ್ನು ಇವರು 42 ವರ್ಷಗಳಿಂದಲೂ‌ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಅದರಲ್ಲೂ ಬೆಳಕಿನ ಹಬ್ಬ ದೀಪಾವಳಿ ಬಂದಾಗ ಇಲ್ಲಿನ ನೈಸರ್ಗಿಕ ಮಣ್ಣಿನ ಹಣತೆಗಳಿಗೆ ಭಾರಿ ಬೇಡಿಕೆ. ರಾಜ್ಯದ ವಿವಿಧೆಡೆಯಿಂದ ಜಾನಪದ ಲೋಕಕ್ಕೆ ಬರುವ ಪ್ರವಾಸಿಗರು ಅನುಸೂಯಮ್ಮ ತಯಾರು ಮಾಡುವ ಹಣತೆಗಳನ್ನು ಕೊಳ್ಳುತ್ತಾರೆ. ಇದಲ್ಲದೆ ಆಂಧ್ರ, ತಮಿಳುನಾಡು, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಬರುವ ಪ್ರವಾಸಿಗರ ಮನೆಯಲ್ಲಿ ಇಂದಿಗೂ ಇವರು ತಯಾರು ಮಾಡುವ ಹಣತೆಗಳು ಉರಿಯುತ್ತಿವೆ ಎಂದ್ರೆ ಅತಿಶಯೋಕ್ತಿಯಲ್ಲ. ಮ್ಯಾಜಿಕ್ ದೀಪ, ಅಂಬಾರಿ ದೀಪ, ನವಿಲು ದೀಪ, ಗಣೇಶ ದೀಪ, ಆನೆ ದೀಪ, ನವ ದೀಪ, ಮಡಿಲು ದೀಪ, ಲಕ್ಷ್ಮಿ ದೀಪ,  ಹೀಗೆ ಹಲವಾರು ಬಗೆ ಬಗೆಯ ಹಣತೆಗಳು ಇಲ್ಲಿ ಮಾರಾಟವಾಗುತ್ತಿದೆ.

ಇದನ್ನು ಓದಿ: ದೀಪಾವಳಿ ಬಳಿಕ ಸಚಿವ ಸಂಪುಟ ವಿಸ್ತರಣೆ; ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ

ಆದರೆ ಇತ್ತೀಚಿನ ಜಾಗತಿಕರಣಕ್ಕೆ ಸಿಲುಕಿ ಮಣ್ಣಿನ ಹಣತೆಗಳಿಗೆ ಬೇಡಿಕೆ ಕಡಿಮೆಯಾಗಿದೆ. ಪಿಂಗಾಣಿ, ಸ್ಟೀಲ್, ಮೇಣದಬತ್ತಿ ಮತ್ತೀತರ ಹಣತೆಗಳು ಮಾರುಕಟ್ಟೆ ಪ್ರವೇಶ ಮಾಡಿದ್ದರಿಂದ ಮಣ್ಣಿನ‌ ಸಾಂಪ್ರದಾಯಿಕ ಹಣತೆಗಳಿಗೆ ಬೇಡಿಕೆ ಕಡಿಮೆ ಆಗಿದೆ. ಇತ್ತೀಚಿಗೆ ಕೊರೋನಾ ಬಂದಾಗಿನಿಂದ ಹಣತೆಯನ್ನು ಕೇಳುವವರೆ ಇಲ್ಲದಾಗಿದೆ. ಈ ನಡುವೆ ಅನುಸೂಯಮ್ಮ ತಯಾರು ಮಾಡುವ ವಿವಿಧ ಮಣ್ಣಿನ ದೀಪಗಳು ಪ್ರವಾಸಿಗರನ್ನು ಕೈ ಬೀಸಿ‌ ಕರೆಯುತ್ತಿವೆ ಎನ್ನುತ್ತಾರೆ ಸ್ಥಳೀಯರು.

ಒಟ್ಟಾರೆ ದೇಶಿ ವಸ್ತುಗಳಿಗೆ ಪ್ರೋತ್ಸಾಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದಾರೆ. ಪ್ರಧಾನಿ ಮಾತಿಗೆ ಗೌರವ ಕೊಟ್ಟು ನಮ್ಮ ಮಣ್ಣಿನಿಂದ ತಯಾರು ಮಾಡಿದ ದೇಶಿ ಹಣತೆಗಳನ್ನು ಕೊಂಡು ಈ ಬಾರಿ ಪ್ರತಿ ಮನೆಯಲ್ಲೂ ದೀಪಾವಳಿ ಹಬ್ಬವನ್ನು ಆಚರಿಸೋಣ ಎಂದು ಜಾನಪದ ಲೋಕದ ಮುಖ್ಯ ಆಡಳಿತಾಧಿಕಾರಿ ರುದ್ರಪ್ಪ ಹೇಳಿದರು.

ವರದಿ : ಎ.ಟಿ.ವೆಂಕಟೇಶ್
Published by: HR Ramesh
First published: November 14, 2020, 4:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories