HOME » NEWS » District » CLASHES BETWEEN TWO STATE TRANSPORT EMPLOYEES IN GURUMATKAL RHHSN NMPG

ಅವಧಿಗೂ ಮುನ್ನ ಬಸ್ ಸಂಚಾರ; 2 ರಾಜ್ಯದ ಸಾರಿಗೆ ಇಲಾಖೆ ನೌಕರರ ನಡುವೆ ಜಟಾಪಟಿ

ಈ ವೇಳೆ ನಾನು ಚಾಲಕ ಹಾಗೂ ನಿರ್ವಾಹಕನಿಗೆ ಪ್ರಶ್ನೆ ಮಾಡಿ ಬಸ್ ತಡೆದಿದ್ದೆ. ನಂತರ ಅವರು ನನ್ನ ಮೇಲೆ ಹಲ್ಲೆಗೆ ಯತ್ನಿಸಿ ಗಲಾಟೆ ಮಾಡಿ ಬಸ್ ನಲ್ಲಿ ಅಪಹರಣ ಮಾಡಿಕೊಂಡು ಹೋದರು. ನಂತರ ಸ್ಥಳೀಯರು ರಕ್ಷಣೆ ಮಾಡಿದ್ದಾರೆ ಎಂದಿದ್ದಾರೆ.

news18-kannada
Updated:January 10, 2021, 6:57 PM IST
ಅವಧಿಗೂ ಮುನ್ನ ಬಸ್ ಸಂಚಾರ; 2 ರಾಜ್ಯದ ಸಾರಿಗೆ ಇಲಾಖೆ ನೌಕರರ ನಡುವೆ ಜಟಾಪಟಿ
ಸಾರಿಗೆ ಇಲಾಖೆ ನೌಕರರ ನಡುವೆ ಜಟಾಪಟಿ.
  • Share this:
ಯಾದಗಿರಿ:ಬಸ್ ಸಂಚಾರ ಮಾಡುವ ವಿಚಾರದಲ್ಲಿ ಎರಡು ರಾಜ್ಯದ ಸಾರಿಗೆ ಇಲಾಖೆ ನೌಕರರ ನಡುವೆ ವಾಕ್ಸಮರ ನಡೆದಿದೆ. ಅವಧಿ ಮುನ್ನವೇ ಬಸ್ ನಿಲ್ದಾಣದಲ್ಲಿ ತೆಲಂಗಾಣ ಬಸ್ ತೆಗೆದುಕೊಂಡು ಬಂದ ವಿಚಾರವಾಗಿ ತೆಲಂಗಾಣ ಹಾಗೂ ರಾಜ್ಯದ ಸಾರಿಗೆ ನೌಕರರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಕಂಟ್ರೋಲರ್ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ನ ಕೇಂದ್ರ ಬಸ್ ನಿಲ್ದಾಣದಲ್ಲಿ ನಸುಕಿನ ಜಾವ ಘಟನೆ ಜರುಗಿದೆ. ಎರಡು ದಿನದ ಹಿಂದೆ ಘಟನೆ ಜರುಗಿದ್ದು ಈಗ ಗಲಾಟೆ ವಿಡಿಯೋ ವೈರಲ್ ಆಗಿದೆ.

ಈಶಾನ್ಯ ಸಾರಿಗೆ ಸಂಸ್ಥೆಯ ಗುರುಮಠಕಲ್ ವಿಭಾಗದ ಬಸ್ ಪರಗಿ ಮಾರ್ಗವಾಗಿ ಹೈದ್ರಾಬಾದ್ ಗೆ ತೆರಳಬೇಕಿತ್ತು. ಆದರೆ, ಗುರುಮಠಕಲ್ ವಿಭಾಗದ ಬಸ್ ತೆರಳುವ ಮುನ್ನವೇ ತೆಲಂಗಾಣದ  ಪರಗಿ ಡಿಪೋದ ಬಸ್ ಗುರುಮಠಕಲ್ ಬಸ್ ನಿಲ್ದಾಣಕ್ಕೆ ತರಲಾಗಿತ್ತು. ಪರಗಿ ಡಿಪೋದ ಬಸ್ ಚಾಲಕ ಹಾಗೂ ನಿರ್ವಾಹಕ ಗುರುಮಠಕಲ್ ಬಸ್ ನಲ್ಲಿ ಕುಳಿತ ಪ್ರಯಾಣಿಕರನ್ನು ಪರಗಿ ಬಸ್ ನೊಳಗೆ ಕೂರಿಸಿಕೊಂಡು ಬಸ್ ಸಂಚಾರ ಆರಂಭ ಮಾಡಿದನು. ಇದಕ್ಕೆ ಅಕ್ರೋಶಗೊಂಡ  ಗುರುಮಠಕಲ್ ಬಸ್ ಕಂಟ್ರೋಲರ್ ಮಧುಸೂದನ್ ಪ್ರಶ್ನೆ ಮಾಡಿ ಬಸ್ ತಡೆದಿದ್ದರು.

ಇದನ್ನು ಓದಿ: ಮಹತ್ವದ ನಿರ್ಣಯ ಕೈಗೊಳ್ಳಲು ಯಡಿಯೂರಪ್ಪರನ್ನು ಅಮಿತ್ ಶಾ ದೆಹಲಿಗೆ ಕರೆದಿರಬಹುದು; ಯತ್ನಾಳ

ಅವಧಿಗೆ ಮುನ್ನವೇ ಬಸ್ ತೆಗೆದುಕೊಂಡು ಹೋಗಬಾರದೆಂದು ಬುದ್ದಿ ಮಾತು ಹೇಳಲಾಗಿತ್ತು. ಬುದ್ದಿ ಮಾತು ಹೇಳಿದರು ಸುಮ್ಮನೆ ಇರದೆ ತೆಲಂಗಾಣ ಬಸ್ ಚಾಲಕ ಪ್ರಯಾಣಿಕರನ್ನು ಕೂರಿಸಿಕೊಂಡು ಹೈದ್ರಾಬಾದ್ ನತ್ತ ಬಸ್ ತೆಗೆದುಕೊಂಡು ಹೋಗುತ್ತಿದ್ದನು. ತೆಲಂಗಾಣ ಬಸ್ ತಡೆದು ಬಸ್ ನೊಳಗೆ ಕಂಟ್ರೋಲರ್ ಇದ್ದರು ಕಂಟ್ರೋಲರ್ ಅವರನ್ನು  ಬಸ್ ನೊಳಗೆ ಅಪಹರಿಸಿಕೊಂಡು ಸ್ವಲ್ಪ ದೂರದವರೆಗೆ ಕರೆದುಕೊಂಡು ಹೋಗಲಾಗಿತ್ತು. ನಂತರ ಸ್ಥಳೀಯರು ಗಮನಿಸಿ ಬಸ್ ತಡೆದು ಬಸ್ ಕಂಟ್ರೋಲರ್ ಅವರನ್ನು ರಕ್ಷಣೆ ಮಾಡಿದ್ದಾರೆ. ತೆಲಂಗಾಣ ಸಾರಿಗೆ ನೌಕರರು ರಾಜ್ಯದ ಸಾರಿಗೆ ನೌಕರರ ಮೇಲೆ ದರ್ಪ ಮೆರೆದಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.
Youtube Video

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಕಂಟ್ರೋಲರ್ ಮಧುಸೂದನ್ ಮಾತನಾಡಿ, ಈಶಾನ್ಯ ಸಾರಿಗೆ ಸಂಸ್ಥೆಯ ಗುರುಮಠಕಲ್ ವಿಭಾಗದ ಬಸ್ ಗುರುಮಠಕಲ್ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿತ್ತು. ಬಸ್ ಪರಗಿ ಮಾರ್ಗವಾಗಿ ಹೈದ್ರಾಬಾದ್ ಗೆ ತೆರಳಬೇಕೆನ್ನುವಷ್ಟರಲ್ಲಿಯೇ ತೆಲಂಗಾಣದ ಪರಗಿ ಡಿಪೋದ ಬಸ್ ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ನಾನು ಚಾಲಕ ಹಾಗೂ ನಿರ್ವಾಹಕನಿಗೆ ಪ್ರಶ್ನೆ ಮಾಡಿ ಬಸ್ ತಡೆದಿದ್ದೆ. ನಂತರ ಅವರು ನನ್ನ ಮೇಲೆ ಹಲ್ಲೆಗೆ ಯತ್ನಿಸಿ ಗಲಾಟೆ ಮಾಡಿ ಬಸ್ ನಲ್ಲಿ ಅಪಹರಣ ಮಾಡಿಕೊಂಡು ಹೋದರು. ನಂತರ ಸ್ಥಳೀಯರು ರಕ್ಷಣೆ ಮಾಡಿದ್ದಾರೆ ಎಂದಿದ್ದಾರೆ. ಇಷ್ಟೆಲ್ಲ ಘಟನೆ ನಡೆದರು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಈಶಾನ್ಯ ಸಾರಿಗೆ ಸಂಸ್ಥೆಯ ಇಲಾಖೆ ಅಧಿಕಾರಿಗಳು ಕೂಡ ಯಾವುದೇ ದೂರು ನೀಡಿಲ್ಲ.
Published by: HR Ramesh
First published: January 10, 2021, 6:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories