ಪಂಚಾಯ್ತಿ ಫೈಟಲ್ಲಿ ಸೋತು-ಗೆದ್ದವರ ಮಧ್ಯೆ ಮಾರಾಮಾರಿ; ಕೇಕ್ ಕತ್ತರಿಸುವ ವಿಚಾರಕ್ಕೆ ಗಲಾಟೆ

ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಾವಾಗಿದೆ. ಇನ್ನು ಗುಂಪು ಚದುರಿಸುವ ವೇಳೆಯಲ್ಲಿ  ಓರ್ವ ಪೊಲೀಸ್ ಸಿಬ್ಬಂದಿ ದಾದಫೀರ್ ಎಂಬುವರಿಗೆ ಕೂಡ ಸಣ್ಣಪುಟ್ಟ ಗಾಯವಾಗಿದೆ. ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಗಲಾಟೆಯಲ್ಲಿ ಗಾಯಗೊಂಡಿರುವ ವ್ಯಕ್ತಿ

ಗಲಾಟೆಯಲ್ಲಿ ಗಾಯಗೊಂಡಿರುವ ವ್ಯಕ್ತಿ

  • Share this:
ಚಿಕ್ಕಮಗಳೂರು: ಹಳ್ಳಿ ಫೈಟ್ ಮುಗಿದರೂ ಹಳ್ಳಿಗರ ಫೈಟ್ ನಿಲ್ಲದೆ ಚುನಾವಣೆಯಲ್ಲಿ ಸೋತ ಹಾಗೂ ಗೆದ್ದ ಗುಂಪುಗಳ ಮಧ್ಯೆ ಮಾರಾಮಾಡಿ ನಡೆದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಸಗನಿಪುರ ಗ್ರಾಮದಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಕರ್ತಿಕೆರೆ ಗ್ರಾಮ ಪಂಚಾಯಿತಿಯ ನೆಟ್ಟೇಕೆರೆಹಳ್ಳಿ ಕ್ಷೇತ್ರ 6  ರಲ್ಲಿ ಮೊನ್ನೆ ಬಂದ ಫಲಿತಾಂಶದಲ್ಲಿ ಯತೀಶ್ ಸಗಣಿಪುರ ಎಂಬುವವರು ಗೆಲವು ಸಾಧಿಸಿದ್ದರು. ನಾಗೇಶ್ ಎಂಬುವರು ಯತೀಶ್ ವಿರುದ್ಧ ಸೋತಿದ್ದರು. ಹೊಸ ವರ್ಷದ ಆಚರಣೆ ಹಿನ್ನೆಲೆ ಸಗಣಿಪುರದ ಮಲ್ಲೇಶ್ ಎಂಬುವರ ಮನೆ ಮುಂದೆ ಒಂದು ಗುಂಪು ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ಈ ವೇಳೆ ಮಲ್ಲೇಶ್ ಕುಟುಂಬಸ್ಥರು ಹಾಗೂ ಯತೀಶ್ ಬೆಂಬಲಿಗರ ನಡುವೆ ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದು ಹೋಗಿದೆ.

ಈ ವೇಳೆ ಎರಡು ಗುಂಪಿನ ನಡುವೆ ಪರಸ್ಪರ ಹೊಡೆದಾಟವಾಗಿದೆ. ಆಗ ಸೋತ ಅಭ್ಯರ್ಥಿ ನಾಗೇಶ್ ಸಗಣಿಪುರ ಗ್ರಾಮಕ್ಕೆ ಬಂದಿದ್ದಾನೆ. ಯತೀಶನು ಸ್ಥಳಕ್ಕೆ ಬಂದಾಗ ನಾಗೇಶ್ ಹಾಗೂ ಯತೀಶ್ ನಡುವೆ ಜಗಳವಾಗಿದೆ. ಘಟನೆಯಲ್ಲಿ ಎರಡೂ ಗುಂಪಿನ 10ಕ್ಕೂ ಹೆಚ್ಚು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಲಾಟೆ ನಡೆಯುವ ವೇಳೆ ಒಬ್ಬರಿಗೊಬ್ಬರು ಚಾಕು ಇರಿದುಕೊಂಡು ಎಲ್ಲರೂ ಆಸ್ಪತ್ರೆಯಲ್ಲಿ ಅಕ್ಕಪಕ್ಕದ ಬೆಡ್‍ನಲ್ಲಿ ಮಲಗಿದ್ದಾರೆ. ಓರ್ವನಿಗೆ ಬೆನ್ನಿಗೆ ಚೂರಿ ಹಾಕಿದ್ದರೆ, ಮತ್ತೋರ್ವನಿಗೆ ಪಕ್ಕೆಗೆ ಚಾಕು ತಿವಿದಿದ್ದಾರೆ. ಓರ್ವನ ಕೈ ಮುರಿದಿದ್ದರೆ, ಮತ್ತೋರ್ವನಿಗೆ ತಲೆ, ಕೈಗೆ ತೀವ್ರ ಗಾಯವಾಗಿದೆ. ಓರ್ವನ ತಲೆ ಸುಮಾರು 27 ಹೊಲಿಗೆ ಹಾಕಿದ್ದು, ಮತ್ತೊಬ್ಬರಿಗೆ 12 ಹೊಲಿಗೆ ಹಾಕಿದ್ದಾರೆ. ಒಬ್ಬರ ಮೇಲೋಬ್ಬರು ಆರೋಪಿಸಿಕೊಳ್ಳುತ್ತಿದ್ದು ಎಲ್ಲರೂ ಹೊಡೆದಾಡಿ ಆಸ್ಪತ್ರೆ ಸೇರಿದ್ದಾರೆ. ಆಸ್ಪತ್ರೆಯಲ್ಲೂ ಅವರ ಜಗಳ ನಿಂತಿಲ್ಲ.

ಇದನ್ನು ಓದಿ: ಕೋವಿಡ್ ಮೊದಲ ಸಾವಿಗೆ ಸಾಕ್ಷಿಯಾದ ಕಲಬುರ್ಗಿಯಲ್ಲಿ ಡ್ರೈ ರನ್; ಆರೋಗ್ಯ ಇಲಾಖೆಯಿಂದ ಸಿದ್ಧತೆ

ಮನೆ ಮುಂದಿದ್ದ ಆಪೆ ಆಟೋವಿನ ಗ್ಲಾಸ್ ಪುಡಿ ಮಾಡಿದ್ದಾರೆ. ಗಲಾಟೆಗೆ ಅಕ್ಕಪಕ್ಕದ ಊರಿನ ಜನರೂ ಬಂದಿದ್ದಾರೆಂದು ಒಬ್ಬರ ಮೇಲೋಬ್ಬರು ಆರೋಪಿಸಿದ್ದಾರೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಗ್ರಾಮಾಂತರ ಪೊಲೀಸರು ಎರಡು ಗುಂಪುಗಳನ್ನ ಚದುರಿಸಿದ್ದಾರೆ, ಅಷ್ಟರಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಾವಾಗಿದೆ. ಇನ್ನು ಗುಂಪು ಚದುರಿಸುವ ವೇಳೆಯಲ್ಲಿ  ಓರ್ವ ಪೊಲೀಸ್ ಸಿಬ್ಬಂದಿ ದಾದಫೀರ್ ಎಂಬುವರಿಗೆ ಕೂಡ ಸಣ್ಣಪುಟ್ಟ ಗಾಯವಾಗಿದೆ. ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Published by:HR Ramesh
First published: