ಸಿಗಂಧೂರು ದೇವಸ್ಥಾನ ಕಿತ್ತಾಟ ಪ್ರಕರಣ: ಕೋರ್ಟ್ ಮಧ್ಯಸ್ಥಿಕೆಯಿಂದ ಸುಖಾಂತ್ಯ

ನವರಾತ್ರಿಯ ಚಂಡಿಕಾಯಾಗದ ವಿಚಾರದಲ್ಲಿ ಸಿಗಂಧೂರು ದೇವಸ್ಥಾನದ ಅರ್ಚಕರು ಮತ್ತು ಆಡಳಿತ ಮಂಡಳಿ ಮಧ್ಯೆ ಇದ್ದ ವೈಮನಸ್ಸನ್ನು ಸಾಗರದ ಸಿವಿಲ್ ಕೋರ್ಟ್ ಮಧ್ಯಸ್ಥಿಕೆ ಮೂಲಕ ತಾತ್ಕಾಲಿಕವಾಗಿ ಶಮನ ಮಾಡಿದೆ.

ಸಿಗಂದೂರು ದೇವಾಲಯ

ಸಿಗಂದೂರು ದೇವಾಲಯ

  • Share this:
ಶಿವಮೊಗ್ಗ(ಅ. 21): ಸಿಗಂಧೂರು ದೇವಸ್ಥಾನದಲ್ಲಿ ಆಡಳಿತ ಮಂಡಳಿ ಮತ್ತು ಅರ್ಚಕರ ನಡುವಿನ ಜಗಳ ಪ್ರಕರಣ ಸುಖಾಂತ್ಯಗೊಂಡಿದೆ. ಭಕ್ತರು ಹೂಡಿದ ದಾವೆ ಸದ್ಯಕ್ಕೆ ವಿವಾದವನ್ನು ಬಗೆಹರಿಸಿದೆ. ಸಾಗರದ ಸಿವಿಲ್ ನ್ಯಾಯಾಲಯದ ಮಧ್ಯಸ್ಥಿಕೆಯಿಂದ ಸಿಗಂಧೂರು ದೇವಸ್ಥಾನದ ಅರ್ಚಕರು ಮತ್ತು ಅಡಳಿತ ಮಂಡಳಿ ಮಧ್ಯೆ ಪೂಜೆ ವಿಚಾರದಲ್ಲಿ ಎದ್ದಿದ್ದ ಭಿನ್ನಾಭಿಪ್ರಾಯವನ್ನ ಬದಿಗೊತ್ತಿ ಒಂದು ಇತ್ಯರ್ಥಕ್ಕೆ ಬರಲಾಗಿದೆ.

ಕೊರೋನಾ ಕಾರಣಕ್ಕೆ ನವರಾತ್ರಿ ಸಂದರ್ಭದಲ್ಲಿ ಸಿಗಂಧೂರು ದೇವಸ್ಥಾನದಲ್ಲಿ ಚಂಡಿಕಾಯಾಗ ಮಾಡಲು ಆಡಳಿತ ಮಂಡಳಿ ನಿರಾಕರಿಸಿತ್ತು. ಇದರಿಂದ ಪ್ರಧಾನ ಅರ್ಚಕ ಶೇಷಗಿರಿ ಭಟ್ ಮತ್ತಿತರ ಅರ್ಚಕರು ಅಸಮಾಧಾನಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಧರ್ಮದರ್ಶಿ ಡಾ. ರಾಮಪ್ಪ ಮತ್ತು ಅವರ ಪುತ್ರ ರವಿಕುಮಾರ್ ಅವರ ಮೇಲೆ ಜಗಳ ಮಾಡಿ ಹಲ್ಲೆಗೂ ಯತ್ನಿಸಿದ್ದರು. ಇದು ರಾಜ್ಯಾದ್ಯಂತ ದೊಡ್ಡ ಸುದ್ದಿಯಾದ ಬೆನ್ನಲ್ಲೇ ದೇವಸ್ಥಾನದ ಭಕ್ತರಾದ ಸಂದೀಪ್ ಮತ್ತು ನವೀನ್ ಜೈನ್ ಅವರು ಸಾಗರದ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ಇದನ್ನೂ ಓದಿ: ಗಂಡ, ಅತ್ತೆ ಮತ್ತು ಮಾವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಗೃಹಿಣಿ ; ಮಂಡ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ

ಅರ್ಜಿದಾರರು ದೇವಸ್ಥಾನದ ಪೂಜಾ ವಿಧಿ ವಿಧಾನಗಳಿಗೆ ಆಡಳಿತ ಮಂಡಳಿಯಿಂದ ಯಾವುದೇ ಅಡ್ಡಿಯಾಗದಂತೆ ನಿರ್ಬಂಧಕಾಜ್ಞೆ ನೀಡಬೇಕೆಂದು ಮನವಿ ಮಾಡಿದ್ದರು. ಅರ್ಚಕ ಶೇಷಗಿರಿ ಭಟ್, ಧರ್ಮದರ್ಶಿ ಡಾ. ರಾಮಪ್ಪ ಮತ್ತು ಅವರ ಮಗ ರವಿಕುಮಾರ್ ಅವರನ್ನು ಪಾರ್ಟಿಯನ್ನಾಗಿ ಮಾಡಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸಿವಿಲ್ ಕೋರ್ಟ್, ಮಧ್ಯಸ್ಥಿಕೆಗಾರರ ಉಪಸ್ಥಿತಿಯಲ್ಲಿ ರಾಜೀ ಸಂಧಾನ ಮಾಡಿಕೊಳ್ಳುವಂತೆ ಸೂಚಿಸಿ ಮಧ್ಯಸ್ಥಿಗಾರರನ್ನು ನೇಮಿಸಿತು. ಕೋರ್ಟ್ ಸೂಚನೆಯಂತೆ ನಡೆದ ರಾಜೀ ಸಂಧಾನ ಯಶಸ್ವಿಯಾಯಿತು.

ಇದನ್ನೂ ಓದಿ: ನಮಗೇನು ತಿನ್ನುವುದಕ್ಕೆ ಅನ್ನ ಸಿಗುತ್ತಿದೆ.. ಜಾನುವಾರುಗಳ ಗತಿಯೇನು - ಭೀಮೆ ಸಂತ್ರಸ್ತರ ಗೋಳು

ರಾಜಿಯಾದ ಅಂಶಗಳು:
1) ಕೋವಿಡ್ ಹಿನ್ನೆಲೆಯಲ್ಲಿ ನವರಾತ್ರಿಯಲ್ಲಿ ದೇವಸ್ಥಾನದಲ್ಲಿ ಕೆಲ ನಿರ್ಬಂಧಗಳೊಂದಿಗೆ ಚಂಡಿಕಾಯಾಗ ಮಾಡುವುದು.
2) ಧರ್ಮದರ್ಶಿ ರಾಮಪ್ಪ ಅವರ ಕುಟುಂಬದವರ ಉಪಸ್ಥಿತಿಯಲ್ಲಿ ಯಾಗ ನೆರವೇರಿಸಬೇಕು
3) ಭಕ್ತರು ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಪಾಲಿಸಬೇಕು.
4) ಪೂಜೆಯ ನಂತರ ಮಂಗಳಾರತಿ ತಟ್ಟೆಯನ್ನು ಅರ್ಚಕರು ಭಕ್ತರ ಬಳಿ ಕೊಂಡೊಯ್ಯುವಂತಿಲ್ಲ. ನಿರ್ದಿಷ್ಟ ಜಾಗದಲ್ಲಿ ಮಂಗಳಾರತಿ ತಟ್ಟೆ ಇಟ್ಟು ಭಕ್ತರಿಗೆ ನಮಸ್ಕರಿಸಲು ಅವಕಾಶ ನೀಡಬೇಕು.

ವರದಿ: ಹೆಚ್.ಆರ್. ನಾಗರಾಜ
Published by:Vijayasarthy SN
First published: