Communal Harmony - ಹಿಂದೂ ದೇವಾಲಯ ಕಟ್ಟಿ ಸೌಹಾರ್ದತೆ ಮೆರೆದ ಕ್ರಿಶ್ಚಿಯನ್!

ಇವರು ಮುಂಬಯಿಯಲ್ಲಿ ವಿಘ್ನ ನಿವಾರಕ ಗಣಪತಿಯನ್ನು ‌ನಂಬಿ ಆರಾದಿಸುತ್ತಿದ್ದರು.‌ ಹಿಂದೊಮ್ಮೆ ಬದುಕಿನಲ್ಲಿ ಅಭಿವೃದ್ಧಿ ಸಾಧಿಸಿದರೆ ವಿನಾಯಕ ದೇವಸ್ಥಾನ ಕಟ್ಟಿ ಕೊಡುತ್ತೇನೆ ಎಂದು ಹರಕೆ ಹೊತ್ತಿದ್ದರಂತೆ . ಅವರ ಎಲ್ಲ ಬಯಕೆಗಳು ಈಡೇರಿವೆಯಂತೆ. ಹೀಗಾಗಿ, ಮುಂಬೈಯಲ್ಲಿದ್ದ ಉದ್ಯಮವನ್ನು ಮಾರಿ ಬಂದ ಹಣದಲ್ಲಿ ಬರೋಬ್ಬರಿ 2 ಕೋಟಿ ರೂ ಖರ್ಚು ಮಾಡಿ ಈ ಭವ್ಯ ದೇವಸ್ಥಾನವನ್ನು ನಿರ್ಮಿಸಿ ಕೊಟ್ಟಿದ್ದಾರೆ.  

ಉಡುಪಿಯ ಶಿರ್ವದಲ್ಲಿ ಇರುವ ಗಣಪತಿ ದೇವಸ್ಥಾನ

ಉಡುಪಿಯ ಶಿರ್ವದಲ್ಲಿ ಇರುವ ಗಣಪತಿ ದೇವಸ್ಥಾನ

  • Share this:
ಉಡುಪಿ: ಸದಾ ಕೋಮು ಸಂಘರ್ಷ ವಿಚಾರದಲ್ಲಿ ಸುದ್ದಿಯಲ್ಲಿರುತ್ತಿದ್ದ ಕರಾವಳಿ ಕೋಮು ಸೌಹಾರ್ದಕ್ಕೂ ಆಗಾಗ ಸುದ್ದಿಯಾಗುತ್ತದೆ. ಅಂತಹದ್ದೇ ಸೌಹಾರ್ದ ಸುದ್ದಿಯೊಂದು ಈ ಗ್ರಾಮದಲ್ಲಿ ಪ್ರಶಂಸೆಗೆ ಕಾರಣವಾಗಿದೆ. ಉಡುಪಿಯ ಕ್ರೈಸ್ತ ಧರ್ಮದ ವ್ಯಕ್ತಿಯೊಬ್ಬರು ದೇವಸ್ಥಾನ ಕಟ್ಟಿಸಿದ್ದಾರೆ. ಇದು ಉಡುಪಿ ಜಿಲ್ಲೆಯ ಶಿರ್ವ ಮುಖ್ಯರಸ್ತೆಯ ಮಟ್ಟಾರು ಅಟ್ಟಿಂಜ  ಪ್ರದೇಶ ಈ ಘಟನೆಗೆ ಸಾಕ್ಷಿಯಾಗಿರುವ ಗ್ರಾಮ.  ಒಂದು ಬದಿಯಲ್ಲಿ ಮುಸಲ್ಮಾನರ ಮಸೀದಿಯಿದೆ, ಆ ಮಸೀದಿ ಎದುರೇ ಬೃಹತ್  ಸಿದ್ಧಿವಿನಾಯಕ ದೇವಸ್ಥಾನ ನಿರ್ಮಾಣವಾಗಿದೆ. ಇಂತಹ ದೃಶ್ಯ ಕರಾವಳಿಯಲ್ಲಿ ಅಪರೂಪದ ಎನ್ನಬಹುದು. ಕ್ರೈಸ್ತ ವ್ಯಕ್ತಿಯೊಬ್ಬ ತನ್ನ ಹೆತ್ತವರಾದ ತಂದೆ ದಿವಂಗತ ಫೇಬಿಯನ್ ಸಬಾಸ್ಟಿಯನ್ ನಜರತ್ ಮತ್ತು ದಿವಂಗತ ಸಬೀನಾ ನಜರತ್ ಸ್ಮರಣಾರ್ಥವಾಗಿ ಈ ದೇವಸ್ಥಾನ ಕಟ್ಟಿಸಿರುವುದು ಎಲ್ಲರ ಗಮನ ಸೆಳೆದಿದೆ.

ಹೀಗೆ ಸಿದ್ಧಿವಿನಾಯಕ ದೇವಸ್ಥಾನವನ್ನು ನಿರ್ಮಿಸಿ ಹಿಂದೂಗಳಿಗೆ ಕೊಡುಗೆಯಾಗಿ ನೀಡಿರುವುದು ಒಬ್ಬ ಕ್ರೈಸ್ತ ವ್ಯಕ್ತಿ ಅನ್ನೋದೆ ವಿಶೇಷ.‌  ದೇವಾಲಯ ನಿರ್ಮಾಣವಾದ ಈ ಸ್ಥಳದಲ್ಲಿ  ಗ್ಯಾಬ್ರಿಯಲ್ ಫೇಬಿಯನ್ ಬಾಲ್ಯದಲ್ಲಿ ತನ್ನ ಪೋಷಕರಾದ ಫೇಬಿಯನ್ ಸಬಾಸ್ಟಿಯನ್ ಹಾಗೂ ಸಬೀನಾ‌‌ ನಜ್ರತ್ ಅವರೊಂದಿಗೆ ವಾಸವಿದ್ದರಂತೆ. ವಯಸ್ಸಾದಂತೆ ಮುಂಬಯಿಗೆ ತೆರಳಿದ ಗ್ಯಾಬ್ರಿಯಲ್‌ ಸ್ವಂತ ಉದ್ಯಮ ಆರಂಭಿಸಿ 40ವರ್ಷಗಳ ಕಾಲ ದುಡಿದಿದ್ದಾರೆ.

ಇವರು ಮುಂಬಯಿಯಲ್ಲಿ ವಿಘ್ನ ನಿವಾರಕ ಗಣಪತಿಯನ್ನು ‌ನಂಬಿ ಆರಾದಿಸುತ್ತಿದ್ದರು.‌ ಹಿಂದೊಮ್ಮೆ ಬದುಕಿನಲ್ಲಿ ಅಭಿವೃದ್ಧಿ ಸಾಧಿಸಿದರೆ ವಿನಾಯಕ ದೇವಸ್ಥಾನ ಕಟ್ಟಿ ಕೊಡುತ್ತೇನೆ ಎಂದು ಹರಕೆ ಹೊತ್ತಿದ್ದರಂತೆ . ಅವರ ಎಲ್ಲ ಬಯಕೆಗಳು ಈಡೇರಿವೆಯಂತೆ. ಹೀಗಾಗಿ, ಮುಂಬೈಯಲ್ಲಿದ್ದ ಉದ್ಯಮವನ್ನು ಮಾರಿ ಬಂದ ಹಣದಲ್ಲಿ ಬರೋಬ್ಬರಿ 2 ಕೋಟಿ ರೂ ಖರ್ಚು ಮಾಡಿ ಈ ಭವ್ಯ ದೇವಸ್ಥಾನವನ್ನು ನಿರ್ಮಿಸಿ ಕೊಟ್ಟಿದ್ದಾರೆ.

ಆದ ಕಾರಣ ಈ ದೇವಸ್ಥಾನ ತಲೆಯೆತ್ತುವಂತಾಗಿದೆ. ಸಧ್ಯ ಸತೀಶ್ ಶೆಟ್ಟಿ ಎಂಬವರು ಈ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಗ್ಯಾಬ್ರಿಯಲ್  ಫೆಬಿಯನ್ ಅವರಿಗೆ ವಯಸ್ಸು 77 ಆದ್ರೂ ಇನ್ನೂ ಬ್ಯಾಚುಲರ್. ತಮ್ಮ ಮನೆ ಸಣ್ಣದಾದರು ಬೃಹತ್ ದೇವಾಲಯ ಕಟ್ಟಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಇದ್ದ ಹಣವನ್ನ ಮತ್ತೊಬ್ಬರ ಸಹಾಯಕ್ಕೆ ಬಳಸುವ ಇವರು ತಮ್ಮ ತಂದೆಯಿಂದ ಬಳುವಳಿಯಾಗಿ ಬಂದ ಜಾಗದಲ್ಲಿ ಶೇಖರಿಸಿಟ್ಟ ಹಣವನ್ನ ಬಳಸಿ  ಭವ್ಯ ದೇವಸ್ಥಾನವನ್ನು ನಿರ್ಮಿಸಿ  ಹಸ್ತಾಂತರಿಸಿದ್ದಾರೆ..

ಇನ್ನು ಈ ದೇವಾಲಯಕ್ಕೆ ಎಷ್ಟು ಖರ್ಚು ಮಾಡಿದ್ದೀರಿ, ಯಾವ ಉದ್ದೇಶಕ್ಕೆ ಕಟ್ಟಿಸಿದ್ದೀರಿ ಹೀಗೆಲ್ಲ ಕೇಳಿದ್ರೆ ಗ್ಯಾಬ್ರಿಯಲ್ ಉತ್ತರ ಹೆತ್ತವರ ಸವಿನೆನಪಿಗೆ ಕಟ್ಟಿಸಿದ್ದೇ ಪ್ರೇರಣೆ.‌ ಹಣ ಎಷ್ಟು ಖರ್ಚಾಗಿದೆ ಗೊತ್ತಿಲ್ಲ.‌ ನಮ್ಮ ಹಿಂದೂ ಸಹೋದರರಿಗೆ ಉಪಯೋಗವಾಗುತ್ತೆ ಅಷ್ಟೇ ಸಾಕು.‌ ನನಗೆ ಸಾರ್ಥಕತೆ ಇದೆ ಅಂತಾರೆ ಗ್ಯಾಬ್ರಿಯಲ್.‌

ಇದನ್ನೂ ಓದಿ: ಜೋಡೆತ್ತುಗಳಂತೆ ಕೆಲಸ ಮಾಡಿ: ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​ಗೆ ರಾಹುಲ್ ಗಾಂಧಿ ಸಲಹೆ

ದೇವಸ್ಥಾನದಲ್ಲಿ ಆವರಣ ಗೋಡೆ, ಬಾವಿ, ನೈವೇದ್ಯ ಕೋಣೆ, ಅರ್ಚಕರಿಗೆ ವಾಸ್ತವ್ಯದ ಮನೆ ಹೀಗೆ ಎಲ್ಲವನ್ನೂ ಅತ್ಯಂತ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ನೀವು ನಂಬಲಿಕ್ಕಿಲ್ಲ,  ಕಳೆದ ಎರಡು ದಿನಗಳಿಂದ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದ್ದು, ಗ್ಯಾಬ್ರಿಯಲ್ ಅವರು ಇದಕ್ಕೆ ಸಾಕ್ಷಿಯಾಗಿದ್ದಾರೆ. ಇದಲ್ಲವೇ ಕರಾವಳಿಯ ಧರ್ಮಗಳ ನಡುವಣ ಸೌಹಾರ್ದತೆ ಅಂದ್ರೆ ಇದೆ ಅಲ್ಲವೇ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: