ಹೂಬಳ್ಳಿ ಹುಬ್ಬಳ್ಳಿಯಾಗಿದ್ದನ್ನು ತೋರಿಸಲು ಹೊರಟ ‘ಛೋಟಾ ಬಾಂಬೆ’ – ಆಡಿಯೋ ಬಿಡುಗಡೆ

ಯೂಸುಫ್ ಖಾನ್ ಅವರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ರೂಪುಗೊಂಡಿರುವ ಛೋಟಾ ಬಾಂಬೆ ಕನ್ನಡ ಸಿನಿಮಾದಲ್ಲಿ ಹುಬ್ಬಳ್ಳಿಯ ರೋಚಕ ಅಪರಾಧ ಜಗತ್ತಿನ ಕಥೆ ಅನಾವರಣಗೊಂಡಿದೆ. ಮೇ ತಿಂಗಳಲ್ಲಿ ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಛೋಟಾ ಬಾಂಬೆ ಧ್ವನಿದುರಳಿ ಬಿಡುಗಡೆ

ಛೋಟಾ ಬಾಂಬೆ ಧ್ವನಿದುರಳಿ ಬಿಡುಗಡೆ

  • Share this:
ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಮುಖ ನಗರಗಳಲ್ಲಿ ಒಂದಾದ ಹುಬ್ಬಳ್ಳಿ ಕರ್ನಾಟಕದ ವಾಣಿಜ್ಯ ನಗರಿ ಎಂದೇ ಖ್ಯಾತಿ ಪಡೆದಿದೆ. ಒಂದೊಮ್ಮೆ ಹೂಬಳ್ಳಿಯ ಊರೆನಿಸಿಕೊಂಡಿದ್ದ ನಗರ ನಂತರದಲ್ಲಿ ಹುಬ್ಬಳ್ಳಿ ಎಂದಾಗಿದೆ. ವಾಣಿಜ್ಯ ಚಟುವಟಿಕೆಗಳ ಕೇಂದ್ರವೆನಿಸಿಕೊಂಡಿರೋ ಹುಬ್ಬಳ್ಳಿಯನ್ನು ‘ಚೋಟಾ ಮುಂಬೈ’ ಅಥವಾ ‘ಚೋಟಾ ಬಾಂಬೆ’ ಎಂದೂ ಕರೆಯಲಾಗುತ್ತದೆ. ಹೀಗೆ ಹೂಬಳ್ಳಿಯ ಊರಾಗಿದ್ದ ಹುಬ್ಬಳ್ಳಿ ಚೋಟಾ ಬಾಂಬೆ ಆದ ಕಥಾನಕವನ್ನೊಳಗೊಂಡ ಚಲನಚಿತ್ರವನ್ನು ಹುಬ್ಬಳ್ಳಿಯವರೇ ರೂಪಿಸಿದ್ದಾರೆ.

ಹುಬ್ಬಳ್ಳಿಯವರೇ ಆಗಿರುವ ಯೂಸುಫ್ ಖಾನ್ ಅವರ ನಿರ್ದೇಶನ, ನಿರ್ಮಾಣದಲ್ಲಿ ಛೋಟಾ ಬಾಂಬೆ ಚಲನಚಿತ್ರ ರೂಪುಗೊಂಡಿದೆ. ಇಬ್ಬರು ನಾಯಕರನ್ನೊಳಗೊಂಡ ಈ ಚಿತ್ರದಲ್ಲಿ ಸೂರಜ್ ಸಾಸನೂರ್ ಮತ್ತು ಅಭಿಷೇಕ್ ಜಾಲಿಹಾಳ ನಾಯಕ ನಟರಾಗಿ ನಟಿಸಿದ್ದಾರೆ. ಹೂಬಳ್ಳಿಯಂತಿದ್ದ ಊರು ಹುಬ್ಬಳ್ಳಿಯಾಗಿ ರೂಪುಗೊಂಡಿದ್ದು, ಅಲ್ಲಿ ನಡೆದ ಘಟನೆ, ರೌಡಿಯಿಸಂ, ಅಪರಾಧ ಜಗತ್ತು ಇತ್ಯಾದಿ ಎಲ್ಲವನ್ನೂ ಒಳಗೊಂಡ ಕಥೆಯನ್ನು ಚಿತ್ರ ಹೊಂದಿದೆ. ಹುಬ್ಬಳ್ಳಿಯನ್ನು ಮತ್ತೆ ಹೂಬಳ್ಳಿ ಮಾಡೋ ಪರಿಕಲ್ಪನೆಯೊಂದಿಗೆ ಚಿತ್ರ ಮುಗಿಯಲಿದೆ ಎಂದು ನಿರ್ದೇಶಕ ಯೂಸುಫ್ ಖಾನ್ ಅಭಿಪ್ರಾಯವಾಗಿದೆ. ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದ ಯೂಸುಫ್ ಖಾನ್ ಅವರೇ  ಚಿತ್ರ ಕಥೆ ರಚಿಸಿದ್ದಾರೆ.

ಚಿತ್ರದಲ್ಲಿ ಬಹುತೇಕ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಹೀರೋ, ಹೀರೋಯಿನ್, ವಿಲನ್, ಸಹ ಪಾತ್ರಧಾರಿಗಳು ಹೀಗೆ ಬಹುತೇಕರು ಉತ್ತರ ಕರ್ನಾಟಕ್ಕೆ ಸೇರಿದವರಾಗಿದ್ದಾರೆ. ಹುಬ್ಬಳ್ಳಿ, ಧಾರವಾಡ, ಮುಂಡಗೋಡ ಸೇರಿ ಉತ್ತರ ಕರ್ನಾಟಕದ ಹಲವೆಡೆ ಚಿತ್ರೀಕರಣ ಮಾಡಲಾಗಿದೆ. ಉತ್ತರ ಕರ್ನಾಟಕದ ಕಥೆ, ಉತ್ತರ ಕರ್ನಾಟಕದವರ ಅಭಿನಯ, ಉತ್ತರ ಕರ್ನಾಟಕದವರ ನಿರ್ದೇಶನ ಎಲ್ಲವೂ ಈ ಭಾಗಕ್ಕೆ ಸೆರಿದವಾಗಿರೋದ್ರಿಂದ ಛೋಟಾ ಬಾಂಬೆ ಧ್ವನಿ ಸುರಳಿಯನ್ನೂ ಈ ಭಾಗದಲ್ಲಿ ಮಾಡಲಾಯಿತು.

ಇದನ್ನೂ ಓದಿ: ಯುವರತ್ನ ಸಿನಿಮಾಗೆ ಅಮೇಜಾನ್ ಪ್ರೈಮ್ ಕೊಟ್ಟ ಮೊತ್ತವೆಷ್ಟು ಗೊತ್ತಾ? `ಕೆಜಿಎಫ್ ದಾಖಲೆ ಉಡೀಸ್ ಮಾಡಿದ ಪುನೀತ್ ಚಿತ್ರ !

ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್​ನಲ್ಲಿ ಚೋಟಾ ಬಾಂಬೇ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಯಿತು. ನಿರ್ದೇಶಕ ಕಂ ನಿರ್ಮಾಪಕ ಯೂಸುಫ್ ಖಾನ್, ದೀಪಕ್ ಬೊಂಗಾಳೆ, ಮಾಜಿ ಸೈನಿಕ ಬಸಪ್ಪ ಇಂಚಲ, ಮಾಜಿ ಶಾಸಕ ಅಶೋಕ ಕಾಟವೆ, ನಾಯಕ ನಟರಾದ ಸೂರಜ್ ಸಾಸನೂರ್, ಅಭಿಷೇಕ್ ಜಾಲಿಹಾಳ, ನವೀನ್ ಮೀಡಿಯಾ ಸಲ್ಯೂಷನ್ಸ್​ನ ಜಿ.ಜಿ ದ್ಯಾವನಗೌಡ್ರ ಮತ್ತಿತರರು ಉಪಸ್ಥಿತರಿದ್ದು, ಧ್ವನಿ ಸುರಳಿ ಬಿಡುಗಡೆ ಮಾಡಿದರು. ಹುಬ್ಬಳ್ಳಿಯ ಚಿತ್ರ ತಂಡದ ಪ್ರಯತ್ನಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಈ ವೇಳೆ ಮಾತನಾಡಿದ ನಾಯಕ ನಟ ಸೂರಜ್ ಸಾಸನೂರ, ಚೋಟಾ ಬಾಂಬೆ ಕ್ಲಾಸ್ ಮತ್ತು ಮಾಸ್ ಎರಡೂ ಆಗಿದೆ. ಎಲ್ಲ ವರ್ಗದ ಜನರಿಗೂ ಈ ಚಿತ್ರ ಇಷ್ಟವಾಗುತ್ತೆ. ಪ್ರೇಕ್ಷಕರ ಆಶೀರ್ವಾದ ಸಿಕ್ಕೇ ಸಿಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸ್ಟೇರಿಂಗ್ ಹಿಡಿದ ಕೆಲ ಚಾಲಕರು; ತಟ್ಟೆ, ಗ್ಲಾಸ್ ಹಿಡಿದು ಪ್ರತಿಭಟಿಸಿದ ಸಾರಿಗೆ ಸಿಬ್ಬಂದಿ ಕುಟುಂಬದ ಸದಸ್ಯರು

ಸಂಗೀತ ನಿರ್ದೇಶಕ, ಗೀತ ರಚನೆಕಾರ ಶಿವು ಭೇರ್ಗಿ ಮಾತನಾಡಿ, ಚಿತ್ರದಲ್ಲಿ ಐದು ಹಾಡುಗಳಿವೆ. ಎಲ್ಲ ಹಾಡುಗಳೂ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಸುಮಧುರವಾಗಿವೆ ಎಂದರು.

ಒಟ್ಟಾರೆ ಹುಬ್ಬಳಿಯವರೇ ಹೊಸ ಪ್ರತಿಭೆಗಳನ್ನು ಹಾಕಿಕೊಂಡು ರೂಪಿಸಿರೋ ಚೋಟಾ ಬಾಂಬೇ ಆಡಿಯೋ ಸಂಭ್ರಮದಿಂದ ರಿಲೀಸ್ ಆಗಿದೆ. ಚಿತ್ರದ ಎಲ್ಲ ಕಾರ್ಯವೂ ಪೂರ್ಣಗೊಂಡಿದ್ದು, ತೆರೆಗೆ ಸಿದ್ಧವಾಗಿದೆ. ಮೇ ತಿಂಗಳಲ್ಲಿ ಚಿತ್ರವನ್ನು ರಿಲೀಸ್ ಮಾಡಲು ತಂಡ ಉತ್ಸುಕವಾಗಿದೆ. ಆದರೆ, ಈ ಚಿತ್ರದ ಬಿಡುಗಡೆಗೆ ಕೋವಿಡ್ ಕಾರ್ಮೋಡ ಕವಿಯುವಂತಾಗಿದೆ.

ವರದಿ: ಶಿವರಾಮ ಅಸುಂಡಿ
Published by:Vijayasarthy SN
First published: