HOME » NEWS » District » CHITRADURGA POLICE ARREST 3 PERSONS FOR MURDERING A SHEPHERD VTC SNVS

Shepherd Murder - ಮದ್ಯ ಕುಡಿಸಿ ತಲೆಮೇಲೆ ಕಲ್ಲು ಎತ್ತಿಹಾಕಿ ಕೊಲೆ; 12ಗಂಟೆಯಲ್ಲಿ ಹಂತಕರ ಬಂಧನ

ಮಾಲೀಕ ಕಡಿಮೆ ದುಡ್ಡಿಗೆ ಕುರಿ ಕೊಡಲಿಲ್ಲವೆಂಬ ಸಿಟ್ಟಿನಲ್ಲಿ ಕುರಿಗಾಹಿಯನ್ನ ಹತ್ಯೆಗೈದು ಆರು ಕುರಿಗಳನ್ನ ಹೊತ್ತೊಯ್ದಿದ್ದ ಮೂವರು ಆರೋಪಿಗಳನ್ನ ಚಿತ್ರದುರ್ಗ ಪೊಲೀಸರು ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ.

news18-kannada
Updated:April 18, 2021, 10:30 AM IST
Shepherd Murder - ಮದ್ಯ ಕುಡಿಸಿ ತಲೆಮೇಲೆ ಕಲ್ಲು ಎತ್ತಿಹಾಕಿ ಕೊಲೆ; 12ಗಂಟೆಯಲ್ಲಿ ಹಂತಕರ ಬಂಧನ
ಚಿತ್ರದುರ್ಗದಲ್ಲಿ ಕುರಿಗಾಯಿಯ ಹತ್ಯೆಗೈದ ಹಂತಕರು
  • Share this:
ಚಿತ್ರದುರ್ಗ: ಆ ಗ್ರಾಮದ ಯುವಕರು ಯಾರದ್ದೋ ಕುರಿಗಳನ್ನ ಕದ್ದು ಯುಗಾದಿ, ರಂಜಾನ್​ನಲ್ಲಿ ಹೆಚ್ಚು ಬೆಲೆಗೆ ಮಾರಾಟ ಮಾಡಲು ಸ್ಕೆಚ್ ಹಾಕಿದ್ರು. ಕುರಿ ಕಳ್ಳತನ ಮಾಡೋಕೆ ಸ್ಕೆಚ್ ಹಾಕಿದ್ದವರು ಅನ್ಯಾಯವಾಗಿ ಕುರಿಗಾಹಿ ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆ ಮಾಡಿದ್ದರು. ಅಷ್ಟೆ ಅಲ್ಲದೇ ನಾವೇನೂ ಮಾಡಿಯೇ ಇಲ್ಲ ಅನ್ನೊ ಥರ ಊರಲ್ಲೇ ಓಡಾಡಿಕೊಂಡಿದ್ರು. ಆದರೆ ಹತ್ಯೆ ಆರೋಪಿಗಳ ಬೆನ್ನು ಹತ್ತಿದ ಚಿತ್ರದುರ್ಗ ಪೋಲೀಸರು, ದೂರು ದಾಖಲಿಸಿ ಕೊಂಡ 12 ಗಂಟೆಯಲ್ಲಿ ಮೂರು ಜನ ಕೊಲೆ ಆರೋಪಿಗಳ ಹೆಡಿಮುರಿ ಕಟ್ಟಿ ಬಂಧಿಸಿ ಜೈಲಿಗಟ್ಟಿದ್ದಾರೆ. ಕದ್ದ ಕುರಿ ಹಣಕ್ಕಾಗಿ ಕೊಲೆ ಮಾಡಿದ್ದ ಆ ಮೂರು ಜನ ಯುವಕರು ಜೈಲಲ್ಲಿ ಮುದ್ದೆ ಮುರಿಯುವಂತಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಗ್ರಾಮದ ರುದ್ರಮ್ಮ ಎಂಬುವರ ಬಳಿ ಕುರಿಗಾಹಿಯಾಗಿ ಕೆಲಸ ಮಾಡುತ್ತಿದ್ದ ರಾಮಜ್ಜ ಏಪ್ರಿಲ್ 10 ರಂದು ಕುರಿ ಮೇಯಿಸಲು ಹೋದವನು ವಾಪಾಸ್ ಮನೆಗೆ ಬಂದಿರಲಿಲ್ಲ. ಆದರೆ ಆತ ಮತ್ತೆ ಪತ್ತೆಯಾಗಿದ್ದೇ ಹೆಣವಾಗಿ. ಅದು ಆ ಊರಿನ ಜನರನ್ನ ಬೆಚ್ಚಿ ಬೀಳುವಂತೆ ಮಾಡಿತ್ತು. ಅದೂ ನಾಲ್ಕು ದಿನಗಳು ಕಳೆದ ಬಳಿಕ. ಗ್ರಾಮದ ಗಂಗಾಧರಪ್ಪ ಎಂಬುರ ತೋಟದಲ್ಲಿ ರಾಮಜ್ಜ ಕೊಲೆಯಾಗಿದ್ದು ಬೆಳಕಿಗೆ ಬಂದಿತ್ತು. ಬಳಿಕ ಕುರಿ ಸಾಕಿದ್ದ ರುದ್ರಮ್ಮ ಪ್ರಕರಣ ಕುರಿತು ಭರಮಸಾಗರ ಠಾಣೆಯಲ್ಲಿ ದೂರು ನೀಡಿದ್ದರು. ದೂರನ್ನ ಆದರಿಸಿ ಪ್ರಕರಣದ ಬೆನ್ನು ಹತ್ತಿದ ಪೋಲೀಸರು ಸಿರಿಗೆರೆ ಗ್ರಾಮದ ರವಿ, ರವಿಕಿರಣ, ರಘು ಎಂಬ ಮೂರು ಜನ ಆರೋಪಿಗಳನ್ನ ಬಂಧಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ, ಬಸವಕಲ್ಯಾಣಕ್ಕಿಂತ ಮಸ್ಕಿಯಲ್ಲಿ ಭರ್ಜರಿ ಮತದಾನ; ಪಿಪಿಇ ಕಿಟ್ ಧರಿಸಿಯೇ ಮತದಾನ ಮಾಡಿದ ಅಭ್ಯರ್ಥಿ

ಕೊಲೆ ಆರೋಪಿಗಳು ಪ್ರಕರಣ ಕುರಿತು ಬಾಯಿ ಬಿಟ್ಟಿದ್ದು, ಕುರಿ ಪಟ್ಲಿ ಖದಿಯುವ ಸಲುವಾಗಿ ಅಮಾಯಕ ಕುರಿಗಾಹಿ ರಾಮಜ್ಜನಿಗೆ ಮದ್ಯ ಕುಡಿಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ರುದ್ರಮ್ಮ ಸಾಕಿದ್ದ 35 ಕುರಿಗಳಲ್ಲಿ ಐದು ಕುರಿಗಳನ್ನ ಕದ್ದೊಯ್ದಿದ್ದರು. ಕುರಿಗಳನ್ನ ಕದ್ದು ಕಡೂರು ಸಂತೆಯಲ್ಲಿ 27 ಸಾವಿರಕ್ಕೆ ಮೂರು ಕುರಿಗಳನ್ನ ಮಾರಿ ಎರಡು ಪಟ್ಲಿಯನ್ನ ತಾವೇ ಇಟ್ಟುಕೊಂಡಿದ್ದಾಗಿ ಇವರು ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾರೆ.

ಇನ್ನು, ಕೊಲೆಯಾದ ರಾಮಜ್ಜ ಮೂಲತಃ ದಾವಣಗೆರೆ ಜಿಲ್ಲೆ ನಂದಿಗೆರನಹಳ್ಳಿ ಗ್ರಾಮದವರಾಗಿದ್ದು ಸಿರಿಗೆರೆಯ ರುದ್ರಮ್ಮ ಬಳಿ ಕುರಿಕಾಯುವ ಕೆಲಸ ಮಾಡುತ್ತಿದ್ದರು. ಈ ಹಿಂದೆ ರುದ್ರಮ್ಮ ಬಳಿ ಕೊಲೆ ಆರೋಪಿಗಳು ಕಡಿಮೆ ಬೆಲೆಗೆ ಕುರಿಗಳನ್ನ ಕೇಳಿದ್ದರು. ಅವರು ಕೊಡದ ಕಾರಣಕ್ಕೆ ಕುರಿಗಳನ್ನ ಕದಿಯಲು‌ ಸ್ಕೆಚ್ ಹಾಕಿ ಅಮಾಯಕ ರಾಮಜ್ಜನ ಪ್ರಾಣವನ್ನೇ ತೆಗೆದಿದ್ದಾರೆ.

ಇದನ್ನೂ ಓದಿ: Crime News: ಕಡೆಗೂ ಸಿಕ್ಕಿದ ಕೊಲೆ ಆರೋಪಿ; 17ವರ್ಷದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ ಚಿಕ್ಕಮಗಳೂರು ಪೊಲೀಸರು

ಬಂಧಿತರಿಂದ ಕೊಲೆಗೆ ಬಳಸಿದ್ದ ಒಂದು ಕಾರು, ಒಂದು ಬೈಕ್, ಮೊಬೈಲ್ ಹಾಗೂ ಕುರಿಗಳನ್ನ ಪೋಲೀಸರು ವಶಪಡಿಸಿಕೊಂಡಿದ್ದಾರೆ. ಇತ್ತ ಹೊಟ್ಟೆ ಪಾಡಿನ ಕೂಲಿಗಾಗಿ ಕುರಿ ಕಾಯುತ್ತಿದ್ದ ರಾಮಜ್ಜ ಏನೂ ಅರಿಯದೆ ಕೊಲೆಯಾಗಿರುವುದು ದುರ್ದೈವವೇ ಸರಿ.ವರದಿ: ವಿನಾಯಕ ತೊಡರನಾಳ್
Published by: Vijayasarthy SN
First published: April 18, 2021, 10:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories