Obanna Nayaka Grave: ದುರ್ಗದ ದೊರೆ ಓಬಣ್ಣ ನಾಯಕನ ಸಮಾಧಿ ಧ್ವಂಸ; ಐತಿಹಾಸಿಕ ಸ್ಮಾರಕಗಳ ಕುರುಹುಗಳ ರಕ್ಷಣೆಯಲ್ಲಿ ಪುರಾತತ್ವ ಇಲಾಖೆ ವಿಫಲ!

ದುರ್ಗದ ಕೋಟೆಗೆ ಪಾಳೇಗಾರರು ಕಳಶ ಪ್ರಾಯವಾಗಿದ್ದು, ದೊರೆಗಳ ಆಡಳಿತಕ್ಕೆ ಶಾಸನ, ಸ್ಮಾರಕಗಳೆ ಸಾಕ್ಷಿಯಾಗಿವೆ. ಆದರೆ ಇಂಥ ದುರ್ಗದ ರಣಕಲಿಯ ಸ್ಮಾರಕ ರಾತ್ರೋ ರಾತ್ರಿ ಧ್ವಂಸವಾಗಿದೆ.  ಇದಕ್ಕೆ ಸೂಕ್ತ ರಕ್ಷಣೆ ನೀಡಬೇಕಿದ್ದ ಪುರಾತತ್ವ ಇಲಾಖೆ ಅಧಿಕಾರಿಗಳ ವಿರುದ್ದವೂ ಕೂಡ ದುರ್ಗದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗ ಧ್ವಂಸವಾಗಿರುವ ಓಬಣ್ಣ ನಾಯಕ ಸಮಾಧಿ (ಸಂಗ್ರಹ ಚಿತ್ರ)

ಈಗ ಧ್ವಂಸವಾಗಿರುವ ಓಬಣ್ಣ ನಾಯಕ ಸಮಾಧಿ (ಸಂಗ್ರಹ ಚಿತ್ರ)

  • Share this:
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ ಎಪ್ಪತ್ತೇಳು ಪಾಳೇಪಟ್ಟಿನ ಎಂಟೆದೆಯ ಭಂಟ ಓಬಣ್ಣ (Obanna Nayaka) ನಾಯಕ. ಶೌರ್ಯ, ಪರಾಕ್ರಮದಿಂದಲೇ ದುರ್ಗದ ಮಣ್ಣಲ್ಲಿ ಗಾದರಿ ಮಲೆ ಹೆಬ್ಬುಲಿ ಎಂದು ಖ್ಯಾತಿಯಾಗಿರುವವರು. ದೀರತನಕ್ಕೆ ಹೆಸರಾಗಿದ್ದ ಆ ದೀರ, ಶತ್ರುಗಳ ಸೈನ್ಯದ ಎದೆಗೆ ಎದೆಯೊಡ್ಡಿ  ಚಿನ್ಮೂಲಾದ್ರಿ ಮಣ್ಣಲ್ಲಿ ಹೋರಾಡಿದ ಧೀಮಂತ ನಾಯಕ. ಇಂಥ ನಾಯಕನ ಸಮಾಧಿ ತುಂಡು ಭೂಮಿ ಆಸೆಗೆ ದ್ವಂಸವಾಗಿದ್ದು (Gave Demolish), ದುರ್ಗದ ಜನರಲ್ಲಿ ಆಕ್ರೋಶ ಭುಗಿಲೆದ್ದಿದೆ. ಸಮಾಧಿ ಧ್ವಂಸ ಮಾಡಿದ ಕಿಡಿಗೇಡಿತನ ಮಾಡಿದವರ ವಿರುದ್ದ ನಾಯಕ ಸಮುದಾಯದ ಮುಖಂಡರು ಕ್ರಮಕ್ಕೆ ಆಗ್ರಹಿಸಿದ್ದಾರೆ. 

ವೈವಿಧ್ಯತೆ, ಕಲೆ, ಸಂಸ್ಕೃತಿ, ಐತಿಹಾಸಿಕ, ಶೌರ್ಯ ಪರಂಪರೆಯ ಹಿನ್ನಲೆಯ ನಮ್ಮ ರಾಜ್ಯ ಕರ್ನಾಟಕ. ಮಧ್ಯ ಕರ್ನಾಟಕದ ಹೆಬ್ಬಾಗಿಲು ಕೋಟೆನಾಡು ಚಿತ್ರದುರ್ಗ. ದುರ್ಗ ಅಂದ್ರೆ ಶೌರ್ಯ, ಪರಾಕ್ರಮ ರೊಚ್ಚು, ಕಿಚ್ಚಿಗೆ ಹೆಸರಾದ ಗಂಡು ಮೆಟ್ಟಿದ ಭೂಮಿ. ಇಂಥ ಮಣ್ಣಲ್ಲಿ ಶೌರ್ಯ, ಸಾಹಸ, ಪರಾಕ್ರಮ ಶಾಲಿಗಳು ಹುಟ್ಟಿದ್ದಾರೆ, ಹೆಸರು ಉಳಿಸಿ ಹೋಗಿದ್ದಾರೆ. ದುರ್ಗದ ಕೋಟೆಗೆ ಪಾಳೇಗಾರರು ಕಳಶ ಪ್ರಾಯವಾಗಿದ್ದು, ದೊರೆಗಳ ಆಡಳಿತಕ್ಕೆ ಶಾಸನ, ಸ್ಮಾರಕಗಳೆ ಸಾಕ್ಷಿಯಾಗಿವೆ. ಆದರೆ ಇಂಥ ದುರ್ಗದ ರಣಕಲಿಯ ಸ್ಮಾರಕ ರಾತ್ರೋ ರಾತ್ರಿ ಧ್ವಂಸವಾಗಿದೆ.

ಚಿನ್ಮೂಲಾದ್ರಿ ಸಂಸ್ಥಾನದ  ದೊರೆ ರಾಜಾ ಓಬಣ್ಣ ನಾಯಕ, 1603 ರಲ್ಲಿ‌ ದುರ್ಗದ ಪಾಳೇಪಟ್ಟಿನ ಹಳಿಯೂರು ಗ್ರಾಮದ ಬಳಿ ಹತನಾಗಿದ್ದ. ಇದೇ ರಣಭೂಮಿಯಲ್ಲಿ ಈ ಹರಿ ಭಯಂಕರನ ಸಮಾಧಿ ಮಾಡಲಾಗಿತ್ತು. ಇದೇ ಸಮಾಧಿ ಅಂದಿನಿಂದ ಆತನ ಸ್ಮಾರಕವಾಗಿ ಇಲ್ಲಿಯ ಜನರು ಪೂಜೆ ಮಾಡುತ್ತಿದ್ದರು. ಆದರೆ ಇದೇ ಗ್ರಾಮದ  ಸರ್ವೆ ನಂಬರ್ 105/2 ಜಮೀನನ್ನ ಇತ್ತಿಚೆಗೆ ಚಿತ್ರದುರ್ಗ ನಗರದ ನಗರಸಭೆ ಮಾಜಿ ಉಪಾಧ್ಯಕ್ಷೆ ರುದ್ರಾಣಿ  ಗಂಗಾಧರ್ ಖರೀದಿ ಮಾಡಿದರು. ಖರೀದಿ ಮಾಡಿದ ಕೆಲವೇ ದಿನಗಳಲ್ಲಿ ರಾಜಾ ಓಬಣ್ಣ ನಾಯಕರ ಸ್ಮಾರಕ ನೆಲಸಮ ಮಾಡಿದ್ದು, ಗುರುತು ಸಿಗದಂತೆ ಧ್ವಂಸಗೊಳಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಅಲ್ಲದೆ ದುರ್ಗದ ದೊರೆ ಓಬಣ್ಣ ನಾಯಕರ ಸಮಾಧಿ ಚಿತ್ರಣವನ್ನೇ ರುದ್ರಾಣಿ ಗಂಗಾಧರ್ ಬದಲಿಸಿದ್ದು, ಇದೀಗ ಜಿಲ್ಲೆಯ ವಾಲ್ಮೀಕಿ ಸಮುದಾಯವನ್ನ ಕೆರಳಿಸಿದೆ. ಇನ್ನೂ ದುರ್ಗದ ದೊರೆ ಓಬಣ್ಣ ನಾಯಕರ ಸಮಾಧಿ ಧ್ವಂಸ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಜಿಲ್ಲೆಯ ಹಲವೆಡೆ ರುದ್ರಾಣಿ ಗಂಗಾಧರ್ ವಿರುದ್ದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗದಲ್ಲಿ ನಾಯಕ ಸಮುದಾಯದ ಮುಖಂಡರು ಪ್ರತಿಭಟನೆಗಳನ್ನೂ ಕೂಡಾ ನಡೆಸಿದ್ದು ರುದ್ರಾಣಿ ಗಂಗಾಧರ್ ಬಂಧನಕ್ಕೆ ಆಗ್ರಹಿಸಿದ್ದಾರೆ. ಇನ್ನೂ ಈ ಪ್ರಕರಣದ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸ್ಮಾರಕ ಧ್ವಂಸ ಕುರಿತು ಚಿತ್ರನಾಯಕ ವೇದಿಕೆಯ ಪ್ರಶಾಂತ್ ಕುಮಾರ್ ದೂರು ದಾಖಲಿಸಿದ್ದು, ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಇದನ್ನು ಓದಿ: HD Kumaraswamy: ರಾಜ್ಯಕ್ಕೆ ಬಂದ ಲೋಕಸಭೆ ಸ್ಪೀಕರ್​ಗೆ ಅಗೌರವ ಸಲ್ಲ: ಜಂಟಿ ಕಲಾಪಕ್ಕೆ ಜೆಡಿಎಸ್ ಹಾಜರಿ ಬಗ್ಗೆ ಕಾರಣ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

ಒಟ್ಟಾರೆ ದುರ್ಗದ ಪಾಳೇಗಾರರ ಆಳ್ವಿಕೆಗೆ ಸಾಕ್ಷಿಯಾಗಿದ್ದ ದೊರೆ ಓಬಣ್ಣ ನಾಯಕರ ಸ್ಮಾರಕವನ್ನೇ ತುಂಡು ಭೂಮಿ ಆಸೆಗೆ ರುದ್ರಾಣಿ ಅವರು ಧ್ವಂಸಗೊಳಿಸಿದ್ದುಅಕ್ಷಮ್ಯ ಅಪರಾಧ, ಇತ್ತ ಐತಿಹಾಸಿಕ ಸ್ಮಾರಕದ ಕುರುಗಳನ್ನು ರಕ್ಷಿಸಬೇಕಾದ ಪುರಾತತ್ವ ಇಲಾಖೆ ಇಂಥ ಕೃತ್ಯ ನಡೆದರೂ ಕಣ್ಣು ಮುಚ್ಚಿ ಕುಳಿತಿರುವುದೂ ನಿರ್ಲಕ್ಷವೇ ಸರಿ. ದುರ್ಗದ ಕೋಟೆಗೆ ಪಾಳೇಗಾರರು ಕಳಶ ಪ್ರಾಯವಾಗಿದ್ದು, ದೊರೆಗಳ ಆಡಳಿತಕ್ಕೆ ಶಾಸನ, ಸ್ಮಾರಕಗಳೆ ಸಾಕ್ಷಿಯಾಗಿವೆ. ಆದರೆ ಇಂಥ ದುರ್ಗದ ರಣಕಲಿಯ ಸ್ಮಾರಕ ರಾತ್ರೋ ರಾತ್ರಿ ಧ್ವಂಸವಾಗಿದೆ.  ಇದಕ್ಕೆ ಸೂಕ್ತ ರಕ್ಷಣೆ ನೀಡಬೇಕಿದ್ದ ಪುರಾತತ್ವ ಇಲಾಖೆ ಅಧಿಕಾರಿಗಳ ವಿರುದ್ದವೂ ಕೂಡ ದುರ್ಗದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ವರದಿ : ವಿನಾಯಕ ತೊಡರನಾಳ್
Published by:HR Ramesh
First published: