ಚಿತ್ರದುರ್ಗದಲ್ಲಿ 112ಕ್ಕೆ ಏರಿಕೆಯಾದ ಕೊರೋನಾ ಪ್ರಕರಣಗಳು; 25 ಕಂಟೈನ್ಮೆಂಟ್ ಜೋನ್​ಗಳಲ್ಲಿ ನಿಗಾ

ಚಿತ್ರದುರ್ಗ ಜಿಲ್ಲೆಯ ಒಟ್ಟು 112 ದೃಢಪಟ್ಟ ಪ್ರಕರಣಗಳಲ್ಲಿ ಈಗಾಗಲೆ 82 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ ಸದ್ಯ 29 ಸಕ್ರಿಯ ಪ್ರಕರಣಗಳು ಇವೆ. ಒಟ್ಟು 25 ಕಂಟೈನ್ಮೆಂಟ್ ವಲಯಗಳಿವೆ.

news18-kannada
Updated:July 13, 2020, 7:37 AM IST
ಚಿತ್ರದುರ್ಗದಲ್ಲಿ 112ಕ್ಕೆ ಏರಿಕೆಯಾದ ಕೊರೋನಾ ಪ್ರಕರಣಗಳು; 25 ಕಂಟೈನ್ಮೆಂಟ್ ಜೋನ್​ಗಳಲ್ಲಿ ನಿಗಾ
ಸಾಂದರ್ಭಿಕ ಚಿತ್ರ
  • Share this:
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಒಂದೇ ದಿನ 9 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 112 ಕ್ಕೆ ಏರಿಕೆಯಾಗಿದೆ. ಮಹಾಮಾರಿ ಕೊರೋನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಭಾನುವಾರದ ವರದಿಯಲ್ಲಿ ಚಿತ್ರದುರ್ಗ ನಾಲ್ವರಿಗೆ, ಹಿರಿಯೂರಿನ ಮೂವರಿಗೆ ಹಾಗೂ ಹೊಳಲ್ಕೆರೆಯ ಇಬ್ಬರಿಗೆ  ಸೇರಿದಂತೆ ಒಟ್ಟು 9 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 112 ಕ್ಕೆ ಏರಿಕೆಯಾಗಿದೆ.

ಜಿಲ್ಲಾಡಳಿತ ನೀಡಿದ ಭಾನುವಾರದ ವರದಿ ಪ್ರಕಾರ ಚಿತ್ರದುರ್ಗದ 34 ವರ್ಷದ ಪುರುಷ, 34 ವರ್ಷದ ಮಹಿಳೆ, 69 ವರ್ಷದ ಮಹಿಳೆ, 28 ವರ್ಷದ ಪುರುಷ,  ಹೊಳಲ್ಕೆರೆ ತಾಲ್ಲೂಕಿನ  34 ವರ್ಷದ ಪುರುಷ, 25 ವರ್ಷದ ಮಹಿಳೆ (ಪತಿ - ಪತ್ನಿ ) ಹಾಗೂ ಹಿರಿಯೂರಿನ  56 ವರ್ಷದ ಪುರುಷ, 12 ವರ್ಷದ ಬಾಲಕಿ ಹಾಗೂ 75 ವರ್ಷದ ಮಹಿಳೆ ಸೇರಿದಂತೆ ಒಟ್ಟು ಒಂಬತ್ತು ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಈ ಪೈಕಿ ಹಿರಿಯೂರು ತಾಲ್ಲೂಕಿನ 75 ವರ್ಷದ ಮಹಿಳೆಯು ಪಿ - 25808 ನ ಸಂಪರ್ಕದಿಂದ ಸೋಂಕು ಬಂದಿದ್ದು ಮೃತಪಟ್ಟಿದ್ದಾರೆ.

ಇನ್ನು, ಪಿ -25808 ಸೋಂಕಿತ ರೋಗಿಯ ಪ್ರಾಥಮಿಕ ಸಂಪರ್ಕದ 25 ಜನರ ಗಂಟಲು ದ್ರವ ಸಂಗ್ರಹಿಸಲಾಗಿದೆ. ಭಾನುವಾರ ಒಟ್ಟು 326 ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 09 ಜನರಿಗೆ ಕೋವಿಡ್ ಇರುವುದು ದೃಢಪಟ್ಟಿದೆ.

ಇದನ್ನೂ ಓದಿ: ಕೊರೋನಾ ಸೋಂಕಿಗೆ ಒಂದೇ ದಿನ ಎರಡು ಬಲಿ; ಕೊಡಗಿನಲ್ಲಿ ಮೂರಕ್ಕೇರಿದ ಸಾವಿನ ಸಂಖ್ಯೆ

ಜಿಲ್ಲೆಯ ಒಟ್ಟು 112 ದೃಢಪಟ್ಟ ಪ್ರಕರಣಗಳಲ್ಲಿ ಈಗಾಗಲೆ 82 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ ಸದ್ಯ 29 ಸಕ್ರಿಯ ಪ್ರಕರಣಗಳು ಇವೆ. ಸದ್ಯ ಜಿಲ್ಲೆಯಲ್ಲಿ ಒಟ್ಟು 25 ಕಂಟೈನ್ಮೆಂಟ್ ವಲಯಗಳಿವೆ. ಸೋಂಕಿತರಿಗೆ ಸಂಬಂಧಿಸಿದಂತೆ ಒಟ್ಟು 1967 ಜನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಗುರುತಿಸಲಾಗಿದೆ.  ಈವರೆಗೆ ಸಾರಿ ಮತ್ತು ಐಎಲ್‍ಐ, ಯುಆರ್ ಐನ ಒಟ್ಟು 2860 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಜಿಲ್ಲೆಯಲ್ಲಿ 443 ಮಂದಿ ಹೋಂ ಕ್ವಾರಂಟೈನ್‍ನಲ್ಲಿ ಹಾಗೂ ಇಬ್ಬರು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇದ್ದಾರೆ.  ಈವರೆಗೆ 8911 ಜನರ ಮಾದರಿ ಸಂಗ್ರಹಿಸಲಾಗಿದ್ದು, 5954 ಜನರ ವರದಿ ನೆಗೆಟೀವ್ ಬಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ತಿಳಿಸಿದ್ದಾರೆ.

ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕೊರೋನಾ ವೈರಸ್ ಸೋಂಕು ಆತಂಕಕಾರಿ ಮಟ್ಟದಲ್ಲಿ ವ್ಯಾಪಿಸುತ್ತಿದೆ. ಆದರೆ, ಅತ್ಯಂತ ಕಡಿಮೆ ಸೋಂಕು ಪ್ರಕರಣಗಳು ಪತ್ತೆಯಾಗಿರುವ ಜಿಲ್ಲೆಗಳಲ್ಲಿ ಚಿತ್ರದುರ್ಗವೂ ಒಂದು. ಇತ್ತೀಚೆಗೆ ಇಲ್ಲಿಯೂ ಸೋಂಕು ಪ್ರಕರಣಗಳು ತೀವ್ರತೆ ಪಡೆಯುವ ಲಕ್ಷಣಗಳು ಕಾಣುತ್ತಿವೆ.

ವರದಿ: ವಿನಾಯಕ ತೊಡರನಾಳ್
Published by: Vijayasarthy SN
First published: July 13, 2020, 7:37 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading