HOME » NEWS » District » CHITRADURGA DISTRICT INCHARGE MINISTER B SRIRAMULU SAYS 25 CRORE RUPEES RESERVED FOR MEDICAL COLLEGE WILL BE USED FOR COVID RELATED WORKS VTC SKTV

Coronavirus: ಚಿತ್ರದುರ್ಗ ಮೆಡಿಕಲ್ ಕಾಲೇಜಿಗೆ ಮೀಸಲಿದ್ದ 25 ಕೋಟಿ ರೂಪಾಯಿ ಕೋವಿಡ್ ಸಮಸ್ಯೆಗಳಿಗೆ ಬಳಕೆ: ಉಸ್ತುವಾರಿ ಸಚಿವ ಬಿ ಶ್ರೀರಾಮುಲು

ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಕ್ರಮ ವಹಿಸಿದ್ದು, ಮೆಡಿಕಲ್ ಕಾಲೇಜಿಗೆ ಮೀಸಲಿರಿದ್ದ 25 ಕೋಟಿ  ರೂಪಾಯಿ ಹಣವನ್ನು ಕೊವಿಡ್ ಗೆ ಬಳಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಇನ್ನೂ ಪಿಎಂ ಕೇರ್ ನಿಧಿಯಡಿ ಚಿತ್ರದುರ್ಗ ಜಿಲ್ಲೆಗೆ 60 ವೆಂಟಿಲೇಟರ್‍ಗಳನ್ನು ನೀಡಿದ್ದು ಎಲ್ಲಾ ತಾಲ್ಲೂಕು ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗಿತ್ತು. ಆದರೆ ಅಲ್ಲಿ ಸಮರ್ಪಕವಾಗಿ ಬಳಕೆ ಮಾಡಲು ತಾಂತ್ರಿಕ ಪರಿಣಿತರ ಕೊರತೆ  ಆಗಿದೆ. ಹಾಗಾಗಿ ಅವುಗಳನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.

news18-kannada
Updated:May 12, 2021, 8:16 AM IST
Coronavirus: ಚಿತ್ರದುರ್ಗ ಮೆಡಿಕಲ್ ಕಾಲೇಜಿಗೆ ಮೀಸಲಿದ್ದ 25 ಕೋಟಿ ರೂಪಾಯಿ ಕೋವಿಡ್ ಸಮಸ್ಯೆಗಳಿಗೆ ಬಳಕೆ: ಉಸ್ತುವಾರಿ ಸಚಿವ ಬಿ ಶ್ರೀರಾಮುಲು
ಬಿ ಶ್ರೀರಾಮುಲು
  • Share this:
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ರೆಮ್ ಡಿಸಿವಿರ್ ಕೊರತೆ ಇದೆ. ಪ್ರತಿ ದಿನ ಸರ್ಕಾರಿ, ಖಾಸಗಿ ಆಸ್ಪತ್ರೆ ಸೇರಿ 1100 ರೆಮ್‌ಡಿಸಿವಿರ್ ಅಗತ್ಯವಿದೆ. ಆದರೆ ಈಗ ನಮಗೆ ಕೇವಲ 300  ರೆಮ್‌ಡಿಸಿವಿರ್ ಲಭ್ಯವಿದೆ, ಈ ಬಗ್ಗೆ ನಾನು ಸಿಎಂ ಬಿಎಸ್ ಯಡಯೂರಪ್ಪ ಅವರ ಜೊತೆ ಈ ಬಗ್ಗೆ ಮಾತಾಡಿದ್ದೇನೆ. ಅವರು ಈ ಕೂಡಲೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಚಿತ್ರದುರ್ಗದಲ್ಲಿ ಸಮಾಜ ಕಲ್ಯಾಣ  ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ  ಕೊರೋನಾ ಸೊಂಕು ನಿಯಂತ್ರಿಸೋ ಕುರಿತು ಡಿಸಿ ಸೇರಿದಂತೆ ಜಿಲ್ಲಾ ಮಟ್ಟದ ಅರೋಗ್ಯ ಇಲಾಖೆ ಅಧಿಕಾರಿಗಳು, ಶಾಸಕರುಗಳ ಸಭೆ ನಡೆಸಿರುವ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಜಿಲ್ಲೆಯ ಕೋವಿಡ್ ರೋಗಿಗಳ ಪರಿಸ್ಥತಿ, ಬೆಡ್ಗಳ ಕುರಿತು ಕೂಲಂಕುಶವಾಗಿ ಚರ್ಚೆ ಮಾಡಿದ್ರು. ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಶಾಸಕರಾದ ಜಿ ಹೆಚ್ ತಿಪ್ಪಾರೆಡ್ಡಿ, ಟಿ.ರಘುಮೂರ್ತಿ ಹೇಳಿದ್ದಾರೆ, ಚಿತ್ರದುರ್ಗ ಜಿಲ್ಲೆಯಲ್ಲಿ ರೆಮ್ ಡಿಸಿವಿರ್ ಕೊರತೆ ಇದೆ. ಜಿಲ್ಲೆಗೆ ಪ್ರತಿ ದಿನ 1100ರೆಮ್‌ಡಿಸಿವಿರ್ ಇಂಜಕ್ಷನ್ ಗಳ ಅಗತ್ಯವಿದೆ. ಆದರೆ ನಮಗೆ ಈಗ ಕೇವಲ 300 ಲಭ್ಯವಿದೆ.

ಈ ಬಗ್ಗೆ ನಾನು ಸಿಎಂ ಬಿಎಸ್ ಯಡಯೂರಪ್ಪ ಜೊತೆ ಮಾತಾಡಿದ್ದೇನೆ, ಅಧಿಕಾರಿಗಳಿಗೆ ತಿಳಿಸಿ ಈ ಕೂಡಲೆ ಸಮಸ್ಯೆ ಬಗೆಹರಿಸುವುದಾಗಿ ಸಿಎಂ ಯಡಯೂರಪ್ಪ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ ನಮಗೆ ಬೇಕಿರುವ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಕೆಲಸ ಆರಂಭವಾಗಿದ್ದು ಶೀಘ್ರ ಪೂರ್ಣ ಆಗಲಿದೆ. ಆರ್ ಟಿಪಿಸಿಆರ್ ಲ್ಯಾಬ್, ಆಕ್ಸಿಜನ್ ಪ್ಲಾಂಟ್ ಗೆ ಸಾಕಷ್ಟು ಹಣ ನೀಡಲಾಗಿದೆ. ಮೆದೇಹಳ್ಳಿ ಬಳಿ 200 ಬೆಡ್ ಕೋವಿಡ್ ಕೇರ್ ಸೆಂಟರ್ ನಿರ್ಮಾಣ, ಅಗತ್ಯ ಬೇಸಿಕ್ ವೈದ್ಯಕೀಯ ಉಪಕರಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಜಿಲ್ಲಾಸ್ಪತ್ರೆ ಆವರಣದಲ್ಲಿ ವೇದಾಂತ ಮೈನ್ಸ್ ನೆರವಿನಿಂದ 100 ಬೆಡ್ ಆಸ್ಪತ್ರೆ, ಜಿಲ್ಲೆಗೆ ನಿತ್ಯ ಆಕ್ಸಿಜನ್ 7kl ಬೇಕಿದೆ, ಅಗತ್ಯ ಆಕ್ಸಿಜನ್ ತರಿಸಲು ಕ್ರಮ ಕೈಗೊಳ್ಳಲಾಗಿದೆ.

ಅಲ್ಲದೇ  ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಕ್ರಮ ವಹಿಸಿದ್ದು, ಮೆಡಿಕಲ್ ಕಾಲೇಜಿಗೆ ಮೀಸಲಿರಿದ್ದ 25 ಕೋಟಿ  ರೂಪಾಯಿ ಹಣವನ್ನು ಕೊವಿಡ್ ಗೆ ಬಳಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಇನ್ನೂ ಪಿಎಂ ಕೇರ್ ನಿಧಿಯಡಿ ಚಿತ್ರದುರ್ಗ ಜಿಲ್ಲೆಗೆ 60 ವೆಂಟಿಲೇಟರ್‍ಗಳನ್ನು ನೀಡಿದ್ದು ಎಲ್ಲಾ ತಾಲ್ಲೂಕು ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗಿತ್ತು. ಆದರೆ ಅಲ್ಲಿ ಸಮರ್ಪಕವಾಗಿ ಬಳಕೆ ಮಾಡಲು ತಾಂತ್ರಿಕ ಪರಿಣಿತರ ಕೊರತೆ  ಆಗಿದೆ. ಹಾಗಾಗಿ ಅವುಗಳನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಈಗಿರುವ 30 ವೆಂಟಿಲೇಟರ್‍ಗಳ ಬದಲಾಗಿ 60 ಕ್ಕೆ ಹೆಚ್ಚಳ ಮಾಡಲಾಗುತ್ತದೆ. ಇದರಿಂದ ತೀವ್ರನಿಗಾ ಘಟಕದ ಚಿಕಿತ್ಸೆ ಅಗತ್ಯವಿರುವವರಿಗೆ ಸಹಾಯವಾಗಲಿದೆ ಎಂದು  ಹೇಳಿದ್ದಾರೆ.
Published by: Soumya KN
First published: May 12, 2021, 8:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories