Chitradurga Murder: ಮನೆ ಮುಂದೆ ನಾಯಿ ಗಲೀಜು ಮಾಡುತ್ತೆ ಅಂದಿದಕ್ಕೆ ಕೊಲೆ ಮಾಡಿದ ಪಕ್ಕದ ಮನೆಯವರು!

ನಾಯಿ ವಿಚಾರಕ್ಕೆ ನೆರೆ ಮನೆಯವರು ತನ್ನ ತಾಯಿಯ ಜೊತೆ ಮಾಡುತ್ತಿದ್ದ ಗಲಾಟೆ ಬಿಡಿಸೋಕೆ ಹೋದ ಮಗ ಕೊನೆಯುಸಿರೆಳೆದಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಕುಟುಂಬಕ್ಕೆ ಆಧಾರವಾಗಿದ್ದ ಯುವಕ ಸಾವಿನ ಮನೆ ಸೇರಿದ್ದಾನೆ.

ಕೊಲೆಯಾದ ಯುವಕ, ಆರೋಪಿ ದಂಪತಿ

ಕೊಲೆಯಾದ ಯುವಕ, ಆರೋಪಿ ದಂಪತಿ

  • Share this:
ಚಿತ್ರದುರ್ಗ : ಹಣ, ಆಸ್ತಿ,  ಅಕ್ರಮ ಸಂಬಂಧಗಳ (Money, Property, Illicit Relationship) ವಿಚಾರಕ್ಕೆ ಕೊಲೆಯಾಗಿರೋ (Murde) ಪ್ರಕರಣಗಳನ್ನ ನೋಡಿದ್ದೇವೆ. ಆದ್ರೆ ಜಿಲ್ಲೆಯಲ್ಲಿ ಸಾಕು ನಾಯಿಯ (Pet Dog) ಬಹಿರ್ದೆಸೆ ವಿಚಾರಕ್ಕೆ ಎರಡು ಕುಟುಂಬಗಳ (2 Families )ನಡುವೆ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ನಾಯಿ ವಿಚಾರಕ್ಕೆ ನೆರೆ ಮನೆಯವರು ತನ್ನ ತಾಯಿಯ ಜೊತೆ ಮಾಡುತ್ತಿದ್ದ ಗಲಾಟೆ ಬಿಡಿಸೋಕೆ ಹೋದ ಮಗ, ನಾಯಿ ಮಾಲೀಕನ ಮೋಸದ ಹೊಡೆತಕ್ಕೆ ಸಿಲುಕಿ ನೆತ್ತರು ಸುರಿಸಿ ಜೀವ ಬಿಟ್ಟು ಇಹಲೋಕ ತ್ಯಜಿಸಿದ್ದಾನೆ. ನಾಯಿ ಜಗಳ ಮಾತು ಮಾತಲ್ಲಿ ಇರುವಾಗಲೆ ನಾಯಿ ಮಾಲೀಕನ ಕೊಲೆಗಡುಕ ತನ ಕಂಡು ಇಡೀ ಊರಿಗೆ ಊರೆ ಬೆಚ್ಚಿಬಿದ್ದಿತ್ತು.

ಕ್ಷುಲ್ಲಕ ಜಗಳ ಬಿಡಿಸೋಕೆ ಹೋಗಿ ಜೀವವೇ ಹೋಯ್ತು

ಚಿತ್ರದುರ್ಗದ ಜಾಲಿಕಟ್ಟೆ ನಿವಾಸಿ, ಕೇವಲ 23 ವರ್ಷದ ಮಹಂತೇಶ ತಂದೆ ತೀರಿದ ಬಳಿಕ ಕುಟುಂಬದ ಜವಬ್ದಾರಿ ಹೊತ್ತು ಬದುಕಿನ ಬಂಡಿ ಸಾಗಿಸುತ್ತಿದ್ದ. ಅದಕ್ಕಾಗಿ ಗ್ರಾಮದಲ್ಲಿ ಚಿಪ್ಸ್ ವ್ಯಾಪಾರ ಮಾಡಿಕೊಂಡು ದುಡಿಮೆ ಮಾಡುತ್ತಾ ಕುಟುಂಬಕ್ಕೆ ಈತನೇ ಆಧಾರವಾಗಿದ್ದ. ಅಲ್ಲದೇ ಈಡೀ ಊರಲ್ಲಿ ಒಬ್ಬರ ಬಳಿ ಕೆಟ್ಟವ ಎನಿಸಿಕೊಂಡವನಲ್ಲ.  ಆದ್ರೇ ಅದ್ಯಾವ ಗ್ರಹಚಾರವೋ ಏನೋ ಕ್ಷುಲ್ಲಕ ಜಗಳ ಬಿಡಿಸೋಕೆ ಹೋಗಿ ಜೀವ ಕಳೆದುಕೊಂಡು ಹೆಣವಾಗಿ ಮಲಗಿದ್ದಾನೆ.

ನಾಯಿ ಗಲೀಜು ಮಾಡುತ್ತೆ ಅಂತ ನಿತ್ಯ ಜಗಳ 

ಜಾಲಿಕಟ್ಟೆ ಗ್ರಾಮದ ಸ್ವಾಮಿ @ ದಾಸ & ಆತನ ಪತ್ನಿ ಕಮಲಮ್ಮ ಸಾಕಿದ್ದ ನಾಯಿಯನ್ನ  ಪ್ರತಿ ನಿತ್ಯವೂ  ಮಹಂತೇಶ್ ಮನೆ ಹಿಂಭಾಗಕ್ಕೆ ತಂದು ಬಹಿರ್ದೆಸೆ ಮಾಡಿಸುತ್ತಿದ್ರು. ಹಾಗೆಯೇ ಮಂಗಳವಾರ ರಾತ್ರಿ ಕೂಡ ಸ್ವಾಮಿ ಅಲಿಯಾಸ್ ದಾಸ ತನ್ನ ಸಾಕು ನಾಯಿಯನ್ನ ಮಹಂತೇಶನ ಮನೆ ಬಳಿಗೆ ಬಹಿರ್ದೆಸೆಗೆ ಕರೆತಂದಿದ್ದ. ಪ್ರತಿ ನಿತ್ಯ ನಾಯಿ ಗಲೀಜು ಮಾಡೋದನ್ನ ನೋಡಿದ ಕೊಲೆಯಾಗಿರೋ ಮಹಂತೇಶ್ ಪೋಷಕರು  ಸ್ವಾಮಿ ಮತ್ತು ಆತನ ಪತ್ನಿಗೆ ನಾಯಿಯನ್ನ ತಂದು ಇಲ್ಲಿ ಗಲೀಜು ಮಾಡಿಸಬೇಡಿ ಅಂಥ  ಬೇಸರದಿಂದಲೇ ಹೇಳಿದ್ದರು. ಆದರೆ ಅವರ ಮಾತಿಗೆ ಎದುರಾಗಿ ಮಾತನಾಡಿದ ಕೊಲೆ ಆರೋಪಿ ಸ್ವಾಮಿ, ಇಲ್ಲೇ ಮಾಡಿಸುತ್ತೇನೆ ಅಂಥ ಜಗಳಕ್ಕೆ ಇಳಿದಿದ್ದರು. ಇದನ್ನ ಕಂಡ ಗ್ರಾಮಸ್ಥರು ಇಬ್ಬರ ಜಗಳವನ್ನ ಬಿಡಿಸಿ ಮನೆಗೆ ಕಳಿಸಿದ್ರು. ಆದರೇ ಎರಡೂ ಕುಟುಂಬದ ಹೆಂಗಸರ ಜಗಳ ಮುಂದುವರೆದು ಕೊಲೆ ಆರೋಪಿ ಸ್ವಾಮಿ ಪತ್ನಿ ಕಮಲಮ್ಮ ಕೊಲೆಯಾಗಿರೋ ಮಹಂತೇಶ್ ತಾಯಿ ಜೊತೆ ಬೈದಾಡಿ ಜಗಳಕ್ಕಿಳಿದ್ದಿದ್ದರು.

ಜಗಳ ತಡೆಯಲು ಬಂದವನ ಹೆಣ ಬಿತ್ತು

ಈ ಜಗಳದ ವಿಷಯ ತಿಳಿದು ಚಿಪ್ಸ್ ಅಂಗಡಿ ಬಿಟ್ಟು ಮನೆಯ ಬಳಿ ಬಂದಿದ್ದ ಮಹಂತೇಶ್ ಎರಡು ಕುಟುಂಬಕ್ಕೂ ಬುದ್ದಿ ಮಾತು ಹೇಳ್ತಿದ್ದ. ಆದ್ರೆ ಬುದ್ದಿ ಹೇಳೋಕೆ ಬಂದ ಮಹಂತೇಶ್ ಮೇಲೆಯೇ ಆರೋಪಿ ಸ್ವಾಮಿ ಮತ್ತು ಪತ್ನಿ ಕಮಲಮ್ಮ ಏಕಾಏಕಿ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ತೀವ್ರ ಪೆಟ್ಟು ಬಿದಿದ್ದು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಮೃತ ಮಹಂತೇಶ್ ಪೊಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿ ದಂಪತಿಗಳಿಗೆ ಕಠಿಣ ಶಿಕ್ಷೆಯಾಗಲಿ ಎಂದು ಮಹಂತೇಶ್ ಪೊಷಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : Bengaluru Fire Accident: ಅಗ್ನಿ ಅವಘಡದಿಂದ ಅಪಾರ್ಟ್​​ಮೆಂಟ್​​ ನಿವಾಸಿಗಳನ್ನು ರಕ್ಷಿಸಿದ ‘ಅಪ್ಪು’.. ಇದಪ್ಪಾ ನಿಯತ್ತು

ಮಹಂತೇಶನ ಹತ್ಯೆ ಬಳಿಕ ಸ್ವಾಮಿ ಅಲಿಯಾಸ್ ದಾಸ, ಪತ್ನಿ ಕಮಲಮ್ಮ ಊರು ಬಿಟ್ಟು ತಲೆ ಮರೆಸಿಕೊಂಡಿದ್ದರು. ಕೊಲೆಯ ಪ್ರಕರಣದ ವಿಷಯ ತಿಳಿಯುತ್ತಿದ್ದಂತೆ ಚಿತ್ರದುರ್ಗ ಎಸ್ಪಿ ಜಿ.ರಾಧಿಕಾ ಜಾಲಿಕಟ್ಟೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು ಮಾಡಿಸಿದ್ದರು. ಕೊಲೆ ಮಾಡಿ ತಲೆ ಮರೆಸಿಕೊಂಡುದ್ದ ಆರೋಪಿಗಳ ಸೆರೆ ಹಿಡಿಯೋಕೆ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಬಾಲಚಂದ್ರ ನಾಯ್ಕ, ಸಬ್ ಇನ್ಸ್ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ತಂಡ ರಚನೆ ಮಾಡಿ ತನಿಖೆ ಪ್ರಾರಂಭ ಮಾಡಿದ್ರು. ಎಸ್ಪಿ ರಾಧಿಕಾ ಮಾರ್ಗದರ್ಶನದಲ್ಲಿ ಕೊಲೆ ಆರೋಪಿಗಳ ಜಾಡು ಹಿಡಿದ ಪೋಲೀಸರು  ಕೃತ್ಯ ಬಳಿಕ ತಲೆ ಮರೆಸಿಕೊಂಡಿದ್ದ ಆರೋಪಿ ಸ್ವಾಮಿ ಮತ್ತು ಪತ್ನಿ ಕಮಲಮ್ಮ ಇಬ್ಬರನ್ನೂ  ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದು ಜೈಲಿಗಟ್ಟಿದ್ದಾರೆ. ಇನ್ನೂ  ಘಟನೆಯಿಂದ ಜಾಲಿಕಟ್ಟೆ ಗ್ರಾಮದಲ್ಲಿ  ಬಿಗುವಿನ ವಾತಾವರಣವಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.
Published by:Kavya V
First published: