ಶುಲ್ಕ ವಿಚಾರ ಮತ್ತೊಮ್ಮೆ‌ ಬಿಎಸ್​ವೈ ಗಮನಕ್ಕೆ: ಮಧ್ಯ ಪ್ರವೇಶಿಸುವಂತೆ ಪೋಷಕರ ಸಮನ್ವಯ ಸಮಿತಿ ಮನವಿ

ಸದ್ಯ ಖಾಸಗಿ ಶಾಲೆ ಶುಲ್ಕ‌ ವಿಚಾರ ನ್ಯಾಯಲಯದಲ್ಲಿ ಇರುವುದರಿಂದ ಸರ್ಕಾರ ಸಮಿತಿ ರಚನೆ ಮಾಡಲು ಮನವಿ ಮಾಡಿಕೊಂಡಿದೆ. ಈ ಮಧ್ಯೆ ಪೋಷಕರು ಶುಲ್ಕ ‌ಕಟ್ಟಲಾಗದ ಪರಿಣಾಮ, ತಮ್ಮ ಮಕ್ಕಳು ಆನ್ ಲೈನ್ ಕ್ಲಾಸ್ ನಲ್ಲಿ ಭಾಗವಹಿಸುವುದು ಕಷ್ಟವಾಗಿದೆ.

ಸಚಿವ ಸುರೇಶ್​ ಕುಮಾರ್​

ಸಚಿವ ಸುರೇಶ್​ ಕುಮಾರ್​

  • Share this:
ಬೆಂಗಳೂರು - ಖಾಸಗಿ ಶಾಲೆಗಳ ಶುಲ್ಕ‌ ವಿಚಾರ ಸದ್ಯಕ್ಕಂತೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಪ್ರತಿದಿನ ಶಾಲೆಗಳ ಮುಂದೆ ಪೋಷಕರು ತಮ್ಮ ಅಳಲು ತೋಡಿಕೊಳ್ಳುವುದು ತಪ್ಪುತ್ತಿಲ್ಲ. ಈ ವಿಚಾರವಾಗಿ ಪೋಷಕರ ಸಮನ್ವಯ ಸಮಿತಿ ಶಿಕ್ಷಣ ತಜ್ಞರ ಜೊತೆ ಇಂದು ಮತ್ತೊಮ್ಮೆ ಸಿಎಂ ಭೇಟಿ ಮಾಡಿದೆ. ಇದಕ್ಕೆ ಸಿಎಂ ಏನಂದ್ರು? ಮುಂದೇನು? ಈ ಕುರಿತು ವರದಿ.

ಪೋಷಕರು ಎಷ್ಟೇ ಪ್ರತಿಭಟನೆ ನಡೆಸಿದರು ಜಗ್ಗದ ಖಾಸಗಿ ಶಾಲೆಗಳು ತಮ್ಮ ಮೊಂಡು ಹಠದಿಂದ ಮಕ್ಕಳ ಭವಿಷ್ಯದ ಮೇಲೆ ಕಲ್ಲು ಹಾಕುತ್ತಿವೆಯೇ? ಇದರ ಕುರಿತು ಶಿಕ್ಷಣ ಸಚಿವರು ಸಹ ಮೌನ ಮುರಿಯದೇ ಯಾರ ಪರವೂ ನಿಲ್ಲದೆ ಕಾದು ನೋಡುವ ತಂತ್ರ ಮಾಡುತ್ತಿದ್ದಾರೆ.

ಕೊರೊನಾ‌‌ ಕೇಸ್ ‌ಕಡಿಮೆಯಾದ್ರೂ ಖಾಸಗಿ ಶಾಲಾ ಫೀಸ್ ರಿಯಾಯಿತಿ ನೀಡುವ ವಿಚಾರ ಮಾತ್ರ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಕಳೆದ ವರುಷ ಖಾಸಗಿ ಶುಲ್ಕ‌ ವಿವಾದ ಬಗೆಹರಿಸಲು ಸರ್ಕಾರ ಶೇ.70ರಷ್ಟು ಬೋಧನಾ ಶುಲ್ಕ ಕಟ್ಟುವಂತೆ ಆದೇಶಿಸಿತ್ತು. ಇದರ ವಿರುದ್ದ‌ ಕೋರ್ಟ್ ಖಾಸಗಿ ಶಿಕ್ಷಣ ಸಂಸ್ಥೆಗಳು ಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣ ಇನ್ನೂ ಕೊರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ಈ ಶೈಕ್ಷಣಿಕ ವರ್ಷಕ್ಕೆ ಪೂರ್ತಿ ಶುಲ್ಕ ಕಟ್ಟಬೇಕು, ಕಳೆದ‌ ವರುಷದ ಶುಲ್ಕ ಪೂರ್ತಿ ಕಟ್ಟಬೇಕು ಎಂದು ಒತ್ತಾಯಿಸುತ್ತಿವೆ.

ಇದರ ವಿರುದ್ದ ಪೋಷಕರು ಖಾಸಗಿ ಶಾಲೆಗಳ ಮುಂದೆ ತಮ್ಮ ಅಸಹಾಯಕತೆ, ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತಿದೆ. ಈ ವಿಚಾರವಾಗಿ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಭೇಟಿಯಾದ ಪೋಷಕರ ಸಮನ್ವಯ ಸಮಿತಿ ಶುಲ್ಕ ವಿವಾದ ಬಗೆಹರಿಸಿ ಎಂದು ಮತ್ತೊಮ್ಮೆ ಮನವಿ ಮಾಡಿಕೊಂಡಿದೆ. ಶುಲ್ಕ‌ ವಿಚಾರವಾಗಿ ಎರಡನೇ ಬಾರಿ ಇಂದು ಕರ್ನಾಟಕ ಖಾಸಗಿ ಶಾಲಾ ಪೋಷಕರ ಸಂಘಟನೆಗಳ ಸಮನ್ವಯ ವೇದಿಕೆಯ ನಿಯೋಗದಿಂದ ಇಂದು ಸಿಎಂ ಯಡಿಯೂರಪ್ಪ ಭೇಟಿ ಮಾಡಿದರು. ಸಿಎಂ ಜೊತೆ  ಪೋಷಕರ ಸಮನ್ವಯ ಸಮಿತಿಯಲ್ಲಿ ಶಿಕ್ಷಣ ತಜ್ಞ ನಿರಂಜನ ಆರಾಧ್ಯ ಹಾಗೂ ಪೋಷಕರ ಸಮನ್ವಯ ಸಮಿತಿ ಸದಸ್ಯರು ಭಾಗಿಯಾಗಿದ್ದರು.

ಖಾಸಗಿ ಶಾಲಾ ಶುಲ್ಕ 50% ಕಡಿತ ಮಾಡಿ. ಶಿಕ್ಷಣ ಸಚಿವ ಸುರೇಶ್‌ಕುಮಾರ್ ಸ್ಪಂದಿಸುತ್ತಿಲ್ಲ. ತಾವು ಮಧ್ಯೆಪ್ರವೇಶ ಮಾಡಿ, ಶುಲ್ಕ ಕಡಿತಗೊಳಿಸಿ, ಪೋಷಕರನ್ನು ಉಳಿಸಿ ಎಂದು ಸಿಎಂಗೆ ಮನವಿ‌ಪತ್ರ ಸಲ್ಲಿಸಿದರು. ಈ ಕುರಿತು ಸಿಎಂ ಜೊತೆ ಚರ್ಚಿಸಲು ಪೋಷಕರ ಸಮಿತಿಗೆ ಸಮಯಾವಾಕಾಶ ಸಿಕ್ಕಿಲ್ಲ.

ಇದನ್ನೂ ಓದಿ: ಕುತೂಹಲಕ್ಕೆ ಎಡೆ ಮಾಡಿಕೊಟ್ಟ ಪತ್ರಿಕಾ ಪ್ರಕಟಣೆ: ಎಎಪಿ ಸೇರಲಿರುವ ಆ ಬಿಜೆಪಿ ಶಾಸಕ ಯಾರು?

ಸದ್ಯ ಖಾಸಗಿ ಶಾಲೆ ಶುಲ್ಕ‌ ವಿಚಾರ ನ್ಯಾಯಲಯದಲ್ಲಿ ಇರುವುದರಿಂದ ಸರ್ಕಾರ ಸಮಿತಿ ರಚನೆ ಮಾಡಲು ಮನವಿ ಮಾಡಿಕೊಂಡಿದೆ. ಈ ಮಧ್ಯೆ ಪೋಷಕರು ಶುಲ್ಕ ‌ಕಟ್ಟಲಾಗದ ಪರಿಣಾಮ, ತಮ್ಮ ಮಕ್ಕಳು ಆನ್ ಲೈನ್ ಕ್ಲಾಸ್ ನಲ್ಲಿ ಭಾಗವಹಿಸುವುದು ಕಷ್ಟವಾಗಿದೆ. ಕಳೆದೊಂದು ತಿಂಗಳಿನಿಂದ ಖಾಸಗಿ ಶಾಲೆಗಳ ಮುಂದೆ ಪೋಷಕರು ಕೊರೊನಾ ಕೇಸ್ ಹೆಚ್ಚಿದ್ದ ಸಂದರ್ಭದಲ್ಲಿ ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಇಂಥ ಈ ಜಟಿಲ ಸಮಸ್ಯೆ ಬಗೆಹರಿಸಲು ಸರ್ಕಾರ ಮತ್ತೇನು ಮಾಡುತ್ತೋ ಕಾದು ನೋಡಬೇಕು?

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: