ಬೆಳಗಾವಿ: ಎರಡು ಲಕ್ಷದ ಆಸೆಗೆ ಮಗು ಕಿಡ್ನಾಪ್, ಮಕ್ಕಳು ಕಳ್ಳರ ಗ್ಯಾಂಗ್ ಈಗ ಪೊಲೀಸರ ಅತಿಥಿ!

ಫೆಬ್ರವರಿ 6 ರಂದು ನಡೆದಿದ್ದ ಕಿಡ್ನ್ಯಾಪ್ ಪ್ರಕರಣವನ್ನು ಕೇವಲ ನಾಲ್ಕು ದಿನಗಳಲ್ಲಿಯೇ ಪತ್ತೆ ಹಚ್ಚಿ ಅಥಣಿ ಪೊಲೀಸರು ಎರಡು ವರ್ಷದ ಯಲ್ಲಪ್ಲನನ್ನು ಹೆತ್ತವರ ಮಡಿಲಿಗೆ ಸೇರಿಸಿದ್ದಾರೆ.

ಆರೋಫಿಗಳು.

ಆರೋಫಿಗಳು.

  • Share this:
ಬೆಳಗಾವಿ: ಮಗು ಬೇಕು ಅನ್ನೋದು ಮಕ್ಕಳು ಇಲ್ಲದ ಮಹಿಳೆಯ ಅಳಲು. ಹೌದಾ? ಹಾಗಿದ್ರೆ ತಂದೆ ತಡೀರಿ ಅಂತಾ ಹಿಂಗೆ ಹೋದವ್ರು ಹಂಗೆ ಮಗುವನ್ನು ಮಕ್ಕಳಿಲ್ಲದ ಮಹಿಳೆಯ ಮಡಿಲಿಗೆ ಹಾಕಿದ್ರು ಆ ಐವರು ಯುವಕರು. ಅಯ್ಯೋ ಇದೇನಿದು? ಇಷ್ಟು ಬೇಗ ಮಕ್ಕಳನ್ನು ತರೋಕೆ ಅದ್ಹೇಗೆ ಸಾಧ್ಯ? ಮಕ್ಕಳೇನು ಮಾರ್ಕೆಟ್ಟಿನಲ್ಲಿ ಸಿಗೋ ವಸ್ತೂನಾ? ಅಂತಾ ನೀವು ಅನಕೊಳ್ಳಬಹುದು. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಗು ಬೇಕಾದ್ರೆ ಹಿಂಗೆ ಹೋಗಿ ಹಂಗೆ ತರೋ ಗ್ಯಾಂಗೊಂದು ಇದೀಗ ಪೊಲೀಸರ ಕೈಗೆ ತಗಲಾಕೊಂಡಿದೆ. ಇದೇ ನೋಡಿ ಆ ಗ್ಯಾಂಗ್ ನ ಸ್ಟೋರಿ

ಅಥಣಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ವಾಸವಾಗಿರೋ ಮಕ್ಕಳು ಇಲ್ಲದ ಮಹಿಳೆಯೋರ್ವಳು ತನಗೊಂದು ಮಗು ಬೇಕೆಂದು  ಪರಿಚಯ ಇರೋ ಯುವಕರ ಮುಂದೆ ಹೇಳಿಕೊಂಡಿದ್ದಾಳೆ. ಅದೇನು ಮಹಾ? ಅನಾಥಾಶ್ರಮದಿಂದ ಮಗುವನ್ನು ತರ್ತೀವಿ ಅಂತಾ ಮಹಿಳೆಗೆ ಮಂಕು ಬೂದಿ ಎರಚಿದ ಈ ಯುವಕರು ಅಥಣಿ ಪಟ್ಟಣಕ್ಕೆ ಹೊಂದಿಕೊಂಡಿರುವ ಸಂಕೋನಟ್ಟಿ ಗ್ರಾಮದ ಹೊರವಲಯದಲ್ಲಿ ಭಿಕ್ಷೆ ಬೇಡಿ ಹೊಟ್ಟೆ ಹೊರೆದುಕೊಳ್ಳುವವರ ಜೋಪಡಿಗಳು ಕಣ್ಣಿಗೆ ಬಿದ್ದಿವೆ. ಗುಡಿಸಿಲಿನ ಹತ್ತಿರವೇ ಎರಡು ವರ್ಷದ ಮಗುವೊಂದು ನಿದ್ರೆಗೆ ಜಾರಿದೆ. ಸಿಕ್ಕಿದ್ದೇ ಛಾನ್ಸ್ ಅಂತಾ ಮಲಗಿರೋ ಮಗುವನ್ನು ಕಾರ್ ನಲ್ಲಿ ಎತ್ತಾಕಿಕೊಂಡು ಎಸ್ಕೇಪ್ ಆಗಿದ್ದಾರೆ.

ಎಲ್ಲೋ ಹೊರಗಡೆ ಹೋಗಿದ್ದ ಮಗುವಿನ ತಂದೆ ಗುಡಿಸಲು ಬಳಿ ಬಂದು ನೋಡಿದ್ರೆ ಅಲ್ಲಿ ಮಗುವಿನ ತಂದೆ ಚಿನ್ನಪ್ಪ ಬಹುರೂಪಿ ಎಂಬಾತ ಹುಡುಕಾಡಿದ್ದಾನೆ. ಮಗು ಯಲ್ಲಪ್ಪ. ಎಲ್ಲಿದ್ದಿಯೋ? ಅಂತೆಲ್ಲ ಅಲ್ಲಿರೋರನ್ನು ಕೇಳಿದ್ದಾನೆ. ಮಗುವೊಂದನ್ನು ಕಾರ್ ನಲ್ಲಿ ಎತ್ತಿಕೊಂಡು ಹೋಗಿದ್ದನ್ನು ಸ್ಥಳೀಯರು ನೋಡಿದ್ದಾಗಿ ಹೇಳಿದ್ದಾರೆ. ತಡ ಮಾಡದೇ ಅಥಣಿ ಪೊಲೀಸ್ ಸ್ಟೇಷನ್ ಗೆ ತೆರಳಿ ತನ್ನ ಮಗು ಕಿಡ್ನ್ಯಾಪ್ ಆಗಿರೋದಾಗಿ ದೂರು ನೀಡಿದ್ದಾನೆ.

ಇದನ್ನೂ ಓದಿ: ಗುಡಿಸಲಲ್ಲಿದ್ದು ಕೂಲಿ ಮಾಡುವ ಕುಟುಂಬಕ್ಕೆ ಆವಾಸ್​ ಯೋಜನೆ ಅಡಿ ಮನೆ ಕಟ್ಟಿಸಿಕೊಡಲು ಅಧಿಕಾರಿಗಳಿಂದ 30 ಸಾವಿರ ಲಂಚಕ್ಕೆ ಬೇಡಿಕೆ

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮಾಡಲು ಸಂಕೋನಟ್ಟಿಗೆ ತೆರಳಿದಾಗ ಕಾರ್ ಹಿಂದೆ ಪಕ್ಕು ಎಂದು ಬರೆಯಲಾಗಿತ್ತು. ಅದೇ ಕಾರಿನಲ್ಲಿಯೇ ಮಗುವನ್ನು ಕಿಡ್ನ್ಯಾಪ್ ಮಾಡಿದ್ದು ಎಂಬುವುದು ಗೊತ್ತಾಗಿದೆ. ಪೊಲೀಸರು ತನಿಖೆ ಕೈಗೊಂಡ ಬಳಿಕ ಮಗುವನ್ನು ಕಿಡ್ನ್ಯಾಪ್ ಮಾಡಿದ್ದ ತಂಡ ಸಿಕ್ಕಿ ಬಿದ್ದಿದೆ. ಪ್ರಶಾಂತ ಬಡಕುಂಬಿ, ಜ್ಯೋತಿಬಾ ಭಂಗಿ, ಅನಿಲ ಬಡಕುಂಬಿ, ಜಂಬುಸಾಗರ ನಾಡಗೌಡ, ಕುಮಾರ ಹಿರೇಮನಿ ಎಂಬ ಆರೋಪಗಳು ಮಗುವನ್ನು ಕಿಡ್ನ್ಯಾಪ್ ಮಾಡಿದ್ದು ಒಪ್ಪಿಕೊಂಡಿದ್ದು, ಮಗು ಬೇಕೆಂದು ಕೇಳಿಕೊಂಡ ಮಹಿಳೆಯಿಂದ 2 ಲಕ್ಷ ರೂಪಾಯಿಗಳನ್ನು ಪಡೆದುಕೊಂಡು ಅನಾಥಾಶ್ರಮದಿಂದ ಮಗು ತಂದಿದ್ದಾಗಿ ಹೇಳಿ ಆಕೆಯನ್ನೂ ಯಾಮಾರಿಸಿದ್ದಾರೆ.

ಫೆಬ್ರವರಿ 6 ರಂದು ನಡೆದಿದ್ದ ಕಿಡ್ನ್ಯಾಪ್ ಪ್ರಕರಣವನ್ನು ಕೇವಲ ನಾಲ್ಕು ದಿನಗಳಲ್ಲಿಯೇ ಪತ್ತೆ ಹಚ್ಚಿ ಅಥಣಿ ಪೊಲೀಸರು ಎರಡು ವರ್ಷದ ಯಲ್ಲಪ್ಲನನ್ನು ಹೆತ್ತವರ ಮಡಿಲಿಗೆ ಸೇರಿಸಿದ್ದಾರೆ. ಹೆತ್ತವರ ಮಡಲಿಗೆ ಮಗು ಮತ್ತೇ ಸೇರುವ ಹಾಗೆ ಮಾಡಿದ್ದೇ ಆ  ಪಕ್ಕು. ಪಕ್ಕು ಎಂದು ಕಾರಿನಲ್ಲಿ ಬರೆದಿದ್ದೇ ಪೊಲೀಸರು ಆರೋಪಗಳನ್ನು ಬಹು ಬೇಗನೆ ಪತ್ತೆ ಹಚ್ಚಲು ಸಹಾಯವಾಗಿದೆ ಎಂದ್ರೆ ತಪ್ಪಾಗಲಿಕ್ಕಿಲ್ಲ.
Published by:MAshok Kumar
First published: