Hassan: ಹೆತ್ತಮ್ಮನ ಮಡಿಲು ಸೇರಿದ ಕಂದ, ಮಗು ಕಿಡ್ನ್ಯಾಪ್ ಹಿಂದಿದೆ ಕರುಳು ಹಿಂಡುವ ಕಥೆ

ಹೆತ್ತಮ್ಮನ ಮಡಿಲು ಸೇರಿದ ಕಂದಮ್ಮ. ನವಜಾತ ಶಿಶುವಿನ ಅಪಹರಣದ ಹಿಂದೆ ಇದೆ ಕರಳು ಹಿಂಡುವ ಕಥೆ. ಮನೆ ಮಗಳ ಸಂಸಾರ ಉಳಿಸಲು ಇಡೀ ಕುಟುಂಬದಿಂದ ಮಗು ಅಪಹರಣ.

ತಾಯಿ ಮಡಿಲು ಸೇರಿದ ಕಂದ

ತಾಯಿ ಮಡಿಲು ಸೇರಿದ ಕಂದ

  • Share this:
ಹಾಸನ (ಮಾ.23): ಅರಕಲಗೂಡು (Arkalagudu ) ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ (Governmentospital)  ಮಾ.14 ರಂದು ಅಪಹರಣಕ್ಕೊಳಗಾಗಿದ್ದ ನವಜಾತ ಗಂಡು ಮಗು ಪುನಃ ತಾಯಿ ಮಡಿಲು ಸೇರಿದೆ. ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳನ್ನು (Accused) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಗು ಕದ್ದವರ ಕಥೆ ಕೇಳಿದ್ರೆ ನಿಜಕ್ಕೂ ಕರುಳು ಹಿಂಡುತ್ತೆ, ಮದುವೆಯಾಗಿ ಒಂಭತ್ತು ವರ್ಷಗಳು ಕಳೆದರು ಮಕ್ಕಳಿಲ್ಲದ ಕಾರಣ ಒಂದೇ ಕುಟುಂಬದ 6 ಮಂದಿ ಸೇರಿ ಆಸ್ಪತ್ರೆಯಿಂದ ಮಗುವನ್ನು ಅಪಹರಿಸಿದ್ದಾರೆ.  ಪೊಲೀಸ್ ತನಿಖೆ (Police investigation) ವೇಳೆ ವಿಚಾರ ಬೆಳಕಿಗೆ ಬಂದಿದೆ. ಶಿಶು ಯೋಜನಾಧಿಕಾರಿ ಹರಿಪ್ರಸಾದ್ ನವಜಾತ ಶಿಶುವನ್ನು ಹೆತ್ತಮ್ಮನಿಗೆ ಹಸ್ತಾಂತರಿಸಿದ್ದಾರೆ.

ನರ್ಸ್​ ವೇಷಧರಿಸಿ ಬಂದು ಮಗು ಕದ್ರು

ಅಸ್ಸಾಂ ರಾಜ್ಯದ, ನೂಗಾಮ್ ಜಿಲ್ಲೆ, ಡಿನಂಬರ್ ಗ್ರಾಮದ ಸುರಾಲ್ ಹಾಗೂ ಪತ್ನಿ ಯಾಸ್ಮೀನ್ ಅರಕಲಗೂಡು ಪಟ್ಟಣದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಮಾ.13 ರಂದು ಹೆರಿಗೆಗಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಯಾಸ್ಮೀನ್ ದಾಖಲಾಗಿದ್ದರು. ಸಂಜೆ 7.30 ರ ಸಮಯದಲ್ಲಿ ಗಂಡು ಮಗು ಜನನವಾಗಿತ್ತು. ರಾತ್ರಿ 12 ಗಂಟೆ ಸಮಯದಲ್ಲಿ ನರ್ಸ್ ರೀತಿ ವೇಷ ಹಾಕಿಕೊಂಡು ಬಂದಿದ್ದ ಮಹಿಳೆ ಔಷಧಿ ತನ್ನಿ ಎಂದು ಶಿಶುವಿನ ತಂದೆ ಸುರಾಲ್‌ಗೆ ಚೀಟಿವೊಂದನ್ನು ನೀಡಿ ಕಳುಸಿದ್ದು, ನಂತರ ಮಗುವನ್ನು ಅಪಹರಿಸಿ ಪರಾರಿಯಾಗಿದ್ದರು.

ಸಿಕ್ಕಿಬಿದ್ರು ಕದೀಮರು

ಆಸ್ಪತ್ರೆಯಲ್ಲಿದೆ ಎಂದು ಕೊಂಡಿದ್ರು  ಮಾರನೇ ದಿನವಾದರೂ ಮಗು ವಾಪಾಸ್ ನೀಡದ ಕಾರಣ ಹುಡುಕಾಡಿದಾಗ ಮಗು ಅಪಹರಣವಾಗಿರುವುದು ತಿಳಿದಿದೆ. ಕೂಡಲೇ ಅರಕಲಗೂಡು ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಆಸ್ಪತ್ರೆಯಿಂದ ಮಗು ಕರೆದ್ದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಚುರುಕುಗೊಳಿಸದ ಪೊಲೀಸರಿಗೆ ಮೂರೇ ದಿನದಲ್ಲೇ ಆರೋಪಿಗಳೆಲ್ಲರೂ ಸಿಕ್ಕಿಬಿದ್ದಿದ್ದರು.

ಅಪಹರಣದ  ಹಿಂದಿದೆ ಕಣ್ಣೀರ ಕಥೆ

ವಿಚಾರಣೆ ವೇಳೆ ಮಗುವಿನ ಅಪಹರಣ ಹಿಂದೆ ಇರುವ ಕಣ್ಣೀರಿನ ಕಥೆ ತಿಳಿದಿದೆ. ಮೈಸೂರಿಗೆ ವಿವಾಹ ಮಾಡಿಕೊಡಲಾಗಿದ್ದ ತಾಲೂಕಿನ ಕಣಿಯಾರು ಕೊಪ್ಪಲು ಗ್ರಾಮದ ಸುಶ್ಮಿತಾ ಎಂಬ ಯುವತಿಗೆ ಒಂಬತ್ತು ವರ್ಷಗಳಿಂದ ಮಕ್ಕಳಿರಲಿಲ್ಲ. ಈ ವಿಚಾರದಲ್ಲಿ ಕುಟುಂಬದಲ್ಲಿ ವೈಮನಸ್ಯಕ್ಕೆ ಕಾರಣವಾಗಿ ಮಗನಿಗೆ ಇನ್ನೊಂದು ಮದುವೆ ಮಾಡುವುದಾಗಿ ಪತಿಯ ತಂದೆ ತಾಯಿ ಹಟ ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ದಂಪತಿಗಳು ಕುಟುಂಬದಿಂದ ಬೇರಾಗಿ ಪ್ರತ್ಯೇಕ ವಾಸವಿದ್ದರು.

ಇದನ್ನೂ ಓದಿ: Covid19 Restrictions: ಮಾರ್ಚ್ 31 ರಿಂದ ಕೋವಿಡ್ 19 ನಿರ್ಬಂಧ ನಿಯಮಗಳು ಇರೋದಿಲ್ಲ, ಮಾಸ್ಕ್ ಹಾಕೋದು ಮಾತ್ರ ಕಡ್ಡಾಯ

ಮಗಳಿಗಾಗಿ ಮಗು ಕದಿಯೋ ಪ್ಲ್ಯಾನ್​

ಆರು ತಿಂಗಳ ಹಿಂದೆ ಗರ್ಭಿಣಿಯಾದ ಸುಶ್ಮಿತಾಗೆ ಗರ್ಭಪಾತವಾಗಿತ್ತು. ಮಕ್ಕಳಿಲ್ಲದ ಹಾಳಾಗುತ್ತಿರುವ ಮಗಳ ಬದುಕನ್ನು ಉಳಿಸಬೇಕೆಂದು ಎಂದು ಸುಶ್ಮಿತಾ ತಾಯಿ ಶೈಲಜಾ, ಮಗ ಯಶ್ವಂತ್, ಇನ್ನೊಬ್ಬ ಪುತ್ರಿ ಅರ್ಪಿತಾ, ಸುಮಾ, ಪ್ರಕಾಶ್ ಎಂಬುವವರ ಜೊತೆ ಸೇರಿ ಮಗುವಿನ ಅಪಹರಣಕ್ಕೆ ಸಂಚು ರೂಪಿಸಿದರು. ಭಾನುವಾರ ರಾತ್ರಿ ಆಸ್ಪತ್ರೆಗೆ ಬಂದ ಆರೋಪಿಗಳು ಎಲ್ಲ ವಾರ್ಡ್‍ಗಳಿಗೆ ತೆರಳಿ ನವಜಾತ ಶಿಶುವಿಗಾಗಿ ಶೋಧ ನಡೆಸಿದ್ದಾರೆ.

ಇದನ್ನೂ ಓದಿ: Crime News: ಬರೋಬ್ಬರಿ ಆರು ಆಟೋಗಳನ್ನು ಕದ್ದ ಅಪ್ರಾಪ್ತ..! ಕೊನೆಗೂ ಸಿಕ್ಕಿಬಿದ್ದ

ಸಂಸಾರ ಉಳಿಸಲು ಹೋಗಿ ಜೈಲು ಸೇರಿದ್ರು

7 ಗಂಟೆಯಲ್ಲಿ ಕೂಲಿ ಕಾರ್ಮಿಕ ಮಹಿಳೆಗೆ ಗಂಡು ಶಿಶು ಜನನವಾದ ಸುದ್ದಿ ತಿಳಿದು ರಾತ್ರಿ 12 ಗಂಟೆ ಸಮಯದಲ್ಲಿ ಮಗುವನ್ನು ಅಪಹರಿಸಿದ್ದಾರೆ. ನಂತರ ಯಶ್ವಂತ್ ಮಗುವನ್ನು ವಾಹನದಲ್ಲಿ ಕರೆದೊಯ್ದು ಕಣಿಯಾರು ಗ್ರಾಮದ ತೋಟದ ಮನೆಯಲ್ಲಿ ಇರಿಸಿ ಮೈಸೂರಿಗೆ ಸಾಗಿಸಿದ್ದರು. ಶಿಶುವಿನ ಅಪಹರಣ ಪ್ರಕರಣ ಸಂಬಂಧ ಸುಮ, ಯಶ್ವಂತ್, ಅರ್ಪಿತಾ, ಶೈಲಜಾ, ಸುಶ್ಮಾ, ಕಾರು ಚಾಲಕ ಪ್ರಕಾಶ್‌ ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ. ಒಂದೆಡೆ ಮಗುವಿಲ್ಲ ಎಂಬ ಕಾರಣಕ್ಕೆ ಮಗಳ ಸಂಸಾರ ಉಳಿಸಲು ಹೋಗಿ ಜೈಲು ಸೇರಿರುವುದು ದುರಂತವೇ ಸರಿ.
Published by:Pavana HS
First published: