HOME » NEWS » District » CHIKMAGALUR NEWS KOPPA GOVERNMENT HOSPITAL DOCTORS REMOVE OUT 15 KG STONE FROM BODY OF A LADY SNVS

ಚಿಕ್ಕಮಗಳೂರಿನ ಮಹಿಳೆ ಹೊಟ್ಟೆಯಲ್ಲಿ 15 ಕಿಲೋ ಗೆಡ್ಡೆ; ಸರ್ಜರಿ ಮಾಡಿ ಪ್ರಾಣ ಉಳಿಸಿದ ಸರ್ಕಾರಿ ವೈದ್ಯರು

ಸದ್ಯ ಮಹಿಳೆಯ ಹೊಟ್ಟೆಯಿಂದ 15 ಕೆಜಿ ಗೆಡ್ಡೆ ಹೊರತೆಗೆದಿದ್ದು, ದೇಹದ ಭಾರ ಇಳಿಸಿಕೊಂಡಿರೋ ಶಫುರಭಿ ಆರೋಗ್ಯವಾಗಿದ್ದಾರೆ. ಮಹಿಳೆಗೆ ಪುನರ್ಜನ್ಮ ನೀಡಿರೋ ವೈದ್ಯರ ತಂಡ, ವೈದ್ಯೋ ನಾರಾಯಣ ಹರಿ ಅನ್ನೋದನ್ನ ಮತ್ತೊಮ್ಮೆ ಸಾಬೀತು ಮಾಡಿದೆ.

news18-kannada
Updated:July 7, 2020, 7:02 AM IST
ಚಿಕ್ಕಮಗಳೂರಿನ ಮಹಿಳೆ ಹೊಟ್ಟೆಯಲ್ಲಿ 15 ಕಿಲೋ ಗೆಡ್ಡೆ; ಸರ್ಜರಿ ಮಾಡಿ ಪ್ರಾಣ ಉಳಿಸಿದ ಸರ್ಕಾರಿ ವೈದ್ಯರು
ಮಹಿಳೆಯ ಹೊಟ್ಟೆಯಲ್ಲಿದ್ದ 15 ಕಿಲೋ ತೂಕದ ಗೆಡ್ಡೆ
  • Share this:
ಚಿಕ್ಕಮಗಳೂರು: ಮಹಿಳೆಯ ಹೊಟ್ಟೆಯಲ್ಲಿದ್ದ 15 ಕೆ.ಜಿ. ತೂಕದ ಗೆಡ್ಡೆಯನ್ನ ದೇಹದಿಂದ ಹೊರತೆಗೆದು ಆಕೆಗೆ ಪುನರ್ಜನ್ಮ ನೀಡಿರುವ ಘಟನೆ ಈ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದಲ್ಲಿ ನಡೆದಿದೆ.  

ಕೊಪ್ಪದ ಸರ್ಕಾರಿ ಆಸ್ಪತ್ರೆ ವೈದ್ಯ ಬಾಲಕೃಷ್ಣ ಅವರು ಶೃಂಗೇರಿ ಮೂಲದ 45 ವರ್ಷದ ಶಫುರಭಿ ಎಂಬ ಮಹಿಳೆಯ ಹೊಟ್ಟೆಯಲ್ಲಿದ್ದ ಗೆಡ್ಡೆಯನ್ನ ಅಪರೇಶನ್ ಮಾಡಿ ಹೊರ ತೆಗೆದಿದ್ದಾರೆ. ಅಪರೇಶನ್ ವೇಳೆ ಡಾ. ಬಾಲಕೃಷ್ಣರವರಿಗೆ ಡಾ. ಧನಂಜಯ್, ನರ್ಸ್ ರೇಷ್ಮಾ ಹಾಗೂ ಸಿಬ್ಬಂದಿ ಮಂಜುನಾಥ್ ಸಹಾಯ ನೀಡಿದ್ದಾರೆ. ಯಶಸ್ವಿ ಶಸ್ತ್ರ ಚಿಕಿತ್ಸೆಯ ಬಳಿಕ ಮಹಿಳೆ ಆರೋಗ್ಯವಾಗಿದ್ದು ಸದ್ಯ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.

ಕೆಲ ತಿಂಗಳಿನಿಂದ ಶಫುರಭಿ ಬಹಳ ದಪ್ಪ ಆಗುತ್ತಿದ್ದರು. ದಿನದಿಂದ ದಿನಕ್ಕೆ ಮಹಿಳೆಯ ಹೊಟ್ಟೆ ಉಬ್ಬತೊಡಗಿತು. ಶಫುರಬಿ ದಪ್ಪ ಆಗಿದ್ದರಿಂದಲೇ  ಹೊಟ್ಟೆ ಉಬ್ಬಿರಬಹುದು ಎಂದು ಮನೆಯವರು ಊಯಿಸಿದ್ದರು. ಆದರೆ, ದಿನ ಕಳೆದಂತೆ ಮಹಿಳೆಗೆ ಉಸಿರಾಟದ ಸಮಸ್ಯೆ ಕೂಡ ಎದುರಾಗಿತ್ತು. ಈ ವೇಳೆ ಸ್ಕ್ಯಾನಿಂಗ್ ಮಾಡಿಸಿದ ಬಳಿಕ ಮಹಿಳೆಗೆ ಹೊಟ್ಟೆಯಲ್ಲಿ ಗೆಡ್ಡೆ ಇರುವುದು ಅರಿವಾಗಿದೆ. ಹೊಟ್ಟೆಯಲ್ಲಿದ್ದ ಗೆಡ್ಡೆ ಅಂದರೆ ಸಾಧಾರಣ ಒಂದೆರಡು ಕೆ.ಜೆ. ಬೆಳೆಯಬಹುದು. ಆದರೆ, ವೈದ್ಯರು ಹೊರತೆಗೆದ ಗೆಡ್ಡೆ 15 ಕೆ.ಜಿ. ಇತ್ತು. ಮಹಿಳೆಯೊಬ್ಬರ ಹೊಟ್ಟೆಯಲ್ಲಿ ಗೆಡ್ಡೆ ತೆಗೆದ ವೈದ್ಯರಿಗೂ ಅದರ ತೂಕ ಕಂಡು ಅಚ್ಚರಿ ಎನಿಸಿತು. ಸರ್ಕಾರಿ ಆಸ್ಪತ್ರೆಯಲ್ಲೇ ಇಂತಹದ್ದೊಂದು ಅಪರೇಶನ್ ಮಾಡಬಹುದು ಎಂದು ಮಹಿಳೆಗೆ ಧೈರ್ಯ ತುಂಬಿದ್ದರು. ಇದರ ಪರಿಣಾಮ, ವೈದ್ಯ ಬಾಲಕೃಷ್ಣರ ಪರಿಶ್ರಮದಿಂದ ಸರ್ಕಾರಿ ಆಸ್ಪತ್ರೆಯಲ್ಲೇ ಯಶಸ್ವಿ ಅಪರೇಶನ್ ಕೂಡ ನಡೆದಿದೆ.

ಇದನ್ನೂ ಓದಿ: ಬೆಡ್​ಗಳು ಭರ್ತಿ, ಹೊಸ ರೋಗಿಗಳಿಗೆ ಇಲ್ಲ ಸ್ಥಳ: ಬೆಂಗಳೂರಿನ ಖಾಸಗಿ ಆಸ್ಪತ್ರೆಗಳ ಅಸಹಾಯಕತೆಸದ್ಯ ಮಹಿಳೆಯ ಹೊಟ್ಟೆಯಿಂದ 15 ಕೆಜಿ ಗೆಡ್ಡೆ ಹೊರತೆಗೆದಿದ್ದು, ದೇಹದ ಭಾರ ಇಳಿಸಿಕೊಂಡಿರೋ ಶಫುರಭಿ ಆರೋಗ್ಯವಾಗಿದ್ದಾರೆ. ಮಹಿಳೆಗೆ ಪುನರ್ಜನ್ಮ ನೀಡಿರೋ ವೈದ್ಯರ ತಂಡ, ವೈದ್ಯೋ ನಾರಾಯಣ ಹರಿ ಅನ್ನೋದನ್ನ ಮತ್ತೊಮ್ಮೆ ಸಾಬೀತು ಮಾಡಿದೆ.

ವರದಿ: ವೀರೇಶ್ ಹೆಚ್ ಜಿ
Published by: Vijayasarthy SN
First published: July 7, 2020, 7:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories