ಅಧಿಕಾರಿಗಳ ಬೇಜವಾಬ್ದಾರಿತನದ ಆರೋಪ; 40 ಕ್ಕೂ ಹೆಚ್ಚು ಸಂತ್ರಸ್ತ ಕುಟುಂಬಗಳಿಗಿಲ್ಲ ಸೂರು

ಈ ಗ್ರಾಮದಲ್ಲಿ ಸರ್ವೆ ನಡೆಸುವ ಸಂದರ್ಭದಲ್ಲಿ ಅವತ್ತು ಸರ್ವೆ ಕೆಲಸ ಮಾಡಿದ್ದ ಇಂಜಿನಿಯರ್ ಹಾಗೂ ಸ್ಥಳೀಯ ಪಂಚಾಯತ್ ಅಧಿಕಾರಿಗಳು ಗೋಲ್​ಮಾಲ್ ಮಾಡಿದ್ದಾರೆ ಎನ್ನುವ ಆರೋಪವನ್ನ ಗ್ರಾಮಸ್ಥರು ಮಾಡಿದ್ದಾರೆ.

ಪ್ರವಾಹ ಸಂತ್ರಸ್ತರು

ಪ್ರವಾಹ ಸಂತ್ರಸ್ತರು

  • Share this:
ಚಿಕ್ಕೋಡಿ(ಜೂ.22): ಪ್ರವಾಹ ಬಂದು ವರ್ಷವೇ ಕಳೆದು ಮತ್ತೆ ಮಳೆಗಾಲ ಆರಂಭ ಆಗಿದೆ. ಆದರೂ ಸಹ ಪ್ರವಾಹ ಸಂತ್ರಸ್ತರು ಇವತ್ತಿಗೂ ಕೈಯಲ್ಲಿ ಪೇಪರ್ ಹಿಡಿದು ಕಛೇರಿಗಳಿಗೆ ಅಲೆದಾಡುತ್ತಿದ್ದಾರೆ. ಹೌದು ಇಂತಹ ಸ್ಥಿತಿ ಇರೋದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಳೆ ದಿಗ್ಗೆವಾಡಿ ಗ್ರಾಮದಲ್ಲಿ ಈ ಪುಟ್ಟ ಗ್ರಾಮದಲ್ಲಿ.

ಇರೋದು ಬರಿ ಇನ್ನೂರು ಮನೆಗಳು. ಕೃಷ್ಣಾ ನದಿ ಅಂಚಿನಲ್ಲಿ ಇರುವ ಈ ಗ್ರಾಮ ಕೃಷ್ಣಾ ನದಿ ಪ್ರವಾಹ ಬಂದಾಗ ಸಂಪ್ರದಾಯ ಮುಳೆಗಡೆಯಾಗಿತ್ತು. ಅಂದು 100 ಕ್ಕೂ ಹೆಚ್ಚು ಮನೆಗಳು ನೆಲಸಮ ಆಗಿದ್ದವು. ಆದರೆ ಬಂದಿದ್ದು ಮಾತ್ರ ಅರ್ಧದಷ್ಟು ಮನೆಗಳು ಮಾತ್ರ. ಇವತ್ತಿಗೂ 40 ಕ್ಕೂ ಹೆಚ್ಚು ಕುಟುಂಬಗಳಿಗೆ ಸರ್ಕಾರದಿಂದ ಮನೆ ನಿರ್ಮಾಣ ಮಾಡಲು ಯಾವುದೇ ಸಹಾಯ ಧನ ಬಂದಿಲ್ಲ.

ಅಂದು ಸರ್ವೆ ಮಾಡಿ ಹೋದ ಅಧಿಕಾರಿಗಳು ಇವತ್ತಿಗೂ ನಮ್ಮ ಗ್ರಾಮಗಳಿಗೆ ವಾಪಸ್ ಬಂದಿಲ್ಲ ಶಾಸಕರು ಮಂತ್ರಿಗಳು ಬಂದು ನಮಗೆ ಭರವಸೆ ಕೊಟ್ಟಿದ್ದರು. ಆದರೂ ಸಹ ನಮ್ಮ ಮನೆಗಳಿಗೆ ಹಣ ಬಿಡುಗಡೆ ಆಗಿಲ್ಲ ಎಂದು ಸಂತ್ರಸ್ತರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆದ ಚಿರತೆ; ನಿಟ್ಟುಸಿರು ಬಿಟ್ಟ ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮಸ್ಥರು

ಇನ್ನು, ಈ ಗ್ರಾಮದಲ್ಲಿ ಸರ್ವೆ ನಡೆಸುವ ಸಂದರ್ಭದಲ್ಲಿ ಅವತ್ತು ಸರ್ವೆ ಕೆಲಸ ಮಾಡಿದ್ದ ಇಂಜಿನಿಯರ್ ಹಾಗೂ ಸ್ಥಳೀಯ ಪಂಚಾಯತ್ ಅಧಿಕಾರಿಗಳು ಗೋಲ್​ಮಾಲ್ ಮಾಡಿದ್ದಾರೆ ಎನ್ನುವ ಆರೋಪವನ್ನ ಗ್ರಾಮಸ್ಥರು ಮಾಡಿದ್ದಾರೆ. ಸರ್ವೆ ಸಂದರ್ಭದಲ್ಲಿ ಹಣ ನೀಡಿದವರ ಹೆಸರನ್ನು  ಮಾತ್ರ ಸರ್ವೆ ಲಿಸ್ಟ್​​​ನಲ್ಲಿ  ಹಾಕಿದ್ದಾರೆ. ಹಣ ನೀಡದವರ ಹೆಸರನ್ನು ಕೈ ಬಿಟ್ಟಿದ್ದಾರೆ. ಒಂದೇ ಕುಟುಂಬದ ಇಬ್ಬರ ಹೆಸರಿನಲ್ಲಿ ಮನೆಗಳ ಮಂಜೂರಾತಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಹಲವಾರು ಬಾರಿ ಕಛೇರಿಗಳಿಗೆ ಅಲೆದರೂ ಆಗುತ್ತೆ ಆಗುತ್ತೆ ಅಂತ ಹೇಳುತ್ತಾರೆ. ಡಿಸಿ ಕಛೇರಿವರೆಗೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಮಾತ್ರ ಆಗಿಲ್ಲಾ ಅಂತಾರೆ ಸಂತ್ರಸ್ತರು.

ಒಟ್ಟಿನಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಬಡ ಸಂತ್ರಸ್ತರು ಬೀದಿಗೆ ಬಿದ್ದಿದ್ದಾರೆ. ಅರ್ಧ ಸಂತ್ರಸ್ತರಿಗೆ ಪರಿಹಾರ ಕೊಟ್ಟಿರುವ ಸರ್ಕಾರ, ಲಾಗಿನ್​​ ಬಂದ್ ಮಾಡಿದ್ದು ಇನ್ನುಳಿದ ಸಂತ್ರಸ್ತರು ಹೆಸರು ನೊಂದಾಯಿಸಿಕೊಳ್ಳಲು ಮುಂದಾಗುತ್ತಿಲ್ಲ. ಅವಧಿ ಮುಗಿದು ಹೋಗಿದೆ ಎಂದು ಹೇಳಿ ಜಾರಿಕೊಳ್ಳುತ್ತಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಬಾಕಿ ಉಳಿದ ಸಂತ್ರಸ್ತರಿಗೂ ಮನೆಗಳನ್ನ ಮಂಜೂರಾತಿ ಮಾಡಲು ಮುಂದಾಗಬೇಕಿದೆ.
First published: