ಸಂಭಾವ್ಯ ಪ್ರವಾಹ ಎದುರಿಸಲು ಜಿಲ್ಲಾಡಳಿತ ತಯಾರಿ; ಚಿಕ್ಕೋಡಿಯಲ್ಲಿ NDRF ತಂಡದ ನಿಯೋಜನೆ

ಸಾಮಾನ್ಯವಾಗಿ ಮಹಾರಾಷ್ಟ್ರದ ಕೊಯಿನಾ ಜಲಾಶಯ ಸಂಪೂರ್ಣ ಭರ್ತಿಯಾದ ಬಳಿಕವೆ ಕೃಷ್ಣಾ ನದಿಗೆ ಹೆಚ್ಚಿನ ನೀರು ಹರಿದು ಬರುತ್ತದೆ. ಕಳೆದ ಬಾರಿ ಅಗಸ್ಟ್‌ ತಿಂಗಳಲ್ಲಿ ಪ್ರವಾಹ ಬರುವ ಮೊದಲು ಗ್ರಾಮಗಳನ್ನ ಖಾಲಿ ಮಾಡಿ ಎಂದಿದ್ದರೂ ಜನ ಮಾಡಿರಲಿಲ್ಲ. ಹೀಗಾಗಿ ಜನ ಪ್ರವಾಹಕ್ಕೆ ಸಿಲುಕಿದ್ದರು.

ಚಿಕ್ಕೋಡಿಯಲ್ಲಿ ಬೀಡುಬಿಟ್ಟಿರುವ ಎನ್‌ಡಿಆರ್‌ಎಫ್ ತಂಡ.

ಚಿಕ್ಕೋಡಿಯಲ್ಲಿ ಬೀಡುಬಿಟ್ಟಿರುವ ಎನ್‌ಡಿಆರ್‌ಎಫ್ ತಂಡ.

  • Share this:
ಚಿಕ್ಕೋಡಿ (ಜೂನ್‌ 04); ಕಳೆದ ಅಗಸ್ಟ್‌ ತಿಂಗಳ ಭೀಕರ ಪ್ರವಾಹಕ್ಕೆ ಇಡೀ ಉತ್ತರ ಕರ್ನಾಟಕವೇ ನಲುಗಿ ಹೋಗಿತ್ತು. ನಿರಂತರ ಸುರಿದ ಭಾರೀ ಮಳೆಗೆ ಉತ್ತರ ಕರ್ನಾಟಕದ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ದೂದಗಂಗಾ ನದಿಯಲ್ಲಿ ಬಂದಂತಹ ಪ್ರವಾಹಕ್ಕೆ ಲಕ್ಷಾಂತರ ಜನ ತಮ್ಮ ಮನೆ ಮಠಗಳನ್ನ ಕಳೆದುಕೊಂಡ ಬೀದಿಗೆ ಬಂದಿದ್ದರು. ಅಂದಿನ ಪರಿಸ್ಥಿತಿ ಈವರೆಗೆ ಸುಧಾರಿಸಿಲ್ಲ. ಅಷ್ಟರಲ್ಲೇ ಮತ್ತೊಂದು ಮಳೆಗಾಲ ಆರಂಭವಾಗಿದ್ದು, ಪ್ರವಾಹ ಎದುರಿಸಲು ಬೆಳಗಾವಿ ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದೆ. ಅಲ್ಲದೆ,

ಈಗಾಗಲೇ ಮುಂಗಾರು ಮಳೆ ರಾಜ್ಯಕ್ಕೆ ಆಗಮಿಸಿದೆ ವಾತಾವರಣದಲ್ಲಿ ಬದಲಾವಣೆ ಆಗಿದ್ದು ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದೆ. ಜೊತೆಗೆ ಈ ಬಾರಿಯೂ ವಾಡಿಕೆ ಗಿಂತ ಶೇ.80 ರಷ್ಟಯ ಹೆಚ್ಚು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಗೆ ನೀಡಿದ್ದು, ಮಳೆ ಹೆಚ್ಚಾದರೆ ಮತ್ತೊಮ್ಮೆ ಕೃಷ್ಣಾ ತೀರದಲ್ಲಿ ಪ್ರವಾಹ ಎದುರಾಗುವ ಸಾಧ್ಯತೆಗಳಿವೆ. ಆ ನಿಟ್ಟಿನಲ್ಲಿ ಸಂಭಾವ್ಯ ಪ್ರವಾಹ ಎದುರಿಸಲು ಬೆಳಗಾವಿ ಜಿಲ್ಲಾಡಳಿತ ಈಗಿನಿಂದಲೆ ತಯಾರಿಗಳನ್ನ ಶುರುಮಾಡಿದೆ.

ಸಾಮಾನ್ಯವಾಗಿ ಮಹಾರಾಷ್ಟ್ರದ ಕೊಯಿನಾ ಜಲಾಶಯ ಸಂಪೂರ್ಣ ಭರ್ತಿಯಾದ ಬಳಿಕವೆ ಕೃಷ್ಣಾ ನದಿಗೆ ಹೆಚ್ಚಿನ ನೀರು ಹರಿದು ಬರುತ್ತದೆ. ಕಳೆದ ಬಾರಿ ಅಗಸ್ಟ್‌ ತಿಂಗಳಲ್ಲಿ ಪ್ರವಾಹ ಬರುವ ಮೊದಲು ಗ್ರಾಮಗಳನ್ನ ಖಾಲಿ ಮಾಡಿ ಎಂದಿದ್ದರೂ ಜನ ಮಾಡಿರಲಿಲ್ಲ. ಹೀಗಾಗಿ ರಾತ್ರೋರಾತ್ರಿ ನೀರು ಹೆಚ್ಚಾಗ ತೋಡಗುತ್ತಿದ್ದಂತೆ ಸಂಪರ್ಕ ರಸ್ತೆಗಳು ಮುಳುಗಿ ಸೇನೆ ಹಾಗೂ NDRF ಸಹಾಯದಿಂದ ಜನರ ರಕ್ಷಣೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಹತ್ತಾರು ಅಡೆತಡೆಗಳು ಬಂದಿದ್ದವು. ಸ್ಥಳೀಯ ನದಿ ಪಾತ್ರದ ಮಾಹಿತಿ ಇಲ್ಲದ ಪರಿಣಾಮ NDRF ತಂಡ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಯಿತು. ಇದೆ ಕಾರಣದಿಂದಾಗಿ ಈ ಭಾರಿ ಜಿಲ್ಲಾಡಳಿತ ಒಂದೂವರೆ ತಿಂಗಳು ಮೊದಲೇ ಸಂಭಾವ್ಯ ಪ್ರವಾಹ ಎದುರಿಸಲು ಸಜ್ಜಾಗಿದ್ದು ಪ್ರವಾಹಕ್ಕೂ ಮೊದಲೇ ಮುನ್ನೆಚ್ಚರಿಕೆ ಕ್ರಮವಾಗಿ ರಾಷ್ಟ್ರೀಯ ವಿಪತ್ತು ದಳ, ಎನ್‌ಡಿಆರ್‌ಎಫ್ ತಂಡವನ್ನ ಕೃಷ್ಣಾ ನದಿ ತೀರದಲ್ಲಿ ನಿಯೋಜನೆ ಮಾಡಿದೆ.

ಈಗಾಗಲೇ 25 ಜನರ ಎನ್‌ಡಿಆರ್‌ಎಫ್ ತಂಡ ಬೆಳಗಾವಿ‌ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ನಿಯೋಜನೆಗೊಂಡಿದ್ದು ಪ್ರವಾಹವನ್ನು ಹೇಗೆ ಎದುರಿಸಬೇಕು ಎನ್ನುವ ಕುರಿತು ಸ್ಥಳೀಯರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ.
ಒಟ್ಟಿನಲ್ಲಿ ಮತ್ತೊಮ್ಮೆ ಪ್ರವಾಹ ಬರುವ ಸಾಧ್ಯತೆಗಳೆ ಹೆಚ್ಚಾಗಿದ್ದು ತೀರ ನದಿ ಪಾತ್ರದಲ್ಲಿ ಇರುವ ಜನರನ್ನ ಸುರಕ್ಷಿತ ಸ್ಥಳಗಳಿಗೆ ಕಳೆಸುವ ಕೆಲಸಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಇದನ್ನೂ ಓದಿ : ’ನ್ಯಾಯವೇ ಮೇಲುಗೈ ಸಾಧಿಸುತ್ತದೆ’; ಆನೆ ಸಾವಿನ ಪ್ರಕರಣದಲ್ಲಿ ಶಂಕಿತರನ್ನು ಗುರುತಿಸಲಾಗಿದೆ; ಸಿಎಂ ಪಿಣರಾಯಿ
First published: