Chikkamagaluru: ಮದಗದ ಕೆರೆಗೆ ಮಾಯದಂತಾ ಮಳೆ.... ಕೋಡಿಬಿದ್ದಿದೆ ಇತಿಹಾಸ ಪ್ರಸಿದ್ಧ ಕೆರೆ...!

ಮಲೆನಾಡಲ್ಲಿ ವರುಣನ ಆರ್ಭಟ ಜೋರಾಗಿದ್ದು, ಸೆಪ್ಟೆಂಬರ್-ಅಕ್ಟೋಬರ್​​ನಲ್ಲಿ ಕೋಡಿ ಬೀಳುತ್ತಿದ್ದ ಕೆರೆ ಈ ವರ್ಷ ಜುಲೈ ತಿಂಗಳಲ್ಲೇ ಕೋಡಿ ಬಿದ್ದಿದೆ. ಯಾವುದೇ ನದಿಯ ಸಂಪರ್ಕವಿಲ್ಲದೆ ಅಷ್ಟು ದೊಡ್ಡ ಕೆರೆ ತುಂಬೋದು ನಿಜಕ್ಕೂ ಹುಡುಗಾಟದ ಮಾತಲ್ಲ.

ಕೋಡಿ ಬಿದ್ದಿರುವ ಮದಗದ ಕೆರೆ

ಕೋಡಿ ಬಿದ್ದಿರುವ ಮದಗದ ಕೆರೆ

  • Share this:
ಚಿಕ್ಕಮಗಳೂರು(ಜು.29): ಚಿಕ್ಕಮಗಳೂರಿನ ಗಿರಿಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಜುಲೈ ತಿಂಗಳಲ್ಲೇ ಐತಿಹಾಸಿಕ ಮದಗದ ಕೆರೆ ಮೈದುಂಬಿ ಕೋಡಿ ಬಿದ್ದಿದೆ. ಶಾಶ್ವತ ಬರಗಾಲಕ್ಕೆ ತುತ್ತಾದ ಕಡೂರು ತಾಲೂಕಿನ ಮದಗದ ಕೆರೆ ತುಂಬಿರೋದು ರೈತರಲ್ಲಿ ಹರ್ಷ ಮೂಡಿಸಿದೆ. ಜಾನಪದದ ಬಾಯಲ್ಲಿ ಅದ್ಭುತ ಪರಿಕಲ್ಪನೆಯೊಂದಿಗೆ ಮೂಡಿದೆ ಗೀತೆಗೆ ಸಾಥ್ ನೀಡಿದ ಕೆರೆಯ ಕಾಫಿನಾಡಿನ ಮದಗದ ಕೆರೆ. ಈ ಕೆರೆಗೆ ಬರೋದೆ ಮಾಯದಂತ ಮಳೆ. ಆದ್ರೆ, ಈ ಬಾರಿ ಚಿಕ್ಕಮಗಳೂರಿನ ಗಿರಿ ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಜುಲೈ ತಿಂಗಳಲ್ಲೇ ಮೈದುಂಬಿ ಕೋಡಿ ಬಿದ್ದಿದೆ.

ಶಾಶ್ವತ ಬರಗಾಲಕ್ಕೆ ತುತ್ತಾದ ಕಡೂರು ತಾಲೂಕಿಗೆ ಈ ಕೆರೆ ತುಂಬಿರೋದು ಮರಳುಗಾಡಲ್ಲಿ ಓಯಾಸೀಸ್ ಸಿಕ್ಕಂತಾಗಿದೆ. ಸುಮಾರು 2036 ಎಕರೆಯಷ್ಟು ವಿಸ್ತಿರ್ಣ ಹೊಂದಿರೋ ಈ ಕೆರೆ ಸಾವಿರಾರು ಎಕರೆಗೆ ನೀರುಣಿಸುತ್ತೆ. ಲಕ್ಷಾಂತರ ಜನ-ಜಾನುವಾರುಗಳಿಗೆ ಬಾಯಾರಿಕೆಯ ದಾಹ ನೀಗಿಸುತ್ತೆ. ನೋಡುಗರ ಕಣ್ಣಿ ದೃಷ್ಠಿ ಮುಗಿದರೂ ಕೆರೆಯ ವಿಸ್ತೀರ್ಣ ಮುಗಿಯಲ್ಲ. ಬರಪೀಡಿತ ತಾಲೂಕಿನ ಈ ಕೆರೆ ಕೋಡಿ ಬಿದ್ದಿರೋದ್ರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಈ ಸುಮಧುರ ಕ್ಷಣವನ್ನ ಕಣ್ತುಂಬಿಕೊಂಡು ಸಂಭ್ರಮಿಸ್ತಿದ್ದಾರೆ. ನೋಡೋದಕ್ಕೆ ಸಮುದ್ರದಂತಿರೋ ಈ ಕೆರೆಯ ಬಳಿ ಸೆಲ್ಫಿ ಕ್ರೇಜಿನ ಕಿಂಗ್, ಕ್ವೀನ್‍ಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಆದ್ರೆ, ಹಾಲ್ನೊರೆಯಂತೆ ಧುಮ್ಮಿಕ್ತಿರೋ ಈ ಕೆರೆ ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿರೋದಂತು ಸತ್ಯ.

ಇದನ್ನೂ ಓದಿ:Raj Kundra ನನಗೆ ಬಲವಂತವಾಗಿ ಕಿಸ್ ಮಾಡೋಕೆ ಬಂದಿದ್ದ, ಹೆದರಿ ಬಾತ್​​ರೂಂನಲ್ಲಿ ಅಡಗಿಕೊಂಡಿದ್ದೆ; ಶಾಕಿಂಗ್ ಹೇಳಿಕೆ ನೀಡಿದ Sherlyn Chopra!

ಇನ್ನು ಶತಮಾನಗಳಿಂದಲೂ ಈ ಕೆರೆ ಶುಕ್ರವಾರ ಅಥವ ಮಂಗಳವಾರವೇ ಕೋಡಿ ಬೀಳುವುದು. ಅದೆಂತದ್ದೇ ಮಳೆಗಾಲ ಬಂದರೂ ಬೇರೆ ದಿನ ಕೋಡಿ ಬೀಳಲ್ಲ. ಇನ್ನು ಈ ಮಾಯದ ಕೆರೆಯ ಸುತ್ತ ಪ್ರಕೃತಿ ಸೌಂದರ್ಯವೇ ಮನೆ ಮಾಡಿದೆ. ಮುಗಿಲೆತ್ತರದ ಬೆಟ್ಟಗುಡ್ಡಗಳು. ಕಣ್ಣಾಯಿಸಿದಲ್ಲೆಲ್ಲಾ ಹಸಿರ ವನರಾಶಿ. ತಣ್ಣಗೆ ಬೀಸೋ ಸ್ವಚ್ಛ ಗಾಳಿ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ. ಮಲೆನಾಡಲ್ಲಿ ವರುಣನ ಆರ್ಭಟ ಜೋರಾಗಿದ್ದು, ಸೆಪ್ಟೆಂಬರ್-ಅಕ್ಟೋಬರ್​​ನಲ್ಲಿ ಕೋಡಿ ಬೀಳುತ್ತಿದ್ದ ಕೆರೆ ಈ ವರ್ಷ ಜುಲೈ ತಿಂಗಳಲ್ಲೇ ಕೋಡಿ ಬಿದ್ದಿದೆ. ಯಾವುದೇ ನದಿಯ ಸಂಪರ್ಕವಿಲ್ಲದೆ ಅಷ್ಟು ದೊಡ್ಡ ಕೆರೆ ತುಂಬೋದು ನಿಜಕ್ಕೂ ಹುಡುಗಾಟದ ಮಾತಲ್ಲ. ಕಾಫಿನಾಡಿನ ಗಿರಿಭಾಗದ ಮಳೆ ಈ ಕೆರೆಯನ್ನ ಜುಲೈ ತಿಂಗಳಲ್ಲಿ ತುಂಬಿಸಿದೆ. ಬಯಲುಸೀಮೆಯ 25ಕ್ಕೂ ಹೆಚ್ಚು ಕೆರೆಗಳಿಗೆ ಈ ಕೆರೆ ಸಂಪರ್ಕ ಸೇತುವೆಯಾಗಿರೋದ್ರಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ಒಟ್ಟಾರೆ, ಕಾಫಿನಾಡ ಕಡೂರು ಶಾಶ್ವತ ಬರಗಾಲಕ್ಕೆ ತುತ್ತಾದ ತಾಲೂಕು. ಕಡೂರಿನ ರೈತರು, ಜನ-ಜಾನುವಾರುಗಳಿಗೆ ಮದಗದ ಕೆರೆ ತುಂಬಿರೋದು ಜೀವಕಳೆ ತಂದಿದೆ. ಆದ್ದರಿಂದ ರೈತರ ಮೊಗದಲ್ಲೂ ಮಂದಹಾಸ ಮೂಡಿದೆ. ಆದ್ರೆ, ಮತ್ತೊಂದೆಡೆ ಕೆರೆಯನ್ನ ಮತ್ತಷ್ಟು ಅಭಿವೃದ್ಧಿಪಡಿಸಿ ಬೇಸಿಗೆಯಲ್ಲೂ ಕೆರೆಗೆ ಮಲೆನಾಡಲ್ಲಿ ಪೋಲಾಗುವ ನೀರನ್ನ ಹರಿಸಿಬೇಕೆಂದು ರೈತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಅದೇ ನಿಟ್ಟಿನಲ್ಲಿ ಯೋಚಿಸಿದ್ರೆ ಬೇಸಿಗೆಯಲ್ಲೂ ಸಾವಿರಾರು ಜನ-ಜಾನುವಾರುಗಳ ನೀರಿನ ದಾಹ ನೀಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ:ರಾಜೀನಾಮೆ ಬಳಿಕವೂ ಪವರ್ ಸೆಂಟರ್ ಆದ ಬಿಎಸ್​ವೈ; ರಾಜಾಹುಲಿ ಸುತ್ತ ಮಂತ್ರಿ ಆಕಾಂಕ್ಷಿಗಳ ಪ್ರದಕ್ಷಿಣೆ

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Latha CG
First published: