ಚಿಕ್ಕಮಗಳೂರು : ಕೊರೊನಾ ಎರಡನೇ ಅಲೆಯ ಆರ್ಭಟ ರಾಜ್ಯದ ಇತರ ಜಿಲ್ಲೆಗಳಲ್ಲಿ ಕಡಿಮೆಯಾಗ್ತಾ ಬರ್ತಿದ್ರೆ, ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾತ್ರ ಈ ಅಂಕಿಅಂಶ ಉಲ್ಟಾ ಹೊಡೆದಿದೆ. ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ಚಾಗ್ತಾನೇ ಇದೆ. ಸದ್ಯ 26.07ರಷ್ಟು ಪಾಸಿಟಿವಿಟಿ ರೇಟ್ ಇದ್ದು, ರಾಜ್ಯದಲ್ಲೇ ಚಿಕ್ಕಮಗಳೂರು ಜಿಲ್ಲೆ ಅಗ್ರಗಣ್ಯ ಸ್ಥಾನ ಪಡೆದು ಆತಂಕ ಹುಟ್ಟಿಸಿದೆ. ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡಿ ಆಯ್ತು, ಕಂಪ್ಲೀಟ್ ಬೀಗನೂ ಹಾಕಿ ಆಯ್ತು. ಆದರೂ ಕೊರೊನಾ ಸೋಂಕು ಮಾತ್ರ ಕಂಟ್ರೋಲ್ ಆಗೋ ಯಾವುದೇ ಲಕ್ಷಣಗಳು ಕಾಣಿಸುತ್ತಲೇ ಇಲ್ಲ. ಕಳೆದ 20 ದಿನಗಳಿಂದ ಜಿಲ್ಲೆಯಲ್ಲಿ ಪ್ರತಿನಿತ್ಯ ಸರಿಸುಮಾರು 600-700 ಪ್ರಕರಣಗಳು ಬರ್ತಿರೋದು ಜಿಲ್ಲಾಡಳಿತದ ತಲೆನೋವಿಗೆ ಕಾರಣವಾಗಿದೆ.
ಕಳೆದ ಒಂದು ವಾರದ ಅಂಕಿಅಂಶಗಳನ್ನ ನೋಡಿದ್ರೆ ಪಾಸಿಟಿವಿಟಿ ರೇಟ್ 37, 38ರ ತನಕ ಏರಿಕೆಯಾಗಿ ಸದ್ಯ ಶೇಕಡಾ 26.07ಕ್ಕೆ ಬಂದು ನಿಂತಿದೆ. ಮೊದಮೊದಲು ನಗರ ಪ್ರದೇಶಗಳಿಗೆ ಹೆಚ್ಚಾಗಿ ಕಂಡು ಬರ್ತಿದ್ದ ಕೊರೊನಾ ಪ್ರಕರಣಗಳು ಇದೀಗ ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚಾಗಿ ವ್ಯಾಪಿಸಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ಇಷ್ಟಾದ್ರೂ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದವರ ಪರೀಕ್ಷೆ ನಡೆಯುತ್ತಿಲ್ಲ ಅನ್ನೋ ಆರೋಪ ಕೇಳಿ ಬಂದಿವೆ. ಅದರ ಜೊತೆಗೆ ಕೊರೊನಾ ಟೆಸ್ಟ್ ಮಾಡಿಸಲು ಜಿಲ್ಲಾಡಳಿತ ಕೂಡ ಅಷ್ಟು ತಲೆಕೆಡಿಸಿಕೊಳ್ಳುತ್ತಿಲ್ಲ ಅನ್ನೋ ದೂರು ಕೂಡ ಇದೆ. ಈ ಮಧ್ಯೆಯೂ ಪಾಸಿಟಿವಿಟಿ ರೇಟ್ ನಲ್ಲಿ ರಾಜ್ಯದಲ್ಲೇ ನಂಬರ್ ಓನ್ ನಮ್ಮ ಜಿಲ್ಲೆ ಅನ್ನೋದನ್ನ ಕೇಳಿ ಜನರು ಶಾಕ್ ಗೆ ಒಳಗಾಗಿದ್ದಾರೆ.
ಇದನ್ನೂ ಓದಿ: Covid vaccine: ಲಸಿಕೆ ಮೇಲೂ ಜಿಎಸ್ಟಿ ವಿಧಿಸಿದ ಕೇಂದ್ರ; ಖಾಸಗಿ ಆಸ್ಪತ್ರೆಗಳಲ್ಲಿ ವಾಕ್ಸಿನ್ ದರ ನಿಗದಿ
ಕಳೆದೊಂದು ವಾರದ ಹಿಂದೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸೋಂಕಿತರ ವಾರ್ಡಿಗೆ ಸಂಬಂಧಿಕರು ಯಾವುದೇ ಮುನ್ನೆಚ್ಚರಿಕೆ ಇಲ್ಲದೆ, ಅಡೆತಡೆ ಇಲ್ಲದೆ ಸಲೀಸಾಗಿ ಹೋಗಿ ಬರ್ತಿದ್ರು. ಸೋಂಕಿತರ ಪಕ್ಕದಲ್ಲೇ ಕೋರೋನಾದಿಂದ ಮೃತಪಟ್ಟ ವ್ಯಕ್ತಿಯ ಶವವಿದ್ರು ಅಲ್ಲೇ ಊಟ-ತಿಂಡಿ-ಉಪಚಾರ ಮಾಡೋದನ್ನ ಕಂಡ ಕಾಫಿನಾಡಿನ ಸಾರ್ವಜನಿಕರು ಅಧಿಕಾರಿಗಳಿಗೆ-ಜಿಲ್ಲಾಡಳಿತಕ್ಕೆ ಕ್ಲಾಸ್ ತೆಗೆದುಕೊಂಡಿದ್ರು. ಇದೀಗ ಅಧಿಕಾರಿಗಳ ಯಡವಟ್ಟಿನಿಂದಾಗಿಯೇ ಕಾಫಿನಾಡು ರಾಜ್ಯದಲ್ಲಿ ನಂಬರ್ ಪಾಸಿಟಿವಿಟಿ ಪಟ್ಟ ಅಲಂಕರಿಸಿದೆ ಅಂತ ಜನ ಗರಂ ಆಗಿದ್ದಾರೆ. ಆದ್ರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರೊ ಜಿಲ್ಲಾ ಆರೋಗ್ಯಾಧಿಕಾರಿ ನಾವು ಹೆಚ್ಚು ಟೆಸ್ಟ್ಗಳನ್ನ ಮಾಡ್ತಿರೋದ್ರಿಂದ ಪಾಸಿಟಿವಿಟಿ ರೇಟ್ ಹೆಚ್ಚಾಗೇ ಇದೆ ಅಂತಿದ್ದಾರೆ.
ಒಟ್ಟಾರೆ, ರಾಜ್ಯಾದ್ಯಂತ ಕೊರೋನಾ ಎರಡನೇ ಅಲೆ ಕಡಿಮೆಯಾಗಿದೆ. ಸರ್ಕಾರ ಲಾಕ್ಡೌನ್ ಮಾಡಿರೋ ಜಿಲ್ಲೆಗಳನ್ನ ಅನ್ಲಾಕ್ ಮಾಡೋ ಚಿಂತನೆಯಲ್ಲಿದೆ. ಆದ್ರೆ ಕಾಫಿನಾಡು ಚಿಕ್ಕಮಗಳೂರಲ್ಲಿ ಮಾತ್ರ ಕೊರೊನಾ ಸೋಂಕು ಹತೋಟಿಗೆ ಬಾರದೆ ದಿನೇ-ದಿನೇ ಹೆಚ್ಚಾಗ್ತಾನೆ ಇದೆ. ಪಾಸಿಟಿವಿಟಿ ರೇಟ್ ಕೂಡ ಹೆಚ್ಚಾಗ್ತಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ನಾಳೆ-ನಾಡಿದ್ದು ಅನ್ನುವಷ್ಟರಲ್ಲಿ ಅನ್ಲಾಕಾದ್ರೆ ಕಾಫಿನಾಡಿಗೆ ಬಿದ್ದಿರೋ ಬೀಗ ಓಪನ್ ಆಗೋಕೆ ತಡವಾಗೋದಂತು ಸತ್ಯ.
ಇದನ್ನೂ ಓದಿ: ಸಿನಿಮಾ-ಕಿರುತೆರೆ ಕ್ಷೇತ್ರಕ್ಕೆ 6.60 ಕೋಟಿ ಪ್ಯಾಕೇಜ್: ಕಲಾವಿದರಿಗೆ ತಲಾ 3 ಸಾವಿರ ರೂ. ಘೋಷಿಸಿದ ಸರ್ಕಾರ
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ